ಕನ್ನಡ ಪಂಚತಂತ್ರ

ಕನ್ನಡ ಪಂಚತಂತ್ರ

ಗ್ರಂಥಕರ್ತೃ:ಪ್ರೊ. ಡಿ. ಕೆ. ಭೀಮಸೇನರಾವ್, ಎಂ. ಎ.
ಕನ್ನಡ ಪ್ರಾಧ್ಯಾಪಕರು, ಉಸ್ಮಾನಿಯಾ ವಿಶ್ವವಿದ್ಯಾಲಯ 1950
ಪ್ರಕಾಶಕರು: ಸತ್ಯಾಶ್ರಯ ಪ್ರಕಾಶನ ಸಮಿತಿ, ಯುನಿವರ್ಸಿಟಿ ರೋಡ್, ಬಾಗ್ ಲಿಂಗಂಪಲ್ಲಿ, ಹೈದರಾಬಾದು

ಕನ್ನಡ ಗ್ರಂಥ ಪ್ರಕಾಶನ ಸಮಿತಿಗಳು ಬಹಳ ಕಡಿಮೆ. ಅವರಲ್ಲಿಯೂ ಪಾಠಶಾಲೆಯ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಪ್ರಕಾಶ ಗೊಳಿಸುವ ಉದ್ದೇಶದಿಂದ ಹೊರಟ ಸಂಸ್ಥೆಗಳು ಇಲ್ಲವೆಂದೇ ಹೇಳಬೇಕು. ಈ ಕೊರತೆ ಯನ್ನು ನಿವಾರಿಸಬೇಕೆಂದು 6 ಸತ್ಯಾಶ್ರಯ ಪ್ರಕಾಶನ ಸಮಿತಿ” ಎಂಬ ಹೆಸರಿನಿಂದ ಈ ಸಂಸ್ಥೆ ನಿರ್ಮಾಣವಾಗಿದೆ. ಪಾಠಶಾಲೆಗಳಿಗೆ ಉಪಯೋಗವಾಗುವಂತೆ ಪಠ್ಯ ಪುಸ್ತಕ ಗಳನ್ನೂ, ಭಾಷಾವಿಷಯಕವಲ್ಲದೆ ಇತರ ವಿಷಯಗಳ ಪುಸ್ತಕಗಳನ್ನೂ, ಶಾಲಾಬಾಲಕರು ಗಳಿಗೆ ಬೇಕಾಗುವ ವಿಜ್ಞಾನದ ಸಾಮಾನ್ಯ ಜ್ಞಾನದ ಸುಲಭ ಪುಸ್ತಕಗಳನ್ನೂ ಪ್ರಕಟಿಸ ಬೇಕೆಂಬುದೇ ಈ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಹೈದರಾಬಾದಿನ ಸ್ಥಾನಿಕ ಪರಿ ಸ್ಥಿತಿಗಳಿಗೆ ಅನುಸರಿಸಿ, ಅನುಭವಿಕರಾದವರುಗಳಿಂದ ಕೃತಿಗಳನ್ನು ಬರೆಸಿ ಪ್ರಕಾಶಗೊಳಿ ಸುವ ಉದ್ದೇಶವನ್ನಿಟ್ಟು ಕೊಂಡಿರುವುದರಿಂದ ವಿದ್ಯಾಖಾತೆಯವರೂ ಮಹಾಜನರೂ ನಮ್ಮ ಈ ಪ್ರಯತ್ನಕ್ಕೆ ತಕ್ಕ ಸಹಾಯ, ಸಹಕಾರಗಳನ್ನು ನೀಡುವರೆಂದು ನಾವು ನಿರೀಕ್ಷಿಸಿದ್ದೇವೆ. ನಮ್ಮ ಪ್ರಾರ್ಥನೆಯ ಮೇರೆಗೆ ಈ ಕನ್ನಡ ಪಂಚತಂತ್ರವನ್ನು ರಚಿಸಿಕೊಟ್ಟುದ ಕ್ಕಾಗಿ ಪ್ರೊ. ಡಿ.ಕೆ. ಭೀಮಸೇನರಾವ್, ಎಂ. ಎ. ಅವರಿಗೆ ನಮ್ಮ ವಂದನೆಗಳು.

ಹೈದರಾಬಾದು
ಜೆ. ಕೆ. ಪ್ರಾಣೇಶಾಚಾರ್ಯ ಕಾರ್ಯದರ್ಶಿ
ಸತ್ಯಾಶ್ರಯ ಪ್ರಕಾಶನ ಸಮಿತಿ
ತಾ, ೨೫-೯-೧೯೫೦

ಈ ಕನ್ನಡ ಪಂಚತಂತ್ರವನ್ನು ಒಂದು ಕನ್ನಡ ಹಳೆಯ ಹಸ್ತ ಪ್ರತಿಯ ಆಧಾರದ ಮೇಲೆ ಸಂಗ್ರಹಿಸಿ ಬರೆದಿದೆ. ಸಂಸ್ಕೃತದ ಮೂಲಗ್ರಂಥಕ್ಕೂ ಇದಕ್ಕೂ ಅಲ್ಲಲ್ಲಿ ವ್ಯತ್ಯಾಸಗಳು ಕಂಡು ಬರುತ್ತವೆ. ಆದರೂ ಒಟ್ಟಿನಲ್ಲಿ ಕಥೆಗಳ ಸಂವಿಧಾನದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಇಲ್ಲಿನ ಕೆಲವು ಹೆಸರುಗಳು ವ್ಯತ್ಯಸ್ತವಾಗಿವೆ. ಕನ್ನಡ ಹಸ್ತಪ್ರತಿಯ ಲ್ಲಿರುವ ಹೆಸರುಗಳನ್ನೇ ಇಲ್ಲಿ ಇಟ್ಟು ಕೊಂಡಿದೆ. ಪಂಚತಂತ್ರ ಕಥೆಗಳಲ್ಲಿ ಮೃಗಪಶುಪಕ್ಷಿಗಳು ಮನುಷ್ಯರಂತೆ ವರ್ತಿಸುವುದರಿಂದ ಅವುಗಳನ್ನು ಅಲ್ಲಲ್ಲಿ ಮಾನವಜಾತಿಯ ಪುಲ್ಲಿಂಗ ಸ್ತ್ರೀಲಿಂಗಗಳಂತೆ ವ್ಯವಹರಿಸಿದೆ. ಆದುದರಿಂದ' 'ಆದ್ದರಿಂದ' ಎಂಬ ಎರಡು ಪ್ರಯೋಗಗಳನ್ನೂ ಮಾಡಿದ್ದರಿಂದ,' 'ಮಾಡಿದುದರಿಂದ' ಮುಂತಾದ ಕೃಲ್ಲಿಂಗದ ಎರಡು ರೂಪಗಳನ್ನೂ ಇಲ್ಲಿ ಬಳಸಿದೆ. ಇವು ಗಳಲ್ಲಿ ಒಂದು ರೂಪವನ್ನು ಮಾತ್ರ ವಿದ್ಯಾರ್ಥಿಗಳು ಉಪಯೋಗಿಸ ಬೇಕು. ಹುತ್ತ', 'ಹುತ್ತು', 'ಅರಸ, ಅರಸು' ಮುಂತಾದ ಪದಗಳು ಅಕಾರಾಂತವಾಗಿಯೂ ಉಕಾರಾಂತವಾಗಿಯೂ ಪ್ರಯೋಗ ವಾಗುವುದರಿಂದ ಇಲ್ಲಿಯೂ ಈ ಎರಡು ರೂಪಗಳನ್ನು ಬಳಸಿದೆ. ಶುದ್ಧ ಪತ್ರಿಕೆಯನ್ನು ಕೊಟ್ಟಿದೆ. ವಾಚಕರು ಮೊದಲು ಈ ಶುದ್ಧ ಪತ್ರಿಕೆಯಂತೆ ತಿದ್ದಿ ಕೊ೦ಡು ಪುಸ್ತಕವನ್ನೋದಬೇಕೆಂದು ಪ್ರಾರ್ಥಿಸುತ್ತೇವೆ. ಸತ್ಯಾಶ್ರಯ ಪ್ರಕಾಶನ ಸಮಿತಿಯವರು ಈ ಪುಸ್ತಕವನ್ನು ಪ್ರಕ ಟಿಸಿ ಉಪಕಾರ ಮಾಡಿರುವುದರಿಂದ ಅವರಿಗೆ ನಮ್ಮ ವಂದನೆಗಳು.
ಗುರುವಾರ ೨೧-೯-೧೯೫೦
ಡಿ. ಕೆ. ಭೀಮಸೇನರಾವ್

ಪಾಟಲಿಪುರವೆಂಬ ಪಟ್ಟಣದಲ್ಲಿ ಸುದರ್ಶನನೆಂಬ ರಾಜನು ಮಹಾಧರ್ಮದಿಂದಲೂ ಔದಾರ್ಯದಿಂದಲೂ ರಾಜ್ಯವನ್ನಾಳುತ್ತಿದ್ದನು, ಅವನು ಸುಗುಣಿ. ರಾಜನಲ್ಲಿ ವಿವೇಕ್ಕ ರೂಪವತಿಯಾದ ಸತಿಯಲ್ಲಿ ಸೌಶೀಲ್ಯ, ಜಾತೃಶ್ವಕ್ಸೆ ಯುದ್ಧದಲ್ಲಿ ಗಾಯಹೊಂದಿದಾಗ ಧೈರ್ಯ, ವಿದ್ವಾಂಸ ನಲ್ಲಿ ವಾಕ್ಯಾವಿರೋಧ, ಧನಿಕನಲ್ಲಿ ತ್ಯಾಗ ಇವು ಇದ್ದರೆ ಜೀವರತ್ನ ವೆಂದು ಹೇಳಬೇಕು. ಇವೈದು ಜೀವರತ್ಸಗಳು ಆ ರಾಜನಲ್ಲಿ ನೆಲೆಗೊಂಡಿದ್ದುವು. ಅವನು ತನ್ನ ಬಂಧುವರ್ಗದಲ್ಲಿ ದಾಕ್ಷಿಣ್ಯವನ್ನೂ ಸೇವಕರಲ್ಲಿ ನಯ ವನ್ನೂ, ದುರ್ಜನರಲ್ಲಿ ಹುಸಿಯನ್ನೂ, ಉತ್ತಮ ಪುರುಷರಲ್ಲಿ ದಯ ವಿನಯಗಳನ್ನೂ, ವಿದ್ವಾಂಸರಲ್ಲಿ ಸದ್ದುಣವನ್ನೂ, ಶತ್ರುಗಳಲ್ಲಿ ಸರಾಕ್ರಮ ವನ್ನೂ, ಗುರುಹಿರಿಯರಲ್ಲಿ ಸೈರಣೆಯನ್ನೂ, ಸತಿಯರಲ್ಲಿ ಧೂರ್ತತೆಯನ್ನೂ ತೋರುತ್ತ ಮಹಾ ಪ್ರೌಢನೆಂದೆನಿಸಿಕೊಂಡಿದ್ದನು. ಅವನು ತನ್ನ ರಾಜ್ಯದ ಎಲ್ಲ ಪ್ರಜೆಗಳ ಹಿತವನ್ನು ಚಿಂತಿಸುತ್ತ ಅವರ ಭಾಗ್ಯವೇ ತನ್ನ ಭಾಗ್ಯವೆಂ ಡೆಣಿಸಿದ್ದನು. ಲೋಕಕ್ಕೆ ಜೀವನವನ್ನು ಕೊಡುವ ಸಮುದ್ರರಾಜನು ಗುರುಲಘುವೆನ್ನದೆ ಸಕಲ ನದಿನದಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿರು ವಂತೆ ಆ ರಾಜನು ಸಮಸ್ತ ಪ್ರಜೆಗಳನ್ನು ಸಮಭಾವದಿಂದ ಕೂಡಿಕೊಂಡಿ ದ್ಹನು. ಅವನು ವಿನತ್ತಿನಲ್ಲಿ ಧೈರ್ಯದಿಂದಲೂ, ಐಶ್ವರ್ಯದಲ್ಲಿ ಕ್ಷಮಾಶೀಲ ನಾಗಿಯೂ ವರ್ತಿಸುತ್ತಿದ್ದನು. ಆಸ್ಥಾನದಲ್ಲಿ ಸರ್ವರಿಗೂ ಸಮ್ಮತವಾಗು ವಂತೆ ಮಾತಾಡುತ್ತಿದ್ದನು. ರಣರಂಗದಲ್ಲಿ ಮಹಾ ಸಾಹಸವನ್ನು ವ್ಯಕ್ತ ಗೊಳಿಸುತ್ತ ಕೀರ್ತಿಯನ್ನು ಕೊಂಡಾಡಿಸಿಕೊಂಡಿದ್ದನು, ಧರ್ಮ ಚಿತ್ತ ವುಳ್ಳವನೂ, ಪ್ರಧಾನರ ಬುದ್ಧಿಗತಿಯನ್ನ ರಿತವನೂ, ಲೋಕ ವ್ಯವಹಾರ ಜ್ಞನೂ, ದಯಾ ದೃಷ್ಟಿಯುಳ್ಳವನೂ ಆಗಿದ್ದನಲ್ಲದೆ ಅವನು ತನ್ನ ಮರ್ಮ ವನ್ನು ಬಹಿರಂಗಪಡಿಸುತ್ತಿರಲಿಲ್ಲ. ಸಮಯಾಸಮಯವರಿತು ಮಾತಾಡು ತ್ರಿದ್ದನಲ್ಲದೆ ಸುಮ್ಮನೆ ಹರಟುತ್ತಿರಲಿಲ್ಲ. ಸ್ವಲ್ಪ ಕಾರ್ಯವಾದರೂ ಕಾಲವನ್ನು ನೋಡಿ ಹಿತಾಹಿತವನ್ನು ಹೇಳುತ್ತಿದ್ದನು ಮಹಾರಣಾಗ್ರದಲ್ಲಿಯೂ ತನ್ನ ಸಂರಕ್ಷಣೆಯನ್ನು ತಾನೇ ಮಾಡಿಕೊಳ್ಳುತ್ತ ಸ್ವಾವಲಂಬಿಯಾಗಿದ್ದನು. ಪರರ ಗುಣವನ್ನು ಮತ್ಪರಿಸುತ್ತಿದ್ದಿಲ್ಲವಾದುದರಿಂದಲೂ, ಸಮಸ್ತ ಸರಿಜನರಿಗೆ ತನ್ನ ಭಾಗ್ಯವನ್ನುಣಿಸುತ್ತಿದ್ದುದರಿಂದಲೂ ಪ್ರಜೆಗಳೆಲ್ಲರೂ ಅವನನ್ನು ಬಹಳ ಪ್ರೀತಿಸುತ್ತಿದ್ದರು. ಈ ಸುದರ್ಶನ ರಾಜನಿಗೆ ಅಮರಶಕ್ತಿಯೆಂಬ ಮಹಾ ಮಂತ್ರಿ ಇದ್ದನು. ಅವನು ಬಹು ಬುದ್ಧಿಶಾಲಿ, ನೀತಿಪ್ರಧಾನನು. ಉತ್ತರ ಪ್ರತ್ಯುತ್ತರ ಬಲ್ಲವರಲ್ಲಿ ಅಗ್ರಗಣ್ಯನು. ಮಹಾ ಉತ್ಕೃಷ್ಟ ಗುಣವುಳ್ಳ ವನು. ಎಲ್ಲರ ಗುಣ ದೋಷ ಗಳನ್ನು ಅಂತರಂಗದಲ್ಲಿ ತಿಳಿದು ನಿಪುಣನೆಂಜೆನಿಸಿದ್ದನು. ಸಂಗೀತ ವಾದ್ಯ ಗಳನ್ನು ಚೆನ್ನಾಗಿ ಬಲ್ಲವನು, ನಿಡ್ವಾಂಸರನ್ನು ಕಂಡರೆ ನಯವನ್ನು ತೋರು ತ್ತಿದ್ದನು, ಸಮಸ್ತ ಭಾಷಾಭೇದಗಳನ್ನ ರಿತಿದ್ದುದರಿಂದ ಮಧ್ಯಸ್ಥನಾಗಿ ಕುಳಿತುಕೊಂಡಾಗ ರಹೃದಯನಾಗಿರುತ್ತಿದ್ದನು. ಮೃದುವಾಕ್ಯವನ್ನು ನುಡಿಯುತ್ತ ವಿಚಕ್ಷಣನಾಗಿದ್ದನು. ಕವಿತ್ವವನ್ನು ಒಳಿತಾಗಿ ಬಲ್ಲವನು, ರಸಿಕನು. ಈ ಗುಣಗಳಿದ್ದವನೇ ಸುಮಂತ್ರಿಯೆನಿಸುವನೆಂದು ಸುದರ್ಶನರಾಜನು ' ಅವನನ್ನು ಮಹಾಪ್ರಧಾನನನ್ನಾಗಿ ನಿಯಮಿಸಿ ಕೊಂಡು ತನ್ನ ರಾಜ್ಯ ಕಾರ್ಯಭಾರವನ್ನು ಅವನಿಗೆ ಒಪ್ಪಿಸಿ, ಸುಖಸತ್ಕಥಾ ವಿನೋದದಿಂದ ರಾಜ್ಯವಾಳುತ್ತಿದ್ದನು.
ಸುದರ್ಶನರಾಜನಿಗೆ ವಸುಶಕ್ತಿ, ಉಗ್ರಶಕ್ತಿ, ಮೃದುಶಕ್ತಿಯೆಂಬ ಮೂವರು ಕುಮಾರರು ಹುಟ್ಟಿದರು. ಅರಸು ಅತ್ಯಂತ ಸಂತೋಷದಿಂದ ಅವರನ್ನು ಸಲಹಿ ದೊಡ್ಡವರನ್ನಾಗಿ ಮಾಡಿದನು. ಆದರೆ ಆ ರಾಜಪುತ್ರರು ದುರ್ಜನರಾಗಿ ತಂದೆತಾಯಿಗಳ ಮಾತು ಕೇಳದೆ ಸಕಲ ಜನರನ್ನು ನಿರ್ಬಂಧಿಸಿ ಉಪದ್ರವ ಕೊಡುತ್ತಿದ್ದರು. ಜೂಜು, ಮದ್ಯಪಾನ, ಚಹಡಿ, ನೀಚಸೇವೈ, ಸ್ವಸ್ತ್ರೀದೂಷಣ, ಬೇಟಿ, ಪರಸ್ತ್ರೀಗಮನ, ಈ ಸಪ್ತ ವ್ಯಸನಗಳಲ್ಲಿ ಆಸಕ್ತರಾಗಿ ದುರ್ಮಾರ್ಗದಲ್ಲಿದ್ದರು. ಯೌವನಮದ, ಧನಮದ, ಅರಸುತನದ ಮದ್ಯ ಅನೇಕ ಮದ ಈ ನಾಲ್ಕು ಮದಗಳಲ್ಲಿ ಒಂದೊಂದೂ ಅನರ್ಥಗಳಿಗೆ ಕಾರಣ. ಈ ನಾಲ್ಕು ದುರ್ಮತಿಗಳು ಆ ಕುಮಾರರಲ್ಲಿ ನೆಲಸಿದ್ದುದರಿಂದ ಅವರು ಮಹಾ ಮದಾಂಧರಾಗಿದ್ದರು. ಅವರ ದುರ್ಜನತ್ವವು ಹೇಳಲು ಶಕ್ಯವಿರಲಿಲ್ಲ. ಇಂಥ ದುರಾತ್ಮರಾದ ಮಕ್ಕಳನ್ನು ನೋಡಿ ಆ ರಾಜನು ಬಹಳ ದುಃಖಪಟ್ಟು ತನ್ನ ಮಹಾಪ್ರಧಾನನಾದ ಅಮರಶಕ್ತಿಯನ್ನು ಕರೆಸಿ, “ಮಂತ್ರಿಯೆ! ಕರುಹಾಕಿದ ಹಾಲು ಕರೆಯದ ಗೊಡ್ಡಂತೆ ತಂದೆ-ತಾಯಿಗಳ ಮಾತು ಕೇಳದ ಮಕ್ಕಳಿಂದ ಯಾವ ಪುರುಷಾರ್ಥವೂ ಇಲ್ಲ. ಇಂಥ ಮಕ್ಕಳನ್ನು ಪಡೆಯುವುದಕ್ಕಿಂತ ಬಂಜೆಗಳಾಗಿರುವುದೇ ಲೇಸು. ಕಟ್ಟಿಗೆ, ಕಬ್ಬಿಗೆ ಮಸೆದು ವನನೆಲ್ಲ ಬೆಂಕಿಯಿಂದ ಸುಟ್ಟು ಹೋಗುವುದು, ದುಷ್ಟ ಮಕ್ಕಳಿಂದ ಕುಲವೆಲ್ಲ ಕೆಟ್ಟು ಹೋಗುವುದು.” ಎಂದು ವ್ಯಾಕುಲತೆಯಿಂದ ಹೇಳಿ ಉಸಿರುಗೊಂಡನು.
ರಾಜನು ದುಃಖದಿಂದಾಡಿದ ಈ ಮಾತುಗಳನ್ನು ಕೇಳಿ ಅಮರಶಕ್ತಿ ಮಹಾಮಂತ್ರಿ, “ಮಹಾರಾಜನೇ! ತಾವು ಈ ರೀತಿಯಲ್ಲಿ ದುಃಖಿಸುವುದು ಸ್ವಾಭಾವಿಕವಾಗಿದೆ. ಏಕೆಂದರೆ ಸಾಲಮಾಡಿದ ತಂದೆ ಮಕ್ಕಳಿಗೆ ವೈರಿ, ವ್ಯಭಿಚಾರಿಣಿಯಾದ ತಾಯಿ ಮಕ್ಕಳಿಗೆ ಶತ್ರು, ರೂಪವತಿಯಾದ ಪತ್ನಿ ಗಂಡನಿಗೆ ವೈರಿ, ನಿತ್ಯಹೀನನಾದ ಮಗನು ತಾಯಿತಂದೆಗಳಿಗೆ ಶತ್ರು ಎಂದು ನೀತಿ. ಸಕಲಗುಣಸಂಪನ್ನನಾದ ಒಬ್ಬನೇ ಮಗನಿದ್ದರೆ ಸಾಕು, ಗುಣವಿಲ್ಲದ ನೂರು ಜನ ಮಕ್ಕಳಿಂದ ಏನೂ ಪ್ರಯೋಜನವಿಲ್ಲ. ಒಬ್ಬ ಚಂದ್ರನಿಂದ ಲೋಕದ ಜನರೆಲ್ಲ ಆಹ್ಲಾದ ಪಡುವರು, ಲಕ್ಷ ನಕ್ಷತ್ರವಿದ್ದರೂ ಫಲವಿಲ್ಲ. ಈ ದುಷ್ಟ ಪುತ್ರರಿಂದ ಸುಖವಿಲ್ಲ. ಪ್ರೇಮವುಳ್ಳ ಸುಂದರಿಯಾದ ಪತ್ನಿ, ಸೌಜನ್ಯದಿಂದ ಕೂಡಿದ ಒಡಹುಟ್ಟಿದವರು, ಸ್ನೇಹವುಳ್ಳ ಬಂಧುಗಳು, ಪ್ರೌಢರಾದ ಸಖರು, ಮನ್ನಿಸುವ ದೊರೆ, ಕಪಟವಿಲ್ಲದ ಬಂಟರು, ಪರರ ಮನಸ್ಸಿನ ಅಭೀಷ್ಟವನ್ನೊದಗಿಸುವುದು, ಸಮೃದ್ಧವಾದ ಧನ, ಮಹಾಭೋಗದಿಂದ ಸಂತೋಷವಾಗಿರುವುದು ಇಷ್ಟೆಲ್ಲ ತಾನು ಮಾಡಿದ ಪುಣ್ಯದ ಫಲ.” ಫಲದಿಂದೆ ದೊರಕುವುದು, ಆದರೂ ರಾಜಕುಮಾರರನ್ನು ವಿದ್ವಾಂಸರ ವಶಕ್ಕೆ ಕೊಟ್ಟು ತಿದ್ದಿಸಿದರೆ ಬುದ್ಧಿವಂತರಾದಾರು? ಎಂದು ಪರಿಪರಿಯ ನೀತಿಯನ್ನು ಬೋಧಿಸಿ ಸಂತೈಸಿದನು. ಸುದರ್ಶನರಾಜನು ಮಂತ್ರಿಯ ಅಭಿಪ್ರಾಯವನ್ನು ಒಪ್ಪಿದನು. ಒಪ್ಪಿ ತನ್ನ ದೇಶದಲ್ಲಿದ್ದ ಎಲ್ಲ ವಿದ್ವಾಂಸರನ್ನು ಕರೆಸಿದನು. ತನ್ನ ಮಕ್ಕಳನ್ನು ನೀತಿಕೋವಿದರನ್ನಾಗಿ ಮಾಡಬೇಕೆಂದು ಅವರಲ್ಲಿ ಬಿನ್ನವಿಸಿಕೊಂಡನು. ಆ ವಿದ್ವಾಂಸರು, «ಮಹಾರಾಜನೇ ! ನಿನ್ನ ಮಕ್ಕಳನ್ನು ನಾವು ಬಲ್ಲೆವು. ಅವರು ಮೂರ್ಖರೂ ದುರ್ಜನರೂ ಆಗಿದ್ದಾರೆ ಕೇವಲ ವಿವೇಕಿಯನ್ನು ಒಡಂಬಡಿಸಬಹುದಾಗು ಅವಿವೇಕಿಯನ್ನು ಒಡಂಬಡಿಸಬಹುದಲ್ಲ ಅಲ್ಪಜ್ಞಾನವುಳ್ಳ ದುರ್ವಿದಗ್ಧರಾದ ಮಕ್ಕಳನ್ನು ತಿದ್ದುವುದು ನಮಗೆ ಸಾಧ್ಯವಲ್ಲ ಬ್ರಹ್ಮನ ಕೈಯಿಂದಾದರೂ ಆಗದು, ನಮ್ಮ ತ್ವಾತಿಶಯವಾದರೂ ಸಾಮಾನ್ಯವಲ್ಲ. ನಮ್ಮ ಪಾಂಡಿತ್ಯದಿಂದ ಉಪಾಯಬಲದಿಂದ ಮಳಲಿನಿಂ ಎಣ್ಣೆಯನ್ನು ತೆಗೆಯದೇವು, ಚತು ನೀರನ್ನು ಹೊರಡಿಸಿ ಕುಡಿಸಬಹುದಾದ ಅರಣ್ಯದಲ್ಲಿ ಹುಡುಕಿ ಮೊಲದ ಕೊಂಬನ್ನಾದರೂ ತಂದೇವು, ಇಂಥ ಮೂರ್ಖರನ್ನು ತಿದ್ದಲು ಸಾಧ್ಯವಿಲ್ಲ” ಎಂದು ಅತ್ಯಂತ ವಿನಯದಿಂದ ಬಿನ್ನವಿಸಿಕೊಂಡರು.
ಪಂಡಿತರ ಈ ನಿರ್ಧಾರವನ್ನು ಕೇಳಿ ರಾಜನಿಗೆ ಖೇದವೂ ರೋಷವೂ ಏಕಕಾಲಕ್ಕೆ ಉಂಟಾದುವು. “ನನ್ನ ಮಕ್ಕಳನ್ನು ತಿದ್ದುವ ಸಾಮರ್ಥ್ಯ ನಿಮ್ಮಲ್ಲಿ ಇಲ್ಲವಾದರೆ ನೀವು ಕಲಿತ ವಿಷ್ಯಿಯಿಂದ ಪ್ರ ಪ ಯೋಜನವೇನು? ನಿಮ್ಮ ಪಾಂಡಿತ್ಯಕ್ಕೆ ಮೆಚ್ಚಿ ನಿಮಗೆ ನಾನು ರಾಜಾಶ್ರಯವನ್ನು ಕೊಟ್ಟಿನು, ಇನ್ನು ಮೇಲೆ ನೀವು ನಮ್ಮ ದೇಶದಲ್ಲಿದ್ದೂ ಫಲವಿಲ್ಲ” ವೆಂದು ನಿಷಾದ ಗೊಂಡು ಹೇಳಿದನು. ಆ ವಿದ್ವಾಂಸರೆಲ್ಲರೂ ರಾಜನಿಗೆ ಉತ್ತರವನ್ನು ನೊಡದೆ ಚಿಂತೆಗೊಳಗಾದರು,. ಅಷ್ಟ ರಲ್ಲಿ ವಿಷ್ಣುಶರ್ಮನೆಂಬ ಪಂಡಿತ ನೊಬ್ಬನು ಧೈರ್ಯದಿಂದ ಎದ್ದು ಬಾ?” ಮಹಾರಾಜನೇ ! ಕೋಪಗೊಳ್ಳ ೫! ನಾನು ನಿನ್ನ ಮಕ್ಕ ಳನ್ನು ಆರು ತಿಂಗಳಿಗೆ ಮಹಾ ಹ್‌ ರನ್ನಾಗಿ ಮಾಡಿಕೊಡುವೆನು.' ಎಂದು ವಿಜ್ಞಾ ಪಿಸಿದನು, ಈ ಪಂಡಿತನ ಮಾತು ಕೇಳಿ ರಾಜನಿಗೆ ಪರಮ ಸಂತೋಷವಾಯಿತು. ಪಂಚಲೋಹ, ರತ್ನಗಳು, ವಾಹನ ಮೊದಲಾದ ಸಪ್ತಾಂಗಗಳನ್ನಿತ್ತು ಆ ಪಂಡಿತನನ್ನು ಸನ್ಮಾನಿಸಿದನು. ಕೂಡಲೇ ತನ್ನ ಮಕ್ಕಳನ್ನು ಬರಿಸಿ ಆ ಬ್ರಾಹ್ಮಣನ ವಶಕ್ಕೆ ಕೊಟ್ಟು ನಮಸ್ಕರಿಸಿ ಬೀಳ್ಕೊಟ್ಟಿನು.
ಇತ್ತ ವಿಷ್ಣುಶರ್ಮನು ರಾಜಪುತ್ರರು ಸಹಿತವಾಗಿ ತನ್ನ ಮನೆಗೆ ಬಂದನು. ಉಳಿದ ವಿದ್ವಾಂಸರಿಗೆ ಇದೆಲ್ಲವನ್ನು ನೋಡಿ ಆಶ್ಚರ್ಯವಾ ಯಿತು. ಅವರು ಯಾರಿಂದಲೂ ಸಾಧ್ಯವಾಗದ ಈ ಕೆಲಸವನ್ನು ಇವನು ಹೇಗೆ ನಿರ್ವಹಿಸುವೆನೆಂದು ಒಪ್ಪಿಕೊಂಡನು, ಅವನನ್ನು ವಿಚಾರಿ ಸೋಣವೆಂದು ವಿಷ್ಣುಶರ್ಮನ ಮನೆಗೆ ಬಂದರು. ಬಂದು "ವಿಷ್ಣುಶರ್ಮನೇ! ಇಂಥ ಮೂರ್ಖರನ್ನು ತಿದ್ದುವ ಸಾಮರ್ಥ್ಯ ನಿನಗುಂಟೇ; ಸುಮ್ಮನೆ ಕಷ್ಟದಲ್ಲಿ ಸಿಕ್ಕಿಕೊಂಡೆಯಲ್ಲವೆ?” ಎಂದು ಕೇಳಿದರು. ಅದಕ್ಕೆ ವಿಷ್ಣುಶರ್ಮನು "ವಿದ್ವಾಂಸೋತ್ತಮರೇ! ನೀವು ಹೇಳುವುದು ಸರಿ. ‘ಅಶುಭಸ್ಯಕಾಲಹರಣಂ' ಎಂಬ ನೀತಿಯುಂಟು. ರಾಜನು ನಮ್ಮನ್ನು ಈಗಲೇ ದೇಶಬಿಟ್ಟು ಹೊರಟು ಹೋಗುವುದಾಗಿ ಹೇಳಿದನು. ನಾನು ಆರು ತಿಂಗಳ ಗಡುವನ್ನು ಕೇಳಿದ್ದೇನೆ. ಈ ಆರು ತಿಂಗಳವರೆಗಾದರೂ ನಾವು ಇಲ್ಲಿಯೇ ಇರ ಬಹುದಲ್ಲವೇ? ಮುಂದಿನ ವಿದ್ಯಮಾನವನ್ನು ಪರಮಾತ್ಮನು ಬಲ್ಲನು. ಅದಕ್ಕಾಗಿ ನಾನು ಈ ಉಪಾಯವನ್ನು ಹೂಡಿದ್ದೇನೆ' ಎಂದು ಅವರನ್ನು ಸಮಾಧಾನ ಪಡಿಸಿ ಕಳಿಸಿದನು.
ನಿಷ್ಣುಶರ್ಮನು ರಾಜಪುತ್ರರೊಡನೆ ಅವರ ಇಚ್ಛಾನುಸಾರ ಇರತೊಡ ಗಿದನು. ಯಾವಾಗಲೂ ಅವರ ಸಂಗಡವೇ ಮೈನೆರಳಿನಂತೆ ತಿರುಗಾಡುತಿದ್ದ. ಒಮ್ಮೆ ಈ ಮೂವರು ಅರಸು ಮಕ್ಕಳು ಬೇಟೆ ಯಾಡುವುದಕ್ಕೆ ಹೋದರು. ಅವರ ಸಂಗಡ ವಿಷ್ಣುಶರ್ಮನೂ ಹೋದನು. ಆ ಕುಮಾರರು ಘೋರಾರಣ್ಯದಲ್ಲಿ ಬೇಟೆಯನ್ನಾಡಿ ಶ್ರಮಿಸಿ ಒಂದು ಗಿಡದ ನೆರಳಲ್ಲಿ ಕುಳಿತು ಕೊಂಡರು.ವಿಷ್ಣುಶರ್ಮನೂ ಅವರು ಜೊತೆಯಲ್ಲಿಕುಳಿತು ಕೊಂಡನು. ಆಗ ಅವರು ವಿಷ್ಣುಶರ್ಮನನ್ನು ಕುರಿತು ತಮಗೊಂದು ಕಥೆ ಹೇಳೆಂದು ಕೇಳಿದರು. ವಿಷ್ಣುಶರ್ಮನಿಗೆ ಬಹಳ ಸಂತೋಷವಾಯಿತು. ತನ್ನ ಉದ್ದೇಶವು ಈಡೇರಿತೆಂದು ಮನಸ್ಸಿನಲ್ಲಿ ಹಿಗ್ಗಿದನು. ಇನ್ನು ಇವರನ್ನು ವಿದ್ವಾಂಸ ರನ್ನು ಮಾಡುವ ಸಮಯ ಪ್ರಾಪ್ತವಾಯಿತು, ಈ ಸಮಯವನ್ನು ಕಳೆದು ಕೊಳ್ಳ ಬಾರದೆಂದು ಮನಸ್ಸಿನಲ್ಲಿ ಆಲೋಚಿಸಿ ಪಂಚತಂತ್ರನೆಂಬ ಐದು ತಂತ್ರ ಗಳನ್ನು ನಿರ್ಮಿಸಿ ಆ ಕುಮಾರರಿಗೆ ಕಥಾರೂಪದಲ್ಲಿ ಹೇಳುವುದಕ್ಕಾರಂಭಿಸಿ ದನು, ತಾನು ನಿರ್ಮಿಸಿದ ಮಿತ್ರಭೇದ, ಸುಹೃಲ್ಲಾಭ, ಸಂಧಿವಿಗ್ರಹ, ಲಬ್ಧ ನಾಶ, ಅಸಂಪ್ರೇಕ್ಷ ಎಂಬ ಐದು ತಂತ್ರಗಳಲ್ಲಿ ಮೊದಲನೆಯದಾದ ಮಿತ್ರ ಭೇದವೆಂಬ ಪೀಠಿಕೆಯನ್ನು ಆರಂಭ ಮಾಡಿದನು.

ರಾಜಪುತ್ರರೇ! ಒಂದಾನೊಂದು ವನ. ಅಲ್ಲಿ ಸಿಂಹ, ಎತ್ತು ಇವೆರಡು ಪರಮಸ್ನೇಹದಿಂದಿರುತ್ತಿದ್ದಾಗ ಚಹಡಿ ಹೇಳುವ ಎರಡು ನರಿಗಳು ಇವು ಗಳಲ್ಲಿ; ಭೇಧ ಹುಟ್ಟಿಸಿ, ಸ್ನೇಹವನ್ನು ಕೆಡಿಸಿದುವು ಎಂದು ಹೇಳಿ ರಾಜಪುತ್ರ ರಲ್ಲಿ ಕಥೆ ಕೇಳುವ ಕುತೂಹಲವನ್ನು ಹುಟ್ಟಿಸಿದನು, ಇದು ಏನೋ ಸ್ವಾರಸ್ಯವಾದ ಕಥೆಯಿರಬೇಕೆಂದು ರಾಜಪುತ್ರರು, ಅದು ಹೇಗೆ, ವಿವರಿಸಿ, ಎಂದು ವಿಚಾರಿಸಿದರು. ವಿಷ್ಣುಶರ್ಮನು ಕಥೆಯನ್ನು ವಿವರಿಸ ತೊಡಗಿದನು.
ಕಥೆ: ಕಾಂತಿಮತಿಯೆಂಬ ಪುರ, ಅಲ್ಲಿ ಧನದಾಯಕನೆಂಬ ಒಬ್ಬ ವ್ಯವಹಾರಿ. ಒಮ್ಮೆ ಅವನು ಸಂಜೀವಕವೆಂಬ ಎತ್ತಿನ ಮೇಲೆ ಹೇರು ಹೇರಿಕೊಂಡು ಮಹಾವನಾಂತರದಲ್ಲಿ ಹೋಗುತ್ತಿದ್ದನು. ಆಗ ಸಂಜೀವಕ ಎತ್ತಿನ ಕಾಲು ಕೆಸರಿನಲ್ಲಿ ಸಿಕ್ಕಿ ಹೊರಗೆ ಬಾರದೆ ಮುರಿದುಹೋಯಿತು. ಆ ವ್ಯವಹಾರಿ ಎತ್ತನ್ನು ಅಲ್ಲಿಯೇ ಬಿಟ್ಟು ಹೇರನ್ನು ತಾನೇ ಹೊತ್ತುಕೊಂಡು ತನ್ನ ಪಟ್ಟಣಕ್ಕೆ ಬಂದುಬಿಟ್ಟನು. ಸಂಜೀವಕ ಎತ್ತಿಗೆ ಅಕಸ್ಮಾತ್ತಾಗಿ ದೈವ ಕಟಾಕ್ಷದಿಂದ ಕೆಲವು ದಿವಸಗಳಲ್ಲಿಯೇ ಮುರಿದ ಕಾಲು ಗುಣಹೊಂದಿ ನಡೆ ಯುವಂತಾಯಿತು. ಅದು ವನದಲ್ಲಿರುವ ಎಳಹುಲ್ಲು ಮೇದು ತಿಳಿ ನೀರು ಕುಡಿದು ಪುಷ್ಟಿಯಾಗಿ ತನ್ನ ಇಚ್ಛಾನುಸಾರ ತಿರುಗುತ್ತಿತ್ತು. ಪಿಂಗಳಕವೆಂಬ ಒಂದು ಸಿಂಹವು ಆ ವನಕ್ಕೆ ಅಧಿಪತಿಯಾಗಿತ್ತು. ಆ ಸಿಂಹವು ತನ್ನ ಭುಜಬಲ ಪರಾಕ್ರಮದಿಂದ ಮೆರೆಯುತ್ತ ಕರಟಕ ,ದಮನಕ ಎಂಬ ಎರಡು ನರಿಗಳನ್ನು ಪ್ರಧಾನಿಗಳನ್ನಾಗಿ ಮಾಡಿಕೊಂಡಿತ್ತು. ಒಂದು ದಿವಸ ಆ ಸಿಂಹವು ಅತ್ಯಂತ ಕೃ‌‌‍ಷೆಯಿಂದ ಸಮೀಪದ ಯಮುನಾ ತೀರಕ್ಕೆ ಬಂದು ನೀರು ಕುಡಿಯುತ್ತಿತ್ತು. ಅದೇ ಸಮಯದಲ್ಲಿ ಸಂಜೀವಕ ಎತ್ತಿಗೆ ಮನೋತ್ಸವವಾಗಿ ಉಚ್ಚ ಧ್ವನಿಯಿಂದ ಕೆಲೆಯ ತೊಡಗಿತು. ಆ ಅಪೂರ್ವ ವಾದ ಧ್ವನಿಯನ್ನು ಸಿಂಹವು ಕೇಳಿ ಮಹಾ ಭೀತಿಯಿಂದ ನಡ ನಡುಗಿ ನಿತ್ತರಿಸಲಾರದೆ ನೀರು ಕುಡಿಯುವುದನ್ನು ಬಿಟ್ಟು ಚಿಂತಾತುರವಾಗಿ ಅಲ್ಲಿಂದ ಪಲಾಯನ ಮಾಡಿತು. ಇದನ್ನು ಕರಟಕ ದಮನಕ ನರಿಗಳು ನೋಡಿ ಅಚ್ಚರಿಗೊಂಡುವು. ಏನು ಕಾರಣವೋ, ನಮ್ಮ ಸ್ವಾಮಿಯಾದ ಸಿಂಹರಾಜನು ಕಡುಭೀತಿಗೊಂಡು ಓಡಿಹೋಗುತ್ತಿದ್ದಾನೆ, ಈ ಸಮಯದಲ್ಲಿ ನಾವು ಆತನ ಸಮೀಪಕ್ಕೆ ಹೋಗಬೇಕೆಂದು ಕರಟಕ ನರಿ ಹೇಳಿತು, ಅದಕ್ಕೆ ದಮನಕವು ‘ತನಗೆ ಶಕ್ಯವಾದ ಕೆಲಸವನ್ನೆ ಮಾಡಬೇಕಲ್ಲದೆ ಅಶಸ್ಯ ವಾದ ಕೆಲಸ ಮಾಡಿದರೆ ಪೂರ್ವದಲ್ಲಿ ಒಂದು ಮರ್ಕಟವು ಸತ್ತ ಹಾಗೆ’ ಎಂದು ಆ ಕಥೆಯನ್ನು ಹೇಳಿತು.

ಕಳಿಂಗದೇಶದ ಕರಾಟವೆಂಬ ಪಟ್ಟಣದಲ್ಲಿ ಇಂದ್ರಗುಪ್ತ ನೆಂಬ ವ್ಯವಹಾರಿ ಒಂದು ನದೀತೀರದಲ್ಲಿ ದೇವಾಲಯವನ್ನು ಕಟ್ಟಿ ಸುತ್ತಿ ದ್ದನು, ಅಲ್ಲಿ ದೊಡ್ಡ ದೊಡ್ಡ ಗಾತ್ರದ ತೊಲೆಗಳನ್ನು ಬಡಿಗೆಯರು ಕೊರೆದು ಕೇಲುಗೆಳನ್ನಿಟ್ಟು ಮಧ್ಯಾಹ್ನದ ಊಟಕ್ಕೆಂದು ತಮ್ಮ ತಮ್ಮ ಸ್ಥಳಗಳಿಗೆ ಹೋಗಿದ್ದರು, ಅಷ್ಟರಲ್ಲಿ ಸಮೀಪದ ವನದಿಂದ ಒಂದು ಮಂಗವು ಹಾರಿ ಬಂದು ಆ ಕೊರೆದಿದ್ದ ಒಂದು ತೊಲೆಯಮೇಲೆ ಕುಳಿತು ಮದೋನ್ಮತ್ತದಿಂದ ಎರಡು ಕೈಗಳಿಂದ ಕೀಲನ್ನು ಅಗಲಾಡಿಸಿತು. ಕೂಡಲೇ ಕೀಲು ಹಿಗ್ಗಿ ತೊಲೆಯ ಸಂದಿನಲ್ಲಿ ಮರ್ಕಟದ ದೇಹವು ಸಿಕ್ಕಿಕೊಂಡು ಅದು ಅಲ್ಲಿಯೇ ಸತ್ತುಹೋಯಿತು. ಅದಕ್ಕಾಗಿ ತನ್ನ ವಶವರ್ತಿಯಲ್ಲದ ಕೆಲಸಮಾಡಿದರೆ ಅದು ಕೆಟ್ಟು ಹೋಗುವುದು. ಎಂದು ದಮನಕವು ಕಥೆಯನ್ನು ಮುಗಿಸಿತು.
ಈ ದೃಷ್ಟಾಂತ ಕರಟಕಕ್ಕೆ ಸಮ್ಮತವಾಗಲಿಲ್ಲ. ಅದು ಮಾತು ಮುಂದುವರಿಸಿ,
“ನಮ್ಮ ಸ್ವಾಮಿ ಭುಂಜಿಸಿ ಉಳಿಸಿದ ಶೇಷನೇ ನಮ್ಮ ಆಹಾರ ವಲ್ಲವೇ?” ಎಂದು ಪ್ರಶ್ನಿಸಿತು.
ದಮನಕ:- ಸ್ವಾಮಿ ಕಾರ್ಯ ಮಾಡದೆಯೇ ಕೇವಲ ಆಹಾರಕ್ಕಾಗಿ ರಾಜಾ ಶ್ರಯವನ್ನು ಹೇಗೆ ಅಪೇಕ್ಷಿಸುವುದು? ಮಿತ್ರರಿಗೆ ಉಪಕಾರ, ಶತ್ರು ಗಳಿಗೆ ಅಪಕಾರ ಮಾಡುವುದು ರಾಜಾಶ್ರಯದ ಪ್ರಯೋಜನ. ರಾಜಾಶ್ರಯವಿದ್ದಲ್ಲಿ ಬಹುಜನರಿಗೆ ಸುಖವನ್ನು ದೊರೆಕಿಸಿ ಕೊಡ ಬೇಕು. ಇದುವೇ ರಾಜಾಶ್ರಯಕ್ಕೆ ತಕ್ಕಫಲ.
ಕರಟಿಕ:- ದಮನಕ ಮಿತ್ರನೇ! ನಿನ್ನ ಮಾತು ನನ್ನ ಮನಸ್ಸಿಗೆ ಬರುತ್ತಿಲ್ಲ. ವಿವರಿಸಿ ಹೇಳು,
ದಮನಕ:- ಕಾಗೆ ಅಲೆದಲೆದು ಅನ್ನತಿಂದು ಸಾವಿರ ವರ್ಷ ಬದುಕುತ್ತದೆ. ನಾಯಿ ಅನ್ನದಾತನ.ಕೈಯಲ್ಲಿ ಒಂದು ತುತ್ತು ಆಹಾರಕ್ಕಾಗಿ ಬಾಲ ಬೀಸಿಕೊಂಡು ಅವನ ಕಾಲಮೇಲೆ ಹೊರಳಿ ನಾನಾಪ್ರಕಾರದಿಂದ ದೈನ್ಯ ಸಟ್ಟು ತನ್ನ ಹೊಟ್ಟಿ ಹೊರೆಯುತ್ತದೆ. ರಾಜಾಶ್ರಯ ಮಾಡಿದ ಆನೆ ಕೊಂಡಾಡಿಸಿಕೊಂಡು ಮುದ್ದೆಯನ್ನು ಮಾಡಿಸಿ ಬಾಯೊಳಗೆ ತುತ್ತು ಹಾಕಿಸಿಕೊಂಡು ಭುಂಜಿಸುತ್ತದೆ. ಅದಕ್ಕಾಗಿ ರಾಜಾ ಶ್ರಯ ಮಾಡಬೇಕು.
ಕರಟಿಕ:- ರಾಜಾಶ್ರಯ ಮಾಡಬೇಕೆಂಬುದೂ ನನ್ನ ಅಭಿಪ್ರಾಯವೇ! ಆದರೆ ಅದು ಸಫಲವಾಗಬೇಕಾದರೆ ನಮ್ಮಿಬ್ಬರ ಮನಸ್ಸು ಒಂದೇ ಆಗಿರಬೇಕು. ನಾವಿಬ್ಬರೂ ಕೂಡಿ ಒಂದೇ ಕಾರ್ಯಮಾಡಿದರೆ ಸಾಧ್ಯವಾಗುವುದಲ್ಲದೆ ನಾನೊಂದು ನೀನೊಂದು ಹೀಗೆ ಬೇರೆ ಬೇರೆ ಮಾಡಿದರೆ ಕೆಟ್ಟು ಹೋಗುವುದು. ಈಗ ನಾವಿಬ್ಬರೂ ಒಟ್ಟಿಗೆ ರಾಜ ನಲ್ಲಿಗೆ ಹೋಗೋಣ.
ಕರಟಿಕದ ಈ ಅಭಿಪ್ರಾಯವನ್ನು ದಮನಕವು ಒಪ್ಪಿಕೊಂಡಿತು. ಎರಡೂ ಕೂಡಿಕೊಂಡು ಸಿಂಹೆದ ಹತ್ತಿರ ಹೋಗಿ ನಮಸ್ಕರಿಸಿ ಕುಳಿತ ಕೊಂಡುವು. ಸಿಂಹವು, “ಏನು, ಮಂತ್ರಿಗಳೇ ಬಹಳ ದಿವಸಕ್ಕೆ ಬಂದಿರಿ. ಸಮಾಚಾರವೇನು?” ಎಂದು ಪ್ರಶ್ನಿಸಿತು. ಅದಕ್ಕೆ ಆ ನರಿಗಳು, ಮಹಾ ಸ್ವಾಮೀ! ತಮ್ಮ ಸನ್ನಿಧಿಗೆ ಬರುವ ಕಾರ್ಯ ಸಂಘಟಸಿದ್ದರಿಂದ ಬಂದೆವು. ಇಲ್ಲವಾದರೆ ಅರಸರಿಗೆ ಯಾರ ಆವಶ್ಯಕತೆಯೂ ಇಲ್ಲ. ಹಲ್ಲುಗಳನ್ನು ತಿಕ್ಕುವು ದಕ್ಕೆ ಕಡ್ಡಿ ಯಾದರೂ ಉಪಯೋಗಕ್ಕೆ ಬರುತ್ತದೆ. ಈಗ ಅಲ್ಪರಾದ ನಮ್ಮಿಂದ ಏನಾದರೂ ಉಸಯೋಗನಾಗಬಹುದು. ಮಹಾಸ್ವಾಮಿಯವರು ಉದಕಪಾನ ನಿಮಿತ್ತವಾಗಿ ದಯಮಾಡಿಸಿ ಉದಕಪ್ರಾಶನ ಮಾಡದೆ ಸಲಾ ಯನಗೈದ ಕಾರಣವೇನೆಂಬುದು ತಿಳಿಯಲಿಲ್ಲ. ಇದನ್ನು ಸನ್ನಿಧಿಯಿಂದ ಅರಿತುಕೊಳ್ಳ ಬೇಕೆಂದು ಬಂದಿದ್ದೇವೆ” ಎಂದು ಹೇಳಿದುವು, ಸಿಂಹವು ನಡೆದ ನಿಜಸಂಗತಿಯನ್ನೆ ಲ್ಲ ಹೇಳಿತು, ಇದನ್ನು ಕೇಳಿ ಆ ಜಂಬುಕಗಳು “ಮಹಾ ಸ್ವಾಮಿ! ತಾವು ಆ ಮೃಗವನ್ನು ಕಣ್ಣಾರೆ ಕಂಡಿಲ್ಲ. ಅದರ ಪರಾಕ್ರಮ ವನ್ನು ತಿಳಿಯದೆ ಬಯಲಧ್ವನಿ ಮಾತ್ರಕ್ಕೆ ಭೀತಿಗೊಳ್ಳಬಹುಡೆ? ಪೂರ್ವ ದಲ್ಲಿ ಜಂಬುಕಗಳು ಬಯಲಧ್ವನಿ ಕೇಳಿ ಬೆದರಿ ತಮ್ಮ ಆಹಾರವನ್ನು ಕೆಡಿಸಿ ಕೊಂಡುವು, ಅದನ್ನು ಚಿತ್ತವಿಟ್ಟು ಆಲಿಸಬೇಕು ಎಂದು ಆ ಕಥೆ ಯನ್ನು ಹೀಗೆ ಹೇಳಿದುವು.

ಉತ್ತರದೇಶದಲ್ಲಿ ಕರುಣಾವತಿಯೆಂಬುಜೊಂದು ಪಟ್ಟಣ. ಆ ಪಟ್ಟಣಕ್ಕೆ ಉಗ್ರಸೇನನೆಂಬವನು ರಾಜ. ಅವನು ಅಸ್ಟೈಶ್ವರ್ಯಗಳಿಂದ ಕೂಡಿ ಪರಾಕ್ರಮದಿಂದ ರಾಜ್ಯವಾಳುತ್ತಿದ್ದನು, ಇತ್ತ ದಕ್ಷಿಣದಲ್ಲಿ ಶಾಂತಿವರ್ಫ ನವೆಂಬ ಪುರದಲ್ಲಿ ಭದ್ರಸೇನನೆಂಬ ರಾಜನು ಪ್ರತಾಸಶಾಲಿಯಾಗಿ ರಾಜ್ಯ ಭಾರ ಮಾಡುತ್ತಿದ್ದನು. ಒಮ್ಮೆ ಉಗ್ರಸೇನರಾಜನು ಸಕಲ ಸೇನಾ ಸನ್ನಾ ಹದಿಂದೊಡಗೂಡಿ ಬೇಟಿಗೆ ಹೊರಟನು. ಅತ್ತಣಿಂದ ಭದ್ರಸೇನ ರಾಜನೂ ಮೃಗವ್ಯಸನದಿಂದ ಸೇನಾಸಮೇತನಾಗಿ ಹೊರಟಿದ್ದನು, ಸಪ್ತ ವ್ಯಸನಗಳಲ್ಲಿ ಮೃಗವ್ಯಸನವೂ ಒಂದಸ್ಟೆ! ಇದರಿಂದ ಈ ಉಭಯರಾಜರಲ್ಲಿ ವೈಸಮ್ಯವುಂಟಾಗಿ ಒಬ್ಬರಿಗೊಬ್ಬರು ಕಾದಾಡಿದರು. ಆ ಯುದ್ಧದಲ್ಲಿ ತರಹರಿಸಲಾರದೆ ಕಂಗೆಟ್ಟು ಭದ್ರಸೇನನ ದಳನೆಲ್ಲ ಮುರಿದು ಸಕಲ ಸನ್ನಾ ಹವು ರಾಶಿರಾಶಿಯಾಗಿ ಬಿದ್ದಿತು. ಗಜಾಶ್ವರಥಸದಾತಿಗಳು, ಬಿಲ್ಲುಬಾಣ್ಕ ಭೇರಿ ತಮ್ಮಟಿ ಮೊದಲಾದ ನಾನಾ ವಾದ್ಯಗಳು ಯುಕ್ತವಾಗಿ ಬಿದ್ದಿರುವು ದನ್ನು ಕಂಡು ಜಂಬುಕಗಳು ಅತಿಹರ್ಸದಿಂದ ತಮಗೆ ಒಂದು ತಿಂಗಳ ಸರ್ಯಂತರ ಸಂಪೂರ್ಣ ಗ್ರಾಸವು ದೊಕೆಕಿತೆಂದು ಅದನ್ನು ಭಕ್ಷಿಸುತ್ತ ಕೆಲವು ದಿವಸ ಸುಖದಲ್ಲಿದ್ದುವು, ಒಂದು ದಿವಸ ಮಹಾಪ್ರಳಯದ ಗಾಳಿ ಬೀಸಲು ಒಂದು ವೃಕ್ಷದ ನಾಲ್ಕೆಂಟು ಕೊಂಬೆಗಳು ಮುರಿದು ಭೇರಿ ತಮ್ಮಟ ವಾದ್ಯ ಗಳ ಮೇಲೆ ಬಿದ್ದುವು. ಕೂಡಲೆ ಘೋರಧ್ಯನಿ ಹೊರಟತು. ಆ ಸೊಪ್ಪು ಳನ್ನುಕೇಳಿ ಜಂಬುಕಗಳು ಭೀತಿಗೊಂಡು ಓಡಿ ಹೋದುವು. ಪುನಃ ನಾಲೈಂಟು ದಿವಸಗಳಾದ ಮೇಲೆ ಆಹಾರವಿಲ್ಲದೆ ಮಹಾಕ್ಷುಥೆಯಿಂದ ಆ ಜಂಬುಕಗಳು ಅರಣ್ಯಭೂಮಿಗೆ ಬಂದು ನೋಡಲು ಅಲ್ಲಿ ಏನೂ ಭಯ ಕಾಣ ಲಿಲ್ಲ. ವೃತ್ತದ ಕೊಂಬೆಗಳು ವಾದ್ಯಗಳ ಮೇಲೆ ಬಿದ್ದುದರಿಂದ ಅಂಥ ಧ್ವನಿ ಯಾಯಿತೆಂದು ತಿಳಿದುಬಂದಿತು. ಆಗ ಅವು ಧೈರ್ಯತಾಳಿ "ನಾವು ವಿಚಾರ ಮಾಡಿ ಅರಿತುಕೊಳ್ಳದೆ ಬಯಲಧ್ವನಿ ಮಾತ್ರಕ್ಕೆ ಭಯಪಟ್ಟು ಹೋದೆನಲ್ಲಾ' ಎಂದು ತಮ್ಮೊಳಗೆ ತಾವು ವಿನೋದ ಮಾಡುತ್ತ ಅಲ್ಲಿದ್ದ ಆಹಾರವನ್ನು ಭಕ್ಷಿಸಿ ನಲಿದಾಡಿದುವು. ಆ ಕಾರಣದಿಂದ ಸಿಂಹರಾಜನೇ! ಬರಿಯ ಬಯಲಧ್ವನಿಗೆ ಬೆದರಿ ಹೋಗಬಾರದು.
ಈ ಕಥೆಯನ್ನು ಕೇಳಿ ಸಿಂಹವು «ಇದು ಈ ಭೂತ್ಮೋಕದಲ್ಲಿರುವ ಮೃಗಗಳ ಧ್ವನಿಯಂತೆ ಸಾಮಾನ್ಯವಾದುದಲ್ಲ, ಪ್ರಳಯ ಕಾಲೆದ ಅಬ್ಬರದ ಸಿಡಿಲಿನಂತೆ ಧ್ವನಿಯಾಯಿತು.” ಎಂದು ತನ್ನ « ಅನುಭವವನ್ನು ಹೇಳಿತು. ಆ ನರಿಗಳು "ಮಹಾಸ್ವಾಮಿ! ನಮಗೆ ಅಪ್ಪಣೆಯನ್ನು NC ನಾವು ಶೋಧ ಮಾಡಿಬಂದು ತಮ್ಮಲ್ಲಿ ನಿವೇದಿಸಿಕೊಳ್ಳುವೆವು.” ಎಂದು ಹೇಳಿ ಸಿಂಹದ ಅಪ್ಪಣೆಯನ್ನು ಪಡೆದು ಅಲ್ಲಿಂದ ಹೊರಟುನು. ಆ ನರಿಗಳು ಸಂಜೀವಕ ಎತ್ತಿನ ಬಳಿಗೆ ಬಂದು ಮಾತನಾಡಿ ಸ್ನೇಹವನ್ನು ಬೆಳೆಸಿಕೊಂಡು ತಿರುಗಿ ಸಿಂಹವಿದ್ದಲ್ಲಿಗೆ ಬಂದು ನಮಸ್ಯರಿಸಿದುವು. ಬಂದ ನರಿಗಳನ್ನು ಸನ್ಮಾ ನಿಸಿ ಸಿಂಹವು, «ನೀವು ಹೋದ ಕಾರ್ಯವೇನಾಯಿತು? ಅವರು ಯಾರು?” ಎಂದು ಕೇಳಿತು. ಅದಕ್ಕೆ ಕರಟಿಕ ದಮನಕಗಳು, “ಮಹಾ ಪ್ರಭು ತಮ್ಮ ಅಪ್ಪಣೆ ಪಡೆದು ಹೋಗಿ ನೋಡಿದೆವು. ತಮ್ಮ ಅನುಭವದಂತೆಯೆೇ ಆಯಿತು. ಸ್ಟೂಲವಾಗಿ ಮಹಾದೇವರ ನಂದಿಯ ಹಾಗೆ ಇದ್ದಾನೆ. ಆದರೆ ತಮ್ಮ ಭೇಟಿಯನ್ನು ಅಸೇಕ್ಷಿಸುತ್ತಿದ್ದಾನೆ. ಆಜ್ಞೆಯಾದರೆ ಪುನಃ ಹೋಗಿ ಆತನನ್ನು TR ಕರೆ ಕೊಡ ಬರುತ್ತೇವೆ'' ಎಂದು ಅರಿಕೆ ಯೇ. ಈ ಮಾತಿಗೆ ಸಿಂಹವು ಒಡಂಬಟ್ಟು ಕರೆದುಕೊಂಡು ಬರುವುದಾಗಿ ಆಜ್ಞಾ ನಿಸಿತು. ಕೂಡಲೇ ಮಂತ್ರಿದ್ವಯರು ಅಲ್ಲಿಂದ ತೆರಳಿ ಎತ್ತಿನ ಹತ್ತಿರ ಹೋಗಿ ಬಹಳ ಮರ್ಯಾದೆಯಿಂದ ಅದನ್ನು ಕರೆತಂದು ಸಿಂಹ ರಾಜನಿಗೆ ಭೇಟ ಮಾಡಿಸಿದುವು. ಕೆಲವು ದಿವಸಗಳಲ್ಲಿಯೇ ಸಂಜೀವಕ ನಿಂಗಳಕರು ಅತ್ಯಂತ ಸ್ಪೇಹಿತೆರಾದರು. ಸಿಂಹರಾಜನಿಗೆ ಸಂಜೀವಕನ ಹೊರತು ಮತ್ತೊಂದು ಪ್ರಾಣಿಯ ಅಗತ್ಯವಿಲ್ಲದಹಾಗಾಯಿತು.
ಇವೆರಡರ ಈ ವಿಧವಾದ ಸ್ನೇಹದಿಂದ ಕರಟಿಕ ದಮನಕಗಳು ಒಳ್ಳೆಯ ಸಂಕಟದಲ್ಲಿ ಸಿಕ್ಕಿಕೊಂಡುವು, ಇವುಗಳಿಗೆ ತಿನ್ನುವುದಕ್ಕೆ ಆಹಾರವೇ ದೊರೆಯದಂತಾಯಿತು. ಇದರಿಂದ ತಂಬ ಚಿಂತೆಗೊಳಗಾದುವು. ತಮ್ಮೊ ಳಗೆ ಯೋಚನೆ ಮಾಡುತ್ತ ದಮನಕವು, «ನಾವು ಈ ಸಿಂಹೆಕ್ಟೂ ಸಂಜೀವ ಕಕ್ಟೂ ಸ್ನೇಹೆವುಂಟಾಗುವಂತೆ ಮಾಡಿದುದು ನಮ್ಮ ದೋಷವೇ ಸರಿ. ಇದರಂತೆಯೇ ಹಿಂದೆ ನಡೆದಿದೆ. ತಗರಿನ ಯುದ್ಧದಲ್ಲಿ ಜಂಬುಕ ಸತ್ತಿತು, ಆಸ್ಫಾಢಭ್ಯೂತಿಗೋಸ್ಫರ ಸಂನ್ಯಾಸಿಯ ದ್ರವ್ಯಹೋಯಿತು. ಬೇಡನ ಹೆಂಡತಿಯ ವಿಷಯದಲ್ಲಿ ನಾಯಿದಗಿತ್ತಿಯ ಮೂರು ಹೋಯಿತು. ಈ ಮೂವರು ತಾವು ಮಾಡಿದ ತಪ್ಪಿನಿಂದಲೇ ಕೆಟ್ಟು ಹೋದರು. ಅದ ರಂತೆ ನಮಗೂ ಪ್ರಾಶ್ತಿಸಿತು.” ಎಂದು ಹೇಳಿತು. ಕರಟಕವು ಅದು ಹೇಗೆ ವಿವರಿಸ್ಕು ಎಂದು ಕೇಳಲ್ಕು ದಮನಕವು ಆ ಕಥೆಗಳನ್ನು ವಿಸ್ತಾರವಾಗಿ ಹೇಳುವುದಕ್ಕಾರಂಭಿಸಿತು.

ಕಥೆ: ಕಾವೇರೀ ತೀರದಲ್ಲಿ ಧರ್ಮಪುರಿಯೆಂಬ ಅಗ್ರಹಾರ. ಅಲ್ಲಿ ದೇವಶರ್ಮನೆಂಬ ಒಬ್ಬ ಯತೀಶ್ವರ. ಅವನು ಅತಿ ಲುಬ್ಧ. ಜಿಪುಣತನ ದಿಂದಲೇ ಬಹಳ ದ್ರವ್ಯವನ್ನು ಗಳಿಸಿದ್ದನು. ಎರಡನೆಯವರಾರನ್ನೂ ನಂಬಜೆ ಆ ತನ್ನ ಹಣವನ್ನೆಲ್ಲ ಒಂದು ಲಾಕುಳದ ಕಂತೆಯಲ್ಲಿ ತುಂಬಿಕೊಂಡು ಮತ್ತೊಬ್ಬರು ಅರಿಯದಂತೆ ಬಚ್ಚಿಟ್ಟುಕೊಂಡಿದ್ದನು. ಆ ಕೋಲನ್ನು ಯಾರಿಗೂ ಹಿಡಿಯಗೊಡದೆ ತನ್ನ ವಶದಲ್ಲಿಯೇ ಯಾನಾಗಲೂ ಇರಿಸಿ ಕೊಂಡಿರುತ್ತಿದ್ದನು. ಆಷಾಢಭೂತಿಯೆಂಬ ಒಬ್ಬ ಬ್ರಾಹ್ಮಣನು ಈ ಯತೀ ಶ್ವರನ ಗಂಟಿನ ಮೇಲೆ ಕಣ್ಣಿಟ್ಟದ್ದನು. ಅವನು ಹೇಗಾದರೂ ಮಾಡಿ ಈ ಸಂನ್ಯಾಸಿಯ ದ್ರವ್ಯವನ್ನು ಹರಣಮಾಡಬೇಕೆಂದು ಆಲೋಚಿಸಿ, ಆ ಯತೀ ಶ್ವಕನ ಶಿಷ್ಯತ್ವವನ್ನು ವಹಿಸಿ ಯಾವಾಗಲೂ ಅವನ ಸೇವೆಯಲ್ಲಿ ತತ್ಸರನಾ ಗಿದ್ದನು. ಹೀಗೆಯೇ ಕೆಲವು ದಿವಸಗಳು ಕಳೆದುವು. ಒಂದು ದಿವಸ ಯತೀ ಶ್ವರನನ್ನು ಕುರಿತು ಶಿಷ್ಯನು, "ಗುರುಗಳೇ! ಈ ಶರೀರವು ಅಶಾಶ್ವತ. ಲೋಕ ದಲ್ಲಿದ್ದು ಮೋಕ್ಷವನ್ನು ಸಂಪಾದಿಸಬೇಕು. ಕಾಶಿ ಮೊದಲಾದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಕೈವಲ್ಯುವನ್ನು ಪಡೆಯಬೇಕು.'' ಎಂದು ಬಿನ್ನ ವಿಸಿದನು. ಇದಕ್ಕೆ ಯತೀಶ್ವರನು ಒಡಂಬಟ್ಟಿನು. ಉಭಯರೂ ಕಾಶೀ ಯಾತ್ರೆಗೆ ಅನುವಾಗಿ ಪ್ರಯಾಣಬೆಳಸಿದರು.
ಹೀಗೆ ಪ್ರಯಾಣ ಬೆಳಸಿ ಗುರು ಶಿಷ್ಯರು ಕೆಲವು ಯೋಜನಗಳನ್ನು ಕಳೆದು ಹೋಗುತ್ತಿರಲು ಸೂರ್ಯಾಸ್ತಮಯವಾಯಿತು,ಅವರು ಹತ್ತಿರದಲ್ಲಿಯೇ ಇದ್ದ ಸದ್ಮಪುರವೆಂಬ ಗ್ರಾಮದ ಬಳಿ ಹರಿಯುತ್ತಿದ್ದ ಭದ್ರಿವತಿಯೆಂಬ ನದಿ ಯನ್ನು ಕಂಡು ಹರ್ಷಿತರಾಗಿ ಅಲ್ಲಿಯೇ ಉಳಿದುಕೊಂಡರು. ಮಾರನೆಯ ದಿವಸ ಬೆಳಗ್ಗೆ ಯತೀಶ್ವರನು ಬಹಿರ್ದೇಶಕ್ಕೆ ಹೋಗಬೇಕಾಯಿತು. ಆಗ ಅವನು ತನ್ನ ಕೋಲಕಂತೆಯನ್ನು ಠಕ್ಕು ಶಿಷ್ಯನಾದ ಆಷಾಢಭೂತಿಯ ಮುಂದಿರಿಸಿ ಹೋದನು. ಸಂನ್ಯಾಸಿ ತಿರುಗಿ ಬರುತ್ತಿರುವಾಗ ದಾರಿಯಲ್ಲಿ ಎರಡು ತಗರುಗಳು ರೋಷದಿಂದ ಕಾದಾಡುತ್ತಿರುವುದನ್ನು ಕಂಡು ಅಲ್ಲಿಯೇ ನೋಡುತ್ತ ನಿಂತನು. ಕಾದಾಟದಿಂದ ಒಂದು ತಗರಿನ ಹಣೆಯೊಡೆದು ರಕ್ತವು ಹರಿಯುತ್ತಿತ್ತು. ಜಂಬುಕವೊಂದು ಆ ರಕ್ತವನ್ನು ಕುಡಿಯಬೇ ಕೆಂದು ಓಡಿ ಬಂದು ಮಧ್ಯದಲ್ಲಿ ನಿಂತು ನಾಲಗೆಯಿಂದ ನೆಕ್ಕುತ್ತಿರುವ ಸಮಯದಲ್ಲಿ ತಗರುಗಳು ಹಿಮ್ಮೆಟ್ಟಿ ಬಲವಾಗಿ ಹಾಯ್ದುವು. ಜಂಬುಕವು ಮಧ್ಯದಲ್ಲಿ ಸಿಕ್ಕಿ ಸತ್ತುಹೋಯಿತು, ಇದನ್ನೆಲ್ಲಾ ನೋಡುತ್ತಿದ್ದ ಯತಿಗೆ ತುಂಬ ವ್ಯಸನವಾಯಿತು. ಇದೇ ಕಳವಳದಿಂಡ ಮೆಲ್ಲಗೆ ನಡೆಯುತ್ತ ಸಂನ್ಯಾಸಿ ತಾನು ಉಳಿದುಕೊಂಡಿದ್ದ ಸ್ಥಳಕ್ಕೆ ತಿರುಗಿ ಬರುವಷ್ಟರಲ್ಲಿ ಶಿನ್ಯೋ ತ್ರಮನು ಕೋಲಕಂತೆಯೊಡನೆ ಪಲಾಯನ ಬೆಳಸಿದ್ದನು. ಸಂನ್ಯಾಸಿಯ ಎದೆಯೊಡೆಯಿತು. ಅವನು ಅತ್ಯಂತ ದುಃಖದಿಂದ ಆ ಶಿಷ್ಯನನ್ನು ಹುಡು ಕುತ್ತ ಹೊರಟನು, ಯತೀಶ್ವರನು ನಡೆದು ನಡೆದು ಬಳಲಿದ್ದನು. ಸಾಯಂಕಾಲವೂ ಆಯಿತು. ಅಲ್ಲಿಯೇ ಒಂದೂರಿನಲ್ಲಿ ಒಬ್ಬ ಬೇಡನ ಮನೆಯ ಚಾವಡಿಯಲ್ಲಿ ಆ ರಾತ್ರಿ ಕಳೆಯಬೇಕೆಂದು ತಂಗಿದನು, ಅಂದಿನ ರಾತ್ರಿಯಲ್ಲಿ ಒಂದು ಚಮತ್ಕಾರ ನಡೆಯಿತು. ಆ ಬೇಡನ ಹೆಂಡತಿ ಅನ್ಯಾಸಕ್ಕೆ, ಅವಳ ಗಂಡನು ಅವಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ಒಂದು ಉಪಾಯವನ್ನು ಹೊಡಿದನು. ಅವನು ಆ ದಿನ ಊರಿಗೆ ಹೋಗುತ್ತೇನೆಂದು ತನ್ನ ಹೆಂಡತಿಗೆ ಸುಳ್ಳು ಹೇಳಿ ಮನೆ ಬಿಟ್ಟು ಹೊರಟು ಹೋದನು. ಯಾರೂ ಕಾಣದಹಾಗೆ ಮರಳಿ ಬಂದು ಮನೆಯಲ್ಲಿ ಅಡಗಿದ್ದನು. ಬೇಡತಿ ತನ್ನ ಗಂಡನು ಊರಿಗೆ ಹೋಗಿರುವನೆಂದು ಸಂತೋಷತಾಳಿ ಸುಖೋಸಭೋಗದ್ರವ್ಯಾದಿಗಳನ್ನು ತೆಗೆದುಕೊಂಡು ಹೊರಗೆ ಹೊರಟಳು. ಕೂಡಲೇ ಒಳಗೆ ಅಡಗಿಕೊಂಡು ಕುಳಿತಿದ್ದ ಅವಳ ಗಂಡನು ಹೆಂಡತಿಯನ್ನು ಹಿಡಿದು ತನ್ನ ಮನೆಯ ಕಂಬಕ್ಕೆ ಹೆಡಗೈ ಕಟ್ಟಿಹಾಕಿ ತಾನು ಒಳಗೆ ಹೋಗಿ ಮಲಗಿ ನಿದ್ದೆ ಹೋದನು. ಬೇಡನ ಹೆಂಡತಿಗೆ ನಾಯಿದಗಿತ್ತಿಯೊಬ್ಬಳು ದೂತಿಯಾಗಿದ್ದಳು. ಅವಳು ದಿನದಂತೆ ತನ್ನ ಒಡತಿಯ ಬಳಿಗೆ ಬಂದು ಅವಳ ಅವಸ್ಥೆಯನ್ನು ಕಂಡು ಹೀಗೇಕಾಯಿ ತೆಂದು ಕೇಳಿದಳು, ಬೇಡತಿ ತನ್ನ ವೃತ್ತಾಂತವನ್ನೈಲ್ಲ ದುಃಖಿಸಿ ದುಃ ಖಿಸಿ ಹೇಳಿಕೊಂಡಳು. ದೂತಿ ತನ್ನ ಒಡತಿಯ ಹೆಡಗೈಯನ್ನು ಮೆಲ್ಲಗೆ ಬಿಚ್ಚಿ ತನ್ನನ್ನು ಕಂಬಕ್ಕೆ ಕಟ್ಟಿಸಿಕೊಂಡು ಅವಳನ್ನು ಕೆಲಸ ಮುಗಿಸಿಕೊಂಡು ಬರುವುದಕ್ಕಾಗಿ ಕಳಿಸಿಬಿಟ್ಟಳು. ಬೇಡತಿ ಹೋದ ಮೇಲೆ ದೂತಿ ಸುಮ್ಮನೆ ನರಳುತ್ತಿದ್ದಳು. ಈ ಸೊಪ್ಪುಳವನ್ನು ಕೇಳಿ ಬೇಡನಿಗೆ ಎಚ್ಚರವಾಯಿತು. ಅವನು ಎದ್ದು ಬಂದು ಕೋಪದಿಂದ “ಇನ್ನೂ ನಿನಗೆ ನಾಚಿಕೆ ಬರಲಿಲ್ಲವೆ, ನರಳುತ್ತಿರುವೆಯಾ” ಎಂದು ಬೈದು ಅವಳ ಮೂಗನ್ನು ಕೊಯ್ದು ಹಾಕಿದನು. ತಾನು ಮೊದಲಿನಂತೆ ಒಳಗೆ ಹೋಗಿ ಮಲಗಿಕೊಂಡನು.
ಸ್ವಲ್ಪ ಸಮಯವಾದ ಮೇಲೆ ಬೇಡತಿ ತಾನು ಹೋದ ಕಾರ್ಯವನ್ನು ಮುಗಿಸಿಕೊಂಡು ಸಂತೋಷವಾಗಿ ಹಿಂದಿರುಗಿದಳು, ತನ್ನ ದೂತಿಯ ಮೂಗು ಕತ್ತರಿಸಿದ್ದು ನೋಡಿ ಹೀಗೇಕಾಯಿತೆಂದು ಕೇಳಿದಳು. ದೂತಿ ಪ್ರಳಾಪ ಮಾಡುತ್ತೆ ನಡೆದ ಸಂಗತಿಯನ್ನ ಲ್ಲ ಮೆಲ್ಲನೆ ಉಸುರಿದಳು. ಬೇಡತಿಗೆ ಬಹಳ ಕಳವಳವಾಯಿತು. ಅವಳು ದೂತಿಯ ಕಟ್ಟನ್ನು ಬಿಚ್ಚಿ ಮುನ್ನಿನಂತೆ ತನ್ನನ್ನು ಕಟ್ಟಿಸಿಕೊಂಡು ಅವಳನ್ನು ಕಳಿಸಿಕೊಟ್ಟಳು. ದೂತಿ ಕೊಯ್ದ ಮೂಗನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ಮನೆಗೆ ಹೋದಳು. ಸ್ವಲ್ಪ ಹೊತ್ತಾದ ಮೇಲೆ ಬೇಡತಿ ಉಚ್ಚ ಧ್ವನಿಯಲ್ಲಿ ರೋದಿಸುತ್ತ "ಹೇ ಭೂಮಿತಾಯಿ! ಆಕಾಶವೇ!! ಚಂದ್ರ ಸೂರ್ರ್ಯರೇ, ಅಪ್ಪದಿಕ್ಬಾಲಕರುಗಳೇ!!! ನನ್ನ ಮೊರೆ ಯನ್ನು ಕೇಳಿರಿ. ನನ್ನ ಮೇಲೆ ದುರ್ನಿಮಿತ್ತದಿಂದ ಅಪರಾಧವನ್ನು ಸ್ಥಾಪಿಸಿ ಗಂಡನು ನನ್ನ ಮೂಗನ್ನು ಕೊಯ್ದನು, ನನ್ನಲ್ಲಿ ಪತಿವ್ರತಾಧರ್ಮವಿದ್ದರೆ ಕೊಯ್ದ ಮೂಗು ಚಿಗುರಲಿ, ಇಲ್ಲವಾದರೆ ಹೋದ ಮೂಗು ಹೋಗಲಿ'' ಎಂದು ಅರಚತೊಡಗಿದಳು. ಮಲಗಿದ್ದ ಗಂಡನು ಎಚ್ಚತ್ತು ಬಂದು ನೋಡಲು ಮುನ್ನಿನಂತೆ ಮೂಗು ಇದ್ದಿತು ಇದನ್ನು ಕಂಡು ಅವನಿಗೆ ಆಶ್ಚರ್ಯವಾ ಯಿತು, ತನ್ನ ಪತ್ಟಿಯ ನಡತೆಯಲ್ಲಿ ನಿಷ್ಕಾರಣವಾಗಿ ಕಲಂಕವನ್ನು ಹುಡುಕಿದೆನಲ್ಲಾ ಎಂದು ಪಶ್ಚಾತ್ತಾಪಗೊಂಡು, “ನೀನು ಮಹಾಪತಿವ್ರತೆ. ನಿನ್ನಲ್ಲಿ ನಾನು ಅಪಚಾರ ಮಾಡಿದೆ, ನನ್ನ ತಪ್ಪನ್ನು ಕ್ಷಮಿಸು” ಎಂದು ಬಹಳ ದೈನ್ಯದಿಂದ ಬೇಡಿಕೊಂಡು ಹೆಡಗೈಕಟ್ಟನ್ನು ಬಿಚ್ಚಿ ಸಂತೈಸಿ, ಸನ್ಮಾನ ಮಾಡಿ ತಕ್ಕೈಸಿದನು.
ಇತ್ತ ನಾಪಿತನ ಪತ್ನಿಯಾದ ಕುಟ್ಟಿನಿ ಮನೆಗೆ ಹೋಗಿ ಮುಖವನ್ನು ಯಾರಿಗೂ ತೋರಿಸದೆ ಮುಚ್ಚಿಕೊಂಡು ಮಲಗಿಕೊಂಡಳು. ಅವಳ ಗಂಡನು ಹೊತ್ತಾಗಿ ಎದ್ದು ಕ್ಷೌರದ ಕೆಲಸಕ್ಕೆ ಹೋಗುವುದಕ್ಕಾಗಿ ಒಳ ಗಿದ್ದ ಹಡಪವನ್ನು ಕೊಡು ಎಂದು ತನ್ನ ಹೆಂಡತಿಯನ್ನು ಕೇಳಿದನು. ಅವಳು ಇದೇ ಸಮಯವೆಂದು ದಿಗ್ಗನೆದ್ದು ಕದಕ್ಕೆ ಮರೆಯಾಗಿ ನಿಂತುಕೊಂಡು ಕತ್ತಿಗಳನ್ನು ತೆಗೆದು ಒಂದೊಂದಾಗಿ ಕೊಡತೊಡಗಿದಳು. ಅವಳ ಗಂಡನು ಕೋಪ ತಾಳಿ, "ಹಡಪವನ್ನು ಕೊಡೆಂದರೆ ಒಂದೊಂದು ಕತ್ತಿಯನ್ನು ಕೊಡುತ್ತೀಯಾ?'' ಎಂದು ಗದ್ದರಿಸಿ ಕತ್ತಿಯನ್ನು ಒಳಕ್ಕೆ ಬೀಸಾಡಿದನು. ಇದನ್ನೇ ನೆವ ಮಾಡಿಕೊಂಡು ಅವಳು, "ಅಯ್ಯೋ! ನನ್ನ ಮೂಗು ಕತ್ತಿ ಯಿಂದ ಹೋಯಿತು'' ಎಂದು ಬಾಯಿ ಹೊಡೆದುಕೊಂಡು ರೋದಿಸುತ್ತ ರಾದ್ಧಾಂತವೆಬ್ಬಿಸಿದಳು. ಈ ಗದ್ದಲವನ್ನು ನೆರೆಹೊರೆಯ ಜನರು ಕೇಳಿ ನಿರಪರಾಧಿಯ ಮೂಗನ್ನು ಕೊಯ್ಯಬೇಕೆ, ಎಂಥ ಕ್ರೂರನು, ಎಂದು ನಾಪಿತ ನನ್ನು ಬಯ್ಯತೊಡಗಿದರು. ಈ ದೂರು ಆ ಊರಿನ ಅಧಿಪತಿಯವರೆಗೂ ಹೋಯಿತು, ಅವನು ಕ್ಷೌರಕನನ್ನು ಹೆಡಮುರಿಗೆ ಕಟ್ಟ ಎಳೆದು ತನ್ನಿರಿ, ಎಂದು ತಳವಾರರನ್ನು ಕಳಿಸಿದನು. ಅವರು ಕ್ಷೌರಕನನ್ನು ಅರಸನ ಸನ್ನಿಧಿಗೆ ಕರೆತಂದರು. ಅರಸು ಅವನನ್ನು ನೋಡಿ, "ನೀನು ನಿನ್ನ ಹೆಂಡತಿಯ ಮೂಗನ್ನು ಕೊಯ್ದ ಕಾರಣವೇನು?' ಎಂದು ವಿಚಾರಿಸಿದನು. ಹಡಪಿಗನು ಉತ್ತರ ಕೊಡದೆ ಸುಮ್ಮನೆ ನಿಂತಿದ್ದನು. ಅರಸನಿಗೆ ಕೋಪ ಬಂದು ಇವ ನನ್ನು ಶೂಲಕ್ಕೇರಿಸಿ, ಎಂದು ಅಪ್ಪಣೆ ಮಾಡಿದನು.
ಈ ಕೌತುಕವನ್ನೆಲ್ಲಾ ಆ ಸಂನ್ಯಾಸಿ ನೋಡುತ್ತಲೇ ಇದ್ದನು. ಇನ್ನು ತಾನು ತಡಮಾಡಿದರೆ ಕ್ಷೌರಕನನ್ನು ನಿಷ್ಕಾರಣವಾಗಿ ಕೊಂದುಬಿಡುವ ರೆಂದು ಮನಸ್ಸಿನಲ್ಲಿ ಆಲೋಚಿಸಿಕೊಂಡು ಅರಸಿನ ಸಮೀಪಕ್ಕೆ ಬಂದು, “ಹೇ ಪ್ರಭುವೆ! ವಿಚಾರಿಸಿ ನೋಡು. ಅತ್ತಿಯ ಹೂವನ್ನಾದರೂ ನೋಡ ಬಹುದು, ಬಿಳಿಯ ಕಾಗೆಯನ್ನಾದರೂ ಕಾಣಬಹುದು. ನೀರಿನಲ್ಲಿ ಮಿನದ ಹೆಜ್ಜೆಗಳನ್ನಾದರೂ ನೋಡಬಹುದು, ಹೆಣ್ಣಿನ ಮನಸ್ಸನ್ನು ಕಂಡವರಾರಿ ದ್ದಾರೆ?” ಎಂದು ನುಡಿದು ನಡೆದ ಸಕಲ ವೃತ್ತಾಂತವನ್ನು ಅರಸನಿಗೆ ವಿವರಿಸಿ ದನು. ಇದನ್ನೆಲ್ಲ ಕೇಳಿ ರಾಜನು ಖೇದಪಟ್ಟು ಆ ಬೇಡನ ಹೆಂಡತಿಯನ್ನೂ ನಾಪಿತನ ಹೆಂಡತಿಯನ್ನೂ ಹಿಡಿದು ತರಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿ ದನು, ಯತೀಶ್ವರನಿಗೂ ತಕ್ಕ ಸನ್ಮಾನ ಮಾಡಿ ಅವನನ್ನು ಕಳಿಸಿಕೊಟ್ಟನು.
ಕೇಳಿದೆಯಾ ಕರಟಕನೇ ! ಈ ಮೂವರು ತಮ್ಮಿಂದ ತಾವೇ ಕೆಟ್ಟರು. ಈಗ ನಾವಿಬ್ಬರೂ ಸಂಜೀವಕನ ಸಖ್ಯ ಮಾಡಿಸಿ ನಮ್ಮಿಂದ ನಾವೇ ಕೆಟ್ಟೆವು, ಯಾವನಾದರೊಬ್ಬನು ಉಪಾಯದಿಂದ ತಾನೇ ಹಗೆಯನ್ನು ಕೊಲ್ಲಬೇಕು, ಅದು ಆಗದಿದ್ದರೆ ಅನ್ಯರ ಶಕ್ತಿಯಿಂದಾದರೂ ಕಾರ್ಯವನ್ನು ಕೈಗೂಡಿಸಿ ಕೊಳ್ಳಬೇಕು. ಅದು ಹೇಗೆಂದರೆ:--

ಕಥೆ: - ಪ್ರಮದಾಸಖ್ಯವೆಂಬ ವನದಲ್ಲಿ ದೊಡ್ಡಿತ್ತಾದ ವಟವೃಕ್ಷ ವೊಂದುಂಟು. ಅಲ್ಲಿ ಹೇಮವರ್ಮನೆಂಬ ಒಂದು ಕಾಗೆ ಗೂಡುಕಟ್ಟಿ ಕೊಂಡು ವಾಸ ಮಾಡುತ್ತಿತ್ತು. ಅದು ತತ್ತಿಗಳನ್ನು ಹಾಕಿ ಆಹಾರ ನಿಮಿತ್ತವಾಗಿ ವನವನವನ್ನು ತಿರುಗುತ್ತಿತ್ತು. ಅದೇ ವೃಕ್ಷದ ಕೆಳಗೆ ಒಂದು ಕೃಷ್ಣ ಸರ್ಪವು ಹುತ್ತವಿಟ್ಟು ಕೊಂಡು ವಾಸವಾಗಿತ್ತು. ಅದು ಕಾಗೆಯಿಲ್ಲದ ಸಮಯ ವನ್ನು ನೋಡಿ ಅದರ ತತ್ತಿಗಳನ್ನೆಲ್ಲಾ ತಿಂದು ಹೋಗುತ್ತಿತ್ತು. ಕಾಗೆ ತಿರುಗಿ ತನ್ನ ಗೂಡಿಗೆ ಬಂದು ತತ್ತಿಗಳಿಲ್ಲದುದನ್ನು ನೋಡಿ ದುಃಖದಿಂದ ಉಪಾಯ ವಿಲ್ಲದೆ ಸುಮ್ಮನೆ ಇರುತ್ತಿತ್ತು. ಒಂದು ದಿನ ಎಂದಿನಂತೆ ತತ್ತಿಗಳನ್ನು ಹಾಕಿ ತನ್ನ ಮಿತ್ರನಾದ ನರಿಯ ಹತ್ತಿರ ಹೋಗಿ ನಡೆದ ವೃತ್ತಾಂತವನ್ನೆ ಲ್ಲ ಹೇಳಿ ತನ್ನ ದುಃಖವನ್ನು ತೋಡಿಕೊಂಡಿತು. “ನನ್ನ ತತ್ತಿಗಳನ್ನು ಸಂರಕ್ಷಿಸುವ ಉಪಾಯವನ್ನು ತೋರಿಸಿಕೊಡಬಳ್ಥೆ ಯಾ'' ಎಂದು ಕಾಗೆ ಬಹಳ ದೀನವಾಗಿ ಕೇಳಿತು. ಕಾಗೆಯ ಇತಿವೃತ್ತವನ್ನು ಹೇಳಿ ನರಿಗೆ ಬಹಳ ವ್ಯಥೆಯಾಯಿತು. ಅದು ಕಾಗೆಯನ್ನು ಕುರಿತು “ಒಂದು ಏಡಿ ಅನೇಕ ಏಡಿಗಳ ಆಶೆಯನ್ನು ತೋರಿಸಿ ಬಕವನ್ನು ಕೊಂದಿತು. ನಾವೂ ಉಪಾಯಾಂತರದಿಂದ ಈ ಸರ್ಪ ವನ್ನು ಕೊಲ್ಲಬೇಕು.” ಎಂದು ಯೋಚಿಸತೊಡಗಿತು. “ಏಡಿ ಬಕವನ್ನು ಕೊಂದುದು ಹೇಗೆ? ದಯನಿಟ್ಟು ನನ್ನೊಡನೆ ಹೇಳು” ಎಂದು ಕಾಗೆ ಕೇಳಿದುದಕ್ಕೆ ನರಿ, ಏಡಿ ಬಕವನ್ನು ಕೊಂದ ಕಥೆಯನ್ನು ಹೀಗೆ ಹೇಳಿತು.

ನಿಮಲಸರಸಿ ಎಂದು ಒಂದು ಸಕ್ಮೊನರ. ಅಲ್ಲಿ ಅನೇಕ ಮೂನು ಗಳು ತಮ್ಮ ಪುತ್ರಮಿತ್ರಬಾಂಧನರೊಡನೆ ಬಹು ಕಾಲದಿಂದ ಸುಖವಾಗಿ ವಾಸಮಾಡಿಕೊಂಡಿದ್ದುವು. ಅಲ್ಲಿಯೇ ಇರುತ್ತಿದ್ದ ಒಂದು ಬಕವು ಒಂದು ದಿನ ಅನ್ನ ನೀರುಗಳನ್ನು ತೊರೆದು ಸುಮ್ಮನೆ ಕುಳಿತಿರುವುದನ್ನು ಒಂದು ಮೊನು ನೋಡಿ ಬಕನನ್ನು “ಏನು ಗೆಳೆಯನೇ! ನೀನು ಎಂದಿನಂತೆ ಮೂನು ಗಳನ್ನು ಭಕ್ಷಿಸುವುದು ಬಿಟ್ಟು ಮೌನವಾಗಿ ಕುಳಿತಿರುವೆಯಲ್ಲಾ, ಕಾರಣವೇನು ?” ಎಂದು ಕೇಳಿತು. ಬಕವು “ನಾನೇನೋ ನೂನಭಸ್ಸ ಕನು. ಆದರೆ ಇವೊತ್ತು ವೂನುಬೇಟಿಗಾರನು ಇಲ್ಲಿಗೆ ಬಂದು ಎಲ್ಲ ನೂನು ಗಳನ್ನು ಹಿಡಿದುಕೊಂಡು ಹೋಗುವ ಲಕ್ಷ್ಮಣ ತೋರುತ್ತದೆ. ಹೀಗಾದ ಇನ್ನು ಮುಂದೆ ನನ್ನ ಉಪಜೀವನ ಹೇಗೆ ಸಾಗೀಕೆಂಬ ಚಿುತೆಯಾಗಿದೆ'' ಎಂದಿತು. ಈ ಮಾತನ್ನು ಕೇಳಿ ಆ ಮೊನು ಸರೋವರದ ಮೂನುಗಳೊ PDF Page 37 ೧೮ ಪಂಚತಂತ್ರ ಡನೆ ಆಲೋಚಿಸಿ ಯಾವನು ಅಪಾಯವಾಗುವ ಮಾತು ಹೇಳುವನೋ ಅವನು ಉಪಾಯವನ್ನು ಹೇಳಬಲ್ಲನು ಎಂದು ಬಗೆದು ಬಕನನ್ನು ("ಎಲೆ ಬಕಮಹಾರಾಜನೇ! ನಮ್ಮ ರಕ್ಷಣೆ ಮಾಡುವ ಭಾರ ನಿನ್ನದು, ನಮ್ಮನ್ನು ಹೇಗಾದರೂ ಮಾಡಿ ರಕ್ಷಿಸು'' ಎಂದು ಬೇಡಿಕೊಂಡುವು. ಅದಕ್ಕೆ ಆ ಬಕವು « ಆ ಬೇಟಿಗಾರನ ಸಂಗಡ ಹೋರಾಡಲು ನಾನು ಸಮರ್ಥ ನಲ್ಲ. ನೀವೆಲ್ಲರೂ ಒಪ್ಪಿಕೊಂಡರೆ ನಿಮ್ಮನ್ನು ಬೇರೆ ಸರೋವರಕ್ಕೆ ಕರೆದು ಕೊಂಡು ಹೋಗುತ್ತೇನೆ” ಎಂದು ಹೇಳಿತ್ತು ವಿೂನುಗಳು ಬಕವು ತಮ್ಮ ಪ್ರಾಣಗಳನ್ನು ರಕ್ಷಿಸುವುದೆಂದು ಆ ಬಕನ ಮಾತಿನಲ್ಲಿ ವಿಶ್ವಾಸವಿಟ್ಟು ನಮ್ಮನ್ನು ಸ್ಪಳಾಂತರದಲ್ಲಿ ಬಿಡು ಎಂದು ತಮ್ಮ ಸಮ್ಮತಿಯನ್ನು ಸೂಚಿಸಿ ದುವು. ಆ ಬಕವು ಒಂದೊಂದು ವೂನನ್ನು ಎತ್ತಿಕೊಂಡು ಬೇರೆ ಕಡೆಯಲ್ಲಿ ಹೋಗಿ ತಿಂದು ಬರುತ್ತಿತ್ತು. ಅದೇ ಸರೋವರದಲ್ಲಿ ಒಂದು ದೊಡ್ಡ ಏಡಿ ಇತ್ತು. ಅದು ನನ್ನನ್ನೂ ಕರೆದುಕೊಂಡು ಹೋಗು ಎಂದು ಬಕನನ್ನು ಪ್ರಾರ್ಥಿ ಸಿತು. ಬಕಪಕ್ಸಿ ಏಡಿಯನ್ನೂ ಎತ್ತಿಕೊಂಡು ತಾನು ಮೂನುಗಳನ್ನು ತಿನ್ನು ತ್ತಿದ್ದ ಸ್ಥಳಕ್ಕೆ ಹೋಯಿತು. ಎಡಿ ಅಲ್ಲಿ ಮೊನುಗಳ ಎಲುವಿನ ರಾಶಿಯನ್ನು ನೋಡಿ ಈ ಬಕಪಕ್ಸಿ ಮೊನುಗಳನ್ನೆಲ್ಲಾ ಮೋಸದಿಂದ ತಿಂದಿದೆ, ನನ್ನನ್ನು ತಿಂದು ಬಿಡುತ್ತದೆ ಎಂದು ಭಾನಿಸಿ, "ಗೆಳೆಯನೇ! ನೀನು ನನ್ನೊಬ್ಬ ನನ್ನೇ ಇಲ್ಲಿಗೆ ತಂದು ಬಿಣ್ಣೆ, ನನ್ನ ಸಮುದಾಯವೆಲ್ಲ ಆ ಸರೋವರದಲ್ಲಿ ಯೇ ಉಳಿಯಿತು. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗು. ನನ್ನ ಸಮುದಾಯಕ್ಕೆ ತಿಳಿಸಿ ಹೇಳುತ್ತೇನೆ. ಆ ಎಲ್ಲ ಏಡಿಗಳನ್ನು ಇಲ್ಲಿಗೆ ಕರೆದು ಕೊಂಡು ಬಂದರೆ ನಿನಗೆ ಬಹಳ ಪುಣ್ಯಬರುತ್ತದೆ.'' ಎಂದು ಪ್ರಾರ್ಥಿಸಿತು. ಈ ಮಾತುಗಳನ್ನು ಕೇಳಿ ಬಕಪಕ್ಸಿ "ಬಹಳ ಏಡಿಗಳನ್ನು ತಿಂದು ತೃಪ್ತಿ ಯಾಗುತ್ತೇನೆ' ಎಂದು ಆಶೆ ಪಟ್ಟು ಏಡಿಯನ್ನು ತಿರುಗಿ ಹೆಗಲ ಮೇಲೆ ಏರಿಸಿಕೊಂಡು ಹೊರಟಿತು. ಅಷ್ಟರಲ್ಲಿ ನಿಡಿ ಬಕನ ಕೊರಳನ್ನು ಭೇದಿಸಿ ಅದರ ಪ್ರಾಣವನ್ನು ಹೀರಿತು, ಕೇಳಿದೆಯಾ ಏಡಿ ಮಾಡಿದ ಉಪಾಯವನ್ನು. ನಾವೂ ಈಗ ಒಂದು ಉಪಾಯವನ್ನು ಆಲೋಚಿಸಬೇಕು. ಎಲೆ ಕಾಗೆಯೇ, ನೀನು ಎಲ್ಲಿಂದಾ ದರೂ ಒಂದು ಸುವರ್ಣಮಾಲೆಯನ್ನು ದೊರಕಿಸಿ ಸರ್ಪದ ಹುತ್ತಿನಲ್ಲಿರಿಸು. ಆ ಮಾಲೆಯನ್ನು ತೆಗೆದುಕೊಳ್ಳುವುದಕ್ಕಾಗಿ ಜನರು ಆ ಸರ್ಪದ ಹುತ್ತಿನ ಬಳಿಗೆ ಬಂದು ಸರ್ಪವನ್ನು ಕೊಂದು ಕಂಠಮಾಲೆಯನ್ನು ತೆಗೆದುಕೊಳ್ಳುತ್ತಾರೆ'' ಎಂದು ಹೇಳಿತು. ಈ ಮಾತನ್ನು ಕೇಳಿ ಕಾಗೆಗೆ ಬಹಳ ಸಂತೋಷವಾಯಿತು. ಅದು ಕಂಠಮಾಲೆಗಾಗಿ ವನವನ ಅಲೆಯುತ್ತಿರುವಾಗ ಒಂದು ವನದೊಳಗೆ ಒಬ್ಬ ರಾಜಪುತ್ರನು ಬೇಟಿಯಾಡಿ, ಬಳಲಿ, ಅಲ್ಲಿನ ಸರೋವರದ ದಂಡೆಯ ಮೇಲೆ, ವಸ್ತ್ರಾಭರಣಗಳನ್ನು ತೆಗೆದಿಟ್ಟು, ಸರೋವರದಲ್ಲಿ ಜಲಕ್ರೀಡೆಯಾಡುತ್ತಿದ್ದನು, ಈ ಸಮಯವನ್ನು ಸಾಧಿಸಿ ಕಾಗೆ ವೇಗದಿಂದ ಕೆಳಕ್ಕೆ ಎರಗಿ,ರಾಜಪುತ್ರನ ಕಂಠಮಾಲೆಯನ್ನು ಕಚ್ಚಿಕೊಂಡು ಮೇಲಕ್ಕೆ ಹಾರಿತು.ಅಷ್ಟರಲ್ಲಿ ರಾಜಪುತ್ರನ ಪರಿವಾರದವರು ಆ ಕಾಗೆಗೆ ಕಲ್ಲನ್ನು ಎಸೆದು ಅದನ್ನು ಹಿಂಬಾಲಿಸಿಕೊಂಡು ಹೋದರು. ಆ ಕಾಗೆ ಒಂದು ವೃಕ್ಷದಿಂದ ಮತ್ತೊಂದು ವೃಕ್ಷಕ್ಕೆ ಹಾರುತ್ತ ರಾಜಭಟರು ಕಾಣುವಂತೆ ಕಂಠಮಾಲೆಯನ್ನು ಒಯ್ದು ಆ ಸರ್ಪದ ಹುತ್ತಿನಲ್ಲಿ ಎಸೆದು ಹಾರಿಹೋಯಿತು. ರಾಜಭಟರು ಶೀಘ್ರದಿಂದ ಆ ಹುತ್ತಿನ್ನ ಬಳಿಗೆ ಬಂದು ಹಾರೆ, ಗುದ್ದಲಿ, ಸಲಿಕೆಗಳಿಂದ ಅಗೆಯಲಾರಂಭಿಸಿದರು. ಸರ್ಪವು ಒಳಗಿನಿಂದ ಭುಸ್ಸೆಂದು ಹೆಡೆಯನ್ನೆ ತ್ತಿಕೊಂಡು ಮೇಲಕ್ಕೆ ಬಂದಿತು. ಕೂಡಲೆ ರಾಜಭಟರು ಅದನ್ನು ಕೊಂದು ಕಂಠಮಾಲೆಯನ್ನು ತೆಗೆದುಕೊಂಡು ಹೋದರು. ಅಮೇಲೆ ಕಾಗೆ ತನ್ನ ಶತ್ರುವಾದ ಸರ್ಪದ ಮರಣದಿಂದ ಸಂತೋಷಸಿ, ಸುಖದಿಂದ ಇದ್ದಿತು. ಆದಕಾರಣ ಇಂಥ ಉಪಾಯಾಂತರದಿಂದ ಸಂಜೀವಕನನ್ನು ಕೊಲ್ಲಬೇಕೆಂದು ಕರಟಕ ಹೇಳಿತು.
ಅದಕ್ಕೆ ದಮನಕ ನರಿ ಹೀಗೆಂದಿತು:- ಯಾವನು ಬುದ್ದಿಯುಳ್ಳವನೋ ಅವನೇ ಮಹಾಸತ್ವವುಳ್ಳವನು, ಸತ್ತವಿದ್ದರೂ, ಬುದ್ದಿಯಿಲ್ಲದಿದ್ದರೆ ಅಸತ್ತನು. ಹೇಗೆಂದರೆ :-

ಮದೋತ್ಕಟವೆಂಬ ಒಂದು ವನದಲ್ಲಿ ಪುಂಡರೀಕವೆಂಬ ಒಂದು ಸಿಂಹವು ತನ್ನ ಭುಜಬಲ ಪರಾಕ್ರಮದಿಂದ ನಾನಾಮೃಗತತಿಯನ್ನು ಕೊಂದು ಭೀತಿಪಡಿಸಿ, ಆ ವನಕ್ಕೇ ದೊಡ್ಡಮುತ್ತಿಗೆಯನ್ನು ಹಾಕಿಕೊಂಡಿದ್ದಿತು, ಒಂದು ಮೊಲವು ಬಹಳ ವ್ಯಾಕುಲಗೊಂಡು ಈ ಸಿಂಹದ ಬಾಧೆಯಿಂದ ಮೃಗಗಳೆಲ್ಲ ಉಳಿಯಲರಿಯವು ಎಂದು ದುಃಖಿಸಿ, ಇದಕ್ಕೆ ತಕ್ಕ ಉಪಾಯವನ್ನು ಕಾಣಬೇಕೆಂದು ತನ್ನಲ್ಲಿ ಆಲೋಚಿಸಿ. ಆ ವನದ ಮೃಗಗಳನ್ನೆಲ್ಲ ಕೂಡಿಕೊಂಡು ಸಿಂಹದ ಹತ್ತಿರ ಬಂದು "ಎಲೇ ಮೃಗೇಂದ್ರನೇ,ನೀನು ಹೀಗೆ ಮೃಗಗಳನ್ನು ಭಕ್ಷಿಸುತ್ತ ಹೋದರೆ, ಸಕಲ ಮೃಗಗಳ ವಂಶವುಕ್ಷಯಹೊಂದುವುದು. ನಾವು ನಿನಗೆ ಒಂದೊಂದು ಮೃಗವನ್ನು ನಿತ್ಯವೂಪಾಳಿಯ ಪ್ರಕಾರ ಕೊಡುತ್ತ ಹೋಗುತ್ತೇವೆ. ಅದನ್ನು ಭಕ್ಷಿಸಿ, ನೀನು ಸ್ವಸ್ಥ ವಾಗಿರಬೇಕು." ಎಂದು ಪ್ರಾರ್ಥಿಸಿತು. ಆ ಮೊಲದ ಮಾತನ್ನು ಕೇಳಿ ಸಿಂಹವು ಈ ಏರ್ಪಾಡಿಗೆ ಒಡಂಬಟ್ಟಿತು. ಆ ಮೇಲೆ ಪ್ರತಿನಿತ್ಯವೂ ಈ ಮೃಗಗಳು ಕಳಿಸಿದ ಒಂದೊಂದು ಮೃಗವನ್ನು ಸಿಂಹವು ಆಹಾರವಾಗಿ ತೆಗೆದುಕೊಳ್ಳುತ್ತಿತ್ತು. ಒಂದು ದಿವಸ ಮೊಲದ ಪಾಳಿ ಬಂದಿತು. ಈಗ ಮೊಲಕ್ಕೆ ದೊಡ್ಡ ಆಲೋಚನೆಯುಂಟಾಯಿತು. ಇನ್ನುಮೇಲೆ ಬದುಕುವ ಉಪಾಯವನ್ನು ನೆನೆಯಬೇಕು. ಬುದ್ದಿ ವಂತರಿಗೆ ಯಾವುದೂ ಅಸಾಧ್ಯವಲ್ಲ; ಈ ಸಿಂಹವನ್ನು ಕೊಲ್ಲುವುದೇ ನಿಶ್ಚಯ ಎಂದು ನಿರ್ಧಾರ ಮಾಡಿಕೊಂಡು, ಸಿಂಹದ ಆಹಾರ ಸಮಯವನ್ನು ತಪ್ಪಿಸಿ ಮೆಲ್ಲಮೆಲ್ಲನೆ ಅದರ ಬಳಿಗೆ ಹೋಯಿತು. ಮೊಲವು ಮೆಲ್ಲಮೆಲ್ಲನೆ ಬರುತ್ತಿರುವುದನ್ನು ಸಿಂಹವು ಕಂಡು, ಕ್ರೋಧಾವಿಷ್ಟವಾಗಿ "ಎಲೇ, ನೀನು ಬರುವುದಕ್ಕೆ ಏಕೆ ತಡವಾಯಿತು? " ಎನ್ನಲು, ಮೊಲವು "ಇದರಲ್ಲಿ ನನ್ನ ತಪ್ಪು ಸ್ವಲ್ಪವೂ ಇಲ್ಲ. ನಾನು ದಾರಿ ಹಿಡಿದು ಬರುತ್ತಿದ್ದೆ. ಆಗ ಮತ್ತೊಂದು ಸಿಂಹವು ನನ್ನನ್ನು ಭಕ್ಷಿಸುವ ನಿಮಿತ್ತ ಬಂಧಿಸಿತು. ಆದರೆ ನಾನು ತಿರುಗಿ ಬರುತ್ತೇನೆಂದು ಪ್ರಮಾಣ ಮಾಡಿ ತಮ್ಮ ಸನ್ನಿಧಿಗೆ ಬಂದೆನು." ಎಂದು ಭಯದಿಂದ ಬಿನ್ನ ವಿಸಿಕೊಂಡಿತು. ಇದನ್ನು ಕೇಳಿ ಸಿಂಹವು. "ಆ ಎರಡನೆಯ ಸಿಂಹವು ಎಲ್ಲಿದೆ?” ಎಂದು ಗರ್ಜಿಸಿತು, ಮೊಲವು ''ಆ ಸಿಂಹವು ಸಮೀಪದಲ್ಲಿಯೇ ಇದೆ. ತಾವು ತೀವ್ರವಾಗಿ ದಯಮಾಡಿಸಿದರೆ, ನಾನು ತೋರಿಸುವೆನು.” ಎಂದಿತು. ಇದನ್ನು ಕೇಳಿ ಸಿಂಹವು ಕಣ್ಣುಗಳನ್ನು ಕೆಂಪುಮಾಡಿಕೊಂಡು ಮೊಲದ ಬೆನ್ನು ಹಿಂದೆ ಹೋಯಿತು. ಆ ಸಮಯದಲ್ಲಿ ಮೊಲವು ಯಾವುದೋ ಒಂದು ಬಾವಿಯ ಹತ್ತಿರ ಸಿಂಹವನ್ನು ಕರೆದೊಯ್ದು, “ಆ ಎರಡನೆಯ ಸಿಂಹವು ಇದರಲ್ಲಿಯೇ ಇದೆ; ಅವಲೋಕಿಸಬೇಕು.'' ಎಂದು ತೋರಿಸಿತು. ಸಿಂಹವು ಬಗ್ಗಿ ಬಾವಿಯಲ್ಲಿ ನೋಡಿತು. ಅದರಲ್ಲಿ ತನ್ನ ಛಾಯೆಯನ್ನು ಕಂಡು, ಇದೇ ಆ ಎರಡನೆಯ ಸಿಂಹೆನೆಂದು ಫಿಶ್ಚಯಿಸಿಕೊಂಡ್ಕು, ಮೊಲದ ಮಾತನ್ನು ನಂಬಿ ಆ ಎರಡನೆಯ ಸಿಂಹವು ತನ್ನ ಪ್ರಕಿಬಿಂಬವೆಂಬು ದನ್ನು ಅರಿಯದೆ ಅದನ್ನು ಕೊಂದುಬಿಡುತ್ತೇನೆಂದು ಕೋಪೋದ್ರೇಕದಿಂದ ಬಾವಿಯೊಳಕ್ಕೆ ದುಮ್ಮಿಕ್ಕಿ ಸತ್ತುಹೋಯಿತು, ಆದ್ದರಿಂದ ಯಾವನಿಗೆ ಬುದ್ಧಿಯುಂಟೋ, ಅವನಿಗೆ ಶಕ್ತಿಯೂ ಉಂಟು; ಅಲ್ಲವೇ! ಹೀಗೆಂದು ಕರಟಿಕ ದಮನಕಗಳು ತಮ್ಮೊಳಗೆ ಮಾತಾಡಿಕೊಂಡು ಪಿಂಗಳಕವೆಂಬ ಸಿಂಹರಾಜನ ಬಳಿಗೆ ಹೋಗಿ ನಮಸ್ಕಾರ ಮಾಡಿ, ಚಿಂತಾ ತುರರಾದವರಂತೆ ನಟಿಸುತ್ತ, ಮೆಲ್ಲಗೆ ಮಾತಾಡುತ್ತ, ..ಎಲ್ಫೈ, ಸ್ವಾಮೀ, ಇನೊತ್ತು ತಮಗೆ ದೊಪ್ಪ ಅನರ್ಥ ವೊದಗುವ ಪ್ರಸಂಗ ಬರುವುದರಿಂದ ನಮಗೆ ಬಹಳ ವ್ಯಸನವಾಗಿದೆ, ಇದನ್ನು ತಮಗೆ ಅರಿಕೆ ಮಾಡಿಕೊಳ್ಳ ಬೇ ಕೆಂದು ಬಂದಿದ್ದೇವೆ,” ಎಂದು ದೈನ್ಯದಿಂದ ಹೇಳಿದುವು. ಈ ಮಾತನ್ನು ಕೇಳಿ ಸಿಂಹವು ಗಾಬರಿಯಾಗಿ “ಅದೇನು ಪ್ರಮೇಯ; ಬೇಗ ಹೇಳಿ.'' ಎಂದು ನಿಹ್ವಲದಿಂದ ಕೇಳಿತು. ಕರಟಿಕ ದಮನಕಗಳು «ತಮ್ಮ ಸ್ರೀತ್ಯಾಸ್ಪದವಾದ ಆ ಸಂಜೀವಕವು ತಮ್ಮಲ್ಲಿ ವಿಶ್ವಾಸ ತೋರಿಸ್ಕಿ ತಮ್ಮ ರಾಜ್ಯವನ್ನೇ ಅಪ ಹರಿಸಿಕೊಳ್ಳ ಬೇಕೆಂಬ ಆಲೋಚನೆ ನಡೆಸಿರುತ್ತದೆ.'' ಎಂದು ಹೇಳಲು ಈ ಮಾತು ಕೇಳಿ, ಸಿಂಹವು ಆಶ್ಚರ್ಯಚಕಿತವಾಗಿ ಏನು ಮಾಡಬೇಕೆಂದು ತಿಳಿಯದೆ, ಸುಮ್ಮನೆ ಇದ್ದಿತು. ಇದನ್ನು ನೋಡಿ,
ಕರಟಿಕ:- ತಾವು ಎತ್ತಿಗೆ ಮುಖ್ಯ ಪ್ರಧಾನತ್ವವನ್ನು ಕೊಟ್ಟರುತ್ತೀರಿ, ಆದರ ಗೊಡವೆ ನಮಗೇಕೆ? ಅರಸು ಪ್ರಧಾನರು 'ಸಮಾನಸ್ಯಂಧರಾ ದರೈ ಲಕ್ಷ್ಮಿ ಇಬ್ಬರಲ್ಲಿ ಒಬ್ಬರನ್ನು ತ್ಯಜಿಸುತ್ತಾಳೆ. ಅಲ್ಲದೆ ಅರಸರು ಒಬ್ಬ ಪ್ರಧಾನಿಯನ್ನೇ ನಿಯಮಿಸಿಕೊಳ್ಳು ವುದರಿಂದ, ಅಹಂಕಾರ ಉತ್ಪನ್ನವಾಗಿ ಆ ಪ್ರಧಾನಿ ಸ್ವತಂತ್ರನಾಗುತ್ತಾನೆ. ಇದರಿಂದ ಅವನಲ್ಲಿ ಲೋಭವುಂಟಾಗಿ, ಅರಸನ ಪ್ರಾಣವನ್ನೇ ತೆಗೆದುಕೊಳ್ಳ ಬೇಕೆಂದು ಅಸೇಕ್ಷಿಸುತ್ತಾನೆ. ಈ ಕಾರಣದಿಂದ ಅರಸರಾದವರು ಮಂತ್ರಿಗಳಿಗೆ ಸ್ವಾತಂತ್ರ್ಯ ಕೊಡದೆ ಅವರನ್ನು ಖಂಡಿಸಬೇಕು. ಇಲ್ಲದೆ ಹೋದರೆ, ಆ ಮಂತ್ರಿ ಅಹಿತಮಾಡು ವನು. ಈ ಮಾತನ್ನು ನಾನು ತಮಗೆ ಹೇಳಬೇಕಾದ ಅಗತ್ಯ ವಿಲ್ಲ. ಏಕೆಂದರೆ, ತಾವು ಸರ್ವವನ್ನು ಬಲ್ಲಂಥ ಪ್ರಾಜ್ಞರು. ಮುಖ್ಯವಾಗಿ ನಾನು ಹೇಳಬೇಕಾದುದು ಒಂದು, ಅರಸರಾದ ತಾವೇ ಲಕ್ಷ್ಮಿಯನ್ನು ಅಪೇಕ್ಷಿಸದೆ ಇದ್ದೀರಿ. ಇದು ಅಕಲ್ಪಿತವಷ್ಟೆ! ಸಿಂಹೆ:- ಎಲ್ಲೇ ನರಿಗಳಿರಾ! ನೀವು ಏನು ಹೇಳಿದರೂ ಸಂಜೀವಕ ನಲ್ಲಿರುವ ನನ್ನ ಸ್ನೇಹವು ಎಂದಿಗೂ ತಪ್ಪಲಾರದು. ಏಕೆಂದರೆ, ಮಿತ್ರನು ಒಂದು ಪಕ್ಷ ಅನೇಕ ಅನ್ಯಾಯಗಳನ್ನು ಮಾಡಿದರೂ ಲಕ್ಷ್ಯಕ್ಕೆ ತಾರದೆ, ಅವನು ಪ್ರೀತಿಯುಳ್ಳ ವನೆಂದು ತಿಳಿಯಬೇಕು.
ದಮನಕ;- ಇಲ್ಲಿ ಬುದ್ಧಿ ದೋಷವಿದೆ, ಇವನೇ ತಮಗೆ ಮೃತ್ಯುವಾಗುವನು, ಏಕೆಂದರೆ ಯಾವನು ಸಾಧುಜನರ ಬುದ್ಧಿಯನ್ನು ಕೇಳದೆ ದುಷ್ಟಪ್ರಾಣಿಯ ಬುದ್ಧಿ ಕೇಳುವನೋ, ಅವನು ಔಷಧ ತೆಗೆದು ಕೊಳ್ಳದ ರೋಗಿಷ್ಕನಂತೆ ಕಷ್ಟ ಪಡುತ್ತಾನೆ. ಕಿವಿಗಳಿಗೆ ಸುಖ ಕೊಡುವ, ಮನಸ್ಸಿಗೆ ಹಿತವಾಗುವಂಥ ಮಾತು ಶ್ರವಣ ದುರ್ಲಭ. ಅಲ್ಲದೆ ಹಿಂಸಕನ ವಾಕ್ಯವು ರುಚಿಕೊಡುತ್ತದೆ. ಆದರೂ ಆ ಮಾತನ್ನು ಆಲಿಸಬಾರದು.
ಸಿಂಹೆ;- ನಾನು ಯಾರಿಗೆ ಭರವಸೆ ಕೊಟ್ಟಿರುವೆನೋ, ಅವನು ನನ್ನನ್ನು ಹೇಗೆ ಫಾತಿಸಬಹುದು?
ದಮನಕ:- ನಾಯಿಬಾಲದ ಹಾಗೆ ದುಷ್ಟರ ಸ್ವಭಾವ, ಒಂದು ವೇಳೆ, ವಿಷದ ಬಳ್ಳಿಗೆ ಅಮ್ಲತವನ್ನು ಎರೆದರೂ ಅದು ಸವಿಯಾಗ ಬಹುದು, ಈ ವೃತ್ತಾಂತವೆಲ್ಲವನ್ನೂ ತಾವು ಕೇಳದೆ ಇದ್ದರೂ, ನಾವೇ ತಮ್ಮಲ್ಲಿ ಅರಿಕೆ ಮಾಡಿಕೊಂಡಿದ್ದೇವೆ. ಎರಡನೆಯವರ ಹಿತ ಚಿಂತಿಸುವುದು ಸಾಧುಜನರ ಮುಖ್ಯ ಧರ್ಮ, ಇನ್ನುಮೇಲೆ ನಮ್ಮ ಕಡೆ ದೋಷವಿಲ್ಲ. ಅರಸರು ನೀಚರ ಬುದ್ಧಿಯಿಂದ ಸಂಕಟದಲ್ಲಿ ಬಿದ್ದಾಗ ಸೇವಕರ ಮೇಲೆ ದೋಷವನ್ನು ಆರೋಪಿಸುತ್ತಾರೆ. ಹೀಗೆ ಕರಟಕ ದಮನಕಗಳು ಸಿಂಹಕ್ಕೆ ತಾವು ಮಾಡಿದ ಉಪಾಯವನ್ನು ತಿಳಿಸಿ, ಸುಮ್ಮನೆ ನಿಂತುಕೊಂಡುವು. ಸ್ವಲ್ಪಹೊತ್ತಿನ ಮೇಲೆ, ಸಿಂಹವು “ಎಲೇ! ಮಿತ್ರರೇ! ಸಂಜೀವಕವು ನನಗೆ ವಿಪರೀತವಾಗಿ ಮಾತಾಡಿದುದಾದರೂ ಏನು? ಅದರ ಸಾಮರ್ಥ್ಯವಾದರೂ ಎಷ್ಟು?” ಎಂದು ಕೇಳಿತು, ಅದಕ್ಕೆ ದಮನಕವು “ ಇದು ಮೊದಲಿಂದ ನಮಗೆ ತಿಳಿಯದ ಪ್ರಾಣಿ. ಇದರ ಪರಾಕ್ರಮವಾಗಲಿ, ಸ್ವಭಾವವಾಗಲಿ, ನಮಗೆ ತಿಳಿಯದು. ಯಾವುದರ ಸ್ವಭಾವ ತಮಗೆ ಗೊತ್ತಿರುವುದಿಲ್ಲವೋ, ಅದನ್ನು ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಲಾಗದು. ಒಂದು ವೇಳೆ ಇಟ್ಟುಕೊಂಡರೆ, ಡಿಂಡಿಭವೆಂಬ ತಗಣೆಯ ಸಂಗದಿಂದ ಮಂದವಿಸರ್ಪಿಣಿಯೆಂಬ ಕೂರೆ ನಾಶಹೊಂದಿದಂತಾಗುವುದು? ಎಂದು ಹೇಳಿತು.
ಅದಕ್ಕೆ ಸಿಂಹವು “ ಅದು ಹೇಗೆ?” ಎಂದು ಕೇಳಲು, ದಮನಕ ಕರಟಕಗಳು ಹೇಳುತ್ತವೆ:

ಕಥೆ:- ಕಾಂಚನಾವತಿಯೆಂಬ ಪಟ್ಟಣದಲ್ಲಿ ಕನಕವರ್ಮನೆಂಬ ರಾಯನು ನಿರ್ಮಲಧರ್ಮದಿಂದ ರಾಜ್ಯವನ್ನಾಳುತ್ತಿದ್ದನು. ಒಂದು ದಿವಸ ರಾಯನು ಮಲಗುವ ಸುಪ್ಪತ್ತಿಗೆಯ ಹಾಸಿಗೆಯಲ್ಲಿ ಒಂದು ಮಂದ ವಿಸರ್ಪಿಣಿಯೆಂಬ ಕೂರೆ ಸೇರಿಕೊಂಡಿತು. ಒಮ್ಮೆ ಒಂದು ತಗಣೆ ತನ್ನ ಕುಟುಂಬದವರಿಂದ ತಪ್ಪಿಸಿಕೊಂಡು ಬಂದು ಈ ಕೂರೆಯನ್ನು ನೋಡಿ, “ ಇವೊತ್ತಿನ ರಾತ್ರಿ ನಿನ್ನ ಬಳಿಯಲ್ಲಿಯೇ ಉಳಿದುಕೊಂಡು ನಾಳೆ ಹೊರಟುಹೋಗುತ್ತೇನೆ. ದಯಮಾಡಿ ನನಗೆ ಆಶ್ರಯವನ್ನು ಕೊಡುವೆಯಾ?” ಎಂದು ಅಂಗಲಾಚಿ ಬೇಡಿಕೊಂಡಿತು. ಈ ಮಾತನ್ನು ಕೇಳಿ ಕೂರೆ, “ ನೀನು ಮಹಾದುರ್ಜನನು. ಆದುದರಿಂದ ಅರಸನ ಹಾಸಿಗೆಯಲ್ಲಿರಲು ಯೋಗ್ಯನಲ್ಲ. ಇಲ್ಲಿಂದ ಹೊರಟುಹೋಗು” ಎಂದಿತು. ಆ ತಗಣೆ ಅದಕ್ಕೆ ಬಹಳ ವಿನಯದಿಂದ ನಮಸ್ಕಾರ ಮಾಡಿ, ಪರಿ ಪರಿಯಿಂದ ಪ್ರಾರ್ಥಿಸಿಕೊಳ್ಳಲು ಆ ಕೂರೆ, “ಒಂದು ಕಟ್ಟಳೆಯ ಮೇಲೆ ನೀನು ಇಲ್ಲಿ ಇರಲು ಅವಕಾಶ ಕೊಡುತ್ತೇನೆ. ಅರಸು ಮಲಗಿದಾಗ ಮಾತ್ರ ಸ್ವಲ್ಪಸ್ವಲ್ಪ ರಕ್ತಪ್ರಾಶನ ಮಾಡಿಕೊಂಡಿರು” ಎಂದು ತಗಣೆಗೆ ಆಶ್ರಯಕೊಟ್ಟಿತು. ಆಗ ತಗಣೆ ಅರಸನ ಹಾಸಿಗೆಯಲ್ಲಿಯೇ ಅಡಗಿಕೊಂಡಿದ್ದು ಅರಸನಿಗೆ ಎಚ್ಚರವಿರುವ ಕಾಲದಲ್ಲಿಯೇ ಅವನನ್ನು ಪೀಡಿಸಿತು. ಆಗ ದೀವಿಗೆಯ ಬೆಳಕಿನಲ್ಲಿ ಹಾಸಿಗೆಯನ್ನು ಬಿಚ್ಚಿ ನೋಡಲು ಕಚ್ಚಿದ ತಗಣಿ ವೇಗವಾಗಿ ತಪ್ಪಿಸಿಕೊಂಡು ಹೋಯಿತು. ಆದರೆ ಮಂದಗತಿಯುಳ್ಳ ಕೂರೆ ಸಿಕ್ಕಿತು. ಆ ಕ್ಷಣದಲ್ಲಿ ಅದನ್ನು ಒರೆದುಬಿಟ್ಟರು.
ಹೀಗೆ ಕರಟಿಕ ದಮನಕಗಳು ಹೇಳಿದ ಈ ಕಥೆಯನ್ನು ಕೇಳಿ ಸಿಂಹವು ಆ ನರಿಗಳನ್ನು “ಸಂಜೀವಕನ ದುಷ್ಟ ಮನವನ್ನು ಹೇಗೆ ತಿಳಿದುಕೊಳ್ಳಬೇಕು” ಎಂದು ವಿಚಾರಿಸಿತು. ಆಗ ದಮನಕನು “ಸಂಜೀವಕನು ತನ್ನ ಕೋಡುಗಳನ್ನು ನೆಲಕ್ಕೆ ಬಗ್ಗಿಸಿಕೊಂಡು ನಿಮ್ಮ ಮೈ ಮೇಲೆ ಬರುವುದನ್ನು ನೋಡಿ, ಅದನ್ನು ತಾವು ಅರಿತುಕೊಳ್ಳಬೇಕು”. ಎಂದು ಹೇಳಿ ಅಲ್ಲಿಂದ ಈ ನರಿಗಳೆರಡೂ ಸಂಜೀನಕನಲ್ಲಿಗೆ ಹೊರಟು ಹೋದುವು. ಹೋಗಿ, ಸಂಜೀವಕನಿಗೆ ನಮಸ್ಕಾರ ಮಾಡಿದುವು. ಆಗ ಸಂಜೀವಕವು “ ಮಿತ್ರರೇ, ಕ್ಷೇಮವಷ್ಟೆ!” ಎಂದು ಆ ನರಿಗಳ ಯೋಗ ಕ್ಷೇಮವನ್ನು ಎಂದಿನಂತೆ ವಿಚಾರಿಸಿತು. ಅದಕ್ಕೆ ದಮನಕವು “ಸೇವಕರಾದವರಿಗೆ ಕ್ಷೇಮವುಂಟೇ! ಅರಸನಿಗೆ ಪ್ರೀತಿಯುಳ್ಳವರಾರು ! ಭಿಕ್ಷುಕರಿಗೆ ಸನ್ಮಾನವಿರುವುದೇ! ಇದಕ್ಕಾಗಿ, ಕಾಲವೇನು? ತನ್ನ ಮಿತ್ರರಾರು? ತನ್ನ ಸಾಮರ್ಥ್ಯವೆಸ್ಟು? ಎಂಬೀ ವಿಷಯಗಳಲ್ಲಿ ಯಾವಾಗಲೂ ಸರಿಯಾದ ತಿಳಿವಳಿಕೆ ಇರಬೇಕು.” ಎಂದು ಹೇಳಿತು, ದಮನಕನ ಈ ವಾಕ್ಯ ವನ್ನು ಕೇಳಿ ಸಂಜೀವಕವು ಅದೇನೆಂದು ವಿಚಾರಿಸಿತು. ದಮನಕವು "" ರಾಜಾಸ್ಲಾನದ ಮಾತು ಯಾರಿಗೂ ಹೇಳಬಾರದೆಂಬ ನೀತಿಯುಂಟು, ಆದರೆ, ಸಿಂಹೆರಾಜನಿಗೂ ನಿಮಗೂ ಸ್ನೇಹವು ನಮ್ಮಿಂದಲೇ ಸಂಘಟ ಸಿರುವ ಪ್ರಯುಕ್ತ, ನೀವು ಸಿಂಹೆರಾಜನಲ್ಲಿ ನಿಶ್ವಾಸವನ್ನಿಟ್ಟದ್ದೀರಿ. ಆದ್ದ ರಿಂದ ನಾವು ಎಲ್ಲ ವೃತ್ತಾಂತವನ್ನು ನಿಮಗೆ ಹೇಳುತ್ತೇವೆ. ಈಗ ಈ ಸಿಂಹೆರಾಜನು ನಿಮ್ಮ ಮೇಲೆ ಕೋಪಿಷ್ಮನಾಗಿದ್ದಾನೆ. ಇದನ್ನು ನಾವು «ಇವೊತ್ತಿನ ದಿವಸ ಸಂಜೀವಕನನ್ನು ಕೊಂದು ನನ್ನ ಆಪ್ತರನ್ನು ತೃಪ್ತಿ ಸಡಿಸುವೆನು' ಎಂದು ಆ ಸಿಂಹರಾಜನು ಹೇಳಿದ ಮಾತಿನಿಂದ ತಿಳಿದುಕೊಂಡೆವು.” ಎಂದು ಹೇಳಿತು. ಈ ಮಾತನ್ನು ಕೇಳಿದ ಕೂಡಲೆ ಸಂಜೀವಕಕ್ಕೆ ಬಹಳ ವ್ಯಾಕುಲವುಂಟಾಯಿತು. ಮುಂದೆ ಏನು ಮಾಡ ಬೇಕೆಂಬುದು ತೋಚದೆ, ಮೌನವಾಗಿದ್ದಿತು. ಆಗ ದಮನಕವು "" ಸಂದ ರ್ಭವು ಸಂಭವಿಸಿದಂತೆ ವರ್ತಿಸಬೇಕು. ಈಗ ಏನು ಮಾಡಲಾದೀತು?” ಎಂದು ಹೇಳಿದುದನ್ನು ಕೇಳಿ, ಸಂಜೀವಕವು * ನೀನು ಹೇಳಿದ ಮಾತು ನಿಶ್ಚಯ. ಏಕೆಂದರೆ, ಸ್ತ್ರೀಯರು ಅಪಾತ್ರರಲ್ಲಿ ಅನುರಕ್ತರಾಗುತ್ತಾರೆ. ಹಾಗೆಯೇ ಅರಸರು ದುಷ್ಟರನ್ನು ಪಾಲಿಸುತ್ತಾರೆ. ದುರ್ಜನರ ಸಂಗಡ ಎಷ್ಟು ಸ್ನೇಹ ಮಾಡಿದರೂ, ಏನೂ ಫಲವಿಲ್ಲ. ಇದು ಕುರುಡರಿಗೆ ದರ್ಪಣವನ್ನು ತೋರಿಸಿದಂತೆ; ಕಿವುಡರಿಗೆ ಮಂತ್ರೋಪದೇಶ ಮಾಡಿದಂತೆ. ದುಷ್ಟ ವೇಷ್ಟಿತರಾಜರು ಸರ್ಪಯುಕ್ತ ಗಂಧದ ಮರದ ಹಾಗೆ; ಮುಳ್ಳು ಗಳಿಂದ ತುಂಬಿದ ಕೇದಗೆಯ ಹಾಗೆ. ಈ ಪ್ರಕಾರವಾಗಿ ನನಗೆ ಅನರ್ಥ ಪ್ರಾಪ್ತವಾಯಿತು. ” ಎಂದು ನಿಟ್ಟುಸಿರುಗರೆಯಿತು, ಸಂಜೀವಕದ ಈ ಅವಸ್ಥೆ ಯನ್ನು ನೋಡಿ, ದಮನಕವು " ಈ ಸಿಂಹೆವು ಆಡುವುದಾದರೋ ಸವಿಮಾತು. ಹೊಟ್ಟಿ ಯೊಳಗೆ ಮಾತ್ರ ಕಪಟ, ಸಮುದ್ರವನ್ನು ದಾಟು ವುದಕ್ಕೆ ಹಡಗುಗಳೂ, ಕತ್ತಲೆಯನ್ನು ಪರಿಹರಿಸುವುದಕ್ಕೆ ದೀಪವೂ, ಆನೆ ಯನ್ನು ಮರ್ದಿಸುವುದಕ್ಕೆ ಅಂಕುಶವೂ ಉಪಾಯಗಳಾಗಿವೆ. ಆದರೆ ದುಷ್ಟರ ಮನಸ್ಸನ್ನು ತಿದ್ದುವುದಕ್ಕೆ ಯಾವ ಉಪಾಯವೂ ಇಲ್ಲ'' ಎಂದು ಹೇಳಿತು. ಆಗ ಸಂಜೀವಕವು "" ನನಗೆ ದೊಡ್ಡಸಂಕಟ ಪ್ರಾಪ್ತವಾಯಿತು. ಇದನ್ನು ನಿನಾರಿಸುವುದಕ್ಕೆ ನನಗೆ ಸಾಮರ್ಥ್ಯ ಸಾಲದು. ಮೃತ್ಯುವಿನ ಬಾಯೊ ಳಗೆ ಬೀಳುವವರನ್ನು ಬದುಕಿಸಿಕೊಳ್ಳುವವರುಂಟೀ? ಈ ದುಷ್ವಪ್ರಾಣಿ ನನ್ನಲ್ಲಿ ಯಾವ ದೋಷವಿರದಿದ್ದರೂ ನನ್ನನ್ನು ನಾಶ ಮಾಡುತ್ತದೆ. ಈಗ ಒಂಟಿಯೆಣಂದನ್ನು ಕಾಗೆ ಹುಲಿ, ನರಿಗಳೆಲ್ಲ ಕೂಡಿ ವಧಿಸಿದಂತೆ ನಾನು ಮಾಡಬೇಕು. ” ಎಂದಿತು. “ಇದು ಹೇಗಾಯಿತು?'' ಎಂದು ದಮನ ಕವು ಕೇಳಲು ಸಂಜೀವಕನು ಹೇಳುತ್ತದೆ.

ಸೈನಿಷಾರಣ್ಯವೆಂಬ ವನದಲ್ಲಿ ಮದೋತೃಟನೆಂಬ ಸಿಂಹ ರಾಜ. ಆತನಿಗೆ ಸುವರ್ಣಕನೆಂಬ ಕಾಗೆ, ಪರೀಕ್ಟಿತನೆಂಬ ಹುಲಿ, ತಂತ್ರ ಯುಕ್ತವೆಂಬ ಜಂಬುಕ- ಈ ಮೂವರು ಪ್ರಧಾನರಾಗಿದ್ದರು. ಇವರಿಂದೊ ಡಗೂಡಿ ಆ ಸಿಂಹರಾಜನು ಸುಖದಿಂದ ರಾಜ್ಯವನ್ನಾಳುತ್ತಿದ್ದನು. ಒಂದು ದಿವಸ್ಕ ಕದನಕವೆಂಬ ಒಂದು ಒಂಟಿ, ತನ್ನ ಸರಿವಾರದಿಂದಗಲ್ಲಿ ಆ ವನ ದೊಳಗೆ ಬಂದು ಮೇಯುತ್ತಿತ್ತು. ಅದನ್ನು ತಂತ್ರಯುಕ್ತನೆಂಬ ಜಂಬು ಕವು ಕಂಡು, «ಓಹೋ! ಇದು ದೊಡ್ಡ ಮೃಗ. ಇದನ್ನು ಉಪಾಯದಿಂದ ಕೊಲ್ಲಿಸಿ ಭಕ್ಷಿಸಬೇಕು.” ಎಂದು ಮನಸ್ಸಿನಲ್ಲಿ ಆಲೋಚಿಸಿ, ಆ ಒಂಟೆಯ ಸಮೀಪಕ್ಕೆ ತೆರಳಿ “ನೀನು ಯಾರು?” ಎಂದು ಕೇಳಿತು. ಅದಕ್ಕೆ ಆ ಒಂಟಿ “ನನ್ನನ್ನು ಏನು ಕೇಳುತ್ತೀಯಯ್ಯಾ ? ಹುಟ್ಟಿದಾರಭ್ಯ ದೊಡ್ಡ ದೊಡ್ಡ ಹೊರೆಯನ್ನು ಹೊತ್ತು ಜೀವಿಸಿದೆನು. ಮನುಷ್ಯರಿಗೆ ಅಲೆಯುತ್ತಿ ರುವುದೇ ಮುಪ್ಪು; ಕುದುರೆಗೆ ನೀಲಿ ಕಟ್ಟದರೆ ಮುಪ್ಪು; ಸತಿಯರಿಗೆ ಪುರುಷ ಸಂಪರ್ಕವಿಲ್ಲದಿರುವುದೇ ಮುಪ್ಪು; ವಸ್ತ್ರಗಳನ್ನು ತೊಳೆದು ಬಿಸಿಲಲ್ಲಿ ಹಾಕಿ ದರೆ ಅವುಗಳಿಗೆ ಮುಪ್ಪು; ಹೀಗೆಯೇ ನಾನು ಹೇರನ್ನು ಹೊತ್ತು ಹೊತ್ತು ಮುಪ್ಪಾದೆನು.'' ಎಂದು ತನ್ನ ವಿದ್ಯಮಾನವನ್ನು ಹೇಳಿಕೊಂಡಿತು. ಅದನ್ನು ಕೇಳಿ ಜಂಬುಕವು "ಮಾಡಿದರೆ ದೊಡ್ಡವರ ಆಶ್ರಯವನ್ನೇ ಮಾಡ ಬೇಕು. ಅಲ್ಬರನ್ನಾಶ್ರಯಿಸಬಾರದು. ಮಹಾಶೇಷನು ' ಮಹಾದೇವನ ಅಂಜಿಕೊಂಡು ಹೋಯಿತು. ಆದಕಾರಣ ನೀನು ದೊಡ್ಡವರ ಆಶ್ರಯದಲ್ಲಿರಬೇಕು.” ಎಂದು ಹೇಳಿ ಜಂಬುಕವು ಆ ಒಂಟೆಯನ್ನು ಸಿಂಹರಾಜನ ಬಳಿಗೆ ಕರೆದುಕೊಂಡು ಹೋಗಿ, ಪರಿಚಯ ಮಾಡಿಸಿಕೊಟ್ಟಿತು. ಸಿಂಹವು ಅದರ ಉನ್ನತಾಕಾರವನ್ನು ನೋಡಿ, ಅದಕ್ಕೆ ಪ್ರಧಾನಿಯ ಕೆಲಸವನ್ನು ಕೊಟ್ಟು, ಅದನ್ನು ತನ್ನ ಹತ್ತಿರದಲ್ಲಿಯೇ ಇಟ್ಟುಕೊಂಡಿತು. ಹೀಗೆ ಕೆಲವು ದಿವಸಗಳು ಕಳೆದ ಮೇಲೆ, ಸಿಂಹದ ಮೈಯಲ್ಲಿ ಸ್ವಸ್ಥವಿಲ್ಲದಂತಾಯಿತು. ಅದಕ್ಕೆ ತಿನ್ನುವುದಕ್ಕೆ ಆಹಾರವನ್ನು ದೊರಕಿಸುವ ಸಾಮರ್ಥ್ಯವೂ ಇಲ್ಲದಂತಾಯಿತು. ಆಗ, ಸಿಂಹವು ಆ ಮೂವರು ಪೂರ್ವ ಪ್ರಧಾನಿಗಳನ್ನು ಕರೆದು, “ಇವೊತ್ತು ನನಗೆ ಆಹಾರ ದೊರಕಿಸುವ ತ್ರಾಣವಿಲ್ಲ. ನೀವು ಹೋಗಿ ಎಲ್ಲಿಂದಾದರೂ ನನಗೆ ಆಹಾರವನ್ನು ತಂದು ಕೊಟ್ಟರೆ, ಅದನ್ನು ನಾನು ತಿನ್ನುತ್ತೇನೆ, ಉಳಿದುದನ್ನು ನೀವು ತಿನ್ನಬಹುದು. ಹೀಗೆ ಮಾಡಿದರೆ ನಮ್ಮನಿಮ್ಮ ಯೋಗಕ್ಷೇಮ ನಡೆದಂತಾಗುತ್ತದೆ.” ಎಂದು ಆಜ್ಞಾಪಿಸಿತು. ಈ ಮಾತಿಗೆ ಒಡಂಬಟ್ಟು, ಸಿಂಹರಾಜನ ಅಪ್ಪಣೆಯ ಪ್ರಕಾರ, ಘೋರಾರಣ್ಯಕ್ಕೆ ಹೋಗಿ ಎಷ್ಟು ಶೋಧಿಸಿದರೂ ಅವುಗಳಿಗೊಂದು ಪ್ರಾಣಿಯೂ ಸಿಕ್ಕದಂತಾಯಿತು. ಆ ಸಮಯದಲ್ಲಿ ಒಂಟೆಯೂ ಅವುಗಳ ಸಂಗಡವಿತ್ತು, ಅದನ್ನು ಸ್ವಲ್ಪ ಅಂತರದಲ್ಲಿ ಬಿಟ್ಟು, ಕಾಗೆ ಉಳಿದ ಆ ಎರಡು ಪ್ರಾಣಿಗಳಿಗೆ “ಇವೊತ್ತು ಈ ಒಂಟೆಯನ್ನು ಕೊಲ್ಲಬೇಕು. ಇದು ನಮಗೆ ಕಂಟಕವಾಗಿದೆ. ಈ ಪ್ರಾಣಿಯಿಂದ ಅದನ್ನು ಭಕ್ಷಿಸುವವರಿಗೆ ಪ್ರಯೋಜನವಲ್ಲದೆ ನಮಗೇನು ಪ್ರಯೋಜನ?” ಎಂದು ಹೇಳಿತು. ಅದನ್ನು ಕೇಳಿ ಆ ಉಭಯ ಪ್ರಾಣಿಗಳು “ನಮ್ಮ ಸ್ವಾಮಿ ಈ ಪ್ರಾಣಿಗೆ ಅಭಯವನ್ನು ಕೊಟ್ಟಿದ್ದಾನೆ. ಇದನ್ನು ಹೇಗೆ ಕೊಲ್ಲಲಾದೀತು ?’’ ಎಂದು ಕೇಳಿದುವು. ಅದಕ್ಕೆ ಕಾಗೆ “ಹೀಗೆ ಮಾಡದಿದ್ದರೆ ನಾವು ಸಿಂಹದ ಕೈಯಲ್ಲಿ ಮರಣ ಹೊಂದುವೆವು. ಏಕೆಂದರೆ ಕ್ಷುಧಾತುರರಾದರೆ ತಾಯಿ ಪುತ್ರರನ್ನು ಕೂಡ ತ್ಯಜಿಸುತ್ತಾಳೆ. ಸರ್ಪವು ತನ್ನ ತತ್ತಿಗಳನ್ನು ತಿನ್ನುತ್ತದೆ. ಅಲ್ಲದೆ, ಹಸಿವೆ ಉಂಟಾದವನನ್ನು ಪೀಡಿಸಿದರೆ, ಅವನು ಯಾವ ಪಾತಕವನ್ನೂ ಮಾಡಲು ಹೇಸುವುದಿಲ್ಲ. ಈಗ ನಾನು ಹೇಳಿದಂತೆ ಮಾಡಬೇಕು.” ಎಂದು ಹೇಳಿ ಆ ಕಾಗೆ ಆ ಉಭಯ ಪ್ರಾಣಿಗಳಿಗೆ ರಹಸ್ಯದಲ್ಲಿ ಆಲೋಚನೆಯನ್ನು ಹೇಳಿ, ಸಿಂಹರಾಜನ ಸಮೀಪಕ್ಕೆ ಎಲ್ಲ ಒಟ್ಟಾಗಿ ಬಂದು, “ಹೇ ಸ್ವಾಮಿ! ಇವೊತ್ತಿನ ದಿವಸ ಆಹಾರವೇನೂ ದೊರೆಯಲಿಲ್ಲ.” ಎಂದು ಬಿನ್ನವಿಸಿದುವು. ಸಿಂಹವು ಮುಂದೇನು ಉಪಾಯ ಮಾಡಬೇಕೆಂದು ಕೇಳಿತು. ಕಾಗೆ “ತಮ್ಮ ಸನ್ನಿಧಾನದಲ್ಲಿ ಆಹಾರವಿದ್ದೂ ತಾವು ಚಿಂತೆಯನ್ನೇಕೆ ಮಾಡಬೇಕು?” ಎಂದು ಕೇಳಿತು. ಅದಕ್ಕೆ ಸಿಂಹವು “ನನ್ನಲ್ಲಿರುವ ಆಹಾರವೇನು?” ಎಂದು ಕೇಳಿತು. ಇದನ್ನು ಕೇಳಿದ ಕೂಡಲೇ ಕಾಗೆ “ತಮ್ಮ ಪ್ರಧಾನಿ ಕೆಲಸ ಮಾಡುವ ಆ ಒಂಟೆಯೇ ಆಹಾರ.” ಎಂದು ಉತ್ತರ ಕೊಟ್ಟಿತು. ಸಿಂಹಕ್ಕೆ ಈ ಮಾತನ್ನು ಕೇಳಿ ಬಹಳ ವ್ಯಥೆಯಾಯಿತು. ಅದು ಕಾಗೆಗೆ “ನಾನು ಆ ಪ್ರಾಣಿಗೆ ಅಭಯವನ್ನು ಕೊಟ್ಟು ನನ್ನ ಹತ್ತಿರ ಇಟ್ಟುಕೊಂಡಿದ್ದೇನೆ, ನೀನು ಇಂಥ ವಿಪರೀತದ ಮಾತನ್ನೇಕೆ ಹೇಳುತ್ತೀಯೇ? ಆಕಳು, ಭೂಮಿ, ಧಾನ್ಯ ಇವುಗಳ ದಾನಕ್ಕಿಂತಲೂ ಅಭಯದಾನ ವಿಶೇಷವೆಂದು ಶಾಸ್ತ್ರಗಳಲ್ಲಿ ಹೇಳಿದೆ, ನೀನು ಅಯುಕ್ತವಾದ ಉಪಾಯವನ್ನು ಸಿರಬಹುದೇ?” ಎಂದು ಕೇಳಿತು. ಇದನ್ನು ಕೇಳಿದ ಕಾಗೆ “ಗ್ರಾಮದ ಸಂರಕ್ಷಣಾರ್ಥವಾಗಿ ಒಂದು ಕುಟುಂಬವನ್ನು ತ್ಯಜಿಸಬೇಕಾಗುತ್ತದೆ. ದೇಶವನ್ನು ನೋಡಬೇಕೆಂಬ ಉದ್ದೇಶವಿದ್ದಲ್ಲಿ ಒಂದು ಊರನ್ನು ಬಿಡಬೇಕಾಗುತ್ತದೆ, ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪೃಥ್ವಿಯಲ್ಲಿನ ಸಕಲವನ್ನೂ ತ್ಯಜಿಸಬೇಕಾಗುತ್ತದೆ. ತಾವು ಒಂಟೆಯನ್ನು ಕೊಲ್ಲದಿದ್ದರೆ ನಾವೆಲ್ಲರೂ ಕೂಡಿ ಕೊಂದು ಬಿಡುತ್ತೇವೆ.” ಎಂದು ನುಡಿಯಿತು. ಈ ಮಾತನ್ನು ಕೇಳಿ ಸಿಂಹವು ಸುಮ್ಮನಾಯಿತು. ಆಮೇಲೆ ಕಾಗೆ ಅಲ್ಲಿಂದ ಹೋಗಿ ಆ ಮೂವರನ್ನು ಕರೆದುಕೊಂಡು ಸಿಂಹದ ಬಳಿಗೆ ಬಂದು “ಮಹಾಸ್ವಾಮೀ, ಇವೊತ್ತು ಆಹಾರವೇನೂ ಸಿಕ್ಕಲಿಲ್ಲ. ತಾವಾದರೋ ಹಸಿದುಕೊಂಡಿರುವಿರಿ. ಆದಕಾರಣ ತಾವು ಮುಂಚೆ ನನ್ನನ್ನು ಭಕ್ಷಿಸಿ ತೃಪ್ತರಾಗಿರಿ.’’ ಎಂದಿತು. ಸಿಂಹವು “ನೀನು ಅಲ್ಪ ಶರೀರಿ. ನಿನ್ನ ನ್ನು ಭಕ್ಷಿಸಿದರೆ ನನಗೆ ತೃಪ್ತಿಯಾಗದು.’’ ಎಂದು ಕಾಗೆಗೆ ಉತ್ತರವನ್ನು ಕೊಡುತ್ತಲೇ, ನರಿ ಮುಂದೆ ಬಂದು “ನನ್ನನ್ನು ಭಕ್ಷಿಸೋಣವಾಗಲಿ. “ ಎಂದಿತು. ಅದಕ್ಕಾದರೂ ಸಿಂಹವು ಮೊದಲು ಹೇಳಿದ ಪ್ರಕಾರವೇ ಉತ್ತರವಿತ್ತಿತು. ಅದನ್ನು ನೋಡಿ, ಹುಲಿ “ಈ ಇಬ್ಬರಿಗಿಂತಲೂ ನಾನು ಪುಷ್ಟಶರೀರಿಯಾಗಿದ್ದೇನೆ. ನನ್ನನ್ನು ಭಕ್ಷಿಸಿದರೆ, ತಮಗೆ ತೃಪ್ತಿಯಾಗುತ್ತದೆ.”ಎಂದು ಹೇಳಿದ ಮಾತಿಗೆ ಸಿಂಹವು ಮೊದಲಿನಹಾಗೆಯೇ ಉತ್ತರಕೊಟ್ಟಿತು. ಹೀಗೆ ನಡೆಯುತ್ತಿರುವ ಪ್ರಕರಣವನ್ನು ನೋಡಿ, ಒಂಟೆ “ಸ್ವಾಮೀ, ನಾನು ಮೂವರಿಗಿಂತಲೂ ಸ್ಥೂಲಕಾಯವುಳ್ಳವನು. ನನ್ನನ್ನು ಭಕ್ಷಿಸಿ.” ಎಂದು ಪ್ರಾರ್ಥಿಸಿತು. ಒಂಟೆ ಹೀಗೆ ಹೇಳಿದ ತತ್‌ಕ್ಷಣವೇ, ಹುಲಿ ನರಿಗಳೆರಡೂ ಕೂಡಿ, ಆ ಒಂಟೆಯನ್ನು ಕೊಂದು, ಸಿಂಹವೂ ಅವೂ ಅದನ್ನು ತಿಂದು ಬಿಟ್ಟುವು. ಈ ಕಥೆಯನ್ನು ಹೇಳಿ ಸಂಜೀವಕನು “ಬಹಳ ಮಂದಿ ಕ್ಷುದ್ರರಿರುವ ಸ್ಥಳದಲ್ಲಿ ಪರಿಣಾಮವಿಲ್ಲ. ಅಲ್ಲಿ ಮರಣವೇ ಉಂಟಾಗುತ್ತದೆಂದು ತಿಳಿಯಬೇಕು. ಇಲ್ಲಿಯೂ ಹಾಗೆಯೇ ಇದೆ. ಈಗ ಯುದ್ಧ ಮಾಡುವುದೇ ಅತ್ಯುತ್ತಮ ಪಕ್ಷ. ಏಕೆಂದರೆ ರಣದಲ್ಲಿ ಮರಣ ಹೊಂದಿದವನು ಸ್ಪರ್ಗವನ್ನು ಪಡೆಯುತ್ತಾನೆ. ಇಲ್ಲವೇ ಶತ್ರುಗಳನ್ನು ಜಯಿಸುವುದರಿಂದ ಪೃಥ್ವೀಪತಿಯಾಗುತ್ತಾನೆ. ಆದ್ದರಿಂದ ಶೂರನಾದವನಿಗೆ ಮರಣವೇಲೇಸು.’’ ಎಂದು ನಿಶ್ಚಯಿಸಿತು. ಅದಕ್ಕೆ ದಮನಕವು “ಶತ್ರುಗಳ ಪರಾಕ್ರಮ ತಿಳಿಯದೆ, ಅವರನ್ನು ದ್ರೇಷಿಸುವವನು ಸಮುದ್ರನಾಥನು ಟಿಟ್ಟಿಭವೆಂಬ ಪಕ್ಷಿಯ ಕೈಯಿಂದ ನಾಶವಾದಂತಾಗುವುದು. ನಿನಗೂ ಹೀಗೆಯೇ ಆದೀತು!’’ ಎಂದುದನ್ನು ಕೇಳಿ, “ಆ ಕಥೆಯೇನು, ವಿವರಿಸು” ಎಂದು ಸಂಜೀವಕವು ಎನ್ನಲಾಗಿ ದಮನಕ ಹೇಳುತ್ತದೆ.

ಕಥೆ:-ಸಮುದ್ರ ತೀರದಲ್ಲಿ ಸತ್ತ್ವಾಕಿಶಯವೆಂಬ ಟಿಟ್ಟಿಭವು ಮಾರಿಣಿ ಎಂಬ ಹೆಣ್ಣು ಪಕ್ಷಿಯೊಡನೆ ಕೂಡಿಕೊಂಡು ತನ್ನ ಗೂಡಿನಲ್ಲಿ ಸುಖವಾಗಿವಾಸವಾಗಿತ್ತು. ಒಂದು ದಿನ ಹೆಣ್ಣುಪಕ್ಷಿ ತತ್ತಿಗಳನ್ನು ಹಾಕುವುದಕ್ಕಾಗಿ, ಸ್ಥಳ ನೋಡಬೇಕೆಂದು ಗಂಡುಪಕ್ಷಿಗೆ ಹೇಳಿತು. ಆ ಗಂಡು ಪಕ್ಷಿ “ನಾವು ವಾಸವಾಗಿರುವ ಸ್ಥಳವೇ ಅತ್ಯುತ್ತಮವಾದುದು, ಬೇರೆ ಸ್ಥಳವೇಕೆ ? ಎಂದಿತು. ಆ ಮಾತಿಗೆ ಹೆಣ್ಣುಪಕ್ಷಿ “ಈ ಸಮುದ್ರ ತೀರದಲ್ಲಿ ಏನಾದರೂ ಸಂಕಟವೊದಗಿದರೆ, ನಮ್ಮ ಗತಿಯೇನು? ‘’ ಎಂದು ಕೇಳಿತು. ಅದಕ್ಕೆ ಟಿಟ್ಟಿಭವೆಂಬ ಗಂಡುಪಕ್ಷಿ “ಈ ಸಮುದ್ರನಾಥನಿಗೆ ನನ್ನ ಸಂಗಡ ದ್ವೇಷ ಮಾಡುವ ಸಾಮರ್ಥ್ಯವಿಲ್ಲ. ನೀನು ನಿಶ್ಚಿಂತೆಯಿಂದ ಇರು’’ ಎಂದು ಸಮಾಧಾನ ಹೇಳಿತು. ಈ ನುಡಿಯನ್ನು ಕೇಳಿ ಹೆಣ್ಣು ಪಕ್ಷಿ “ಸಮುದ್ರನಾಥನಿಗೂ ನಿನಗೂ ಬಹಳ ಅಂತರವುಂಟು. ಯಾವನು ತನ್ನ ಯೋಗ್ಯತೆಯನ್ನ ರಿಯದೆ ಎರಡನೆಯವರ ಸಂಗಡ ದ್ವೇಷವನ್ನು ಕಟ್ಟಿಕೊಳ್ಳುವನೋ, ಅವನು ಕಷ್ಟದಲ್ಲಿ ಬೀಳುವನು. ಅರಿತು ಉದ್ಯೋಗಿಸುವವನು ಸುಖಹೊಂದುವನು. ಯಾವನು ಸ್ನೇಹಿತರ ಹಿತದ ಮಾತುಗಳನ್ನು ಕೇಳುವುದಿಲ್ಲವೋ ಅವನು ಕೂರ್ಮನ ಹಾಗೆ ಕಷ್ಟಕ್ಕೊಳಪಡುವನು.’ ಎಂದು ನೀತಿಯನ್ನು ಹೇಳಿತು. ಟಿಟ್ಟಿಭವು “ಅದು ಹೇಗೆ” ಎಂದು ಕೇಳಿದುದಕ್ಕೆ, ಆ ಹೆಣ್ಣು ಪಕ್ಷಿ ಹೇಳುತ್ತದೆ.

ಒಂದಾನೊಂದು ಕೆರೆಯಲ್ಲಿ ಕಂಬುಗ್ರೀವವೆಂಬ ಒಂದು ಆಮೆಯಿತ್ತು. ಇದರೊಡನೆ ವಿಕಟ ಮತ್ತು ಸಂಕಟ ಎಂಬ ಎರಡು ಹಂಸಗಳು ಗೆಳೆತನ ಮಾಡಿಕೊಂಡಿದ್ದುವು. ಆ ಸ್ಥಳದಲ್ಲಿ ಮಳೆಯಾಗದೆ, ವ್ಯಸನಪಟ್ಟು ಆ ಎರಡು ಹಂಸಗಳು “ಈ ಕೆರೆ ಇನ್ನುಮೇಲೆ ಬತ್ತುವುದು. ಅದಕ್ಕಾಗಿ ಇಲ್ಲಿಂದ ಹೊರಟು ನೀರಿರುವ ಸ್ಥಳಕ್ಕೆ ಹೋಗಬೇಕು. ‘’ಎಂದು ಪರಸ್ಪರ ಆಲೋಚನೆ ಮಾಡಿ ನಿಶ್ಚಯಿಸಿ ತಮ್ಮ ಮಿತ್ರನಾದ ಆಮೆಗೆ ತಿಳಿಸಿದುವು. ಆ ಆಮೆ “ನೀವು ಪಕ್ಷಿಗಳಾದುದರಿಂದ ಹಾರಿ ಹೋಗಬಲ್ಲಿರಿ. ನಾನು ಬರುವುದು ಹೇಗೆ?” ಎಂದಿತು. ಅದಕ್ಕೆ ಹಂಸಗಳು “ ನೀನು, ನಾವು ಹೇಳುವ ಮಾತನ್ನು ಕೇಳಿದುದಾದರೆ, ನಿನ್ನನ್ನೂ ಸಹ ಕರೆದುಕೊಂಡು ಹೋಗುವೆವು. ನಾವು ನಿನ್ನನ್ನು ತೆಗೆದುಕೊಂಡು ಹೋಗುವ ಮಾರ್ಗದಲ್ಲಿ, ನೀನು ಮಾತಾಡದೆ ಸುಮ್ಮನೆ ಇರಬೇಕು.” ಎಂದು ಹೇಳಿ ಒಂದು ಕಟ್ಟಿಗೆಯನ್ನು ಆಮೆಯ ಕೈಯಲ್ಲಿ ಕೊಟ್ಟು, “ ಇದನ್ನು ಗಟ್ಟಿಯಾಗಿ ಹಿಡಿದುಕೊಂಡಿರು. ಬಿಡಬೇಡ’’ , ಎಂದು ಹೇಳಿದುವು. ಆಮೆ ಈ ಏರ್ಪಾಡಿಗೆ ಒಡಂಬಟ್ಟು ಆ ಕಟ್ಟಿಗೆಯನ್ನು ಬಾಯಿಯಲ್ಲಿ ಕಚ್ಚಿ ಕೊಂಡಿತು. ಹಂಸಗಳೆರಡೂ ಅದನ್ನು ಹಿಡಿದುಕೊಂಡು ಆಕಾಶ ಮಾರ್ಗವಾಗಿ ಹಾರಿಹೋಗುತ್ತಿದ್ದುವು. ಹೀಗೆ ಹೋಗುತ್ತಿರುವಾಗ, ಒಂದು ಪಟ್ಟಿಣದ ಬಳಿಯಲ್ಲಿ ಜನರು ಈ ದೃಶ್ಯವನ್ನು ಕಂಡು, ಬಹೆಳ ಆಶ್ಚ ರ್ಯಪಟ್ಟು, ಎಲ್ಲರೂ 'ಡೊಡ್ಡ ದನಿಯಲ್ಲಿ “ ಓಹೊ! ಎರಡು ಪಕ್ಷಿ ಗಳು ಒಂದು ಟಿ ೈಗೆಯಲ್ಲಿ ಅನೆಯನ್ನ್ನಿ ರಿಸಿಕೊಂಡು ಹಾರಿಹೋಗುತ್ತಿ ವೆ” ಎಂದು ಕೋಲಾಹೆಲವನ್ನು ಡಿಗಳು ಈ ಗದ್ದಲವನ್ನು ಕೇಳಿ ಆಮೆ « ಈ ಶಬ್ದ ಎಲ್ಲಿಂದ ಬಂದಿತು” ಎಂದು ಪಕ್ಷಿಗಳನ್ನು ಕೇಳಿದಕೂಡಲೈ, ಬಾಯಿಯೊಳಗಿನ ಕಟ್ಟಿಗೆ ತನ್ಪಿ ಕೆಳಕ್ಕೆ ಬಿದ್ದಿತು. ಅಲ್ಲಿ ನೆರೆದ ಜನ ಮಾಂಸಭಕ್ಷಕರಾದುದರಿಂದ, ತತ್‌ಕ್ಷಣವೇ ಅದನ್ನು ಕೊಂದುಬಿಟ್ಟರು, ಈ ಕಥೆಯನ್ನು ಕೇಳಿದ ಗಂಡುಟಿಟ್ಟಭಕ್ಕೆ ಆ ಹೆಣ್ಣು ಕ್ಷಿ ಮತ್ತೂ ಹೀಗೆ ಹೇಳಿತು. “ಹಿತ ಮಾಡುವವರ ವಚನವನ್ನಾಲಿಸಬೇಕು. ಅಲ್ಲದೆ ಮುಂದಿ ಯಾವುದಾದರೊಂದು ಸಂಭನಿಸುವುದಕ್ಸೆಂತ ಮುಂಚೆಯೇ ನಿಚಾರ ಮಾಡುವವನೂ, ಸಂದರ್ಭ ಬಂದಾಗ ಸರಿಯಾಗಿ ವಿಚಾರ ಮಾಡು ವವನೂ, ಸುಖವನ್ನು 'ಹೊಂದುಕ್ತಾಕೆ. ಆದರೆ ಆದದ್ದು ಆಗಲಿ ಎನ್ನುವವನು ಮೀ ನಂತೆ ನಾಶವಾಗುತ್ತಾನೆ. ೨) ಹೇಗೆಂದರೆ;

ಒಂದು ಕೊಳದಲ್ಲಿ ಅನಾಗತವಿಧಾತ, ಪ್ರತ್ಯುತ್ಸನ್ನಮತಿ, ಯದೆಭವಿಸ್ಯ ಎಂಬ ಮೂರು ಮೀನುಗಳಿದ್ದುವು. et ಒಬ್ಬ ಬೇಟಿಕಾರನು ಬಂದು ಸರೋವರದಲ್ಲಿ ನೀರು ಕುಡಿಯುತ್ತಿರುವಾಗ ಈ ಮೀನುಗಳನ್ನು ಕಂಡು ವಿಸ್ಮಯಪಟ್ಟು "ಇಂಥ ಮೀನುಗಳನ್ನು ನಾನು ಇದುವರೆಗೆ ಎಲ್ಲೆಲ್ಲಿಯೂ ನೋಡಿರಲಿಲ್ಲ. ನಾಳಿನ ದಿವಸ ಬಂದು ಇಲ್ಲಿರುವ ನೊನುಗಳಿಗೆ ಬಲೆಯನ್ನು ಹಾಕಿ, ಇವುಗಳನ್ನು ಹಿಡಿದುಕೊಂಡು ಹೋಗು ತ್ರೇನೆ'' ಎಂದು ನುಡಿದು ಹೊರಟುಹೋದನು. ಈ ಮಾತನ್ನು ಅನಾ ಗತವಿಧಾತವೆಂಬ ಮೀನು ಕೇಳಿ ತನ್ನ ಗೆಳೆಯರಿಗೆ “ ಇನ್ನು ಮೇಲೆ ನಾವು ಈ ಸ್ಥಳವನ್ನು ಬಿಟ್ಟು ಶೀಘ್ರವಾಗಿ ಹೊರಟುಹೋಗಬೇಕು'' ಎಂದಿತು, ಅದಕ್ಕ ಪ್ರತ್ಯುತ್ಸ ನ್ನಮತಿ, ಭಯ ಪ್ರಾಪ್ರವಾದಾಗ್ಲೆ ನೋಡಿ ಕ್ಷೊಳ್ಳೋಣವಂಕೆ, ಸಂದರ್ಭವೊದಗಿದಾಗ ಅದನ್ನು ನ್ನೋಡಿ, ಹೇಗೆ ಯದಭನಿಸ್ಯನೆಂಬ ಮೀನು “ ಸ್ವಸ್ಥಾನ ಬಿಡುವುದು ದಡ್ಡತನ, ಏನೇನು ಆಗಜೇಕಾಗಿದೆಯೋ ಎಲ್ಲಿ ಹೋದರೂ ಅದು ತಪ್ಪಲಾರದು. ಆದುದ ರಿಂದ ನಾನೇನೂ ಬರುವುದಿಲ್ಲ'' ಎಂದಿತು. ಈ ಮಾತುಗಳನ್ನು ಹೇಳಿ ಕೊನೆಯ ಎರಡು ಮೀನುಗಳು ಅಲ್ಲಿಯೇ ನಿಂತುಕೊಂಡುವು. ಮೊದ ಲನೆಯ ಮೀನು ಅನಾಗತವಿಧಾತನು ಎರಡನೆಯ. ಸರೋವರಕ್ಕೆ ಹೊರಟುಹೋಯಿತು. ಆಮೇಲೆ ಮಾರನೆಯ ದಿನ ಪ್ರಾತಃಕಾಲಕ್ಕೆ ಆ ಮೀಂಗುಲಿ ಬಂದು ಜಾಲವನ್ನು ಹಾಕಿ, ಮತ್ಸ್ಯ್ಯಗಳನ್ನು ಹಿಡಿದನು. ಅದರಲ್ಲಿ ಪ್ರತ್ಯುತ್ಸನ್ನಮತಿಯೆಂಬ ಮೀನು ಸಿಕ್ಕಿ, ನಿಜವಾಗಿಯೂ ಸತ್ತ ಹಾಗೆ ಸೋಗು ಹಾಕಿ ಸುಮ್ಮನೆ ಇದ್ದಿತು. ಆ ಮೀನನ್ನು ಬೇಟಿಗಾ ಕಸು ಸೋಡಿ, ಇಷು ಸತ್ಗಿರುವುದೆಂದು ತಿಳಿದು ಆದನ್ನು ಸರೋವರದ 'ತಟದ ಮೇಲಿಟ್ಟನು, ಇಷ್ಟರಲ್ಲಿ ಅವನ ಕಣ್ಣು ತಪ್ಪಿಸಿ, ಅದು ನೀರಲ್ಲಿ ಮೆಲ್ಲನೆ ಜಾರಿಕೊಂಡಿತು. ಯದಭನಿಷ್ಯವೆಂಬ ಮೀನು ಬಲೆಯೊಳಗೆ ಸಿಕ್ಕಿಕೊಂಡು “ ಇನ್ನೇನು ಮಾಡಬೇಕು'' ಎಂದು ಅಲ್ಲಿಂದ ಓಡಿ ಹೋಗಲು ಹವಣಿಸುತ್ತಿರುವಪ್ಪರಲ್ಲಿ ಆ ಮೀನುಗಾರನು ಅದನ್ನು ಹಿಡಿದು ' ಕೊಂದುಬಿಟ್ಟಿನು. ಇಹೀಗೆ ಆ ಹೆಣ್ಣು ಪಕ್ಷಿ ತನ್ನ ಗಂಡನಿಗೆ ಅನೇಕ ಉಪದೇಶದ ಪರಾತು ಗಳನ್ನು ಹೇಳಿದರೂ, ಅದು ಕೇಳಲಿಲ್ಲ. ಆಗ ಹೆಣ್ಣು ಪಕ್ಷಿ ನಿರುಪಾಯ ವಾಗಿ ಅಲ್ಲಿಯೇ ಮೊಟ್ಟಿಗಳನ್ನಿಟ್ಟತು. ಆ ಸಮಯದಲ್ಲಿ, ಸಮುದ್ರನಾಥನು ಆ ಓಟ್ಟಭದ ಸಾಮರ್ಥ್ಯವನ್ನರಿಯಜೆ, ತತ್ತಿಗಳನ್ನು ಎತ್ತಿಕೊಂಡು ಹೋದನು. ಹೆಣ್ಣು ಪಕ್ಷಿಗೆ ಬಹಳ ದುಃಖವಾಯಿತು, ಅದು ತನ್ನ ಸ್ವಾಮಿಗೆ “ನಮಗೆ ಬಹಳ ಸಂಕಟವೊದಗಿತು. ಸಮುದ್ರನಾಥನು ತತ್ತಿಗಳನ್ನು ಎತ್ತಿ ಕೊಂಡು ಹೋದನು, :ಈಗೇನು ಉಪಾಯ ಮಾಡಬೇಕು.” ಎಂದು ಖಿನ್ನ ವಾಗಿ ನುಡಿಯಿತು. ಅದನ್ನು ಕೇಳಿ ಟಟ್ಟಭವು “ಕಾಂತೆ! ಅಂಜಬೇಡ, ನಾನು ಸಮುದ್ರನಾಥನು ತೆಗೆದುಕೊಂಡು ಹೋದ. ತತ್ತಿಗಳನ್ನು ಹಿಂದಕ್ಕೆ ತರುವೆನು" ಎಂದು ಹೇಳಿ ಎಲ್ಲ ಪಕ್ಷಿಗಳನ್ನೂ ಕೂಡಿಕೊಂಡು ಗರುಡನಲ್ಲಿ ಮೊರೆಯಿಟ್ಟ ತು. ಆಗ ಗರುಡನು ಶ್ರೀವಿಷ್ಣುವಿನ ಬಳಿಗೆ ಇವುಗಳನ್ನು ಕರೆದುಕೊಂಡು ಹೋಗಿ, "ಮಹಾಸ್ವಾಮೀ, ಸಮುದ್ರನಾಥನು ಈ ಪಕ್ಷಿಗಳ ತಕ್ತಿಗಳನ್ನು ಅಪಹರಿಸಿದ್ದಾನೆ. ದಯಮಾಡಿ ಅವುಗಳನ್ನು ತಿರುಗಿ ಕೊಡಿಸುವ ಕೃಪೆ ಮಾಡಬೇಕು" ಎಂದು ವಿನಯಪೂರ್ವಕವಾಗಿ ಪ್ರಾರ್ಥಿಸಿದನು. ಪರಮಾತ್ಮನು ಕೂಡಲೇ ಸಮುದ್ರನಾಥನಿಗೆ "ಈ ಪಕ್ಷಿಯ ಮೊಟ್ಟೆಗಳನ್ನು ಶೀಘ್ರವಾಗಿ ಕೊಟ್ಟು ಬಿಡು" ಎಂದು ಆಜ್ಞಾಪಿಸಿದನು. ಸಮುದ್ರನಾಥನು ವಿಷ್ಣು ತತ್ವಾಜ್ಞೆಯನ್ನು ಶಿರಸಾವಹಿಸಿ, ಆ ಮೊಟ್ಟೆಗಳನ್ನು ಎಲ್ಲವನ್ನೂ ತಿರುಗಿ ಕೊಟ್ಟು ಬಿಟ್ಟನು.ಹೀಗೆ ದಮನಕವು ಹೇಳಿ ಮುಂಡೆ, "ಶತ್ರುಗಳ ಪರಾಕ್ರಮ ತಿಳಿಯದೆ ದ್ವೇಷಿಸಲಾಗದು. ಎತ್ತುಮತ್ತುಸಿಂಹಗಳ ಯುದ್ಧದ ರೀತಿ ಹೀಗೆಯೇ? ಎಂದುಕೊಂಡು, ಸಂಜೀವಕವೆಂಬ ಆ ಎತ್ತನ್ನು ಉದ್ದೇಶಿಸಿ “ಸಿಂಹವು ತನ್ನ ಕಿವಿಗಳನ್ನೂ ಬಾಲವನ್ನೂ ಎತ್ತಿಕೊಂಡು ಬರುವುದನ್ನು ನೋಡಿ, ಯುದ್ಧ ಕೈಗೊಳ್ಳುವುದಕ್ಕೆ ಚತುರತೆಯೆಂದು ಭಾವಿಸಿ ಜಡಿಯಂತೆ ವರ್ತಿಸಬೇಕೆಂಬುದನ್ನು ಆಲೋಚಿಸಿಕೊಳ್ಳಬೇಕೆ" ಎಂದಿತು. ಇದರಂತೆ, ಸಂಜೀವಕನಿಗೆ ಹೇಳಿ ಕರಟಕ ದಮನಕಗಳು ತಮ್ಮಲ್ಲಿ “ಈಗ ನಮ್ಮ ಹರಕೆ ಕೈಗೂಡಿತು. ಸಂಜೀವಕನಿಗೆ ಹೇಳಿದ ಹಾಗೆಯೇ, ಸಿಂಹಕ್ಕೆ ಹೇಳಬೇಕು" ಎಂದು ಮಾತಾಡಿಕೊಂಡು, ಸಿಂಹದ ಬಳಿಗೆ ಹೋಗಿ, ಹಾಗೆ ಮಾಡುವಂತೆ ಅದನ್ನು ಪ್ರೇರೇಪಿಸಿದುವು. ಸಂಜೀವಕವು ಸ್ವಲ್ಪ ಹೊತ್ತಿನ ಮೇಲೆ ಸಿಂಹದ ಹತ್ತಿರ ಹೋಗಿ ನೋಡಲಾಗಿ ದಮನಕವು ಹೇಳಿದಂತೆ ಕಂಡುಬಂದಿತು. ಆಗ ಸಂಜೀವಕವು ಅತ್ಯಂತ ಕ್ರೂರಾಕಾರವನ್ನು ಧರಿಸಿಕೊಂಡು ಅದನ್ನು ಜಯಿಸಬೇಕೆಂಬ ಉದ್ದೇಶದಿಂದ ರೋಷಾವೇಶದಿಂದ ಕೊಂಬುಗಳನ್ನು ತಗ್ಗಿಸಿ ಕಿಣಿಗಳನ್ನು ನಿಗುರಿಸಿ, ಬಾಲವನ್ನು ಎತ್ತಿಕೊಂಡು, ಕಾಲುಗಳಿಂದ ನೆಲವನ್ನು ತಾವಿಸುತ್ತ, ಮಹಾ ಧ್ವನಿಮಾಡಿ, ಅತಿವೇಗದಿಂದ ಮುಂದುವರಿಯಿತು. ಇದನ್ನು ನೋಡಿ, ಆ ಸಿಂಹವು ತಾನೂ ಸಿದ್ದವಾಗಿ ಅದರೊಡನೆ ಯುದ್ಧ ಮಾಡಿತು. ಅವೆರಡರ ಯುದ್ಧವನ್ನು ಪಾತಿ, ಕರಟಕ ದಮನಕಗಳು ಅತ್ಯಂತ ಸಂತೋಷಪಟ್ಟು, "ನಾವು ಮಾಡಿದ ತಂತ್ರವು ಸಫಲವಾಯಿತು" ಎಂದು ಮನಸಿನಲ್ಲಿ ಉಬ್ಬಿ ಹೋದುವು. ಆಗ ಕರಟಕವು "ಎಲೆ! ದಮನಕ್ಕ, ನೋಡಿದೀಯಾ? ಅತಿಸ್ನೇಹವಾಗಿದ್ದ ಇವೆರಡು ಪ್ರಾಣಿಗಳು ಈಗ ಒಂದನ್ನೊಂದು ಕೊಲ್ಲಬೇಕೆಂದು ಎಷ್ಟು ಬದ್ಧ ದ್ವೇಷದಿಂದ ಯುದ್ಧಮಾಡುತ್ತಿವೆ! ಇವೆರಡಕ್ಕೂ ಮೊದಲಿನಂತೆಯೇ ಸ್ನೇಹವನ್ನು ಬೆಳೆಸಬಹುದೇ?" ಎಂದು ಕೇಳಿತು. ಅದಕ್ಕೆ ದಮನಕ ಹೇಳುತ್ತದೆ.

ಸುಮನಾವತಿಯೆಂಬ ಪಟ್ಟಣದಲ್ಲಿ ಹಿರಣ್ಯಶರ್ಮನೆಂಬ ಒಬ್ಬ ವ್ಯವಹಾರಿ, ಆತನಿಗೆ ಸುಬುದ್ದಿಯೆಂಬ ಒಬ್ಬ ಮಗನು. ಅದೇ ಪಟ್ಟಣದಲ್ಲಿ ವೇದಶರ್ಮನೆಂಬ ಬ್ರಾಹ್ಮಣನಿಗೆ ದುಷ್ಟಬುದ್ಧಿಯೆಂಬ ಒಬ್ಬಗ. ಇವರಿಬ್ಬರೂ ಪರಮ ಸ್ನೇಹಿತರಾಗಿ "ಇಬ್ಬರ ಪ್ರಾಣ ಒಂದು; ದೇಹ ಎರಡು" ಎಂಬಂತೆ ಇರುತ್ತಿದ್ದರು. ಹೀಗಿರುತ್ತಿರಲಾಗಿ, ಇವರಿಬ್ಬರೂ ಆಲೋಚಿಸಿ, ಚಿತ್ರವಿಚಿತ್ರಗಳುಳ್ಳ ಅನೇಕ ದೇಶಗಳನ್ನು ನೋಡಬೇಕೆಂದು ಪಯಣ ಹೊರಟು ಮುಕುರವತಿಯೆಂಬ ಪಟ್ಟಣಕ್ಕೆ ಬಂದರು. ಆ ಪಟ್ಟಣದಲ್ಲಿ ಗ್ರೀವನೆಂಬ ಮಹಾಲಿಂಗದ ದೇವಾಲಯವನ್ನು ನೋಡಿ, ಅಲ್ಲಿ ಸ್ನಾನವನ್ನು ಮಾಡಿ, ದೇವತಾರ್ಚನೆಯನ್ನು ತೀರಿಸಿಕೊಂಡು ಬರುತ್ತಿರುವ ಮಾರ್ಗದಲ್ಲಿ, ಸುಬುದ್ದಿಗೆ ಏಳು ಕೊಪ್ಪರಿಗೆಯಷ್ಟು ದ್ರವ್ಯವುಳ್ಳ ನಿಧಿ ದೃಷ್ಟಿಗೆ ಬಿದ್ದಿತು. ಅದನ್ನು ಅವನು ದುಷ್ಟಬುದ್ದಿಗೆ ತೋರಿಸಿ, "ಈ ದ್ರವ್ಯವನ್ನು ನಾವಿಬ್ಬರೂ ಸಮನಾಗಿ ತೆಗೆದುಕೊಳ್ಳೋಣ" ಎಂದು ಹೇಳಿದನು. ಹೀಗೆ, ಅವರಿಬ್ಬರೂ ನಿಶ್ಚಯಿಸಿಕೊಂಡು, ಆ ಸ್ಥಳದಲ್ಲಿ ಗುರುತು ಮಾಡಿದರು. ದುಷ್ಟಬುದ್ದಿ ಆ ಎಲ್ಲ ದ್ರವ್ಯವನ್ನು ಇಲ್ಲಿಯೇ ಹುಡಿದುಟ್ಟು, ಸ್ವಲ್ಪ ಮಾತ್ರ ತೆಗೆದುಕೊಂಡು ಮನೆಗೆ ಹೋಗೋಣ" ಎಂದನು. ಸುಬುದ್ದಿಯು ತನ್ನ "ಈ ಮಿತ್ರನ ರ ಮಾತನ್ನು ಮನ್ನಿಸಿದನು. ಆಮೇಲೆ ಇಬ್ಬರೂ ಸ್ವಲ್ಪ ದ್ರವ್ಯವನ್ನು ತೆಗೆದುಕೊಂಡು, ಉಳಿದುದನ್ನೆಲ್ಲ ಒಂದು ವೃಕ್ಷದ ಕೆಳಗೆ ಹುಡಿದುಟ್ಟು, ಗುರುತುಮಾಡಿ ಅವರಿಬ್ಬರೂ ಮೊದಲಿನಂತೆಯೇ ಅತ್ಯಂತ ಸ್ನೇಹದಿಂದ ಕಾಲಕಳೆಯುತ್ತಿದ್ದರು. ಒಂದು ದಿನ ದುಷ್ಪ ಬುದ್ಧಿಯೊ ಬ್ಬನೇ ಆ ವೃಕ್ಷದ ಹತ್ತಿರ ಹೋಗಿ, ಉಳಿದ ದ್ರವ್ಯವನ್ನೆಲ್ಲ ತೆಗೆದುಕೊಂಡು ಬಂದುಬಿಟ್ಟಿನು, ಬಂದ ಕೆಲವು ದಿನಗಳ ಮೇಲೆ, ಸುಬುದ್ಧಿ ದುಷ್ಟಬುದ್ಧಿ ಯನ್ನು ಕುರಿತು “ನಾವು ಆ ವೃಕ್ಷದ ಕೆಳಗೆ ದ್ರವ್ಯವನ್ನು ಬೃತಿಟ್ಟು ಬಹಳ ದಿನಗಳಾದುವು. ಈಗ ಅಲ್ಲಿಗೆ ಹೋಗಿ, ಅದನ್ನು ತೆಗೆದುಕೊಂಡು ಬರೋಣ' ಎಂದನು. ಆ ಮಾತಿಗೆ ಒಡಂಬಟ್ಟು, ದುಷ್ಪಬುದ್ಧಿಯೂ, ಸುಬುದ್ಧಿಯೂ ಅಲ್ಲಿಗೆ ಹೋದರು. ಹೋಗಿ ನೋಡಲಾಗಿ, ಅಲ್ಲಿ ಏನೂ ಇರಲಿಲ್ಲ. ಆಗ ದುಷ್ಪ ಬುದ್ಧಿ ದುಃಖದಿಂದ ನಿಟ್ಟು ಸಿರನ್ನು ಬಿಡುತ್ತ, ಸುಬುದ್ಧಿಗೆ “ವ್ರ ದ್ರವ್ಯ ವನ್ನೆಲ್ಲ ನೀನೇ ಅಪಹರಿಸಿರುವೆ. ನಾನು ರಾಜಾಸ್ಥಾನದಲ್ಲಿ ದೂರು ಮಾಡು ತ್ರೇನೆ'' ಎಂದು ಹೇಳಿ, ಅರಸನಲ್ಲಿ ಇದನ್ನು ಮೊರೆಯಿಟ್ಟ ನು. ಇದನ್ನು ಕೇಳಿ ಅರಸನು ನ್ಯಾಯಾಧೀಶರಿಗೆ ಈ ಪ್ರಕರಣವನ್ನು ವಿಚಾರಿಸಲು ಆಜ್ಞಾ ನಿಸಿದನು. ನ್ಯಾಯಾಧೀಶರು ಐದು ದಿವಸದ ಗಡುನನ್ನಟ್ಟು, ಆ ಪ್ರಕ ರಣವನ್ನು ವಿಚಾರಣೆಗೆ ತೆಗೆದುಕೊಂಡರು, ದುಷ್ಪ ಬುದ್ಧಿ "ನನ್ನ ಸಕ್ಸ ದಲ್ಲಿ ಸಾಕ್ಷಿಯುಂಟು ಕರೆಸಿ ನೇಳಬೇಕು'' ಎಂದು ನಿಜ್ಞಾಪಿಸಿದನು, ನ್ಯಾಯಾಧೀಶರು ಸಾಕ್ಷಿಯನ್ನು ಕರೆದು ತರುವಂತೆ ಹೇಳಿದರು. ಆಗ ದುಷ್ಟ ಬುದ್ಧಿ ತನ್ನ ಮನೆಗೆ ಹೋಗಿ ತನ್ನ ತಂದೆಯನ್ನು ಕುರಿತು, «ತಂದೆಯೇ ನಾನು ಹೇಳಿದಂತೆ ನೀನು ನುಡಿದರೆ, ಲಕ್ಷಗಟ್ಟಲೆ ಮೊಹರುಗಳು ನಮಗೆ ದೊರೆಯುತ್ತವೆ?” ಎಂದು ಹೇಳಿದನು, ಅದಕ್ಕೆ ತಂದೆ "ಮಗೂ, ಅದೇನು? ಹೇಳು” ಎಂದು ಕೇಳಿದನು, ದುಷ್ಟಬುದ್ಧಿ “ನೀನು ಮರದ ಪೊಟ್ಟಿ ರೆಯೊಳಗೆ ಈ ರಾತ್ರಿಯೇ ಹೋಗಿ ಕುಳಿತುಕೊಳ್ಳ ಬೇಕು. ಅಲ್ಲಿಗೆ ನ್ಯಾಯಾಧೀಶ ಮೊದಲಾದವರು ಬಂದು «ಇಲ್ಲಿದ್ದ ದ್ರವ್ಯವನ್ನು ತೆಗೆದುಕೊಂಡು ಹೋದ ವರಾರು?' ಎಂದು ಕೇಳುತ್ತಾರೆ. ಆಗ ನೀನು "ಸುಬುದ್ಧಿಯೇ ತೆಗೆದು ಕೊಂಡು ಹೋದನು' ಎಂದು ಹೇಳಬೇಕು. ಆದರಿಂದ, ನನ್ನ ಕಾರ್ಯ ಕೈಗೂಡುವುದು” ಎಂದು ತಂದೆಗೆ ಹೇಳಿದನು. ಮಗನ ಈ ಮಾತನ್ನು ಕೇಳ್ಳಿ ತಂದೆ, «ಮಗನೇ, ಹೀಗೆ ಅನ್ಯಥಾ ಕಾರೈಮಾಡಿ, ಸುಖವನ್ನು ಪಡೆಯಲು ಅಪೇಕ್ಷೆ ಮಾಡುವುದು ಬಕಪಕ್ಸಿಯ ಮೂರ್ಬತೆಯಂತಾಗುವುದು. ಆದ್ದ ರಿಂದ ಇದು ಹಿತಕರವಲ್ಲ'' ಎಂದನು, ಅದಕ್ಕೆ ಮಗನು "ಆ ಬಕಪಕ್ಸಿಯ ಮೂರ್ವಕತೆಯೇನು'' ಎಂದು ಕೇಳಲು ತಂದೆ ಹೀಗೆ ಹೇಳಿದನು.

“ಮುನಿವಾಸವೆಂಬ ವನದಲ್ಲಿ ಒಂದು ವಟವೃಕ್ಷದ ಮೇಲೆ ಒಂದು ಬಕವು ಗೂಡು ಕಟ್ಟಿಕೊಂಡು ವಾಸವಾಗಿತ್ತು. ಅದರ ಬುಡದಲ್ಲಿಯೇ ಒಂದು ಸರ್ಪವು ಹುತ್ತನ್ನಿ ಟ್ರಿ ಕೊಂಡಿದ್ದಿತು- ಆ ಬಕವೂ ಸರ್ಪವೂ ಸ್ನೇಹವಾಗಿದ್ದುವು. ಒಂದು ದಿನ ಬಕವು ತತ್ತಿಗಳನ್ನು ಹಾಕಿ, ಎಲ್ಲಿಯೋ ತಿರುಗಾಡಲು ಹೊರಗೆ ಹೊರಟುಹೋಗಿದ್ದಿತು. ಆ ಸಮಯದಲ್ಲಿ ಪ್ರಳಯಕಾಲದ ರುಂರುಾನಾತದಂತೆ ದೊಡ್ಡ ಬಿರುಗಾಳಿ ಬೀಸಿ, ಬಕ ಪಕ್ಸೆಯ ಗೂಡು ಮುರಿದು, ತತ್ತಿಗಳೆಲ್ಲ ಕೆಳಗೆ ಬಿದ್ದು ಹೋದುವು. ಸರ್ಪವು ಬಕನ ತತ್ತಿಗಳೆಂದರಿಯದೆ ಅವುಗಳನ್ನೆಲ್ಲ ತಿಂದುಬಿಟ್ಟತು. ಸಾ ನುಲಿಕಾಲಸೈೆ ಬಕವು ಬಂದು ತನ್ನ ಗೂಡನ್ನು ಕಾಣದೆ, ತತ್ತಿಗಳೇನಾದು ವೆಂದು ಬಹಳ ಶೋಕಿಸ್ಕಿ, ಸರ್ಪವನ್ನು ಕೇಳಿತು. ಸರ್ಪವು ಬಹಳ ನೊಂದುಕೊಂಡು, «ಎಲೇ ಗೆಳೆಯನೇ, ನಿನ್ನ ತತ್ತಿಗಳೆಂದು ತಿಳಿಯದೆ ಅಜ್ಞಾನದಿಂದ ಅವುಗಳನ್ನು ತಿಂದುಬಿಟ್ಟಿನು, ನನ್ನ ಅಸರಾಧವನ್ನು ಕ್ರಮಿಸು” ಎಂದು ಬಹಳ ಪಶ್ಚಾತ್ತಾಪಪಟ್ಟು ಬೇಡಿಕೊಂಡಿತು. ಆದಕ್ಕೆ ಬಕಪಕ್ಸಿ ಮನಸ್ಸಿನಲ್ಲಿಯೇ ದ್ವೇಷವನ್ನು ತಾಳಿ, ಈ ಹಾವನ್ನು ಕೊಲ್ಲಿಸ ಬೇಕೆಂದು, ಒಂದು ಮುಂಗುಲಿಯೊಡನೆ ಗೆಳೆತನ ಮಾಡಿತು. ಆ ಮುಂಗುಲಿ ತನ್ನ ಸ್ನೇಹಿತನಿಗಾಗಿ ಆ ಸರ್ಪವನ್ನು ಕೊಂದು, ಆ ಸರ್ಪದ ಹುತ್ತನ್ನೇ ತನ್ನ ಮನೆ ಮಾಡಿಕೊಂಡು ಅದರಲ್ಲಿ ವಾಸಮಾಡಿತು. ಒಂದು ದಿನ ಮುಂಗುಲಿಗೆ ಆಹಾರವು ಸಿಕ್ಕದುದರಿಂದ ಆ ಬಕಪಕ್ತಿಯನ್ನೇ ತಿಂದು ಬಿಟ್ಟಿತು... ಆದಕಾರಣ ಮಿತ್ರರಲ್ಲಿ ಅಧರ್ಮವನ್ನು ಮಾಡಬಾರದು. ತಾನೊಂದು ಮಾಡಿದರೆ ದೈವವೊಂದು ಮಾಡಿಸುವುದು; ಈ ದುರ್ಬುದ್ಧಿ ಯನ್ನು ಬಿಟ್ಟು ನೀನು ನಿನ್ನ ಸ್ನೇಹಿತರೊಡನೆ ಮೊದಲಿನಂತೆಯೇ ಸ್ನೇಹ ದಿಂದಿರು.'' ಎಂದು ಹೇಳಿ ತನ್ನ ಮಾತನ್ನು ಪುಸ್ತಿಗೊಳಿಸುವುದಕ್ಕಾಗಿ ಮತ್ತೊಂದು ಕಥೆಯನ್ನು ಬಿತ್ತರಿಸಿದನು.

ಜ್ಯೋತಿಷ್ಠತಿ ಎಂಬ ಪಟ್ಟಣದಲ್ಲಿ ಧರ್ಮಪಾಲನೆಂಬ ಒಬ್ಬ ವ್ಯವಹಾರಿ ಇದ್ದನು. ಇವನು ಕಬ್ಬಿಣದ ದೊಡ್ಡ ವ್ಯಾಪಾರಿ. ಒಮ್ಮೆ ಇವನು ಸಾವಿರಾರು ಎತ್ತುಗಳ ಮೇಲೆ ಕಬ್ಬಿಣದ ಹೇರುಗಳನ್ನು ಹಾಕಿ ಕೊಂಡು ಮಧುರಾಪುರವೆಂಬ ಪಟ್ಟಣಕ್ಕೆ ಹೋದನು. ಆಗ ಕಬ್ಬಿಣದ ವ್ಯಾಪಾರವು ಮಂದವಾಗಿದ್ದುದರಿಂದ ಸರಕು ಮಾರಾಟವಾಗಲಿಲ್ಲ. ಧರ್ಮ ಪಾಲನು ತಾನು ತಂದ ಕಬ್ಬಿಣದ ಪದಾರ್ಥಗಳನ್ನು ಕೃತವರ್ಮನೆಂಬ ಸೆಟ್ಟಿಯ ಮನೆಯಲ್ಲಿಟ್ಟು ಮತ್ತೊಮ್ಮೆ ಬಂದು ವಿಕ್ರಯಿಸುನೆನೆಂದು ಹೇಳಿ ತನ್ನ ಪಟ್ಟಣಕ್ಕೆ ಮರಳಿ ಬಂದನು. ಕೆಲವು ದಿನಗಳ ಮೇಲೆ ಆ ಕೃತ ವರ್ಮನೆಂಬ ಸಟ್ಟ ಆ ಕಬ್ಬಿಣವನ್ನೆಲ್ಲ ಕಪಟದಿಂದ ಮಾರಿಬಿಟ್ಟನು. ಇತ್ತ ಧರ್ಮಪಾಲನು ತನ್ನ ಪದಾರ್ಥಗಳನ್ನು ಪರಸ್ಕಳದಲ್ಲಿ ಬಿಟ್ಟು ಬಹೆಳ ದಿನಗಳಾದುವೆಂದು ಬಗೆದು ಅವುಗಳ ಮಾರಾಟಕ್ಕಾಗಿ ಪುನಃ ಬಂದನು. ಬಂದು ಕೃತವರ್ಮನನ್ನು ಈ ನಮ್ಮ ಕಬ್ಬಿಣದ ಹೇರುಗಳಿ ಬರುವ ಮಳಿಗೆಯ ಬೀಗವನ್ನು ತೆಗೆದು ನಮ್ಮ ಹೇರುಗಳನ್ನು ಕೊಡು'' ಎಂದು ಕೇಳಿದನು. ಅವನು “ನಿನ್ನ ಕಬ್ಬಿಣವನ್ನೈಲ್ಲ ಇಲಿಗಳು ತಿಂದು ಹೋದುವು'' ಎಂದು ಹೇಳಿದನು. ಇದನ್ನು ಕೇಳಿ ಧರ್ಮಸಪ್‌ಲನು ಬಿರ ಗಾಗಿ ಇವನು ಬಹಳ ಗಟ್ಟಿಗನಾದ ಕಸಟ, ಈಗ ಇವನೊಡನೆ ಕಲ ಹವನ್ನು ತೆಗೆಯಬಾರದು, ಉಪಾಯದಿಂದ ಕಾರ್ಯವನ್ನು ಸಾಧಿಸಿಕೊಳ್ಳ ಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು "(ನಮ್ಮಲ್ಲಿ ಇಲಿಗಳು ಕಬ್ಬಿಣ ವನ್ನು ತಿಂದು ಹಾಳುಮಾಡಿಬಿಡುತ್ತವೆ, ನಿಮ್ಮಲ್ಲಿ ಇಟ್ಟರೆ ಸುರಕ್ಷಿತವಾಗಿ ಇರುತ್ತದೆ ಎಂದು ನಿಮ್ಮಲ್ಲಿ ಬಿಟ್ಟು ಹೋದರೆ ಇಲ್ಲಿಯೂ ಇಲಿಗಳು ಬಿಡಲಿ ಲ್ಲವೇ! ನನ್ನ ಪ್ರಾರಬ್ಧ, ನೀವೇನು ಮಾಡಬಲ್ಲಿರಿ” ಎಂದು ಉಪಚಾರದ ಮಾತನ್ನಾಡಿ ಅವನಲ್ಲಿ ಮೊದಲಿಗಿಂತಲೂ ಸ್ನೇಹವಿಶ್ವಾಸಗಳನ್ನು ತೋರುತ್ತ ಅಲ್ಲಿಯೇ ಇದ್ದನು. ಹೀಗೆಯೇ ಇರುತ್ತ ಧರ್ಮಪಾಲನು ಕೃತವರ್ಮನ ಮಕ್ಕಳನ್ನು ಪ್ರೀತಿಯಿಂದ ಆಡಿಸುತ್ತ ಅವರಿಗೆ ರುಚಿರುಚಿ ಯಾದ ತಿಂಡಿಗಳನ್ನು ಕೊಡಿಸುತ್ತ ಯಾವಾಗೂ ಅವರ ಜೊತೆಯ ಲ್ಲಿಯೇ ಕಾಲ ಕಳೆಯುತ್ತಿದ್ದನು, ಮಕ್ಕಳಿಗೂ ಅವನಿಗೂ ತುಂಬ ಸಲಿ ಗೆಯಾಗಿ ಮಕ್ಕಳು ಅವನನ್ನು ಒಂದು ಕ್ಷಣವೂ ಅಗಲದಂತಾದುವು. ಧರ್ಮಪಾಲನು ಒಮ್ಮೆಯಾದರೂ ತನ್ನ ಕಬ್ಬಿಣದ ಪ್ರಸಂಗವನ್ನು ತೆಗೆಯದೆ ಆ ಸಂಗತಿಯನ್ನು ಮರೆತುಬಿಟ್ಟಿರುವ ಹಾಗೆ ವರ್ತಿ ಸುತ್ತಿದ್ದನು. ಒಂದು ದಿನ ಈ ಧೆರ್ಮಪಾಲನು ಗಂಗಾಯಾಕ್ರಿಗೆ ಹೋಗಬೇಕೆಂದು ಸಿದ್ಧನಾದನು, ಇದನ್ನು ನೋಡಿ ಕೃತವರ್ಮನ ಹತ್ತುವರ್ಷ ವಯಸ್ಸಿನ ಮಗನು «ನಾನೂ ಹೊ (ಗುತ್ತೆ €ನೆ'' ಎಂದು ಹಟ ಹಿಡಿದು ಅಳುವುದಕ್ಕಾರಂಭಿಸಿದನು. ಕೃತವರ್ಮನು ಧರ್ಮ ಪಾಲನಿಗೆ ತನ್ನ ಮಗನನ್ನು ಸಂಗಡ ಕರೆದುಕೊಂಡು ಹೋಗುವುದಕ್ಕೆ ಸಮ್ಮತಿಯನ್ನಿತ್ತನು. ಧರ್ಮಪಾಲನು ಆ ಹುಡುಗನನ್ನು ಸಂಗಡ ಕರೆದು ಕೊಂಡು ಹೋಗಿ ಯಾರೂ ಅರಿಯದಂತೆ ಒಂದು ಸ್ಫಳದಲ್ಲಿರಿಸಿ ಅವನನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಒಬ್ಬ ಭೃತ್ಯನನ್ನು ಏರ್ಪಾಡುಮಾಡಿ ದನು. ಕೆಲವು ದಿನಗಳು ಕಳೆದ ಮೇಲೆ ಧರ್ಮಪಾಲನು ಒಬ್ಬನೇ ಕೃತ ವರ್ಮನಲ್ಲಿಗೆ ಬಂದನು, ಕೃತವರ್ಮಕೆಟ್ಟ ಧರ್ಮಪಾಲನೊಬ್ಬನೇ ಬಂದು ದನ್ನು ನೋಡಿ ಗಾಬರಿಯಿಂದ ನನ್ನ ಮಗನು ಎಲ್ಲಿ?'' ಎಂದು ಕೇಳಿ ಪನು. ಅದಕ್ಕೆ ಧರ್ಮಪಾಲ ವ್ಯವಹಾರಿ «ಗೆಳೆಯನೇ! ಎನೆಂದು ಹೇಳಲಿ, ನಿನ್ನ ಮಗನನ್ನು ಹೆಗಲಮೇಲೆ ಕುಳ್ಳಿರಿಸಿಕೊಂಡು ದಾರಿಹಿಡಿದು ಹೋಗುತ್ತಿರುವಾಗ, ಒಂದು ಹದ್ದು ಮೇಲಿನಿಂದ ಎರಗಿ ನಿನ್ನ ಮಗನನ್ನು ಕಚ್ಚಿಕೊಂಡು ಹೋಯಿತು. ನಾನೆಷ್ಟು ಪ್ರಯತ್ನ ಮಾಡಿದರೂ ನಿನ್ನ ಮಗ ನನ್ನು ಬಿಡಿಸಿಕೊಳ್ಳು ವುದಕ್ಕಾಗಲಿಲ್ಲ.'' ಎಂದು ದುಃಖಿಸಿದನು. ಇದನ್ನು ಕೇಳಿ ಕೃತವರ್ಮನು ಕೋಪಿಸಿಕೊಂಡು ಆ ಪಟ್ಟಣದ ಅರಸನಲ್ಲಿಗೆ ಹೋಗಿ ತನ್ನ ವೃತ್ತಾಂತವನ್ನೆಲ್ಲಾ ಬಿನ್ನವಿಸಿಕೊಂಡು ನ್ಯಾಯ ತೀರಿಸಿ ಕೊಡಬೇಕೆಂದು ಬೇಡಿಕೊಂಡನು.ರಾಜನು ಧರ್ಮಪಾಲನನ್ನು ಕರೆಸಿ ವಿಚಾ ರಿಸಿದನು. ಧರ್ಮಪಾಲನು «"ಮಹಾಸ್ವಾಮೀ, ಇವನ ಮಗನನ್ನು ಹದ್ದು ಕಚ್ಚಿಕೊಂಡು ಹೋದುದ: ಸತ್ಯ” ಎಂದು ಹೇಳಿದನು. ಕೃತವರ್ಮನು ಕ್ರೋಧ ದಿಂದ “ರಾಜನೇ! ಲೋಕದಲ್ಲಿ ಹೀಗಾಗುವುದುಂಟೇ ? ಇವನು ಮಹಾ ದುರ್ಜನನು. ಇವನನ್ನು ದಂಡಿಸಿ ನನ್ನ ಪುತ್ರನನ್ನು ನನಗೆ ಕೊಡಿಸಬೇಕು'ಎಂದು ಪ್ರಾರ್ಥಿಸಿದನು. ಧರ್ಮಪಾಲನು «ಮಹಾರಾಜನೇ ! ಲಾಲಿಸ ಬೇಕು. ನನ್ನ ಸಾವಿರ ಕಬ್ಬಿಣದ ಹೇರುಗಳನ್ನು ಇವನಲ್ಲಿ ಟ್ವಜ್ಜಿನು. ಇವನು ಅವುಗಳನ್ನೆಲ್ಲ ಇಲಿಗಳು ತಿಂದುವು ಎಂದು ಹೇಳಿದನು. ಹೀಗೂ ಲೋಕದ ಲ್ಲುಂಟೇ?'' ಎಂದು ಕೇಳಿದನು. ರಾಜನು ಇವರಿಬ್ಬರ ಯುಕ್ತಿಗೆ ಪರಮಾ ಶ್ಚರ್ಯ ಪಟ್ಟು ಇವರು ಯುಕ್ತಿಯಲ್ಲಿ ಒಬ್ಬರನ್ನೊಬ್ಬರು ವೂರಿದ್ದಾರೆಂದು ಭಾವಿಸಿ, ಕೃತವರ್ಮನಿಂದ ಧರ್ಮಪಾಲನಿಗೆ ಕಬ್ಬಿಣಕ್ಕೆ ಸಲ್ಲು ವಷ್ಟು ದ್ರವ್ಯ ವನ್ನು ಕೊಡಿಸಿಕೊಟ್ಟಿನು. ಕೃತವರ್ಮನ ಮಗನನ್ನು ಧರ್ಮಪಾಲನು ಅವ ನಿಗೆ ಒಪ್ಪಿಸಿಬಿಟ್ಟಿನು. ಆದಕಾರಣ ಸತ್ಯವಂತರ ಸಂಗಡ ಅಸತ್ಯವಾಗಿ ವರ್ತಿಸಿದರೆ ತಾನೇ ಕೆಟ್ಟು ಹೋಗುವನು, ಎಂದು ನೀತಿಯನ್ನು ಮಗನಿಗೆ ಎಷ್ಟೋ ಪರಿಯಿಂದ ಹೇಳಿದರೂ, ಮಗನು ತಂದೆಯ ಮಾತನ್ನು ಕೇಳದೆ ತಂದೆಯನ್ನು ಜರಿದು "ನಾನು ಹೇಳಿದಂತೆ ಮಾಡಿದರೆ ಒಳ್ಳೆ ಯದು ಇಲ್ಲದಿದ್ದರೆ ನಿನ್ನನ್ನು ಕೊಂದು ಹಾಕುತ್ತೇನೆ'ಎಂದು ಹೆದರಿಸಿದನು ತಂದೆ "ಮಗನು ಮಹಾಮೂರ್ಯನು. ಈಗ ಇವನು ಹೇಳಿದ ಹಾಗೆ ಮಾಡಬೇಕು. ಇಲ್ಲವಾದರೆ ಇವನು ನನ್ನನ್ನು ಕೊಂದುಹಾಕುವನು'ಎಂದು ಆ ಮರದ ಬಳಿ? ಹೋಗಿ ಅದರ ಹೊಟ್ಟಿ ಯೊ ಳಗೆ ಅಡಗಿ ಕುಳಿತುಕೊಂಡನು. ದುಷ್ಟಬುದ್ಧಿ ಮಾರನೆಯ ದಿನ ನ್ಯಾಯಾಧೀಶರಲ್ಲಿಗೆ ಹೋಗಿ “ತಾವು ವೃಕ್ಷದವರೆಗೆ ದಯಮಾಡಿಸಬೇಕು. ನನ್ನ ಸಾಕ್ಸಿ ಅದೇ” ಎಂದು ಪ್ರಾರ್ಥಿ ಸಿಕೊಂಡನು. ಈ ಮಾತನ್ನು ಕೇಳಿ ನ್ಯಾಯಾಧೀಶರು ರಾಜನಿಗೆ ಬಿನ್ನ ವಿಸಿದರು. ರಾಜನು ವೃಕ್ಷದ ಸಾಕ್ಷಿ ಚೋದ್ಯವಾಗಿದೆ; ಇದನ್ನು ನೋಡಬೇ ಕೆಂದು ಸಮಸ್ತ ಪರಿಜನ ಮಂತ್ರಿ ಮಂಡಲಿಕರು ನ್ಯಾಯಾಧೀಶರೊಡಗೂಡಿ ದುಷ್ಟಬುದ್ಧಿ ಸುಬುದ್ಧಿ ಸಮೇತವಾಗಿ ಆ ವೃಕ್ಸದ ಬಳಿಗೆ ಬಂದನು. ಮೊದಲು ಆ ವೃಕ್ಷವನ್ನು ಗಂಧಾಕ್ಸತೆ ಫಲಪುಪ್ಪಗಳಿಂದ ಅರ್ಚಿಸಿ "«ಇಲ್ಲಿದ್ದ ದ್ರವ್ಯವನ್ನು ತೆಗೆದುಕೊಂಡು ಹೋದವರಾರು?'' ಎಂದು ಕೇಳಿದನು. ಕೂಡಲೇ ಮರದೊ ಳಗಿಫಿಂದ “ಸುಬುದ್ಧಿ ತೆಗೆದುಕೊಂಡು ಹೋದನು,” ಎಂಬ ಧ್ವನಿ ಹೊರಟಿತು, ಈ ಧ್ವನಿಯನ್ನು ಕೇಳಿ ಅಲ್ಲಿ ಸೇರಿದ್ದ ನೆರನಿಯೆಲ್ಲ ಬೆರಗಾಯಿತು. ರಾಜನು ಸುಬುದ್ಧಿಯನ್ನು ಕರೆದು “ನಿನ್ನ ಮಾತು ಸೋತಿತು. ನೀನೇ ಅಪರಾಧಿ. ಇದಕ್ಕೆ ನೀನೇನು ಹೇಳುತ್ತೀಯೇ?'' ಎಂದು ಕೇಳಿದನು. ಸುಬುದ್ಧಿ “ಮಹಾ ಪ್ರಭೋ! ಈ ಕಾಲಕ್ಕೆ ಧರ್ಮವು ಮುಳುಗಿಹೋಯಿತು. ಇದರಲ್ಲಿ ಏನೋ ಮೋಸವಿದೆ. ನಿಜಾಂಶವು ಈಗಲೇ ಪ್ರಕಟವಾಗುವುದು. ತಾವು ನಿರೀಕ್ಸಿಸಬೇಕು.'' ಎಂದು ಹೇಳಿ ಆ ಮರಕ್ಕೆ ಬೆಂಕಿ ಹಚ್ಚಿದನು, ಮರಕ್ಕೆ ಬೆಂಕಿ. ಹತ್ತಿಕೊಂಡು ಅದು ಸುಡುವುದಕ್ಕಾರಂಭವಾದೊಡನೆಯೇ ಒಳಗಿದ್ದ ಬಾಹ್ಮಣನು ಇನ್ನೇನು ನನಗೆ ಮೃತ್ಯು ಸನ್ಸಿಹಿತವಾಯಿತೆಂದು ಹೊಗೆಯನ್ನೂ ಉರಿಯ ಬೇಗೆಯನ್ನೂ ತಾಳಲಾರದೆ ಉಬ್ಬಸಗೊಂಡು ಮರದ ಹೊಟ್ಟಿಯೊಳಗಿಂದ ಹೊರಬಿದ್ದನು, ಇದನ್ನು ನೋಡಿ ರಾಜ ನಿಗೂ ಅಲ್ಲಿ ನೆರೆದಿದ್ದ ಜನರಿಗೂ ನಿಜವಾದ ವಿದ್ಯಮಾನ ಗೊತ್ತಾಗಿ ಹೋಯಿತು. ರಾಜನು ಬಹಳ ಕೋಪಗೊಂಡು ಸುಬುದ್ಧಿಯ ದ್ರವ್ಯವನ್ನೆಲ್ಲ ಕೊಡಿಸಿ, ದುಷ್ಟಬುದ್ಧಿಯ ಬಾಯಿಯನ್ನು ಹೊಯ್ಯಿಸಿ, ಕಣ್ಣುಗಳನ್ನು ಕೀಳಿಸಿದನು. ಆದ್ದರಿಂದ ಈ ದುಷ್ಪಬುದ್ಧಿಗೂ ಸುಬುದ್ಧಿಗೂ ಸ್ನೇಹೆವಾ ದೆಂದು, ಈ ಸಂಜೀವಕನಿಗೂ ಸಿಂಹಕ್ಕೂ ಸ್ನೇಹ ಕೂಡುವುದು. ಇದು ಎಂದಿಗೂ ಆಗದ ಮಾತ್ತು ಎಂದು ದಮನಕವು ಕರಟಕನಿಗೆ ಹೇಳಿತು. ಇತ್ತ ಆ ಸಂಜೀವಕನಿಗೂ ಸಿಂಹೆಕ್ಟೂ ಘೋರ ಯುದ್ಧ ವಾಯಿತು, ಕೊನೆಯಲ್ಲಿ ಸಿಂಹವು ಸಂಜೀವಕನನ್ನು ಕೊಂದುಬಿಟ್ಟತು. ಸಂಜೀವಕವು ಸತ್ತು ಹೋನೊಡನೆಯೇ ಆ ಜಂಬುಕಗಳೂ ಸಿಂಹವೂ ಅದನ್ನು ತಿಂದು ತೃಪ್ತಿ ಹೊಂದಿ, ಜಂಬುಕಗಳು ಎಂದಿನಂತೆ ತಮ್ಮ ಪ್ರಧಾನಿಕಾರ್ಯವನ್ನು ನಡೆಸುತ್ತ ಸುಖಸಂತೋಷದಿಂದಿದ್ದುವು.
ಹೀಗೆ ಈ ಕಥಾಸಮೂಹವನ್ನು ವಿಷ್ಣುಶರ್ಮನು ಆ ಮೂವರು ರಾಜಪುತ್ರರಿಗೆ ಹೇಳಿ ಮಿತ್ರ ಭೇದವೆಂಬ ಪ್ರಥಮತಂತ್ರವನ್ನು ಮುಗಿಸಿದನು.

“ ರಾಜಪುತ್ರರೇ! ಕೇಳಿ. ಬುದ್ಧಿವಂತರಾದ ಮಿತ್ರರು ತಮ್ಮಲ್ಲಿ ದ್ರವ್ಯವಾಗಲಿ, ಸಕಲಸಾಧನ ಸಂಪತ್ತಾಗಲಿ, ಇರದೆ ಇದ್ದರೂ ಪರಸ್ಪರ ಅತ್ಯಂತ ಉಪಯೋಗಕ್ಕೆ ಬೀಳುತ್ತಾರೆ. ಹೀಗೆಯೇ ಕಾಗೆ ಇಲಿ. ಆಮೆ, ಎರಳೆ ಇವು ಅನೋನ್ಯದಿಂದ ರಕ್ಷಿಸಿಕೊಂಡವು. ”` ಎಂದು ಹೇಳುತ್ತ, ವಿಷ್ಣು ಶರ್ಮನು ರಾಜಪುತ್ರರಲ್ಲಿ ಕೇಳುವ ಕುತೂಹಲವನ್ನು ಕೆರಳಿಸಿದನು. ರಾಜಕುಮಾರರು ಅದು ಹೇಗೆ ನಡೆಯಿತು? ತಿಳಿಸು? ಎಂದು ಕೇಳಿದುದಕ್ಕೆ ಬ್ರಾಹ್ಮಣನು ಮುಂದೆ ಹೇಳತೊಡಗಿದನು.

ಕಥೆಃ- ಪಾರಿಯಾತ್ರೆಯೆಂಬ ವನದಲ್ಲಿ ಒಂದು ವಟವೃಕ್ಷದ ಮೇಲೆ ಮೇಘೆವರ್ಮವೆಂಬ ಒಂದು ಕಾಗೆ ತನ್ನ ಬಂಧುಬಳಗ, ಪುತ್ರಮಿತ್ರ ಕಳತ್ರರನ್ನು ಕೂಡಿಕೊಂಡು ಸುಖದಿಂದ ಇರುತ್ತಿತ್ತು. ಒಂದು ಪರ್ವತದ ಕೋಡುಗಲ್ಲಿನ ಗುಹೆಯೊಳಗೆ ಚಿತ್ರಗ್ರೀವವೆಂಬ ಪಾರಿವಾಳವು ತನ್ನ ಪರಿವಾರ ಸಮೇತವಾಗಿ ವಾಸವಾಗಿತ್ತು. ಒಂದಾನೊಂದು ದಿವಸ ಆ ಮೇಫೆವರ್ಮವೆಂಬ ಕಾಗೆ ಆಹಾರ ನಿಮಿತ್ತವಾಗಿ ಅಲೆಯುತ್ತ ಒಂದು ಪಟ್ಟಣಕ್ಕೆ ಹೋಗುತ್ತಿರುವಾಗ ಮಾರ್ಗದಲ್ಲಿ ವಿಂಧ್ಯಕನೆಂಬ ಒಬ್ಬ ವ್ಯಾಧನು ನಾನಾಪ್ರಕಾರವಾದ ಬಲೆಗಳನ್ನು ತೆಗೆದುಕೊಂಡು ಬರುವುದನ್ನು ಕಂಡಿತು. ಕಂಡು, ಆ ಕಾಗೆ “ ನಾನು ಆಹಾರಕ್ಕಾಗಿ ಹೋದರೆ, ಈ ಬೇಡನು ನನ್ನ ಪರಿವಾರವಿರುವ ಸ್ಥಳಕ್ಕೆ ಹೋಗಿ ಬಲೆಯನ್ನೊಡ್ಡಿ ಧಾನ್ಯಗಳನ್ನು ಎರಚಿದರೆ ನನ್ನ ಪರಿವಾರವೆಲ್ಲ ದುರಾಸೆಯಿಂದ ಬಲೆಯೊಳಗೆ ಸಿಕ್ಕಿಕೊಳ್ಳುವುದು ಎಂದು ತಿಳಿದು, ಆ ಸಮಯದಲ್ಲಿ ಆಹಾರನಿಮಿತ್ತವಾಗಿ ಹೋಗುವುದು ಸರಿಯಲ್ಲವೆಂದು ಆದು ತನ್ನ ಮರಜೆಡಿಗೆ ಬಂದಿತು. ಬಂದು,ಈ ಸಂಗತಿಯನ್ನು ತನ್ನ ಪರಿವಾರಕ್ಕೆ ತಿಳಿಸಿ, ಹೊರಗೆ ಹೋಗದಂತೆ ಕಟ್ಟು ಮಾಡಿತು. ಅಷ್ಟರಲ್ಲಿ ಆ ಬೇಟೆಗಾರನು ಬಂದು, ಬಲೆಯನ್ನು ಪಸರಿಸಿ, ಜತೆ ಅದರಲ್ಲಿ ಧಾನ್ಯವನ್ನಿಟ್ಟು ದೂರದಲ್ಲಿ ಕುಳಿತುಕೊಂಡನು. ಇತ್ತ ಚಿತ್ರಗ್ರೀವನೆಂಬ ಪಾರಿವಾಳವು ತನ್ನ ಪರಿವಾರವನ್ನು ಕೂಡಿಕೊಂಡು ಆಹಾರ ನಿಮಿತ್ತವಾಗಿ ತಿರುಗುತ್ತ ಬಲೆಯೊಡ್ಡಿರುವ. ಸ್ಥಳಕ್ಕೆ ಬಂದು ವಿಚಾರ ಮಾಡದೆ ಧಾನ್ಯಕ್ಕಾಗಿ ಆಶೆಪಟ್ಟು ಮೋಸದಿಂದ ಬಲೆಯಲ್ಲಿ ಪರಿವಾರ ಸಮೇತ ಸಿಕ್ಕಿಬಿದ್ದಿತು ಆಗ, ಬಹಳ ಕಂಗೆಟ್ಟು ಇದಕ್ಕೆ ಉಪಾಯವೇನೆಂದು ಯೋಚಿಸಿ, “ಒಂದೊಂದೇ ಹೋಗುವುದು ಸಾಧ್ಯವಿಲ್ಲ. ನಾವೆಲ್ಲ ಒಮ್ಮೆಗೆಯೇ ಬಲೆಯೊಡನೆ ಹಾರಿಹೋಗಬೇಕು. ಎಂದು ಬಲೆಯನ್ನು ಕಿತ್ತು ಕೊಂಡು ಬಹಳ ದೂರ ಹಾರಿಹೋದುವು. ಇದನ್ನು ನೋಡಿ, ಬೇಟೆಗಾರನು ಬಹಳ ಆಶ್ಚರ್ಯಪಟ್ಟು, “ದ್ರವ್ಯವು ಬರಬೇಕಾದಾಗ ತೆಂಗಿನಕಾಯಿಯಲ್ಲಿ ನೀರಿನ ಹಾಗೆ ಬಂದು “ಕೂಡಿಕೊಳ್ಳುತ್ತದೆ. ಹೋಗಬೇಕಾದಾಗ ಆನೆ ನುಂಗಿದ ಬೆಳವಲ ಕಾಯಿಯಂತೆ ಮಾಯವಾಗುತ್ತದೆ. ಎಂದು ತಿಳಿದು ಮನಸ್ಸಿಗೆ ಧೈರ್ಯ ತಂದುಕೊಂಡು ಮನೆಗೆ ಹೊರಟುಹೋದನು. ಇತ್ತ ಆ ಬಲೆಯನ್ನು ಕೊಂಡು ಹೋಗುತ್ತಿರುವ ಪಾರಿವಾಳಗಳನ್ನು ಆ ಮೇಘವರ್ಮನೆಂಬ. ಕಾಗೆ ಕಂಡು “ ಪಕ್ಷಿಗಳು ಬಹು ಬುದ್ಧಿಯಿಂದ ಬಲೆಯನ್ನು ಕಚ್ಚಿಕೊಂಡು ಹಾರಿಹೋಗುತ್ತಿವೆ. ಈ ಆಶ್ಚರ್ಯವು ನೋಡತಕ್ಕುದು” ಎಂದು ಅವುಗಳ ಬೆಂಗಡೆಯಲ್ಲಿಯೇ ಹಾರಿಹೋಯಿತು. ಸ್ವಲ್ಪ ಹೊತ್ತಿಗೆ ಚಿತ್ರಗ್ರೀವವೆಂಬ ಪಾರಿವಾಳವು ತನ್ನ ಸಮೂಹದೊಡನೆ ಮಂದರಗಿರಿಯ ತಪ್ಪ ಲಿಗೆ ಬಂದು ತನ್ನ ಪ್ರಾಣಸಖನಾದ ಹಿರಣ್ಯವರ್ಮನೆಂಬ ಮೂಷಕರಾಜನ ಬಳಿಯನ್ನು ಸಾರಿ, ತಮ್ಮನ್ನು ಈ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಪ್ರಾರ್ಥಿಸಿತು. ಆ ಇಲಿ ಬಲೆಯನ್ನು ಕಡಿದು ಆ ಪಕ್ಷಿಗಳ ಬಂಧನವನ್ನು ನಿವಾರಿಸಿ, ತನ್ನ ಮಿತ್ರನಾದ ಚಿತ್ರಗ್ರೀವ ಮೊದಲಾದ ಪಾರಿವಾಳಗಳಿಗೆ ಬಹಳ ಸನ್ಮಾನವನ್ನು ಮಾಡಿತು ಆ ಇಲಿ ಚಿತ್ರಗ್ರೀವ ವನ್ನು ಕುರಿತು “ ನನ: ಬಹೆಳ ಈ ಸ ಆದರೂ ತ ಬಲೆ ಗ್ರೀನವು “ ರಘುನಾಥನಿಗೆ ಸೀತಾದೇವಿಯ ಮ ಬಲಿ ಚಕ್ರವರ್ತಿಗೆ ಬಂಧೆನನಾಯಿತು; ಶೂದ್ರಸನಿಗೆ ಚೌನ್ಯದ ಆರೋಪವು ಹತ್ತಿತು; ವಿಶಿಂ ತ್ಯನು ತನ್ನ ಪ್ರುಣ ಹೋಗುವ ಕಾಲದಲ್ಲಿಯೂ ಕಾಗೆಯ ಮಾಂಸ ಚ ಅಪೇಕ್ಷೆಸಟ್ಟ ನು; ಪಾಂಡವರು ವನವಾಸಕ್ಕೆ ಹೋದಣ; ಹರಿಶ ಶ್ಚಂದ್ರನು ಚಾಂಡಾಲನಿಗೆ ರ ನು ಅದ್ದರಿಂದ ಎಂಥ ನೊಡ ವರಾದರೇನು? ಕಾಲಗತಿಯನ್ನು ಮೀರಲಾರಯ, ಜಹ್ವಾಲಂಸಟತನ ದಿಂದ ಅನೇಕರು ಕೆಟ್ಟುಹೋಗಿದ್ದಾ ಈ” ಎಂದು ಶೇಳಿತ್ತು ಅದನ್ನು ಕೇಳಿ ಆ ಮೂಹಕವು"“ ಕುಳ್ಳಿರುವಫ್ಲಿ ನಡೆಯುವಲ್ಲಿ, ಮಾಡನಾಡುನಲ್ಲಿ, ದೇಹ ರಕ್ಷಣೆಯಲ್ಲಿ, ಮನೆಯನ್ನು ಸ್ರವೇಶಿಸುವಲ್ಲಿ, ಊಟ ಮಾಡುವಲ್ಲಿ ಅರ ಸನು ಮೊದಲುಗೊಂಡು ಎಲ್ಲರೂ ಬಹಳ ಎ? ಎಂದು ಚಿತ್ರ ಗ್ರೀನಕ್ಕ ಬುದ್ಧಿ ಹೇಳಿ ಕಳಿಸಿತು. ಇದನ್ನೆಲ್ಲ ಆ ಮೇಘೆವರ್ಮವೆಂಬ ಕಾಗೆ ನೋಡಿ ಜೋಡ್ಯ ಪಟ್ಟು, "ಈ ಇಲಿಯೊಡನೆ ಸ್ನೇಹ ಮಾಡಿಕೊಳ್ಳ ಬೇಕು,'' ಎಂದು ನಿಶ್ಚಯಿಸಿ, ಆ ಇಲಿ ಇರುವ ಬಿಲಕ್ಕೆ ಬಂದು ನಿಂತುಕೊಂಡಿತು. ಈ ಕಾಗೆಯನ್ನು ನೋಡಿ, ಮೂಸಕವು ಬೆರಗಾಗಿ «-ನೀನಾರು?'' ಎಂದು ಕೇಳಿತು. «ನಾನು ತ್ರಗ್ರೀವನ ಪ್ರಾಣಸಖನಾದ ಮೇಘವರ್ಮವೆಂಬ ಕಾಗೆ. ಸೀನು ಧನ್ಯಾ ರಿಂ ತ್ಮ ನು. ನಿನ್ನ ಸ (ಹವನ ಅಫೇಸ್ಸೃಸಿ ಬಂದಿದ್ದೆ ಕಫ ಪೌಷ ಮೇಘವರ್ಮವು ಹೇಳಿತು. ಆ ಹಿರಣ್ಯನರ್ಮುನೆಂಬ ಇಲಿ "ನಿಮಗೂ ನಮಗೂ ಸ್ನೇಹವು ಹೇಗೆ ಕೂಡೀತು? ಲೋಕದಲ್ಲಿ ಸಮಾನಸ್ವಂಧರಾದ ವರಿಗೆ ಮಾತ್ರ ಮಿತ್ರತ್ವನ್ರ ಹೊಂದುತ್ತದೆ. ನಾನು ನಿನ್ನ ಆಹಾರ; ನೀನು ನನ್ನ ಆಹಾರ; ಓನಗಿಮ್ದದೆರಿಂದ್ಯ ನಮ್ಮಿಬ್ಬರಲ್ಲಿ ಸ್ನೇಹ ಖಣಾನುಬಂಧ ಕೂಡಿ ನಡೆಯಳಾರದು- ನಿನ್ನ ನ್ರೀತಿ ನನ್ನ ವಿಪತ್ತಿಗೆ ಕಾರಣವಾಗುವುದು, ಎಸ? ಹಿಂದು ನರಿಯ ಸ್ನೇಹದಿಂದ ಬಂಧನ ಪ್ರಾಸ್ತವಾ ಇದಂತೆ, ಬನಿ ರ್ಬಿ ಎಐ. ಬಂಭಿನ್ರೊಂಬೂದೀತು ಎಂದು ಹೇಳಿತು. ಈ ಮಾತನ್ನು ಮೇಘವರ್ಮವು ಕೇಳಿ, ಎರಳೆಗೆ ಬಂಧನವು ಹೇಗೆ ಪ್ರಾಪ್ತವಾಯಿತು. ಹೇಳುವೆಯಾ? '' ಎಂದು ಪ್ರಶ್ನಿ ಸಿತು ಅದಕ್ಕೆ ಇಲಿ ಹೇಳುತ್ತದೆ. "ಈ ಇಲಿಯೊಡನೆ ಸ್ನೇಹ ಮಾಡಿಕೊಳ್ಳ ಬೇಕು,'' ಎಂದು ನಿಶ್ಚಯಿಸಿ, ಆ ಇಲಿ ಇರುವ ಬಿಲಕ್ಕೆ ಬಂದು ನಿಂತುಕೊಂಡಿತು. ಈ ಕಾಗೆಯನ್ನು ನೋಡಿ, ಮೂಸಕವು ಬೆರಗಾಗಿ -ನೀನಾರು?'' ಎಂದು ಕೇಳಿತು. ನಾನು ತ್ರಗ್ರೀವನ ಪ್ರಾಣಸಖನಾದ ಮೇಘವರ್ಮವೆಂಬ ಕಾಗೆ. ಸೀನು ಧನ್ಯಾ ರಿಂ ತ್ಮ ನು. ನಿನ್ನ ಸ (ಹವನ ಅಫೇಸ್ಸೃಸಿ ಬಂದಿದ್ದೆ ಕಫ ಪೌಷ ಮೇಘವರ್ಮವು ಹೇಳಿತು. ಆ ಹಿರಣ್ಯನರ್ಮುನೆಂಬ ಇಲಿ "ನಿಮಗೂ ನಮಗೂ ಸ್ನೇಹವು ಹೇಗೆ ಕೂಡೀತು? ಲೋಕದಲ್ಲಿ ಸಮಾನಸ್ವಂಧರಾದ ವರಿಗೆ ಮಾತ್ರ ಮಿತ್ರತ್ವನ್ರ ಹೊಂದುತ್ತದೆ. ನಾನು ನಿನ್ನ ಆಹಾರ; ನೀನು ನನ್ನ ಆಹಾರ; ಓನಗಿಮ್ದದೆರಿಂದ್ಯ ನಮ್ಮಿಬ್ಬರಲ್ಲಿ ಸ್ನೇಹ ಖಣಾನುಬಂಧ ಕೂಡಿ ನಡೆಯಳಾರದು- ನಿನ್ನ ನ್ರೀತಿ ನನ್ನ ವಿಪತ್ತಿಗೆ ಕಾರಣವಾಗುವುದು. ಎರಗೆ ಒಂದು ನರಿಯ ನ್ನಹದಿಂದ ಬಂಧನ ಪ್ರಾಪ್ತವಾದಂತೆ, ನನಗೂ ನಿನ್ನ ಯೋಗದಿಂದ ಬಂಧಪುಂಟಾದೀತು. ಎಂದು ಹೇಳಿತು. ಈ ಮಾತನ್ನು ಮೇಘವರ್ಮವು ಕೇಳಿ, ಎರಳೆಗೆ ಬಂಧನವು ಹೇಗೆ ಪ್ತವಾಯಿತು. ಹೇಳುವೆಯಾ? ಎಂದು ಪ್ರಶ್ನಿ ಸಿತು ಅದಕ್ಕೆ ಇಲಿ ಹೇಳುತ್ತದೆ.

ಕಥೆ: ಮಗಧ ದೇಶ. ಅಲ್ಲಿ ಚಂಸಕಾರಣ್ಯ. ಅದರಲ್ಲಿ ಒಂದು ಎರೆ ಳೆಯೂ, ಒಂದು ಕಾಗೆಯೂ ಸ್ನೇಹವಾಗಿದ್ದುವು. ಎರಳೆಯಾದರೋ ತನ್ನ ಮನಸ್ಸಿಗೆ ಬಂದಂತೆ ಒಳ್ಳೆಯ ಎಳೆ-ಎಳೆಯ ಹುಲ್ಲನ್ನು ಮೆದ್ದು, ಪುಷ್ಪ ಶರೀರವಾಗಿದ್ದಿತು. ಇದನ್ನು ಒಂದುದಿನ ನರಿ ಕಂಡು ತನ್ನ ಮನಸ್ಸಿನಲ್ಲಿ 4 ಷು ಮೃಗವಾದರೋ ನನಗೆ ಸುಲಭ ಸಾಧ್ಯವಲ್ಲ; ಇದನ್ನು ಕಪಟದಿಂದ ಕೊಲ್ಲಬೇಕು'' ಎಂದು ನಿಶ್ಚಯಿಸಿಕೊಂಡು,, ಎರಳೆಯ ಸಮೀಪಕ್ಕೆ ಹೋಗಿ, “ ಎಲ್ಫೆ ಸ್ನೇಹಿತನೇ, ಕ್ಸೇಮವಷ್ಟೆ!'' ಎಂದು ಕೇಳಿತು, ಆ ಮಾತಿಗೆ ಎರಳೆ “ ನೀನಾರು?'' ಎಂದು ಕೇಳಿತು, “ನಾನು ಕ್ಷುದ್ರಬುದ್ಧಿ ಯೆಂಬ ನರಿ. ಈ ಅರಣ್ಯದಲ್ಲಿ ಆಪ್ತಹೀನನಾಗಿ ಒಬ್ಬನೇ ತಿರು ಗುತ್ತಿದ್ದೇನೆ ಇಂದು ನಿನ್ನನ್ನು ನೋಡಿ, ನನಗೆ ಬಹೆಳ ಸಂತೋಷ ವಾಗಿದೆ, ಆದುದರಿಂದ ನಾನು ನಿನ್ನ ಸನ್ನಿಧಿಯಲ್ಲಿ ಸೇವಾತತ್ಸರನಾಗಿರ ಬೇಕೆಂದು ಬಯಸುತ್ತೇನೆ'' ಎಂದು ನರಿ ಹೇಳಿತು. ಈ ಮಾತಿಗೆ ಎರಳೆ ಒಡಂಬಟ್ಟಿ ತು, ಅಷ್ಟು ಹೊತ್ತಿಗೆ ಸೂರ್ಯಾಸ್ತವಾಗಲು ಈ ಉಭಯಪ್ರಾಣಿ ಗಳು ಕೂಡಿಕೊಂಡ್ಕು ಚಂಪಕ ವೃಕ್ಷದ ಬುಡದಲ್ಲಿ ಬಂದು ಕುಳಿತು ಕೊಂಡುವುು ಆ ಮರದ ಮೇಲಿದ್ದ ಸುಬುದ್ಧಿಯೆಂಬ ಕಾಗೆ ಎರಳೆಯ ಸ್ನೇಹಿತನಾಗಿದ್ದಿತು. ಅದು ಈ ನರಿಯನ್ನು ನೋಡಿ, ಎರಳೆಯನ್ನು ಜ್ಹೇಶಿಸಿ “ಎಲೇ ಮಿತ್ರನೆ! ಈ ಎರಹನೆಯ ಪ್ರಾಣಿ ಯಾವುದು?'' ಎಂದು ಕೇಳಿತು. ಅದಕ್ಕೆ ಎರಳೆ “ಈ ನರಿ ನನ್ನ ಸಂಗಡ ಸ್ನೇಹ ವನ್ನು ಕೋರಿ ಬಂದಿದೆ. ಈಗ ನಾವಿಬ್ಬರೂ ಗೆಳೆಯರಾಗಿದ್ದೇವೆ'' ಎಂದು ಹೇಳಿತು. ಇದನ್ನು ಕೇಳಿ ಕಾಗೆ, "" ಮಿತ್ರನೆ, ಅಕಸ್ಮಾತ್ತಾಗಿ ಒಂದು ಅಪರಿ. ಚಿತ ಪ್ರಾಣಿ ಬಂದರೆ, ಅದರ ಮೇಲೆ ವಿಶ್ವಾಸ ಮಾಡಬಾರದು. ಅಲ್ಲದೆ ಕುಲಶೀಲಗಳನ್ನು ತಿಳಿಯದವರೆಗೆ ಯಾರಿಗೂ ಸ್ಥಳನನ್ನು ಕೊಡಬಾ ರದು. ಒಂದು ವೇಳೆ ಆಶ್ರಯವನ್ನು ಕೊಟ್ಟರೆ, ಬೆಕ್ಕಿಗೆ ಹದ್ದು ಆಶ್ರಯ ಕೊಟ್ಟು ಮರಣ ಹೊಂದಿದಂತಾಗುವುದು” ಎಂದು ಹೇಳಿತು. ಎರಳೆ ಹದ್ದು ಬೆಕ್ಕಿನ ಕೈಯಲ್ಲಿ ಹೇಗೆ ಮರಣ ಹೊಂದಿತು, ತಿಳಿಸು” ಎಂದು ಕೇಳಲು ಕಾಗೆ ಹೇಳುತ್ತದೆ.

ಕಥೆ:- ಭಾಗೀರಥಿಯ ತೀರದಲ್ಲಿ ತ್ರಿಕುಟಪರ್ವತದ ಮೇಲೆ ಒಂದು ವಟವೃಕ್ಷ, ಅದರ ಬುಡದಲ್ಲಿ ಗೃಧ್ರ ಪಕ್ಷಿ ನಖನೇತ್ರರಹಿತವಾಗಿ ಮನೆ ಮಾಡಿಕೊಂಡಿರುತ್ತಿತ್ತು. ಅದರ ಸಂರಕ್ಷಣೆಗಾಗಿ ಎರಡನೆಯ ಪಕ್ಷಿಗಳು ತಂತಮ್ಮ ಆಹಾರದಲ್ಲಿ ಸ್ವಲ್ಪ ಸ್ವಲ್ಪ ಭಾಗವನ್ನು ಕೊಡುತ್ತಿದ್ದುವು. ಅದರಿಂದ ಈ ಹದ್ದು ಉಪಜೀವಿಸಿಕೊಂಡಿತ್ತು. ಒಂದು ದಿನ ದೀರ್ಘ ಕರ್ಣವೆಂಬ ಬೆಕ್ಕು ಪಕ್ಷಿಯ ಮರಿಗಳನ್ನು ಭಕ್ಷಿಸುವ ನಿಮಿತ್ತದಿಂದ ಆ ಮರದ ಕೆಳಗೆ ಬಂದಿತು. ಬೆಕ್ಕನ್ನು ಪಕ್ಷಿಯ ಮರಿಗಳು ನೋಡಿ ಭಯದಿಂದ ದೊಡ್ಡ ಶಬ್ದ ಮಾಡಿದವು. ಈ ಶಬ್ದವನ್ನು ಕೇಳಿ ಆ ಮುದಿ ಹದ್ದು (ನೀವು ಏನು ಕಾರಣ ಭೀತಿ ಗೊಂಡಿರಿ, ಇಲ್ಲಿ ಯಾರು ಬಂದಿದ್ದಾರೆ ?” ಎಂದು ಮರಿಗಳನ್ನು ಕೇಳಿತು. ಅಷ್ಟರಲ್ಲಿ ಈ ಬೃಹದಾಕಾರದ ಹದ್ದನ್ನು ನೋಡಿ ಬೆಕ್ಕು ಗಾಬರಿಯಾಗಿ ಮನಸ್ಸಿ ನಲ್ಲಿ ಧೈರ್ಯವನ್ನು ತಂದುಕೊಂಡು “ಈ ಶತ್ರುವಿನ ಕೈಯೊಳಗಿಂದ ದಾಟ ಹೋಗಲು ನನಗೆ ಶಕ್ತಿ ಸಾಲದು, ಆದ್ದರಿಂದ ಇದರ ಸಮೀಪಕ್ಕೆ ಮೊದಲು ಹೋಗುತ್ತೇನೆ. ಆ ಮೇಲೆ ಏನು ಆಗುತ್ತದೆಯೋ ನೋಡೋಣ’ ಎಂದು ನಿಶ್ಚಯಿಸಿ ಪಕ್ಷಿಯ ಸಮೀಪಕ್ಕೆ ಹೋಗಿ ಮೆಲ್ಲನೆ “ಎಲೇ ಸಮರ್ಥನೆ, ನಿನ್ನನ್ನು ವಂದಿಸುತ್ತೇನೆ’’ ಎಂದು ಹೇಳಿತು. ಗೃಧ್ರ ಪಕ್ಷಿ ಈ ಮಾತನ್ನು ಕೇಳಿ ‘ನೀನು ಯಾರೆಂದು ವಿಚಾರಿಸಿತು. ಅದಕ್ಕೆ ಬೆಕ್ಕು “ನಾನು ದೀರ್ಘ ಕರ್ಣನೆಂಬ ಮಾರ್ಜಾಲನು’ ಎಂದು ಉತ್ತರ ಕೊಟ್ಟಿತು. ಇದನ್ನು ಕೇಳಿ ಗೃಧ್ರ ಪಕ್ಷಿ ಕೋಪಿಸಿಕೊಂಡು “ನೀನು ಬೇಗನೆ ಈ ಸ್ಥಳವನ್ನು ಬಿಟ್ಟು ಹೊರಟು ಹೋಗು, ಇಲ್ಲವಾದರೆ ವ್ಯರ್ಥವಾಗಿ ಸತ್ತು ಹೋಗುತ್ತಿಯೇ” ಎಂದು ಗದ್ದರಿಸಿತು. ಈ ಮಾತಿಗೆ ಮಾರ್ಜಾಲವು “ನಾನು ನನ್ನ ವೃತ್ತಾಂ ತವನ್ನು ತಮ್ಮಲ್ಲಿ ಅರಿಕೆಮಾಡಿಕೊಳ್ಳುತ್ತೇನೆ. ಆ ಮೇಲೆ ಕೊಲ್ಲಬೇಕೆಂದು ಅಪೇಕ್ಷಿಸಿದರೆ ಕೊಲ್ಲಬಹುದು’ ಎಂದು ಹೇಳಿತು. ನೀನು ಇಲ್ಲಿಗೆ ಬಂದ. ಕಾರಣವೇನು ಎಂದು ಗೃಧ್ರ ಪಕ್ಷಿ ಕೇಳಿದುದಕ್ಕೆ ಬೆಕ್ಕು “ನಾನು ಗಂಗಾತೀರ ದಲ್ಲಿ ನಿತ್ಯವೂ ಗಂಗಾಸ್ನಾನಮಾಡಿ ನಿಯಮ, ವ್ರತಗಳನ್ನು ಆಚರಿ ಸುತ್ತ ಸತ್ಕಾಲಕ್ಷೇಪ ಮಾಡುತ್ತಿದ್ದೇನೆ. ನೀನು ಬಹಳ ಪುಣ್ಯಶಾಲಿ ಎಂಬು ದನ್ನು ಕೇಳಿ ನಿನ್ನ ದರ್ಶನಾಭಿಲಾಷೆಯಿಂದ ಬಂದೆನು. ನೀನಾದರೋ ಧರ್ಮ ವನ್ನು ಬಿಟ್ಟು ನನ್ನನ್ನು ಕೊಲ್ಲುವುದಕ್ಕೆ ಸಿದ್ಧನಾದೆ. ಸಭ್ಯರಾದ ಗೃಹಸ್ಥರ ಆಚರಣೆ ಹೀಗಿರುವುದನ್ನು ನಾನು ಎಲ್ಲಿಯೂ ಇದುವರೆಗೆ ನೋಡಲಿಲ್ಲ. ಸಾತ್ವಿಕರಾದವರು ತಮ್ಮ ಮನೆಗೆ ಶತ್ರುಗಳು ಬಂದರೂ ಅವರನ್ನು ಸತ್ಕರಿಸು ತ್ತಾರೆ. ಮರವು ತನ್ನನ್ನು ಕಡಿಯುವವನಿಗೂ ನೆಳಲು ಕೊಡುತ್ತದೆ. ಸಾಧು ಜನರು ಎಲ್ಲರನ್ನೂ ದಯೆಯಿ ದ ಕಾಪಾಡುತ್ತಾರೆ. ಚಂದ್ರಸೂರರು ಚಂಡಾ ಲರ ಗೃಹಗಳನ್ನೂ ಪ್ರಕಾಶಗೊಳಿಸುತ್ತಾರೆ” ಎಂದು ಹೇಳಿತು, ಗೃಧ್ರ ಪಕ್ಷಿ ಈ ಮಾತುಗಳನ್ನು ಕೇಳಿ “ಮಾರ್ಜಾಲವು ಮಾಂಸಾಹಾರಿ ಎಂದೂ, ಹಿಂಸ್ಕೃ ಪ್ರಾಣಿ ಎಂದೂ ಕೇಳಿದ್ದೇನೆ. ನಿಜವಲ್ಲವೆ?” ಎಂದು ಪ್ರಶ್ನಿಸಿತು. ಇದನ್ನು ಕೇಳಿದ ಕೂಡಲೆ ಬೆಕ್ಕು “ನಾನು ಭೂಮಿಯ ಮೇಲೆ ಪ್ರತಿಜ್ಞೆ ಮಾಡಿ ಹೇಳು ತೇನೆ. ನಾನು ಧರ್ಮಶಾಸ್ತ್ರ ಶ್ರವಣದಿಂದ ಪರಮ ವೈರಾಗ್ಯಶಾಲಿಯಾಗಿ, ದುಷ್ಕರ್ಮವನ್ನು ತ್ಯಜಿಸಿದ್ದೇನೆ. ಏಕೆಂದರೆ, ಅನೇಕ ಶಾಸ್ತ್ರಗಳಲ್ಲಿ ಹಿಂಸೆಯಂಥ ಪಾತಕಕ್ಕಿಂತ ಹೆಚ್ಚಿನ ಪಾತಕವಿಲ್ಲವೆಂದು ಉಕ್ತವಾಗಿದೆ. ಆದ್ದರಿಂದ ಬೇರೆಯವರ ಪ್ರಾಣವನ್ನು ತೆಗೆದು ಸುಖವನ್ನನುಭವಿಸುವವರು ನರಕಭಾಗಿ ಗಳಾಗುವರು ಎಂದು ಹೇಳಿತು. ಈ ಮಾತಿನಲ್ಲಿ ಗೃಧ್ರ ಪಕ್ಷಿಗೆ ವಿಶ್ವಾಸ ಹುಟ್ಟಿ, ಆ ಮಾರ್ಜಾಲವನ್ನು ತನ್ನ ಮನೆಯಲ್ಲಿಟ್ಟು ಕೊಂಡಿತು. ಆಮೇಲೆ ಆ ಮಾರ್ಜಾಲವು ನಿತ್ಯದಲ್ಲಿಯೂ ಎರಡನೆಯ ಸ್ಥಳದಿಂದ ಪಕ್ಷಿಗಳ ಮರಿ ಗಳನ್ನು ತಂದು ಭಕ್ಷಿಸುತ್ತ ಇರತೊಡಗಿತು. ಒಮ್ಮೆ ತನ್ನ ಮರಿಗಳನ್ನು ಕಳೆದುಕೊಂಡ ಒಂದು ಪಕ್ಷಿ ಬಹಳ ಕಳವಳಗೊಂಡು, ತನ್ನ ಸಹವಾಸಿಯ ಪಕ್ಷಿಗಳನ್ನೆಲ್ಲ ಕೂಡಿಕೊಂಡು ಮರಿಗಳನ್ನು ಶೋಧಿಸುತ್ತ ತಿರುತಿರುಗಿ ಗೃಧ್ರ ಪಕ್ಷಿಯಿರುವ ಸ್ಥಳಕ್ಕೆ ಬಂದಿತು. ಇದನ್ನು ನೋಡಿದ ಕೂಡಲೇ ಆ ಬೆಕ್ಕು ಅಲ್ಲಿಂದ ಓಡಿ ಹೋಯಿತು. ಬಂದ ಪಕ್ಷಿಗಳು ಆಹದ್ದಿನ ಗೂಡಿ ನೊಳಗೆ ಪ್ರವೇಶಿಸಿ, ಅಲ್ಲಿ ಬಿದ್ದಿದ್ದ ಮರಿಗಳ ಎಲುಬುಗಳನ್ನೂ ರೆಕ್ಕೆಗಳನ್ನೂ ನೋಡಿ, “ನಮ್ಮ ಮರಿಗಳನ್ನು ಈ ಹದ್ದೇ ತಿಂದಿರಜೇಕು.'' ಎಂದು ನಿಶ್ಚ ಯಿಸಿಕೊಂಡು, ಅದನ್ನು ಕೊಂದುಹಾಕಿಬಿಟ್ಟಿವು. ಹೀಗೆ ಆ ಕಾಗೆ ಎರಳೆಗೆ ಕಥೆಯನ್ನು ಹೇಳಲು, ನರಿ ಕಾಗೆಯನ್ನು ಕುರಿತು ""ಪ್ರಥಮದಲ್ಲಿ ನಿನ್ನ ಸ್ವಭಾವವು ಎರಳೆಗೆ ಕಿಳಿದಿದ್ದಿತೇ? ಹಾಗೆ ಸಜ್ಜನರಿಗೆ ಸ್ವಭಾವ ತಿಳಿವ ಅವಶ್ಯಕತೆಯಿಲ್ಲ... ಅವರ ದರ್ಶನಮಾತ್ರದಿಂದಶೇ ಮಿತ್ರತ್ವವು ಸಂಘಟ ಸುತ್ತದೆ.'' ಎಂದು ಹೇಳಿತು. ನರಿಯ ಈ ವಚನವನ್ನು ಕೇಳಿ ಎರಳೆಗೆ ಅದು ನಿಶ್ಚಯನೆಂದು ತೋರಿತು, ತೋರಿ, ಆ ಎರಳೆ ಕಾಗೆಯನ್ನು ದ್ವೇಶಿಸಿ, "ನನ್ನನ್ನು ನೀನು ಹೇಗೆ ಮಿತ್ರನೆಂದು ಭಾನಿಸಿರುವೆಯೋ, ಹಾಗೆಯೇ ಈ ನರಿಯೂ ಮಿತ್ರನಾಗಿರಲಿ'' ಎಂದು ಹೇಳಿ ಆದನ್ನು ತನ್ನ ಬಳಿಯಲ್ಲಿಟ್ಟು ಕೊಂಡಿತು. ಆ ಮೇಲೆ ಈ ಮೂರೂ ಹಗಲಿನಲ್ಲಿ ಉಪಜೀವನಾರ್ಥವಾಗಿ ಹೊರಗೆ ಹೋಗಿ, ಸಾಯಂಕಾಲದ ಹೊತ್ತಿಗೆ ಆ ಚಂಪಕವೃಕ್ಷದ ಬಳಿಗೆ ಬರುತ್ತಿದ್ದುವು. ಒಂದು ದಿನ ಎರಳೆಯನ್ನು ದ್ಬೇಶಿಸಿ ನರಿ, “ಎಲೇ ಸಖನೇ | ಈ ಅರಣ್ಯದಲ್ಲಿ ಒಂದು ದಿವ್ಯವಾದ ಹೊಲವುಂಟು, ಅದನ್ನು ನಿನಗೆ ತೋರಿ ಸುತ್ತೇನೆ.” ಎಂದು ಹೇಳಿ ಅದನ್ನು ಕರೆದುಕೊಂಡು ಹೋಗಿ ತೋರಿಸಿತು. ಆ ಎರಳೆ ನಿತ್ಯವೂ ಆ ಹೊಲಕ್ಕೆ ಹೋಗಿ ಮೇಯುತ್ತಿದ್ದಿತು. : ಒಂದು ದಿನ ಹೀಗೆ ಮೇಯುತ್ತಿರುವಾಗ ಹೊಲದ ಯಜಮಾನನು ಈ ಎರಳೆ ಯನ್ನು ನೋಡಿ, ಅಲ್ಲಿ ಒಂದು ಬಲೆಯನ್ನು ಹಾಕಿದನು. ಎರಳೆ ಮೇಯುವು ದಕ್ಕೆ ಹೋಗಿ ತಿಳಿಯದೆ ಆ ಜಾಲದಲ್ಲಿ ಸಿಕ್ಕಿಕೊಂಡಿತು. ಆಗ ಅದು ತನ್ನ ಮನಸ್ಸಿನಲ್ಲಿ “ನನ್ನನ್ನು ಈ ಬಂಧನದಿಂದ ನನ್ನ ಮಿತ್ರರ ಹೊರತು ಯಾರು ಬಿಡಿಸುವರು.” ಎಂದು ಯೋಚಿಸುತ್ತಿರುವಸ್ನರಲ್ಲಿ ಯೇ, ನರಿ ಅಲ್ಲಿಗೆ ಬಂದು ಈ ಎರಳೆಗೆ ಉಂಬಾದ ಅವಸ್ಥೆಯನ್ನು ನೋಡಿ, ಮನಸ್ಸಿನಲ್ಲಿ ಒಗ್ಗಿ, “ಇಂದು ನನ್ನ ಮನೋರಥವು ಪೂರ್ಣವಾಯಿತು. ಇದರ ಮಾಂಸವು ಬಹಳವಾಗಿದೆ. ಅದನ್ನು ಭಕ್ಷಿಸಿಬಿಡುತ್ತೇನೆ? ಎಂದು ಯೋಚಿಸುತ್ತ, ಅಲ್ಲಿಯೇ ನಿಂತು ಕೊಂಡಿತು. ಆದನ್ನು ಕಂಡು ಎರಳೆ “ಎಲೇ ಮಿತ್ರನೇ! ನನ್ನನ್ನು ಈ ಬಂಧನದಿಂದ ತೀವ್ರವಾಗಿ ಬಿಡಿಸಿ ನನ್ನ ಪ್ರಾಣವನ್ನು ರಕ್ಸಿಸು, ಸಂಕಟಕಾಲಕ್ಕೆ ಒದಗಿದವನೇ ಪರಮ ಮಿತ್ರನು.” ಎಂದು ಹೇಳಿತು. ಅದಕ್ಕೆ ನರಿ “ಅಯ್ಯಾ ಮಿತ್ರನೇ ! ಏನು ಮಾಡಲಿ! ಇವೊತ್ತು ನನ್ನ ವೃತದ ದಿನ ಆದಕಾರಣ ಈ ಚರ್ಮದ ಬಲೆಯನ್ನು ಈಗ ನಾನು ಮುಟ್ಟ ಲಾರೆನು, ನಾಳಿನ ದಿವಸ ನೀನು ಹೇಳಿದ ಹಾಗೆ ಮಾಡುವೆನು'' ಎಂದು ನುಡಿದು ಅದರ ದೃಷ್ಟಿ ಯಿಂದ ತಪ್ಪಿಸಿಕೊಂಡು, ಅಲ್ಲಿಯೇ ಅಡಗಿ ನಿಂತಿತು. ಇತ್ತ ಸಾಯಂಕಾಲಕ್ಕೆಎರಳೆ ಬರಲಿಲ್ಲವೆಂದು ಅದರ ಸ್ನೇಹಿತನಾದ ಕಾಗೆ, ಅದನ್ನು ಹುಡುಕುತ್ತ ಅತ್ತಿತ್ತ ಅಲೆಯುತ್ತ ಆ ಎರಳೆಯಿದ್ದ ಎಡೆಗೆ ಬಂದಿತು. ಬಂದು, ಆ ಎರಳೆಯನ್ನು ಕುರಿತು “ಎಲೇ ಸಖನೇ ! ನಿನ್ನ ಅವಸ್ಥೆ ಹೀಗೇ ಕಾಯಿತು?” ಎಂದು ಕೇಳಿತು. ಎರಳೆ "ನಿನ್ನ ಮಾತು ಕೇಳಲಿಲ್ಲ. ಇದು ಅದರ ಫಲ” ಎಂದು ಪಶ್ಚಾತ್ತಾಸಸಟ್ಟಿತು. ಕಾಗೆ “ನಿನ್ನ ಆ ಸಖನಾದ ನರಿ ಈಗ ಎಲ್ಲಿ ಹೋಯಿತು?'' ಎಂದು ಕೇಳಿದುದಕ್ಕೆ ಎರಳೆ “ನನ್ನ ಮಾಂಸ ವನ್ನು ತಿನ್ನುವುದಕ್ಕಾಗಿ, ಇದೇ ಸ್ಥಳದಲ್ಲಿ ಅಡಗಿಕೊಂಡಿರಬೇಕು.” ಎಂದು ಹೇಳಿತು. ಅದಕ್ಕೆ ಕಾಗೆ “ತನಗೆ ಹಿತವನ್ನು ಹೇಳುವಂಥ ಮಿತ್ರರ ವಚನವನ್ನು ಕೇಳದವರು, ತೀವ್ರದಲ್ಲಿಯೇ ವಿಪತ್ತಿನೊಳಗೆ ಸಿಕ್ಕಿ ಬೀಳುತ್ತಾರೆ. ಅಲ್ಲದೆ ಶತ್ರುವಿಗೂ ಅವರು ಆನಂದವನ್ನುಂಟುಮಾಡುತ್ತಾರೆ.? ಹೀಗೆಂದು ಹೇಳುತ್ತಿರುವಷ್ಟರಲ್ಲಿಯೇ ಹೊಲದ ಯಜಮಾನನು ಕೈಯಲ್ಲಿ ಒಂದು ಕಟ್ಟಿಗೆ ಯನ್ನು ಹಿಡಿದುಕೊಂಡು ಬರುವುದನ್ನು ಕಾಗೆ ಕಂಡು, ಎರಳೆಗೆ “ಎಲೇ ಮಿತ್ರನೇ ! ಈಗ ನೀನು ನಿನ್ನ ಶ್ವಾಸವನ್ನು ಸ್ತಬ್ಧಮಾಡಿಕೊಂಡ್ಕು ಸತ್ತ ಹಾಗೆ ವೇಷ ಹಾಕಿ ಸುಮ್ಮನೇ ಬಿದ್ದುಕೊಂಡಿರು. ಅವನು ನಿನ್ನನ್ನು ನೋಡಿ ಇದು ಸತ್ತುಹೋಗಿದೆಯೆಂದು ತಿಳಿದು ನಿನ್ನನ್ನು ಬಲೆಯಿಂದ ಹೊರಗೆ ಹಾಕಿ, ತನ್ನ ಬಲೆಯನ್ನು ಕಟ್ಟಿಕೊಳ್ಳುವನು, ಆಗ ನಾನು ಶಬ್ದ ಮಾಡು ತ್ತೇನೆ. ಆಕ್ಷಣವೇ ನೀನು ಓಡಿ ಹೋಗು'' ಎಂದು ಸೂಚಿಸ್ಕಿ ಆ ಕಾಗೆ ತಾನೇ ಎರಳೆಯ ಸಮೂನಕ್ಕೆ ಹೋಗಿ, ಅದರ ಕಣ್ಣು ಗಳನ್ನು ಸುಮ್ಮಸುಮ್ಮನೆ ಕುಕ್ಕತೊಡಗಿತು. ಅಷ್ಟರಲ್ಲಿಯೇ ಹೊಲದ ಯಜಮಾನನು ಎರಳೆಯನ್ನು ನೋಡಿ, “ಇದು ಸತ್ತಿದೆ'' ಎಂದು ತಿಳಿದು, ಬಲೆಯನ್ನು ಬಿಚ್ಚಿ ಸುತ್ತುವು ದೆಕ್ಕಾರೆಂಭಿಸಿದನು. ಆಗ ಕಾಗೆ ತಾನು ನೊದಲು ಹೇಳಿದ ಹಾಗೆ ಶಬ್ದ ಮಾಡಿತು, ಆ ಧ್ವನಿಯನ್ನು ಕೇಳಿದೊಡನೆಯೇ ಆ ಎರಳೆ ಅಲ್ಲಿಂದ ಪಲಾಯನ ಮಾಡಿತು. ಹೊಲದ ಯಜಮಾನನು ಅದನ್ನು ಹೊಡೆಯಬೇಕೆಂಬ ಬುದ್ಧಿಯಿಂದ ಕಟ್ಟಿಗೆ ಎಸೆಯಲು ಅದು ಎರಳಿಗೆ ತಪ್ಪಿ, ಅಲ್ಲಿಯೇ ಅಡಗಿದ್ದ ನರಿಯ ತಲೆಗೆ ತಾಗಿ ಅದು ಸತ್ತು ಹೋಯಿತು. ಈ ರೀತಿಯಲ್ಲಿ ಹಿರಣ್ಯಕವೆಂಬ ಇಲಿ ಮೇಘವರ್ಮ ಕಾಗೆಯ ಮುಂದೆ ವಿಸ್ತರಿಸಿ, ಮತ್ತೆ "ಪುಣ್ಯವೇ ಆಗಲಿ, ಪಾಪವೇ ಆಗಲಿ, ಬಹಳ ವಾದಕ್ಕೆ. ಅದರ ಫಲವು ಬೇಗನೆ ಪ್ರಾಪ್ತವಾಗುವುದು. ಆದಕಾರಣ ನಿನ್ನ ಸ್ನೇಹದಿಂದ ಪ್ರಯೋಜನವಿಲ್ಲ" ಎಂದು ಹೇಳಿತು. ಇದನ್ನು ಹೇಳಿ ಮೇಘವರ್ಮವೆಂಬ ಕಾಗೆ, "ನಿನ್ನನ್ನು ಭಕ್ತಿಸುವುದರಿಂದ ನನಗೆ ತೃಪ್ತಿಯಾಗದು. ನೀನು ಜೀವಿಸಿದರೆ ಅದರಿಂದ ನಾನು ಚಿತ್ರಗ್ರೀವ ಪಾರಿವಾಳದಂತೆ ಸುಖಪಡುವೆನು. ಅದಕ್ಕಾಗಿ ನಿನ್ನ ಸ್ನೇಹ ಮಾಡಲು ಇಚ್ಛಿಸುತ್ತೇನೆ" ಎಂದು ಪುನಃ ಅದನ್ನೇ ಒತ್ತಿಹೇಳಿತು. ಅಗ ಇಲಿ, "ನಾನು ಮುಂಚೆಯೇ ಹೇಳಿದ್ದೇನೆ. ನೀನು ನನ್ನ ಶತ್ರುವಾದುದರಿಂದ ನಿನ್ನ ಸಂಗಡ ಸ್ನೇಹ ಮಾಡುವುದು ಅಪಾಯಕರವೆಂದು, ವೈರಿಯಾದವನು ತನಗೆ ಅನುಕೂಲವಾಗಿ ಕಂಡರೂ ಅವನ ಸಂಗಡ ಸ್ನೇಹ ಮಾಡಬಾರದೆಂದು ನೀತಿಯುಂಟು. ನೀರಿನಲ್ಲಿ ಬಂಡಿಯೂ, ಭೂಮಿಯ ಮೇಲೆ ಹೆಡಗವೂ ನಡೆಯಬಹುದೇ? ಶತ್ರು ಮತ್ತು ವ್ಯಭಿಚಾರಿಯಾದ ಪ್ರಿಯರ ವಿಶ್ವಾಸವು ಹಾನಿಕರ" ಎಂದು ಅದರ ಸ್ನೇಹವನ್ನು ತಿರಸ್ಕರಿಸಿತು. ಎಷ್ಟು ಪ್ರಕಾರ ಹೇಳಿದರೂ, ಆ ಕಾಗೆ ಹಟವನ್ನು ಹಿಡಿದು "ಮಾಡಿಕೊಂಡರೆ ನಿನ್ನ ಸ್ನೇಹವನ್ನೇ ಮಾಡಿಕೊಳ್ಳುವೆನು. ಇಲ್ಲವಾದರೆ, ಆಹಾರವನ್ನು ತ್ಯಜಿಸಿ ಪ್ರಾಣವನ್ನು ಬಿಡುವೆನು. ಅಗ್ನಿಯ ಕಾವಿಯಿಂದಲೂ ಸುವರ್ಣ ಮೊದಲಾದಂಥ ಗಟ್ಟಿಯಾದ ಪದಾರ್ಥಗಳು ಏಕತ್ರವಾಗುತ್ತವೆ. ನಿಮಿತ್ತದಿಂದ ಮೃಗ-ಪಕ್ಷಿಗಳು ಮಿತ್ರತ್ವವನ್ನು ಬೆಳೆಸಿಕೊಳ್ಳುತ್ತವೆ. ಭಯದಿಂದಲ್ಲೋ ಲೋಭದಿಂದಲೋ ಮೂರ್ಖರ ಸ್ನೇಹ ಘಟಿಸುತ್ತದೆ. ಆದರೆ ಸಾಧುಜನರ ಸ್ನೇಹವು ದರ್ಶನಮಾತ್ರದಿಂದ ಲಭಿಸುತ್ತದೆ. ದುರ್ಜನರ ಸ್ನೇಹವಾದರೋ ಮಣ್ಣಿನ ಪಾತ್ರೆಯಂತೆ ತೀವ್ರವಾಗಿ ಒಡೆದು ಪುನಃ ಉಪಯೋಗಕ್ಕೆ ಬಾರದಂತಾಗುತ್ತದೆ. ಸಾತ್ವಿಕ ಜನರ ಸ್ನೇಹವಾದರೋ ಸುವರ್ಣಕಲಶದಂತೆ ತೀವ್ರವಾಗಿ ಒಡೆಯುವುದೂ ಇಲ್ಲ. ಒಂದು ವೇಳೆ ಒಡೆದರೆ ಅದು ಉಪಯೋಗಕ್ಕೆ ಬರುತ್ತದೆ" ಎಂದು ಅನೇಕ ಅನುಭವದ ಮಾತುಗಳನ್ನಾಡಿತು. ಇದನ್ನೆಲ್ಲ ಕೇಳಿ ಆ ಮೂಷಕವು "ಎಲೆ, ಕಾಗೆಯೇ! ನಿನ್ನ ಈ ಸಮುಚಿತವಾದ ಭಾಷಣದಿಂದ ನಾನು ಸಂತೋಷಪಟ್ಟೆನು. ನೀನು ನನ್ನ ಸ್ನೇಹಿತನಾಗಿರು. ಮುಂದೆ ನಾವಿಬ್ಬರೂ ಏಕಚಿತ್ತದಿಂದಿರಬೇಕು. ಉಪಕಾರ ಮಾಡುವವನೇ ಮಿತ್ರನು. ಅಪಕಾರ ಮಾಡುವವನೇ ಶತ್ರು" ಹೀಗೆಂದು ಹೇಳಿ ಇವೆರಡೂ ಶುದ್ಧಚಿತ್ತದಿಂದ ಇರಬೇಕೆಂದು ನಿಶ್ಚಯಿಸಿಕೊಂಡವು. ಆ ಮೇಲೆ ಹಿರಣ್ಯಕ ಮೂಷಕವು ಮೇಘವರ್ಮವೆಂಬ ಕಾಗೆಗೆ ಸ್ವಲ್ಪ ಆಹಾರ ಕೊಟ್ಟು, ತನ್ನ ಬಳಿಯಲ್ಲಿಯೇ ಇಟ್ಟುಕೊಂಡು ಅನ್ಯೋನ್ಯ ಮಿತ್ರತ್ವದಿಂದ ಅನೇಕ ವಿಧವಾದ ಸುಖಸಲ್ಲಾಪಗಳಿಂದ ಅದನ್ನು ಉಪಚರಿಸಿತು. ಹೀಗೆ ಇವೆರಡರಲ್ಲಿ ದಿನದಿಂದ ದಿನಕ್ಕೆ ಪ್ರೀತಿ ಬೆಳೆಯಿತು. ಒಂದು ದಿನ ಆ ಮೇಘವರ್ಮನೆಂಬ ಕಾಗೆ ಇಲಿಯನ್ನು ಕುರಿತು ಎಲ್ಲೆ ಮಿತ್ರನೇ! ಈಗ ಇಲ್ಲಿ ಆಹಾರ ಸಿಕ್ಕುವುದು ದುರ್ಲಭವಾಗಿದೆ. ಎರಡನೆಯ ಸ್ಥಳಕ್ಕೆ ಹೋಗಬೇಕೆಂದು ಬಯಸುತ್ತೇನೆ? ಎಂದಿತು. ಅದಕ್ಕೆ ಇಲಿ “ನೀನು ಎಲ್ಲಿಗೆ ಹೋಗಬೇಕೆಂದಿರುವೆ” ಎಂದು ಕೇಳಿತು. ಕಾಗೆ ದಂಡಕಾರಣ್ಯದಲ್ಲಿ ಕರ್ಪೂರಗೌರವೆಂಬ ಒಂದು ಸರೋವರದಲ್ಲಿ ಮಂಥರನೆಂಜ ಆಮೆ ನನ್ನ ಮಿತ್ರ, ಆದು ನನಗೆ ವಿಧವಿಧವಾದ ಮತ್ಸ್ಯ ಗಳನ್ನು ಕೊಟ್ಟು ಸಂರಕ್ಷಿಸುವುದು. ಅದಕ್ಕಾಗಿ ನಾನು ಅದರ ಬಳಿಗೆ ಹೋಗುತ್ತೇನೆ'' ಎಂದಿತು. ಈ ಮಾತನ್ನು ಕೇಳಿ ಆ ಮೂಷಕವು ತನ್ನನ್ನು ಕರೆದುಕೊಂಡು ಹೋಗಬೇಕೆಂದು ಕೇಳಿತು. “ ನೀನೇಕೆ ಈ ಸ್ಥಳ ವನ್ನು ಬಿಟ್ಟು ದೇಶಾಂತರಕ್ಕೆ ಹೋಗಬೇಕೆಂದು ಇಚ್ಛಿಸುತ್ತಿಯೇ?” ಎಂದು ಇಲಿಯನ್ನು ಕಾಗೆ ಕೇಳಿದುದಕ್ಕೆ ಇಲ್ಕಿ ""ನಾನು ಅಲ್ಲಿಗೆ ಹೋದಮೇಲೆ ಅದನ್ನು ಹೇಳುತ್ತೇನೆ'' ಎಂದು ಹೇಳಿತು. ಹೀಗೆ ಇವೆರಡೂ ಅಲ್ಲಿಂದ ಹೊರಟು ಸರೋವರಕ್ಕೆ ಹೋಗುವ ಉದ್ದೇಶದಿಂದ ಪ್ರಯಾಣ ಬೆಳಿಸಿ ದುವು. ಆ ಮಂಥರವೆಂಬ ಆಮೆ, ಇವೆರಡೂ ಬರುವುದನ್ನು ದೂರ ದಿಂದಲೇ ಕಂಡು, ಸಂತೋಷಪಟ್ಟು ಇವುಗಳನ್ನು ಆದರದಿಂದ ಬರೆ ಮಾಡಿಕೊಂಡು ಸನ್ಮಾನ ಮಾಡಿತು. ಕಾಗೆ ಆಮೆಗೆ “ ಇದು ಹಿರಣ್ಯಕ ವೆಂಬ ಇಲಿ, ಬಹಳ ಪರೋಪಕಾರಿ. ನನ್ನ ಮಿತ್ರನಾದ ಚಿತ್ರಗ್ರೀವ ವೆಂಬ ಪಾರಿವಾಳದ ಪರಿವಾರದ ಬಂಧನವನ್ನು ಮುಕ್ತಮಾಡಿತು. ಇದನ್ನು ಕಂಡು ನಾನು ಇದರೊಡನೆ ಸ್ನೇಹ ಬೆಳೆಸಿದ್ದೇನೆ” ಎಂದು ಆ ಇಲಿಯ ಪರಿಚಯ ಮಾಡಿಕೊಟ್ಟಿತು. ಆಮೆ ಇದನ್ನು ಕೇಳಿ ಸಂತೋಷಪಟ್ಟು ಎಲಾ ಮೂಷಕವೇ, ನಿಮ್ಮ ಸಮೂಹದವರು ಯಾರೂ ಇಲ್ಲದಂಥ ಈ ಅರಣ್ಯಕ್ಕೆ ಬರಲು ಕಾರಣವೇನು? ಎಂದು ಕೇಳಿತು. ಅದಕ್ಕೆ ಇಲಿ ಆ ಕಾರಣವನ್ನು ಹೀಗೆ ಹೇಳಿತು.

ಕಥೆಃ- ಚಂಪಕಾ ನಗರದಲ್ಲಿ ಚೂಡಾಕರ್ಣನೆಂಬ ಸಂನ್ಯಾಸಿ ಇದ್ದನು. ಅವನು ದಿನವೂ ಭೋಜನ ಮಾಡಿ, ಉಳಿದ ಅನ್ನವನ್ನು ಕಮಂಡಲುವಿ ನಲ್ಲಿ ಹಾಕಿ, ನೆಲುವಿನ ಮೇಲೆ ಅದನ್ನಿಟ್ಟು ನಿದ್ದೆಹೋಗುತ್ತಿದ್ದನು. ಅವನು ನಿದ್ದೆ ಹೋದುದನ್ನು ನೋಡಿ ನಾನು ಆ ಅನ್ನವನ್ನು ತಿಂದು ಅಲ್ಲಿಯೇ ಸುಖದಿಂದಿದ್ದೆನು. ಒಂದಾನೊಂದು ದಿವಸ ನೀಣಾಕರ್ಣನೆಂಬ ಬೇರೊಬ್ಬ ಸಂನ್ಯಾಸಿ ಅಲ್ಲಿಗೆ ಬಂದನು. ಆ ರಾತ್ರಿ ಚೂಡಾಕರ್ಣ ಸಂನ್ಯಾಸಿ ನೀಣಾಕರ್ಣ ಸಂನ್ಯಾಸಿಯ ಮುಂದೆ ಕಥೆಯನ್ನು ಹೇಳುತ್ತ ಕೈಯಲ್ಲಿ ಒಂದು ಕೋಲನ್ನು ಹಿಡಿದುಕೊಂಡು ಆ ನೆಲುವಿನ ಮೇಲಿದ್ದ ಅನ್ನವನ್ನು ರಕ್ಷಿಸುತ್ತಿದ್ದನು, ಆ ಸಂದರ್ಭದಲ್ಲಿ ನೀಣಾಕರ್ಣ ಸಂನ್ಯಾಸಿ «ಹೀಗೆ ಕಥೆ ಯನ್ನು ಹೇಳುತ್ತ ಅದರಲ್ಲಿ ಆಸಕ್ತಿಯನ್ನು ತೋರಿಸದೆ, ಮಧ್ಯದಲ್ಲಿ ಈ ಎರಡನೆಯ ವ್ಯವಹಾರವನ್ನೇನು ನಡೆಸಿದ್ದೀಯೆ?” ಎಂದು ಆ ಚೂಡಾ ಕರ್ಣ ಸಂನ್ಯಾಸಿಯನ್ನು ಕೇಳಿದನು. ಅದಕ್ಕೆ ಚೂಡಾಕರ್ಣನು ನಾನೇನೂ ಕಥೆ ಹೇಳುವಲ್ಲಿ ಅಸಡ್ಡೆ ಮಾಡಲಿಲ್ಲ. ಆದರೆ ಇಲ್ಲಿ ಒಂದು ಇಲಿ ನನ್ನ ಕಮಂಡಲುವಿನಲ್ಲಿರುವ ಅನ್ನವನ್ನು ಪ್ರತಿದಿನವೂ ತಿಂದು ಹೋಗುತ್ತಿದೆ, ಆದ್ದರಿಂದ ಇಂದು ಅದರ ಪಾರುಪತ್ಯ ಮಾಡಿಬಿಡುತ್ತೇನೆ ಎಂದನು. ಆ ಕ್ಷಣವೇ ನೀಣಾಕರ್ಣ ಸಂನ್ಯಾಸಿ ನೆಲುನಿನ ಕಥೆ ನೋಡಿ ಅಲ್ಪ ಸಾಮರ್ಥ್ಯವುಳ್ಳ ಮೂಷಕವು ಇಸ್ಟು ಎತ್ತರದಲ್ಲಿರುವ ನೆಲುವಿನ ಮೇಲೆ ಹೇಗೆ ಹಾರುತ್ತದೆ? ಪ್ರಾಯಶಃ ಇದಕ್ಕೆ ಬೇರೆ ಕಾರಣವಿರಬೇಕು. ಈ ಸ್ಥಳದಲ್ಲಿ ದ್ರವ್ಯವನ್ನಿಟ್ಟರಬೇಕು. ಲೋಕದಲ್ಲಿ ಧನವಂತರು ಬಲಿಷ್ಕರಾ ಗಿರುತ್ತಾರೆ, ಅಲ್ಲದೆ ಅರಸರಿಗೂ ದ್ರವ್ಯವೇ ಮುಖ್ಯ. ದ್ರವ್ಯದಿಂದ ಸಕಲ ಕಾರ್ಯಗಳೂ ಸಿದ್ಧಿಸುತ್ತವೆ. ಆದ್ದರಿಂದ ಅದನ್ನು ಎಲ್ಲ ಉಪಾಯ ಗಳಿಂದ ರಕ್ಷಿಸುತ್ತಾರೆ'' ಎಂದು ನುಡಿದನು ಈ ಮಾತನ್ನು ಕೇಳಿ ಚೂಡಾಕರ್ಣ ಸಂನ್ಯಾಸಿ 66 ಒಳ್ಳೆ ಯದು. ನೀನೇ ಅದನ್ನು ನೋಡಬಹುದು ಎಂದು ಹೇಳಲು ಅವನು ಆಸ್ಫಳಕ್ಕೆ ನೆಗೆದು ನೋಡಿದನು. ಇದರಿಂದ ನನ್ನ ರಹಸ್ಯವು ಗೊತ್ತಾಗಿ ನನ್ನ ಆಹಾರವು ಅಲ್ಲಿಂದ ತಪ್ಪಿಹೋಯಿತು. ಹೀಗಾಗಿ ನಾನು ಆ ಹೊತ್ತಿನಿಂದ ಆಹಾರ ಸಿಕ್ಕದೆ ಶಕ್ತಿಹೀನನಾದೆನು. ಆದ್ದರಿಂದ ಇಲ್ಲಿರುವುದು ಇನ್ನು ಸರಿಯಲ್ಲವೆಂದು ಆಲೋಚಿಸಿದೆನು. ಅಲ್ಲದೆ ಎರಡನೆಯವರ ಮುಂದೆ ತನ್ನ ವಿಪತ್ತು ಹೇಳಬಾರದೆಂಬ ನೀತಿ ನನಗೆ ನೆನಪಾಯಿತು. ಧರ್ಮನಾಶ ಗೃಹಚ್ಛೆದ್ರ, ದಾನ, ಮಾನ, ಅಪ ಮಾನ್ಕ ಆಯುಷ್ಯ ಧನ ಈ ಎಏಳನ್ನು ಬುದ್ಧಿ ವಂತರಾದವರು ಮತ್ತೊ ಬ್ಬರಿಗೆ ಪ್ರಕಟಿಸಬಾರದು. ದೈವಹೀನವಾದ ಕಾಲಕ್ಕೆ ಪರಾಕ್ರಮವೂ ಯತ್ನವೂ ಎಲ್ಲ ವ್ಯರ್ಥವಾಗುತ್ತವೆ. ಅದಕ್ಕಾಗಿ ಧನಹೀನನಾದವನಿಗೆ ಅರಣ್ಯವಾಸವೇ ಪರಮಸುಖ. ನಾನು ಧನಾಢ್ಯನೆಂದೆನಿಸಿಕೊಂಡು ಇದ್ದ ಸ್ಥಳದಲ್ಲಿ ದರಿದ್ರನಾಗಿ ಕಾಲಹರಣ ಮಾಡುವುದು ಯೋಗ್ಯವಲ್ಲವೆಂದು ಬಹಳವಾಗಿ ದುಃಖಿಸಿ, ನಿನ್ನ ಮಿತ್ರನ ಸಂಗಡ ಈ ಸ್ಥಳಕ್ಕೆ ಬಂದೆನು. ಇಲಿಯ ಈ ಆತ್ಮಕಥೆಯನ್ನು ಕೇಳಿ ಆಮೆ ಎಲೇ ಸಖನೇ, ಈ ಆಪತ್ತಿನಲ್ಲಿಯೂ ನೀನು ಧೈರ್ಯವನ್ನು ಬಿಡದೆ, ನಿನ್ನ ಸ್ಥಾನವನ್ನು ಬಿಟ್ಟಿ ರುವೆ. ನಿನಗೆ ಈ ಸ್ಥಾನಾಂತರದಿಂದ ದುಃಖ ಪ್ರಾಪ್ತವಾಗಿದೆ, ಆದರೂ ಅದನ್ನು ನೆನೆಯಬಾರದು. ಏಕೆಂದಕೆ ಸಜ್ಜನರು ಎಲ್ಲಿಗೆ ಹೋದರೂ ಮಾನ್ಯರಾಗುತ್ತಾರೆ. ಸಿಂಹವು ಕಾನನಾಂತರಕ್ಕೆ ಹೋದರೂ, ತೃಣವನ್ನು ಭಕ್ಷಿಸದೆ, ಗಜವನ್ನೇ ಭಕ್ಷಿಸುತ್ತದೆ. ಉತ್ಸಾಹಶಾಲಿಯಾದ ಪುರುಷನೂ, ನಿತ್ಯಸಂತುಪ್ಟನ್ಮೂ ಥೈರ್ಯಶಾಲಿಯೂ, ಶುದ್ಧಚಿತ್ತನೂ, ಶೂರನೂ ಈ ಐವರ ಸೇನೆಯನ್ನು ಲಕ್ಷ್ಮಿ ತಾನೇ ಮಾಡುತ್ತಾಳೆ. ನೀನು ದ್ರವ್ಯ ಹೀನನಾದರೂ, ಸಂತೋಷವಾಗಿಯೇ ಇದ್ದೀಯೆ. ಆದ್ದರಿಂದ ನಿನಗಿ ರುವ ಸುಖವು ಧನವಂತನಿಗೆ ಸಹ ಇಲ್ಲ. ಮತ್ತೊಂದು ವಿಷಯವೇ ನೆಂದರೆ ಮೋಡದ ನೆಳಲು,ಮೂರ್ಖನ ಪ್ರೀತಿ, ಹೊಸ ಹುಲ್ಲು ಯೌವನ, ಧನ--ಇವೈದು ಬಹುಕಾಲ ಇರಲಾರವು. ಆದ ಕಾರಣ ಇವು ನಷ್ಟವಾದರೂ ಶೋಕಿಸಬಾರದು. ಅಲ್ಲದೆ ಗ್ರಾಸಕ್ಕಾಗಿ ಚಿಂತೆ ಮಾಡ ಬಾರದು. ಏಕೆಂದರೆ ಗರ್ಭದಲ್ಲಿ ಜೀವವನ್ನು ಸೃಷ್ಟಿಸಿದವನೇ ಜನನಕ್ಕೆ ಮೊದಲೇ ತಾಯಿಯ ಸ್ತನದಲ್ಲಿ ಹಾಲನ್ನು ನಿರ್ಮಿಸುತ್ತಾನೆ. ಅವನು ಆಯ ಷ್ಯ ಪ್ರಮಾಣವಿರುವವರೆಗೂ, ಆ ಜೀವಿಯನ್ನು ಸಂರಕ್ಷಿಸಲಾರನೇ? ಇದನ್ನೆಲ್ಲ ನೀನು ಬಲ್ಲವನಾಗಿ, ಸುಜ್ಞಾನಿಯೆಂದೆನಿಸಿಕೊಂಡಿದ್ದೀಯೆ. ಇನ್ನುಮೇಲೆ ನೀನು ಸ್ನೇಹದಿಂದ ನನ್ನ ಬಳಿಯಲ್ಲಿ ಸುಖವಾಗಿ ವಾಸ ಮಾಡಿಕೊಂಡಿರು'' ಎಂದು ಹೇಳಿತು. ಅದಕ್ಕೆ ಕಾಗೆ, "ಎಲೇ, ಮಿತ್ರ ನಾದ ಆಮೆಯೇ! ನೀನು ಸಕಲಗುಣಸಂಪನ್ನನು, ಸಜ್ಜನನು. 'ಸಜ್ಜ ನರ ವಿಪತ್ತನ್ನು ಸಜ್ಜನರಾದವರೇ ಪರಿಹರಿಸುತ್ತಾರೆಂದು ತಿಳಿದು ನಿನ್ನ ಸನ್ನಿಧಿಗೆ ಬಂದಿದ್ದೇವೆ'' ಎಂದು ತನ್ನ ಮಿತ್ರನ ಸದ್ಗುಣವನ್ನು ಹೊಗಳಿತು. ಹೀಗೆ ಈ ಮೂರು ಅತ್ಯಂತ ಪ್ರೀತಿಯಿಂದ ಸುಖಸಲ್ಲಾಪಗಳನ್ನು ನಡೆಸುತ್ತ ಇದ್ದ ಸಂದರ್ಭದಲ್ಲಿ ಚಿತ್ರಾಂಗನೆಂಬ ಒಂದು ಎರಳೆ ಇವುಗಳ ಸಮೀಪಕ್ಕೆ ಬಂದು "ಮಿತ್ರರುಗಳೇ ನಾನು ಬೇಟಿಕಾರನ ಭಯದಿಂದ ನಿಮ್ಮ ಬಳಿಯಲ್ಲಿ ಇರಬೇಕೆಂದು ಓಡಿಬಂದಿದ್ದೇನೆ” ಎಂದು ಹೇಳಿತು. ಇದನ್ನು ಕೇಳಿ ಆಮೆ ಎರಳೆಯನ್ನು ಸನ್ಮಾನಿಸಿ, "ಈ ಮನೆ ನಿನ್ನದೆಂದು ತಿಳಿದು ಸ್ವಸ್ಥ ಚಿತ್ತದಿಂದಿರು'' ಎಂದು ಅದಕ್ಕೆ ಆಶ್ರಯವನ್ನು ಕೊಟ್ಟಿತು. ಆಮೇಲೆ ಎರಳೆಯೂ ಅವುಗಳ ಬಳಿಯಲ್ಲಿಯೇ ಸ್ನೇಹವಾಗಿ ಇರ ತೊಡಗಿತು. ಈ ರೀತಿಯಲ್ಲಿ ಆಮೆ, ಎರಳೆ, ಕಾಗೆ, ಇಲಿ-ಇವು ನಾಲ್ಕು ಅನ್ಯೋನ್ಯ ಸ್ನೇಹವಾಗಿ ಇರುತ್ತ ಸುಖದಿಂದ ಕಾಲ ಕಳೆಯುತ್ತಿದ್ದುವು. ಒಂದು ದಿನ ಚಿತ್ರಾಂಗವೆಂಬ ಎರಳೆ ಹುಲ್ಲು ಮೇಯುವುದಕ್ಕೆಂದು ಬೇರೆಯ ಸ್ಥಳಕ್ಕೆ ಹೋಗಿ, ಸಾಯಂಕಾಲಕ್ಕೆ ತಿರುಗಿ ಬರಲಿಲ್ಲ. ಇದನ್ನು ತಿಳಿದು ಆಮೆ ಚಿಂತಾಕ್ರಾಂತವಾಗಿ ಇಲಿ ಕಾಗೆಗಳೊಡನೆ “ಈ ದಿನ ಎರಳೆ ಬಾರದಿರಲು ಕಾರಣವೇನು?'' ಎಂದು ಆಲೋಚಿಸಿ, ಇವೆಲ್ಲವೂ ಬಹಳ ದುಃಖಪಟ್ಟುವು. ಮರುದಿನ ಬೆಳಗಾದ ಮೇಲೆ, ಕಾಗೆ ಹಾರಿಹೋಗಿ ನಾಲ್ಕೂ ಕಡೆಗೆ ಶೋಧಿಸುತ್ತಿದ್ದಾಗ ಆ ಎರಳೆ ಒಂದು ಚರ್ಮದ ಬಲೆ ಯಲ್ಲಿ ಸಿಕ್ಕಿ ಬಿದ್ದಿರುವುದನ್ನು ಕಂಡು, ಅದರ ಬಳಿಗೆ ಹೋಗಿ, "ಎಲೇ ಮಿತ್ರನೆ! ನಿನಗೆ ಈ ಅವಸ್ಥೆ ಉಂಟಾಗಲು ಕಾರಣವೇನು'' ಎಂದು ಕೇಳಿತು. ಆಗ ಎರಳೆ ಈಗ ನೀನು ಕೇಳಿ ಫಲವಿಲ್ಲ. ನೀನು ಈಗಲೇ ಇಲ್ಲಿಂದ ಹೊರಟುಹೋಗಿ ಬೇಗನೇ ಮೂಷಕವನ್ನು ಕರೆದುಕೊಂಡು ಬಾ. ಅದು ಬೇಟಿಕಾರನು ಬರುವುದರೊಳಗಾಗಿಯೇ ಬಲೆಯನ್ನು ಛೇದಿಸಿ, ನನ್ನನ್ನು ಬಿಡುಗಡೆ ಮಾಡುವುದು. ವ್ಯರ್ಥವಾಗಿ ಮಾತಾಡುತ್ತಿದ್ದರೆ, ವ್ಯಾಧನು ಬಂದುಬಿಡುವನು. ಆ ಮೇಲೆ ಯಾರ ಉಪಾಯವೂ ನಡೆಯ ಲಾರದು'' ಎಂದು ಹೇಳಿ ಕಾಗೆಯನ್ನು ಕಳಿಸಿಕೊಟ್ಟಿತು. ಕಾಗೆ ವೇಗ ವಾಗಿ ಹಾರಿಹೋಗಿ ಆ ಮೂಷಕನ ಮುಂದೆ ಈ ಎಲ್ಲ ಸಂಗತಿಯನ್ನು ಹೇಳಿ, ಅದನ್ನು ಕರೆದುಕೊಂಡು ಬಂದಿತು. ಆಗ ಇಲಿ, ಎರಳೆಯನ್ನು "ನೀನು ಬಹು ಚತುರನು, ಈಗ ಈ ಬಲೆಯಲ್ಲಿ ಹೇಗೆ ಸಿಕ್ಕಿಕೊಂಡೆ?'' ಎಂದು ಕೇಳಿದುದಕ್ಕೆ ಎರಳೆ ತನ್ನ ಆತ್ಮಚರಿತ್ರೆಯನ್ನು ಹೀಗೆ ಹೇಳಿತು:- ನಾನು ಸಣ್ಣ ಮರಿಯಾಗಿದ್ದೆ. ಆಗ ಒಬ್ಬ ಬೇಟಿಗಾರನು ಬಲೆಯ ನ್ನೊಡ್ಡಿ, ನನ್ನ ಪರಿವಾರವನ್ನೆಲ್ಲ ಬಂಧಿಸಿದನು. ಅವು ದೊಡ್ಡವಾದುದ ರಿಂದ ತಪ್ಪಿಸಿಕೊಂಡು ಹಾರಿಹೋದುವು.ನನಗೆ ಹಾರುವುದಕ್ಕೆ ಸಾಮರ್ಥ್ಯವು ಸಾಲದುದರಿಂದ, ನನ್ನನ್ನು ಆ ಬೇಟಿಗಾರನು ಹಿಡಿದುಕೊಂಡು ಅರಸನ ಬಳಿಗೆ ಹೋದನು. ಆ ಅರಸನು ನನ್ನನ್ನು ತನ್ನ ಮಗನಿಗೆ ಕೊಟ್ಟನು. ನಾನು ಅಲ್ಲಿಯೇ ಬಹಳ ದಿವಸವಿದ್ದೆನು. ಒಂದಾನೊಂದು ಸಮಯದಲ್ಲಿ ಮೇಘಗರ್ಜನೆಯನ್ನು ಕೇಳಿ ನಾನು ಬಹಳ ಚಂಚಲನಾಗಿ, ಮನುಷ್ಯರಂತೆ ಮನಸ್ಸಿನಲ್ಲಿ ಕೇಳುವ ಹಾಗೆ ಮಾತಾಡಿಕೊಂಡೆನು. “ಗಾಳಿ ಮಳೆ ಗಳ ಪೀಡೆಯಿಂದ ಮೃಗಸಮುದಾಯವೆಲ್ಲವೂ ಓಡುತ್ತಿದೆ. ನಾನೂ ಅವು ಗಳ ಹಿಂದೆಯೇ ಓಡಿ ಹೋಗಲೇ!” ಹೀಗೆಂದು ನಾನು ಆಡಿದ ಮಾತು ಗಳನ್ನು ಆ ರಾಜಪುತ್ರನು ಕೇಳಿ, ನನ್ನ ಕಡೆ ನೋಡಿ, “ಈ ಎರಳೆ ಮನುಷ್ಯ ವಾಣಿಯಂತೆ ಉಚ್ಚರಿಸಿತು. ಇದು ವಿಚಿತ್ರವಾದ ಪ್ರಾಣಿ.'' ಎಂದು ಭಯ ಪಟ್ಟನು ಈ ಭಯದಿಂದ ಅವನು ಜ್ವರಪೀಡಿತನಾದನು. ಮಾರನೆಯ ದಿನ ಪ್ರಾತಃಕಾಲದಲ್ಲಿ ಅರಸನು ಜ್ಯೋತಿಷ್ಯರನ್ನು ಕರೆಸಿ ಅವರಿಗೆ ಈ ವೃತ್ತಾಂತವನ್ನೆಲ್ಲ ತಿಳಿಸಿದನು ಆ ಜ್ಯೋತಿಷ್ಯನು "ಸಕಲ ಪಶುಗಳು ಮನುಷ್ಯರ ಹಾಗೆ ಉಚ್ಛರಿಸುತ್ತವೆ. ಆದರೆ, ಅವು ಮನುಷ್ಯರ ಸಮಕ್ಷಮ ಮಾತಾಡುವುದಿಲ್ಲ. ಈ ಎರಳೆಯಾದರೋ, ರಾಜ ಪುತ್ರನನ್ನು ನೋಡದೆ ಮಾತಾಡಿದೆ. ಇದಕ್ಕೆ ಭಯಪಡುವ ಕಾರಣವಿಲ್ಲ. ಇದು ವಿಚಿತ್ರ ಪ್ರಾಣಿಯೂ ಅಲ್ಲ. ಈ ಎರಳೆಯಿಂದ ಯಾವ ಬಾಧೆಯೂ ಆಗಲಾರದು '” ಎಂದನು. ಈ ಮಾತನ್ನು ಕೇಳಿ, ಅರಸನ ಮಗನಿಗೆ ದೈರ್ಯಸಾಲದೆ ಅವನು ನನ್ನನ್ನು ಬಿಟ್ಟು ಬಿಟ್ಟನು, ಆಮೇಲೆ ನಾನು ಅಲ್ಲಿಂದ ಹೊರಟು, ಈ ಅರಣ್ಯಕ್ಕೆ ಬಂದೆನು, ನನಗೆ ಈ ಅರಣ್ಯವು ಪರಿಚಯದ ಸ್ಥಳವಲ್ಲವಾ ದುದರಿಂದ ಬಂಧನಕ್ಕೊಳಗಾದೆನು, ನನ್ನನ್ನು ಈ ಬಲೆಯಿಂದ ಬಂಧಮುಕ್ತ ನಕ್ನಾಗಿ ಮಾಡು. ಎರಳೆ ಈ ಆತ್ಮನಿವೇದನವನ್ನು ಮುನಿಸುತ್ತಿರುವಷ್ಟರಲ್ಲಿಯೇ, ತನ್ನ ಮಿತ್ರನಿಗೆ ಉಂಟಾದ ಆಪತ್ತನ್ನು ಸ್ಮರಿಸಿಕೊಂಡು, ಆ ಮಂಥರವೆಂಬ ಆಮೆ ಅಲ್ಲಿಗೆ ಬಂದಿತು. ಬಂದು ಇಲಿಯನ್ನು ಕುರಿತ್ಕು «ಎಲೇ,ಮಿತ್ರನೇ! ಆಲಸ್ಯಮಾಡುವುದು ಒಳಿತಲ್ಲ. ಬೇಟಿಕಾರನು ಈಗಲೇ ಬಂದನೆಂದರ್ಕೆ ನಾವೆಲ್ಲರೂ ಓಡಿ ಹೋಗಬಲ್ಲೆವು. ಆದರೆ ಈ ಚಿತ್ರಾಂಗ ಎರಳೆ ಬಂಧನದಲ್ಲಿಯೇ ಉಳಿಕೀತು! ಇದರಿಂದ ನನಗೆ ಬಹಳ ಖೇದವಾಗುತ್ತದೆ, ಮನಸ್ಸಿನೊಳಗಿನ ಗುಟ್ಟನ್ನು ತಿಳಿಯುವಂಥ ಮಿತ್ರನೂ ಮನೋಹರ ಸ್ತ್ರೀಯ ಇಂಗಿತವನ್ನೂ ಪರರ ದುಃಖವನ್ನೂ ತಿಳಿಯುವಂಥ ಅರ ಸನೂ, ದೊರೆಯುವುದು ಬಹು ದುರ್ಲಭ'' ಎಂದು ಹೇಳುವಷ್ಟರಲ್ಲಿಯೇ ಆ ಬೇಡನು ಯೆಮನಂತೆ ಬರುವುತ್ತಿರುವುದನ್ನು ಮೇಘವರ್ಮ ಕಾಗೆ ದೂರ ದಿಂದ ಕಂಡು, ಮೂಸಕನಿಗೆ «ಬೇಟಿಕಾರನು ಬಂದನು. ದೊಡ್ಡ ಸಂಕಟ ವೊದಗಿತು” ಎಂದು ಹೇಳಿತು ಆ ಕ್ಷಣವೇ ಮೂಷಕವು ಬಲೆಯನ್ನು ಛೇದಿಸಿತು. ವ್ಯಾಧನು ಸವೂಪಕ್ಕೆ ಬರುವುದರೊಳಗೆಡೆ ಎಲ್ಲ ಮೃಗ ಪಕ್ಷಿಗಳು ಓಡಿಹೋದುವು. ಇದನ್ನು ನೋಡಿ, ವ್ಯಾಧನಿಗೆ ಬಹಳ ದುಃಖ ವಾಯಿತು. ಅವನು ನಾಲ್ಕೂ ಕಡೆ ನೋಡುತ್ತಿರಲಾಗಿ, ಆಮೆ ತನ್ನ ಸ್ವಾಭಾನಿಕನಾದ ಮಂದಗತಿಯಿಂದ ನಡೆಯುತ್ತಿರುವುದನ್ನು ಕಂಡನು. ಕೂಡಲೇ ಆ ಬೇಟಿಕಾರನು ಆ ಆಮೆಯನ್ನು ಹಿಡಿದು ತನ್ನ ಕೋಲಿಗೆ ಕಟ್ಟಿಕೊಂಡು ಬಹಳ ಸಂತುಷ್ಟನಾಗಿ ಅದನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಹೊರಟನು. ಬೇಟಿಕಾರನು ಆಮೆಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಎರಳೆ, ಇಲಿ, ಕಾಗೆ ಇವುಗಳು ನೋಡಿ, ಬಹಳ ಕಷ್ಟ ಸಟ್ಟು, "ನಾವು ಈಗೇನು ಉಪಾಯ ಮಾಡಬೇಕು?'' ಎಂದು ಆಲೋಚಿಸುತ್ತ ಆ ಬೇಡನ ಹಿಂದೆ ಹಿಂದೆಯೇ ಹೋದುವು. ಇಲಿ "ಒಂದು ಸಂಕಟವನ್ನು ನಿವಾರಿಸಿಕೊಳ್ಳುವಷ್ಟರಲ್ಲಿಯೆ ಮತ್ತೊಂದು ಸಂಕಟವು ಪ್ರಾಪ್ತವಾಯಿತು. ಈ ಶರೀರದಿಂದ ಜೀವಕ್ಕೆ ಅನೇಕ ಕೇಶ ಗಳನ್ನು ಅನುಭವಿಸಬೇಕಾಗುತ್ತದೆ. ಈಗಿನ ಕ್ಷೇಶವು ನಮಗೆ ಮಿತ್ರ ನಿಗೆ ಉಂಟಾದ ಬಂಧನದಿಂದ ಪ್ರಾಪ್ತವಾಗಿದೆ. ಮಿತ್ರನ ವಿಶ್ವಾಸದಂತೆ ತಾಯಿ, ತಂದೆ, ಬಂಧುಬಳಗದವರ ವಿಶ್ವಾಸವೂ ಅಲ್ಲ' ಎಂದು ಹೇಳಿ ಇವು ಮೂರು ಬಹಳ ದುಃಖಿಸಿದುವು. ಆಗ ಇಲಿ ಒಂದು ಆಲೋ ಚನೆ ಮಾಡಿ, “ವ್ಯಾಧನು ದೂರ ಹೋಗುವುದರೊಳಗೆ ಆಮೆಯನ್ನು ಬಿಡಿಸುವ ಉಪಾಯ ಮಾಡಬೇಕು. ಅವನು ದೂರ ಹೊರಟು ಹೋದ ಮೇಲೆ ನಮ್ಮ ಯಾವ ಉಪಾಯವೂ ಕೈಗೂಡಲಾರದು.” ಎಂದು ಹೇಳಿದುದನ್ನು ಕೇಳಿ ಆ ಕಾಗೆಯೂ ಎರಳೆಯ್ರೂ, "ಅಯ್ಯಾ, ಮೂಷಕ ಮಿತ್ರನೇ! ನಮಗೆ ಯಾವ ಉಪಾಯವೂ ಹೊಳೆಯದಂತಾಗಿಜೆ. ಏನು ಮಾಡಬೇಕೆಂಬುದನ್ನು ನೀನೇ ಹೇಳು.'' ಎಂದು ಇಲಿಯನ್ನು ಕೇಳಿದುವು. ಅದಕ್ಕೆ ಇಲಿ ಚಿತ್ರಾಂಗವೆಂಬ ಎರಳೆಯನ್ನು ಕುರಿತು «ಎರಳೆಯೇ, ನೀನು ಆ ಕಾಣುತ್ತಿರುವ ಕೆರೆಯ ದಂಡೆಯ ಮೇಲೆ ಕುಳಿತುಕೊಂಡು ನೀರು ದ್ದಿತು. ಅದರ ಕೆಳಗೆ ಸಿಂಜರಕನೆಂಬುನೊಂದು ಮೊಲವು ಮನೆಮಾಡಿ ಕೊಂಡಿದ್ದಿತು. ಒಂದುದಿನ ಈ ಪಕ್ಸಿ ಮೊಲದ ಹತ್ತಿರ ಬಂದು «ಆಹಾರ ನಿಮಿತ್ತವಾಗಿ ವನಗಳಲ್ಲಿ ಸಂಚರಿಸುವುದಕ್ಕೆ ಹೋಗೋಣ, ಬಾ” ಎಂದು ಕರೆಯಿತು, ಆ ಮೊಲವು« ಈಗ ಮಾಫಿ ಮಾಸ; ಚಳಿ ಹೆಚ್ಚು; ಈ ಸಮಯ ದಲ್ಲಿ ಮನೆಯನ್ನು ಬಿಟ್ಟು ಹೋಗಬಾರದು; ಸಡೃತುಗಳಲ್ಲಿ ಒಂದಾದ ಪ್ರ ಡಳಿಗಾಲದಲ್ಲಿ ಸ್ರುಷನು ಸ ಸ್ವಸ್ತ್ರೀಯೊಡನೆ ತನ್ನ "ಮನೆಯಲ್ಲಿರಬೇಕು; ಈ ಚಳಿಗಾಲದಲ್ಲಿ ಸ್ತ್ರೀಯರ ಸಹವಾಸವು ಜಟಾ ಅದನ್ನು ಬಿಟ್ಟು ಬೇರೆಡೆಯಲ್ಲಿ en ರುವುದು ದುಃಖಕರವಲ್ಲವೇ!” ಎಂದಿತು. ಜಾಣ ಹಕ್ಕಿ "ಮಾಘಮಾಸ ಸಕ್ಕಿಂತಲೂ ಪುಸ್ಕಮಾಸದಲ್ಲಿ ಚಳಿ ಹೆಚ್ಚು * ಎಂದು ಹೇಳಿತು. ಹೀಗೆ ಇವೆರಡೂ ಮಾಘೆಮಾಸದಲ್ಲಿ ಚಳಿ ಹೆಚ್ಚು ಎಂದು ಒಂದು; ಪುಷ್ಯಮಾಸದಲ್ಲಿ ಚಳಿ ಹೆಚ್ಚು ಎಂದು ಮತ್ತೊಂದು; ವಿವಾದಿಸಿ ಕೊಳ್ಳುತ್ತ್ಯ ಇವೆರಡು ಮಾಸಗಳಲ್ಲಿ ಹೆಚ್ಚು ಶೀತವಿರುವ ಮಾಸದ ನಿರ್ಣ ಯವನ್ನು ಬಲ್ಲವರಿಂದ ಮಾಡಿಸೋಣವೆಂದು ಹೇಳಿಕೊಂಡು ಹೊರಟುವು, ಹೀಗೆ ಹೋಗುತ್ತಿದ್ದಾಗ ಇವು ವಿಂಧ್ಯಪರ್ವತದ ಸಮೀಪದಲ್ಲಿದ್ದ ಶಾಂತ ರತಿಯೆಂಬ ನದಿಯ ತೀರದಲ್ಲಿ ಒಂದು ವಿಶ್ವೇಶ್ವರ ದೇವಾಲಯವನ್ನು ಕಂಡುವು. ಆ ದೇವಾಲಯದಲ್ಲಿ ದಧಿಕರ್ತವೆಂಬ ಒಂದು ದೊಡ್ಡ ಬೆಕ್ಕು ಹುಟ್ಟದ ಕಾಲದಿಂದ ಎಲ್ಲರ ಮನೆಯಲ್ಲಿ ಕದ್ದುತಿಂದು ಹೊಟ್ಟಿ ಹೊರೆದು ಕೊಳ್ಳು ತ್ತಿದ್ದಿತು. ಒಮ್ಮೆ ಅದು ಕ್ರೂರಕರ್ಮನೆಂಬ ವ್ಯಾಥನ ಮನೆಯಲ್ಲಿ ಮೊಸರಿನ ಗಡಿಗೆಯಲ್ಲಿ ಮುಖವನ್ನಿಟ್ಟು ಮೊಸರನ್ನು ತಿನ್ನುತ್ತಿದ್ದಾಗ ಆ ವ್ಯಾಧನು ಬಂದು, ಈ ಬೆಕ್ಕನ್ನು ಕೊಂದುಬಿಡಬೇಕೆಂದು ಹೊರಟನು ಆ ಸುಳಿವನ್ನು ಕಂಡು ಬೆಕ್ಕು ತಲೆ ಗಡಿಗೆಯೊಳಗೆ ಸಿಕ್ಕಿ ಚಟಿಸಟಸುತ್ತಿರು ನಾಗ್ಯ ಒಂದು ಕಲ್ಲಿಗೆ ತಾಕಿ, ಗಡಿಗೆ ಒಡೆದುಹೋಯಿತು. ಆದರೆ ಆ ಗಡಿ ಗೆಯ ಕಂಠವು ಬೆಕ್ಕಿನ ಕೊರಳಿಗೆ ತಗಲಿಕೊಂಡಿತು. ಇದರಿಂದ ಆ ಬೆಕ್ಕಿಗೆ ಆಹಾರ ಸಿಕ್ಕದೆ ಚಿಂತಾತುರವಾಗಿ, ಆ ದೇವಾಲಯದಲ್ಲಿ ಸೇರಿ ಕೊಂಡು, ತಪಸ್ವಿಯಂತೆ ಕಾಣುತ್ತಿದ್ದಿತು.. ಆ ಸ್ಥಳಕ್ಕೆ ಈ ಜಾಣ ಹಕ್ಕಿ ಮೊಲ ಬಂದು, ಈ ಬೆಕ್ಕನ್ನು ಕಂಡು "" ಇದು ಮಹಿಮಾಶಾಲಿ, ಇದರಿಂದ ಬಂದಿದ್ದಾರೆ. ಆ ಚಂದ್ರದೇವರಲ್ಲಿ ನಮಗೆ ದ್ರೇಷವೇನೂ ಇಲ್ಲ. ನಮಗೂ ಆ ಚಂದ್ರಡೇವರಿಗೂ ಸ್ನೇಹ ಮಾಡಿಕೊಡು'' ಎಂದು ಕೇಳಿತು. ಮೊಲವು ಇದನ್ನು ಕೇಳಿ ತನ್ನ ಮನಸ್ಸಿನಲ್ಲಿ «« ಓಹೋ! ಇದೊಂದು ಮಹಾಕಾರ್ಯಖೇ ಫಘಟಸಿತು'' ಎಂದು ಆಲೋಚಿಸಿಕೊಂಡು " ನಿಮ್ಮ ಸಮೂಹದೊಳಗಿನ ಬುದ್ಧಿವಂತನಾದ ಒಬ್ಬನನ್ನು ನನ್ನ ಜೊತೆಯಲ್ಲಿ ಕಳಿಸಿ ಕೊಡಿ. ಆ ಚಂದ್ರದೇವರೊಡನೆ ನಿಮಗೆ ಸಂಧಾನ ಮಾಡಿಕೊಡುವೆನು” ಎಂದು ಹೇಳಿತು, ಆ ಮೊಲದ ಜೊತೆಯಲ್ಲಿ ಶುಭಸ್ಪನೆಂಬ ಒಂದು ಆನೆ ಯನ್ನು ಕಳಿಸಿಕೊಡಲಾಯಿತು. ಇವೆರಡೂ ಕೂಡಿಕೊಂಡು, ಆ ಸರೋ ವರದ ಸಮೀಪಕ್ಕೆ ಬಂದುವು, ಮೊಲವು ತನ್ನ ಜೊತೆಯಲ್ಲಿ ಬಂದ ಆನೆ ಯನ್ನು ದ್ವೇಶಿಸಿ, «« ಆ ಚಂದ್ರನು ಇದೇ ಜಲದಲ್ಲಿ ಬಂದಿದ್ದಾನೆ, ಇವನಿಗೆ ನಮಸ್ಕಾರ ಮಾಡಿ ಬೇಗನೇ ಇಲ್ಲಿಂದ ಹೊರಟುಹೋಗು, ತಡಮಾಡಿ ದಕ್ಕೆ ಆತನ ಅನುಷ್ಠಾನಕ್ಕೆ ಭಂಗವೊದಗಿ, ಅವನಿಗೆ ಕೋಪಬಂದೀತು!'' ಎಂದು ಆ ನೀರಿನಲ್ಲಿ ಪ್ರತಿಬಿಂಬಿತವಾದ ಚಂದ್ರನನ್ನು ತೋರಿಸಿತು, ಆಸೆ ಅತ್ಯಂಶ ಭಯದಿಂದ ಚಂದ್ರನ ಬಿಂಬಕ್ಕೆ ನಮಸ್ಕಾರ ಮಾಡಿ ಹೊರಟು ಹೋಯಿತು. ಅಂದಿನಿಂದ ಆ ಮೊಲವೂ, ಇತರ ಮೃಗಗಳೂ ಅದೇ ಸರೋವರದ ಎಡೆಯಲ್ಲಿ ಸುಖವಾಗಿ ಇರತೊಡಗಿದುವು. ಈ ಕಥೆಯನ್ನು ಚಿರಂಜೀವಿ ಆ ಉಲೂಕರಾಜನ ಪ್ರಧಾನಿಗಳಿಗೆ ಹೇಳಿ, ಮತ್ತೆ “ದೊಡ್ಡವರ ಮಾತನ್ನು ಕೇಳುವುದರಿಂದ ವಿಷತ್ತು ದೂರ ವಾಗುತ್ತದೆ, ಅದೇ ದುಷ್ಟರ ಸಹವಾಸದಿಂದ ಶೀಘ್ರವೇ ನಾಶ ಸಂಭವಿಸು ತ್ತದೆ, ಇದಕ್ಕೆ ದೃಷ್ಟಾಂತ ಮೊಲ ಮತ್ತು ಜಾಣ ಹಕ್ಕಿ ಇನೆರಡೂ ಕಲಹ ಮಾಡಿಕೊಂಡು ತೀಕ್ಷ್ಣ ದಂತನ ಬಳಿಗೆ ಹೋದ ಕೂಡಲೇ ಮರಣ ಹೊಂದಿ ದುವು,'' ಎಂದು ನುಡಿಯಿತು. ಆ ಉಲೂಕ ರಾಜನ ಪ್ರಧಾನಿಗಳು "ಅದು ಹೇಗೆ?'' ಎಂದು ಕೇಳಿದುದಕ್ಕೆ ಚಿರಂಜೀವಿ ಹೀಗೆ ಹೇಳಿತು.

ಕಥೆ: ಸಾನುಮಾನನೆಂಬ ಪರ್ವತದ ತಪ್ಪಲಲ್ಲಿ ಒಂದು ದೊಡ್ಡೆ ಅಲದ ಮರದ ಮೇಲೆ, ಗಹ್ವರವೆಂಬ ಜಾಣಹಕ್ಕಿ ಗೂಡುಮಾಡಿಕೊಂಡಿ ಅವು ತಮ್ಮ ಗಜರಾಜನಲ್ಲಿಗೆ ಬಂದು ತಾವು ಕಂಡ ಸ್ಥಿತಿಯನ್ನೆಲ್ಲವರ್ಣಿ ಸಿ ಸಿದುವು, ಅದನ್ನು ಕೇ ಳಿ, ಆ ಗಜರಾಜನಿಗೆ ಬಹಳ ಸಂತೋ ಷವಾಯಿತು, ಅತ್ತಆ ಸರೋ ವರದ ಆಶ್ರಯದಲ್ಲಿದ್ದಮೃಗತತಿಯೆಲ್ಲ"ಈ ವನಕ್ಕೆ ಆನೆ ಗಳು ಬರುವುವಂತೆ, ಮುಂದೆ ನಮ್ಮ ಸ್ಥಿತಿ ಅಷ್ಟೇನೂ ಒಳ್ಳೆಯದಾಗದು, ಈ ವನವನ್ನೇ ನಾವು ಬಿಡಬೇ ಕು, ಇಲ್ಲಿರುವುದು ನಮಗೆ ಹಿತಕರ ವಲ್ಲ.” ಎಂದು ಯೋ ಚಿಸುತ್ತಚಿಂತೆಗೊ ಳಗಾಯಿತು. ಆ ಮೃಗಗಳಲ್ಲಿ ಹಿರಣ್ಯಕವೆಂಬ ಒಂದು ಮೊಲವಿತ್ತು. ಅದು ಬಹು ಬುದ್ಧಿಶಾಲಿ. ತ ಮೊಲವು ಆ ಮೃಗಗಳಿಗೆ “ಎಲೆ ಮೃಗಗಳೇ ! ನೀ ವು ಅಂಜಬೇ ಡಿರಿ. ನಾನು ಆ ಆನೆಯ ಹಿಂಡನ್ನು ಇಲ್ಲಿಗೆ ಬಾರದಹಾಗೆ ಮಾಡುವೆನು” ಎಂದಿತು. ಇದನ್ನು ಕೇ ಳಿ ಆ ಮೃಗಗಳೆಲ್ಲಸಂತೋ ಷದಿಂದ ಅದನ್ನು ಉಪಚರಿಸಿ “ನಿನ್ನಿಂದ ನಮ್ಮ ಕುಲಕೋ ಟ್ಯ ಪ್ರಾಣ ಉಳಿಯುವುದು, ದಯಮಾಡಿ ಆನೆಗಳು ಇಲ್ಲಿಗೆ ಬರದಂತೆ ಮಾಡು” ಎಂದು ಬೇ ಡಿ ಕೊ ಂಡುವು. ಮೊಲವು ಅಲ್ಲಿಂದ ಹೊ ರಟು ಗಜರಾಜನಲ್ಲಿಗೆ ಬಂದು “ಗಜರಾಜನೇ ! ನಿಮ್ಮ ಗಜಸಮುದಾಯವು ಚಂದ್ರದೇ ವರ ಸರೋ ವರಕ್ಕೆ ಬಂದು, ಅನೇ ಕ ವಿಧವಾಗಿ ಗಲಭೆ ಮಾಡಿ, ಆ ಸ್ಥಳಕ್ಕೆ ಗಜರಾಜ ಬರುವನೆಂದು ಕೂಗಿ ಹೇ ಳಿಬಂದುವು. ಈ ವರ್ತ ಮಾನವನ್ನು ಚಂದ್ರದೇ ವರು ಕೇ ಳಿ ಬಹಳ ಕೋ ಪತಾಳ್ಕಿ "ನನ್ನ ಸರೋ ವರಕ್ಕೆ ಇಷ್ಟು ಉಪಹತಿಯುಂಟಾಯಿತೇ ? ಇನ್ನು ಮೇ ಲೆ ಆ ಗಜಗಳು ಇಲ್ಲಿಗೆ ಬಂದರೆ ನಾವು ಅವುಗಳನ್ನು ಕ್ಷಯಿಸುವಂತೆ ಮಾಡುವೆನೆ'ಂ ದು ಅವರ ದೊ ರೆಗೆ ಹೇ ಳಿ ಬಾ ಎಂದು ನನ್ನನ್ನು ಕಳಿಸಿಕೊ ಟ್ಟುದರಿಂದ ಬಂದಿದ್ದೇನೆ” ಎಂದು ಹೇ ಳಿತು. ಇದನ್ನು ಕೇ ಳಿ ಆ ಗಜರಾಜನು ಕಂಗೆಟ್ಟು, ಭೀ ತಿಯಿಂದ "ಎಲ್ಲಪ್ರಾಣಿಗಳೂ ಚಂದ್ರನ ಕಳೆಯಿಂದ ಚೇ ತನವನ್ನು ಪಡೆದು ಬದು ಕುತ್ತವೆ. ಆದುದರಿಂದ ನಾವು ಆ ಚಂದ್ರನೊ ಡನೆ ವಿರೋ ಧವನ್ನು ಕಟ್ಟಿ ಕೊಂಡು ಬಾಳಲಾರೆವು'' ಎಂದು ತಮ್ಮಲ್ಲಿ ಆಲೋ ಚಿಸಿಕೊ ಂಡು, ಆ ಮೊಲವನ್ನು ತಮ್ಮ ಹತ್ತಿರದಲ್ಲಿ ಬರಮಾಡಿಕೊ ಂಡು " ಎಲೆ! ಶಶಕ ರಾಜನೇ ! ನಮ್ಮವರು ಚಂದ್ರದೇ ವರ ವನವೆಂಬುದನ್ನರಿಯದೆ ಬಂದು, ದಯಮಾಡಿ ತಪ್ಪಿಸಿಕೊ ಂಡು, ನಮಗೆ ಕ್ಷಮೆಯಿಡಲಿ” ಎಂದು ನಮನದಿಂದ ಹೇ ಳಿದನು. ನಾನು ಮಹಾನೀ ಚನನ್ನು ಓಲೈ ಸಿ, ಈ ಬೆಂದ ಹೊ ಟ್ಟಿಗಾಗಿ ಇಷ್ಟು ದಿನ ಕಷ್ಟಪಟ್ಟಿ ನು. ಇನ್ನು ನಿಮ್ಮ ಉಲೂಕರಾಜನನ್ನು ಓಲೈ ಸ ಬೇ ಕೆಂದರೆ ಇವನು ಅವನಿಗಿಂತ ಪರಮ ನೀ ಚನು. ಇಂಥ ನೀ ಚರನ್ನು ಸೇ ನಿಸಿಕೊ ಂಡು ಬದುಕುವುದಕ್ಕಿಂತ ಬೀ ದಿಯಲ್ಲಿ ಯಾಚಿಸಿಕೊಂಡು ಬದುಕುವುದು ಲೇ ಸು. ಕುರುಡುಗಣ್ಣಿನ ಹೆಂಗಸು ಕಾಡಿಗೆಯನ್ನು ಹಚ್ಚುವುದು, ಬೋ ಳ ಮಂಡೆಯ ಹೆಂಗಸು ಹೂ ಮುಡಿಯುವುದು, ಒಳ್ಳೆಯ ಕವಿ ನೀ ಚನಾದ ದೊ ರೆಯ ಆಸ್ಥಾನಕ್ಕೆ ಹೋ ಗುವುದು, ಎಷ್ಟು ದುಃಖಕರವಾದುದು! ಅಲ್ಲದೆ ಈ ಸಂದರ್ಭ ಕ್ಕೆ ಸರಿಹೋ ಗುವಂತೆ ಒಂದು ಕಥೆಯುಂಟು, ಅದನ್ನು ಕೇ ಳಿ.

ಮಹಾನೇ ರಿನ ತಪ್ಪಲಲ್ಲಿ ಕಮಲಾಂಜನವೆಂಬ ಒಂದು ಗಜರಾಜ. ಅದು ಸುಖದಿಂದ ಕಾಲಕಳೆಯುತ್ತಿರುವಾಗ, ಒಮ್ಮೆ ಕುಶ ವೆಂಬ ಬುದ್ಧಿಶಾಲಿಯಾದ ಮತ್ತೊ ಂದು ಆನೆಯನ್ನು ಕಂಡು "ಈ ಸ್ಥಳ ದಲ್ಲಿ ಮಳೆಯಿಲ್ಲದೆ ನೀ ರಿನ ಬರ ಬಂದೊ ದಗಿದೆ. ಆದುದರಿಂದ ನಮ್ಮ ಪರಿವಾರದ ಆನೆಗಳನ್ನೆಲ್ಲಕೂಡಿಕೊ ಂಡು ನೀ ರಿರುವ ಸ್ಥಳಕ್ಕೆ ಹೊ ರಟು ಹೋ ಗೋ ಣ” ಎಂದು ಹೇ ಳಿತು. ಆ ಸಮಯದಲ್ಲಿ ನಿರಾತಂಕನೆಂಬ ಒಂದು ವೃದ್ಧಗಜವು “ಗಜರಾಜನೇ ! ನೀ ನು ವ್ಯಾ ಕುಲಗೊ ಳ್ಳ ಬೇ ಡ, ಇಲ್ಲಿಗೆ ಹನ್ನೆರಡು ಯೋ ಜನ ಪ್ರಮಾಣದಲ್ಲಿ ಚಂದ್ರಪುಷ್ಕರಿಣಿಯೆಂಬ ಸರೋ ವರವಿದೆ, ಅದು ಕೂರ್ಮ ನೇ ಅಡಿಯಾದ ಸರೋ ವರ. ಎಂದಿಗೂ ಬತ್ತುವುದಿಲ್ಲ. ಇಂಥ ಸರಸ್ಸನ್ನು ಆಶ್ರಯಿಸಿದರೆ ಚಿಂತೆ ತೊ ಲಗುವುದು” ಎಂದು ಬಿನ್ನವಿಸಿಕೊ ಂಡಿತು, ಈ ಮಾತನ್ನು ಕೇ ಳಿ ಆ ಗಜರಾಜನು ಸಂತೋ ಷಪಟ್ಟು, ಆ ಸ್ಥಳವನ್ನು ನೋ ಡಿಕೊ ಂಡು ಬರುವುದಾಗಿ ಆ ವೃದ್ಧಗಜದೊ ಡನೆ ನಾಲ್ಕೆ ಂಟು ಆನೆಗಳನ್ನು ಕಳಿಸಿತು. ಅವು ಬಂದು, ಸರೋ ವರ ವನ್ನು ಕಂಡು ಸಂತೋ ಷದಿಂದ ಅಲ್ಲಿದ್ದಫಲಭರಿತವಾದ ವೃಕ್ಷಗಳನ್ನು ಮುರಿದು ಭಕ್ಷಿಸಿ, ನೀ ರಾಟವಾಡಿ, ತಾವರೆ ಎಲೆಗಳನ್ನು ಕಿತ್ತು ತಿಂದು, ಆ ಸರೋ ವರದ ಸುತ್ತುವಳಯದಲ್ಲಿ ನಲಿದಾಡಿ, “ಈ ವನಕ್ಕೆ ನಮ್ಮ ಗಜ ರಾಜನ ಸಮೂಹವೆಲ್ಲಬರುವುದೆಂದು” ಹರ್ಷ ದಿಂದ ಹಿಗ್ಗಿದುವು. ಆ ಮೇಲೆ, ಭೇದವಾಕ್ಯ, ಸಂಧಿವಿಗ್ರಹ, ಯಾನ, ಆಸನ, ದ್ವಯವಿಭಾಗ,್ಯ ಸಮಾಶ್ರಯ- ಈ ಆರು ಗುಣಗಳಲ್ಲಿ ತನಗಿಂತ ವೆಗ್ಗಳವಾಗಿ ಬಲಿಷ್ಠ ರಾದವರ ಸಂಗಡ ಗಡಿಸಂಧಾನವನ್ನು ಮಾಡಿಕೊಳ್ಳು ವುದು; ಇದಕ್ಕೂ ಬಹಳ ದೊಡ್ಡ ವನಾದವ ನನ್ನು ಓಲೈಸುವುದು; ತನಗಿಂತ ಅಲ್ಪನಾದವನಲ್ಲಿ ಕದನವಾಡಿ ದಂಡೆತ್ತಿ ಕಾರ್ಯವನ್ನು ಸಾಧಿಸಿಕೊಳ್ಳುವುದು; ತಾನು ಎಲ್ಲರಿಗೂ ಒಳ್ಳೆ ಯವನೆಂದೆ ನಿಸಿ ಅವರಿಂದ ಕೆಲಸವನ್ನು ತೆಗೆದುಕೊಳ್ಳುವುದು; ಸಾಮ, ದಾನ, ಭೇದ, ದಂಡ-ಈ ಚತುರೋಪಾಯಗಳನ್ನು ಅರಿತು ನಡೆವುದು; ಅರಸರ ಕರ್ತವ್ಯ ವಾಗಿದೆ. ಅಲ್ಲದೆ, ಆರು ಪ್ರಕಾರದ ಸೇನೆಯನ್ನು ರಾಜನಾದವನು ಒದಗಿಸಿ ಕೊಂಡಿರಬೇಕು; ತನಗೆ ಹಿತವನ್ನು ಕೋರುವವರು ಹಿರಿಯರೂ, ಹಳಬರೂ ಆಗಿರಬೇಕು; ಸರಿಯಾಗಿ ಸಂಬಳವನ್ನು ತೆಗೆದುಕೊಂಡು ಸೇವಿಸುವ ಭಟರು ಇರಬೇಕು; ಸ್ನೇಹ ಪೂರ್ವಕವಾಗಿ ಓಲೈಸುವವರಿರಬೇಕು; ಗಿರಿದುರ್ಗದ ಮನ್ನೆಯರ ಕೂಟವೂ ಇರಬೇಕು; ತನ್ನನ್ನು ಹೊಂದಿಕೊಂಡು ಹೋರಾ ಡುವವರೂ ಇರಬೇಕು; ರಾಜನ ಬಲ ಹೀಗೆ ಇದ್ದರೈ ಅವನ ರಾಜ್ಯವು ಹೆಚ್ಚುವುದು, ಆದುದಂಂದ ನೀನು ಈ ನೀತಿಯನ್ನ ನುಸರಿಸಿ ವರ್ತಿಸ ಬೇಕು. ಬಲವಂತರಲ್ಲಿ ಸುಮ್ಮನೆ ,ವಿರೋಧವನ್ನು ಮಾಡಬಾರದು.’ ಎಂದು ತನಗೆ ತೋರಿದ ನೀತಿಯನ್ನು ಹೇಳಿತು. ಆಗ ಚಿರಂಜೀವಿ ಎಂಬ ಕಾಗೆ "ರಾಜನೇ! ಮೊದಲು ಆ ಗೂಗೆಗೆ ರಾಯಪಟ್ಟಿವು ಆಗದ ಹಾಗೆ ಮಾಡಿ, ಅದನ್ನು ಕೊಂದುಬಿಡಬೇಕು.'' ಎಂದು ಉಪಾಯವನ್ನು ಹೇಳಿತು. ಚಿರಂಜೀನಿ ಹೇಳಿದ ಉಪಾಯವೇ ಸರಿಯೆಂದು ಸಂತೋಷಪಟ್ಟು, ಆ ರಾಜಕಾಗೆ ಅದಕ್ಕೆ ಬಹುಮಾನವನ್ನು ಕೊಟ್ಟು ಮನ್ನಿಸ್ಕಿ ಆ ಉಲೂಕ ರಾಜನ ಪಟ್ಟವನ್ನು ಕೆಡಿಸಿ ಬರುವಂತೆ ಆಜ್ಞಾಪಿಸಿ ಕಳಿಸಿತು. ತನ್ನ ರಾಜನಿಂದ ಆಜ್ಞ ಸ್ತವಾಗಿ ಚಿರಂಜೀನಿ, ಉಲೂಕರಾಜನ ಪ್ರಧಾನಿಗಳ ಬಳಿಗೆ ಬಂದಿತು. ಆ ಪ್ರಧಾನಿಗಳು ಚಿರಂಜಿವೀಯನ್ನು ಮರ್ಯಾದೆಯಿಂದ ಬರಮಾಡಿಕೊಂಡು, ಉಪಚರಿಸಿ, ಅನೇಕ ವಿಧದಿಂದ ಮನ್ನಿಸಿ, ಅದು ಅಲ್ಲಿಗೆ ಬಂದ ಕಾರ್ಯವಿಶೇಷನವೇನೆಂದು ಬೆಸಗೊಂಡುವು. ಅದಕ್ಕೆ ಆ ಚಿರಂಜೀವಿ ಮಹಾಚಿಂತಾಕ್ರಾಂತವಾಗಿ, ವ್ಯಾಕುಲದಿಂದ ಬಿಸು ಸಂಧಿವಿಗ್ರಹ ರ್ಜ ಒಂದು ದಿನ ಉಲೂಕರಾಜನು ಮಹದೈಶ್ವರ್ಯದಿಂದ ಮತ್ತನಾಗಿ, ತನಗಾರೂ ಇದಿರಿಲ್ಲವೆಂದು ಗರ್ವಿಸಿ ತನ್ನ ಪ್ರಧಾನರನ್ನು ಕರೆದು ಅವರಿಗೆ “ನನಗೆ ಐಶ್ವರ್ಯಕ್ಕೆ ಕಡಮೆಯಿಲ್ಲ. ನನ್ನ ಸಾಹಸಕ್ಕೆ ಎಣೆಯಿಲ್ಲ. ಆದ್ದ ರಿಂದ ನಾನು ಚಕ್ರವರ್ತಿಸಟ್ಟವನ್ನು ಕಟ್ಟಿಕೊಳ್ಳ ಬೇಕು. ಅದಕ್ಕೆ ಸಕಲ ಸನ್ನಾ ಹನನ್ನೂ ಅಣಿಮಾಡಿರಿ” ಎಂದು ಆಜ್ಞಾಪಿಸಿದನು. ಮೇಘೆವರ್ಮನೆಂಬ ವಾಯಸರಾಜನಿಗೆ ಈ ವಾರ್ತೆ ತಿಳಿದು ಅವನು ಮಹಾಚಿಂತಾಕ್ಟಾಂತನಾಗಿದ್ದನು . ಹೀಗೆ ವ್ಯಾಕುಲಚಿತ್ತನೂಗಿ ಆ ಕಾಗೆ ತನ್ನ ಪ್ರಧಾನಿಗಳನ್ನು ಕರೆಸಿ ಮಂತ್ರಾಲೋಚನೆ ಮಾಡಿತು. “ನಮ್ಮ ಶತ್ರುವಾದ ಉಲೂಕರಾಜನು ರಾಯಪಟ್ಟಿವನ್ನು ಕಟ್ಟಿಕೊಳ್ಳು ತ್ರಾನಂತೆ. ಆತನು ಮೊದಲೇ ನಮ್ಮ ಶತ್ರು. ಇನ್ನು ಮೇಲೆ ರಾಯಸಪಟ್ಟನನ್ನು ಕಟ್ಟಿಕೊಂಡ ನೆಂದರೆ ಅವನು ನಮ್ಮನ್ನು ಹಿಂಸಿಸದೆ ಬಿಟ್ಟಾನೆಯೇ? ಇದಕ್ಕೇನು ಉಪಾಯವನ್ನು ಹೇಳುವಿರಿ?” ಎಂದು ಕಾಗೆ ತನ್ನ ಪ್ರಧಾನಿಗಳನ್ನು ಕೇಳಿತು. ಅದಕ್ಕೆ ಅದೀಪಿಯೆಂಬ ಕಾಗೆ, ಎಲೇ, ಮೇಘನರ್ಮುನೆಲ! ಸತ್ತ್ವವುಳ್ಳವನ ಸಂಗಡ ವೈರವನ್ನು ಬೆಳಸುವುದಕ್ಕಿಂತ ದೇಶವನ್ನು ಬಿಟ್ಟು ಹೋಗುವುದೇ ಮೇಲು, ಇದೇ ವಿವೇಕಿಗಳ ಲಕ್ಷಣ. ಅಥವಾ ಆತನನ್ನು ಓಲೈಸಿಕೊಂಡಿರಬೇಕು.' ಎಂದು ತನ್ನ ಅಭಿಪ್ರಾಯವನ್ನು ಹೇಳಿತು. ಪ್ರದೀಪಿಯೆಂಬ ಕಾಗೆ «ಮೇಘವರ್ಮರಾಜನೇ! ತನ್ನ ಸತ್ತ್ವ ವನ್ನು ಅರಿಯಬೇಕು. ವೈರಿಯ ಸತ್ತ್ವವನ್ನು ಅರಿಯಬೇಕು. ದೇಶಕಾಲ ವನ್ನು ಅರಿಯಬೇಕು. ಈ ಮೂರು ಅಂಶಗಳನ್ನೂ ಅರಿತು ಕಾರ್ಯಪ್ರವ ರ್ತನಾಗಬೇಕು.” ಎಂದು ತನ್ನ ಮತವನ್ನು ವ್ಯಕ್ತಗೊಳಿಸಿತು ಉದೀಪಿ ಎಂಬ ಕಾಗೆ "ರಾಜನೇ! ಒಂದು ಕಾರ್ಯವನ್ನೆಣಿಸುವವನು ತನ್ನ ಕಾರ್ಯ ಕೈಗೂಡುವ ಉಪಾಯವನ್ನೂ ಎಣಿಸಬೇಕು. ಅಷ್ಟೇ ಅಲ್ಲದೆ, ಆ ಕಾರ್ಯ ದಲ್ಲಿ ವಿಫ್ನೆ ಬಂದರೆ, ಅದನ್ನು ಸರಿಹರಿಸುವ ಉಪಾಯವನ್ನೂ ಕಂಡುಕೊಳ್ಳ ಬೇಕು. ಆ ಕಾರ್ಯಕ್ಕೆ ತಕ್ಕ ದ್ರವ್ಯವೂ ಇರಬೇಕು. ಆ ಕಾರ್ಯವನ್ನು ಕೊನೆಗಾಣಿಸುವೆನೆಂಬ ಹುರುಪೂ, ಗೆಲವೂ ಮನಸ್ಸಿನಲ್ಲಿರಬೇಕು.” 'ಎಂದು ಅಭಿಪ್ರಾಯಪಟ್ಟಿತು. ಸಂದೀಸಿಯೆಂಬ ಕಾಗೆ « ನೀತಿಶಾಸ್ತ್ರ, ಕುಡಿಯುವ ಸದ್ದು ಮಾಡಬೇಕು. ಇದನ್ನು ವ್ಯಾಧನು ನೋಡಿ ನಿನ್ನನ್ನು ಹಿಡಿಯಲು ಕೆರೆಯ ಹತ್ತಿರ ಬಂದು ಆಮೆಯನ್ನು ಭೂಮಿಯ ಮೇಸೆ ಇಡುವನು. ಇಟ್ಟ ಕೂಡಲೇ ನಾನು ಆಮೆಯ ಕಟ್ಟನ್ನು ಕತ್ತರಿಸುವೆನು. ಒಡ ನೆಯೇ ಆಮೆ ನೀರಿನೊಳಗೆ ಹಾರಿಕೊಳ್ಳುವುದು. ಈ ಸೊಪ್ಪು ಳನ್ನು ಕೇಳಿ ನೀನೂ, ನಾವೂ ಓಡಿ ಹೋಗಬೇಕು.'' ಎಂದು ಉಪಾಯವನ್ನು ಹೇಳಿ ಕೊಟ್ಟತು. ಈ ಉಪಾಯವನ್ನು ಎಲ್ಲವೂ ಜಸ್ಸಿಕೊಂಡು ಅದರಂತೆ ಮಾಡಿದುವು, ಮಂಥರನೆಂಬ ಆಮೆ ಬಂಧಮುಕ್ತವಾಗಿ ನೀರಿನಲ್ಲಿ ಓಡಿ ಹೋಯಿತು. ಇತ್ತ ಆ ವ್ಯಾಧನು ಎಷ್ಟು ಶ್ರಮ ಪಟ್ಟರೂ, ಕಾರ್ಯವು ಸಿದ್ಧಿಸದೆ ಇದ್ದುದಕ್ಕೆ ದುಃಖಪಟ್ಟು ತನ್ನ ಮನೆಗೆ ಹೊರಟು ಹೋದನು. ಅವನು ದೂರ ಹೋದ ಮೇಲೆ ಕಾಗೆ, ಆಮೆ, ಎರಳೆ, ಇಲಿ-ಇವು ನಾಲ್ಕು ಅತ್ಯಂತ ಸಂತೋಷಪಟ್ಟು ಸ್ವಸ್ಥಾನದಲ್ಲಿ ಪೂರ್ವದ ಪ್ರಕಾರ ಸುಖದಿಂದ ಇರತೊಡಗಿದುವು. ಆದ್ದರಿಂದ ದರಿದ್ರನಾದರೂ, ಶಕ್ತಿಹೀನನಾದರೂ, ಕುರೂಪಿಯಾದರೂ, ಸರಿಯೇ ! ಮಿತ್ರರಾಗಿ ಕೂಡಿದ್ದುಕೊಂಡು ಪರಸ್ಪರ ಹಿತವನ್ನು ಮಾಡಬೇಕು. ಹೀಗೆ ಈ ಕಥಾ ಸಮೂಹವನ್ನು ವಿಷ್ಣುಶರ್ಮನು ಆ ಮೂವರು ರಾಜ ಪುತ್ರರಿಗೆ ಹೇಳಿ ಸುಹೃಲ್ಲಾಭವೆಂಬ ದ್ವಿತೀಯತಂತ್ರವನ್ನು ಮುಗಿಸಿದನು.

"ರಾಜಕುಮಾರರೇ, ಕೇಳಿ! ಮೊದಲು ವಿರೋಧವಾಗಿದ್ದವರಲ್ಲಿ ಆ ಮೇಲೆ ವಿಶ್ವಾಸವನ್ನಿಡಬಾರದು. ಹೀಗೆ ವಿಶ್ವಾಸವನ್ನಿಟ್ಟ ಪಕ್ಷದಲ್ಲಿ ಗೂಗೆ ತನ್ನ ಗೂಡನ್ನು ಕಾಗೆಯಿಂದ ಸುಡಿಸಿಕೊಂಡು ನಾಶ ಹೊಂದಿದಂತಾಗು ವುದು.” ಎಂದು ವಿಷ್ಣುಶರ್ಮನು ಕಥೆಗೆ ಪೀಠಿಕೆಯನ್ನು ಹಾಕಿದ ಕೂಡಲೆ ರಾಜಪುತ್ರರು ""ಅದು ಹೇಗೆ ನಡೆಯಿತು? ವಿಸ್ತಾರವಾಗಿ ಹೇಳಬೇಕು” ಎಂದು ಕೇಳಿದರು. ಆಗ ವಿಷ್ಣುಶರ್ಮನು ಕಥೆಯನ್ನು ಮುಂದುವರಿಸಿದನು,
ಕಥೆ:. ಅನುಸಮನೆಂಬ ದೇಶ, ಅಲ್ಲಿ ಪಾರಿಯಾತ್ರನೆಂಬುದೊಂದು ಪರ್ವತ. ಆ ಪರ್ವತದ ಕೋಡುಗಲ್ಲಿನ ಒಂದು ಗುಹೆಯಲ್ಲಿ ನಿಮರ್ದನವೆಂಬ ಒಂದು ಗೂಗೆ ತನ್ನ ಮಿತ್ರ ಕಳತ್ರ, ಪರಿವಾರದೊಂದಿಗೆ ರಾಜ್ಯವಾಳುತ್ತಿದ್ದಿತ್ತು. ರಕ್ತಾಕ್ಷ, ಕ್ರೂರಾಕ್ಷ, ದ್ವೀಪಾಕ್ಷ, ವಾಕ್ಷಾಕ್ಷ--ಎಂಬ ನಾಲ್ವ ರನ್ನು ಆ ಉಲೂಕರಾಜನು ಪ್ರಧಾನಿಗಳನ್ನನ್ನು ಮಾಡಿಕೊಂಡಿದ್ದನು. ಆ ಪರ್ವತಕ್ಕೆ ಯೋಜನಪ್ರಮಾಣದಲ್ಲಿ ಗಾಂಧಾರವೆಂಬ ಪರ್ವತದ ತಪ್ಪಲಲ್ಲಿ ಒಂದು ವಟವೃಕ್ಷವಿದ್ದಿತು. ಆ ವೃಕ್ಷದ ಮೇಲೆ ಮೇಘವರ್ಮ ನೆಂಬ ವಾಯಸರಾಜನು ತನ್ನ ಕುಟುಂಬ ಪರಿಜನರೊಡನೆ ವಾಸವಾಗಿ ದ್ದನು. ಈ ಕಾಗೆಗೆ ಅದೀಪಿ,ಉದೀಪಿ, ಪ್ರದೀಪಿ, ಸಂದೀಪಿ, ಎಂಬ ನಾಲ್ಕು ಪ್ರಧಾನಿ ಕಾಗೆಗಳಿದ್ದುವು. ಈ ಕಾಗೆ ಬಹಳ ಸೆತ್ತ್ವಶಾಲಿಯಾಗಿ ರಾಜ್ಯವನ್ನಾಳುತ್ತಿದ್ದಿತು. ಇತ್ತ ಉಲೂಕರಾಜನು ರಾಜ್ಯಮದದಿಂದ ವಿಜೃಂಭಿಸುತ್ತಿರುವನು, ಎಂಬುದನ್ನು ತಿಳಿದು “ತನಗೆ ಮತ್ತೊಬ್ಬ ಪ್ರಧಾನಿ ಯಿದ್ದರೆ ಸಹಾಯವಾದೀತು'' ಎಂದು ಬಗೆದು ಆ ವಾಯಸವು ಚಿರಂಜೀವಿ ಎಂಬ ಒಂದು ಕಾಗೆಯನ್ನು ಪ್ರಧಾನಿಯನ್ನಾಗಿ ಮಾಡಿಕೊಂಡಿತು, ಹೀಗೆ ಈ ಐದು ಕಾಗೆಗಳನ್ನು ಪ್ರಧಾನಿಗಳನ್ನಾಗಿ ಇರಿಸಿಕೊಂಡು ಕಾಗೆ ರಾಜ್ಯ ಪಾಲನ ಮಾಡುತ್ತಿದ್ದಿತು. ನಮ್ಮ ನ್ಯಾಯವು ಬಗೆಹೆರಿಯುವುದು” ಎಂದು ನಿಶ್ಚಯಿಸಿಕೊಂಡು,` ಆ ಮಾರ್ಜಾಲದ ಸಮೀಪಕಸೈೆ ಹೋಗಿ ಭಕ್ತಿಯಿಂದ ವಂದಿಸಿ, "" ಎಲೇ, ಮಹಾ ಪುರುಷನೇ, ನಮ್ಮಿಬ್ಬರ ನ್ಯಾಯವನ್ನು ತಿದ್ದಿ ಕೊಡು '' ಎಂದು ಬಿನ್ನನಿಸಿಕೊಂಡುವು. ಇವುಗಳನ್ನು ನೋಡಿ, ಆ ಮಾರ್ಜಾಲವು ಮಹಾ ಕೋಪತಾಳಿ “ಅಕಟಕಟಾ! ಎಂಥ ಪಾಪದ ಮಾತುಗಳನ್ನು ಕೇಳಿದೆನು! ನಾನು ನ್ಯಾಯವನ್ನು ತೀರಿಸಬೇಕೆಂದೇ ಇಷ್ಟು ದಿವಸ ಬದುಕಿದೆನೇ! ನೀವು ಮಹಾಪಾಸಿಗಳು. ನಿಮ್ಮಮೋರೆಯನ್ನು ನೋಡಬಾರದು. ನೀವಿ ಲ್ಲಿಂದ ಹೋರಟುಹೋಗಿ ” ಎಂದು ನಿಷ್ಮುರವಾಡಿತು. ಅದನ್ನು ಇವೆರಡು ಪ್ರಾಣಿಗಳು ಬಹಳ ದೈನ್ಯದಿಂದ ಬೇಡಿಕೊಂಡುವು. ಮಾರ್ಜಾಲವು ಎಲೇ, ಪ್ರಾಣಿಗಳೇ! ಒಂದು ದಿನ ಪೌರೋಹಿತ್ಯ ಮಾಡಿದರೆ, ಮಠ, ಮನೆ, ಅಗ್ರಹಾರಗಳ ಪಾರುಪತ್ಯವನ್ನು ಮೂರು ದಿವಸ ಮಾಡಿದರೆ, ಗ್ರಾಮದ ಪಾರುಪತ್ಯವನ್ನು ಆರು ತಿಂಗಳು ಮಾಡಿದರೆ, ಒಂದು ಕೋಟ ಜನ್ಮ ಚಂಡಾಲನಾಗಿ, ಹುಟ್ಟುವನೆಂಬ ನೀತಿಯುಂಟು, ಬಲ್ಲವರು ಕೂಟ ಸಾಕ್ಷಿನ್ಯಾಯವನ್ನು ಹೇಳಬಾರದು” ಎಂದು ಪುನಃ ತಿರಸ್ಕಾರ ಮಾಡಿತು. ಅದಕ್ಕೆ ಇವೆರಡೂ ಮತ್ತೊಮ್ಮೆ é ಎಲ್ಪೈ, ಸ್ವಾಮಿ! ನೀನು ಕೂಟಸಾಕ್ಸಿ ನ್ಯಾಯದಾತನಲ್ಲ. ತಪಸ್ವಿಗಳಾದವರು, ದಾನಶೀಲರಾದವರು, ದಾನಸಂಪ ತ್ತಿಯುಳ್ಳವರು ವಿನಯವುಳ್ಳ ವರು-ಇವರಿಂದ ನ್ಯಾಯ, ಧರ್ಮ, ನೀತಿಗ ಗಳನ್ನು ಕೇಳಬೇಕು '” ಎಂದು ನ್ಯಾಯವನ್ನು ಯಾಚಿಸಿದುವು. ಆ ಮೇಲೆ ಆ ಬೆಕ್ಕು ತನ್ನ ಮನಸ್ಸಿನಲ್ಲಿಯೋ ಆಲೋಟಚಿಸಿಕೊಂಡು, ವಿಸ್ಮಯಪಟ್ಟು, ಈ ಮೃಗ ಪಕ್ಸಿಗಳು ತನಗೆ ಈಗ ಆಹಾರವಾಗಿ ದಕ್ಕುವುವೆಂದು ಹಿಗ್ಗಿ, “ಎಲ್ಲೇ ಮೃಗಪಕ್ಸಿಗಳೇ! ನನ್ನ ಕೊರಳಲ್ಲಿ ಒಂದು ಕಂಠಮಾಲೆಯಿದೆ ; ಅದನ್ನು ನೀವು ತೆಗೆದಕ್ಕೆ ನಿಮಗೆ ನ್ಯಾಯ ಹೇಳುತ್ತೇನೆ'' ಎಂದಿತು, ಇದನ್ನು ಕೇಳಿ, ಅವೆರಡೂ ಪ್ರಯತ್ನದಿಂದ ಬೆಕ್ಕಿನ ಆ ಕಂಠಮಾಲೆಯನ್ನು ತೆಗೆ ದುವು. ಈಗ ಬೆಕ್ಕಿನ ಬಂಧನ ಪರಿಹಾರವಾಯಿತು. ಅದು ಸಂತೋಷ ಪಟ್ಟು, “ ನಿಮ್ಮ ನ್ಯಾಯವೇನು?'' ಎಂದು ಕೇಳಿತು. ಆ ಮೃಗಪಕ್ಸಿ ಗಳು ತಮ್ಮ ತಮ್ಮ ವೃತ್ತಾಂತವನ್ನು ವಿವರಿಸಿದುವು. ಮಾರ್ಜಾಲವು “ನಾನು ಮಹಾವೃದ್ಧನಾಗಿದ್ದೇನೆ; ನೀವು ಹೇಳುವುದು ನನಗೆ ಸರಿಯಾಗಿ ಕೇಳಿಬರುತ್ತಿಲ್ಲ. ನೀವು ನನ್ನ ಸಮೂಪಕ್ಕೆ ಬಂದು, ಒಂದೊಂದು ಮಾತನ್ನು ಕಿವಿಯೊಳಗೆ ಹೇಳಬೇಕು'' ಎಂದಿತು. ಅವು ಬೆಕ್ಕಿನ ಹತ್ತಿರ ನಿಂತು ತಮ್ಮ ವೃತ್ತಾಂತವನ್ನು ತಿಳಿಸುತ್ತಿದ್ದಾಗ, ಆ ಬೆಕ್ಕು ಗಬಕ್ಕನೆ ಅವೆರಡನ್ನು ಹಿಡಿದುಕೊಂಡು ಮುರಿದು ಭಕ್ಸಿಸಿಬಿಟ್ಟಿತು, ಆದ ಕಾರಣ ನೀಚರಾದ ಅರಸುಗಳನ್ನೂ, ಕ್ಷುದ್ರರಾದ ಗುರುಹಿರಿಯರನ್ನೂ ನಂಬಬಾರದು, ನಂಬಿದರೆ ಕೆಡುವರು, ಈ ರೀತಿಯಲ್ಲಿ ಆ ಚಿರಂಜೀವಿಯೆಂಬ ಪ್ರಧಾನಿ ಉಲೂಕರಾಜನ ಪ್ರಧಾನಿಗಳಿಗೆ ಹೇಳಿ, “ಈಗ ನೀವು ನೀಚನಾದ ರಾಜನಿಗೆ ಪಟ್ಟವನ್ನು ಕಟ್ಟ ಬೇಕೆಂದಿರುವಿರಿ. ಇದು ಎನ್ಟು ಅಪಾಯಕಾರವಾದುದು '' ಎಂದು ತಿರ ಸ್ವಾರ ಹುಟ್ಟುವ ಹಾಗೆ ಮಾತಾಡಿತು, ಆ ಉಲೂಕರಾಜನ ಪ್ರಧಾನಿಗ ಳನ್ನು ಪಟ್ಟಕಟ್ಟದ ಹಾಗೆ ಒಡಂಬಡಿಸಿ, ಅವುಗಳಿಂದ ಅಪ್ಪಣೆಯನ್ನು ಪಡೆದು, ತನ್ನ ಒಡೆಯನಾದ ಮೇಘವರ್ಮನ ಬಳಿಗೆ ಬಂದು ಈ ವೃತ್ತಾಂತ ವನ್ನೆಲ್ಲ ಅರಿಕೆ ಮಾಡಿಕೊಂಡಿತು. ಇದನ್ನೆಲ್ಲ ಕೇಳಿ, ಮೇಘೆವರ್ಮವೆಂಬ ಕಾಗೆಗೆ ಸಂತೋಷವಾಗಿ ಅದು ನಿಶ್ಚಿಂತೆಯಿಂದ ಇದ್ದಿತು. ಇತ್ತ ಆ ಉಲೂಕರಾಜನ ಪ್ರಧಾನಿಗಳು ತಮ್ಮ ತಮ್ಮೊಳಗೆ "ಈ ಉಲೂಕರಾಜನಿಗೆ ನಾವು ರಾಯಪಟ್ಟವನ್ನು ಕಟ್ಟಿದರೆ, ಮುಂದೆ ನಮ್ಮನ್ನು ಕೈಕೊಳ್ಳನು. ಇವನು ಮಹಾನೀಚನು, ಹೀನ ಜಾತಿಯವನು, ಆದ್ದ ರಿಂದ, ಇವನಿಗೆ ಪಟ್ಟ ಕಟ್ಟುವುದು ಉಚಿತವಲ್ಲ'' ನೆಂದು ನಿರ್ಣಯಿಸಿ ಕೊಂಡು ತಮ್ಮ ಒಡೆಯನ ಬಳಿಗೆ ಹೋಗಿ, ಹೀಗೆ ಬಿನ್ನನಿಸಿಕೊಂಡುವು. "" ಮಹಾಸ್ವಾಮೀ! ಸಟ್ಟಕಟ್ಟುವುದಕ್ಕಾಗಿ, ಸುಮೂಹೂರ್ತವನ್ನು ತೆಗೆದು ಕೊಡುವಂತೆ, ಜೋಯಿಸರನ್ನು ಕೇಳಿದೆವು. ಅವರು "ಈ ತಿಂಗಳು ಲಗ್ನ ವೂ ಇಲ್ಲ; ಒಳ್ಳೆಯ ದಿನವೂ ಇಲ್ಲ' ಎಂದು ಹೇಳಿದರು. ಇದಲ್ಲದೆ ನಮ್ಮ ಪ್ರಜೆಗಳೂ, ಸರಿವಾರದವರೂ ಕಂಡ ಕಡೆಗೆ ಚದರಿ ಹೋಗಿದ್ದಾರೆ. ಅವರು ಬಂದ ಮೇಲೆ ಒಳ್ಳೆಯ ಮುಹೂರ್ತವನ್ನು ನೋಡಿ ರಾಜಪಟ್ಟ ವನ್ನು ಕಟ್ಟಿಸಿಕೊಳ್ಳೋಣವಾಗಬೇಕು. '” ತನ್ನ ಪ್ರಧಾನಿಗಳ ಈ ಅಭಿಪ್ರಾ ಯವನ್ನು ಕೇಳಿ, ಆ ಉಲೂಕರಾಜನು "ಹಾಗೆಯೇ ಆಗಲಿ" ಎಂದು ಒಡಂಬಟ್ಟು, ಅವುಗಳನ್ನು ಕಳಿಸಿ ಕೂಟವನು. ಆದರೆ ಮನಸ್ಸಿನಲ್ಲಿ ರಾಯಸಟ್ಟಿಯನ್ನು ಕಟ್ಟಿಕೊಳ್ಳುವುದು ಆಗಲಿಲ್ಲವೆಂಬ ವ್ಯಾಕುಲವುಂಟಾಯಿತು. ತನ್ನ ರಾಜನ ವ್ಯಾಕುಲವನ್ನು ಕಂಡು, ಆ ಪ್ರಧಾನಿಗಳಲ್ಲಿ ಕ್ರೂರಾಕ್ಷ ಎಂಬ ಒಬ್ಬ ಪ್ರಧಾನಿಗೂಗೆ ರಾಜನ ಬಳಿಗೆ ಬಂದು, "ಎಲೇ, ಸ್ವಾಮೀ! ನಿಮ್ಮ ಆ ಪ್ರಧಾನಿಗಳು ವಾಯಸರಾಜನ ಪ್ರಧಾನನಾದ ಚಿರಂಜೀವಿಯೊಡನೆ ಕಾರಸ್ಥಾನ ನಡೆಸಿ, ನಿನಗೆ ಸಟ್ಟ ಕಟ್ಟದಂತೆ ಮಾಡಿದ್ದಾರೆ" ಎಂದು ಆ ಉಲೂಕರಾಜನನ್ನು ಸಂತೈಸಿತು. ಮುಂದೆ ಅದು ರಾಜನಿಗೆ ಸಮಾಧಾನವಾಗುವ ಹಾಗೆ "ತನಗೆ ಹಿತವನ್ನು ಚಿಂತಿಸುವವರು ಬೇರೆಯವರಾದರೂ, ಅವರೇ ಬಂಧುಗಳು, ತನಗೆ ಅಹಿತವನ್ನೇಣಿಸುವವರು ತನ್ನವರಾದರೂ ಅವರು ತನಗೆ ಅನ್ಯರು, ತನ್ನ ಶರೀರದೊಳಗೆ ಹುಟ್ಟದ ವ್ಯಾಧಿಯಿಂದ ಹಿಂಸೆ ಯಾದರೆ, ಅಡವಿಯಲ್ಲಿ ಹುಟ್ಟಿದ ಗಿಡಮೂಲಿಕೆಗಳನ್ನು ತಂದು ಆ ರೋಗವನ್ನು ಕಳೆದು ಗುಣಪಡಿಸಿಕೊಳ್ಳಬೇಕು. ನಿನಗೆ ಅಹಿತವನ್ನೇಣಿಸುವ ಪ್ರಧಾನಿಗಳನ್ನು ನಿನ್ನವರೆಂದು ನಂಬಲಾಗದು, ಇವರ ಗುಣಗಳನ್ನು ನಾನು ಏನೆಂದು ತಿಳಿಯಲಿ" ಎಂದು ಕವಿಧವಾದ ದುರ್ಮಂತ್ರಗಳಿಂದ ರಾಜನ ಮನಸ್ಸನ್ನು ತಿರುಗಿಸಿತು. ಉಲೂಕರಾಜನು ಕೋಪವನ್ನು ತಾಳಿ, "ಈ ಪ್ರಧಾನಿಗಳನ್ನು ನಾಳೆ ಕೊಂದುಬಿಡುತ್ತೇನೆ" ಎಂದು ಹೇಳಲು, "ಈಗ ನಿನ್ನ ಪ್ರಧಾನಿಗಳನ್ನು ಕೊಲ್ಲುವುದಕ್ಕೆ ಮೊದಲು, ನಿನ್ನ ಶತ್ರುವಾದ ವಾಯಸರಾಜನನ್ನು ಸಂಹರಿಸು. ಆಮೇಲೆ ನಿನ್ನ ಪ್ರಧಾನಿಗಳಿಗೆ ತಕ್ಕ ಶಾಸ್ತಿಯನ್ನು ಮಾಡು" ಎಂದು ಆ ಕ್ರೂರಾಕ್ಷನು ಉಪಾಯವನ್ನು ಹೇಳಿಕೊಟ್ಟಿತು. ಈ ಮಾತು ಉಲೂಕರಾಜನ ಮನಸ್ಸಿಗೆ ಬಂತು. ಅದು ಅರ್ಥರಾತ್ರಿಯಲ್ಲಿ ಆ ವಾಯಸರಾಜನಿರುವ ವೃಕ್ಷಕ್ಕೆ ತನ್ನ ಸೈನ್ಯವನ್ನು ಕೂಡಿಕೊಂಡು ಹೋಗಿ, ಮುತ್ತಿಗೆಯನ್ನು ಹಾಕಿತು. ಈ ಮುತ್ತಿಗೆಯ ಉಸಟಳದಿಂದ ಕೆಲವು ಕಾಗೆಗಳು ಸತ್ತುಹೋದವು; ಕೆಲವು ಗಾಯಗೊಂಡವು. ತನ್ನ ಪರಿವಾರಕ್ಕೆ ಉಂಬಾದ ಈ ಅವಸ್ಥೆಯನ್ನು ವಾಯಸರಾಜನು ಕಂಡು, ಬಹಳವಾಗಿ ನೊಂದುಕೊಂಡು, ತನ್ನ ಪ್ರಧಾನಿಗಳನ್ನು ಕರೆಸಿ, "ಇದಕ್ಕಿನ್ನೇನು ಉಪಾಯ?" ಎಂದು ಪ್ರಶ್ನಿಸಿದನು. ಅದಕ್ಕೆ, ಪ್ರದೀಸಿಯೆಂಬ ಪ್ರಧಾನಿಯು, "ನಾವು ಉಲೂಕರಾಜನ ಕೈಯಲ್ಲಿ ಮರಣಹೊಂದುವುದಕ್ಕಿಂತ, ರಾಜನಿಗೆ ಉಚಿತವಾದ ಕಾರ್ಯವನ್ನು ನಡೆಸಬೇಕು" ಎಂದಿತು. ಉದೀಪಿಯೆಂಬ ಪ್ರಧಾನಿಯು, "ಶತ್ರು ಸಣ್ಣವನೆಂದು ಉದಾಸೀನ ಮಾಡಬಾರದು. ಮೊದಲು ಅಲ್ಲನೆಂದು ಬಗೆದರೆ ಮುಂದೆ ಅವನೇ ತನ್ನಭಯಕ್ಕೆ ಕಾರಣನಾಗಬಲ್ಲನು. ಇದಕ್ಕೆ ಒಂದು ಪುರಾಣ ಕಥೆಯಿದೆ, ಪೂರ್ವದಲ್ಲಿ ದೇವತೆಗಳು ಒಟ್ಟಿಗೆ ಸೇರಿ ಸಮುದ್ರವನ್ನು ಮಥನ ಮಾಡಿದರು. ಆಗ ಸಮುದ್ರದಿಂದ ಸಮಸ್ತ ವಸ್ತುಗಳು ಹೊರಬಿದ್ದವು. ಅದರಲ್ಲಿ ಉತ್ಪನ್ನವಾದ ಅಮೃತವನ್ನು ವಿಷ್ಣುವು ಮೋಹಿನಿರೂಪವನ್ನು ತಾಳಿ ದೇವತೆಗಳಿಗೆ ಬಡಿಸುತ್ತಿದ್ದನು. ಆ ಸಮಯದಲ್ಲಿ ಇಬ್ಬರು ರಾಕ್ಷಸರು ಕಸಟದಿಂದ ಬಂದು ದೇವತೆಗಳ ಪಂಗತಿಯಲ್ಲಿ ಕುಳಿತುಕೊಂಡಿದ್ದರು. ಇವರನ್ನು ಚಂದ್ರನೂ ಸೂರ್ಯನೂ ಕಂಡು ಶ್ರೀಮನ್ನಾರಾಯಣನಿಗೆ ತೋರಿಸಿದರು. ಆಗ ವಿಷ್ಣು ಕೋಪದಿಂದ ಆ ರಾಕ್ಷಸರ ತಲೆಗಳನ್ನು ಕತ್ತರಿಸಿದನು. ಆ ತಲೆಗಳು ರಾಹುಕೇತುಗಳಾಗಿ ಚಂದ್ರಸೂರ್ಯರನ್ನು ಕಾಡುತ್ತಿವೆ. ಆದಕಾರಣ ಶತ್ರುವನ್ನು ಅಲ್ಪನೆಂದು ತಿಳಿಯಬಾರದು. ಯಾವಾಗಲೂ ಪರರಿಗೆ ಉಪಕಾರ ಮಾಡುವವನು ಅರಸನಿಗೂ ಹಿತಕಾರಿಯಾಗುವನು. ಲೋಕಕಂಟಕನಾದವನು ಅರಸನಿಗೂ ಕೇಡನ್ನು ಉಂಟುಮಾಡುವನು. ಆದುದರಿಂದ ನಮ್ಮಲ್ಲಿರುವ ಒಬ್ಬ ಪ್ರಧಾನಿ ಉಲೂಕರಾಜನಿಗೆ ಕೇಡು ಬಗೆದುದರಿಂದ ನಮಗೆ ಈಗ ಕೇಡು ಒದಗಿತು. ಇನ್ನು ನಾವು ಈ ಉಲೂಕರಾಜನ ಕೈಯಲ್ಲಿ ಸಾಯುವುದಕ್ಕಿಂತ ಈ ಸ್ಥಳವನ್ನೇ ಬಿಟ್ಟು ಹೋಗುವುದು ಲೇಸು" ಎಂದು ಹೇಳಿತು. ಸಂದೀಪಿಯೆಂಬ ಮಂತ್ರಿ, "ಶತ್ರುಗಳಿಂದ ಕಷ್ಟವನ್ನು ಹೊಂದಿರುವ ಮನುಷ್ಯನಿಗೆ ಯಾರು ಏನು ಮಾತಾಡಿದರೂ ಅದು ಮಹಾದುಃಖಕರವಾಗಿ ತೋರುವದು. ಆದರೆ ಮುಂದೆ ಹಿತಕರವಾಗಿ ಕಾಣುವುದು. ಆದಕಾರಣ ನಾವಾಡುವ ಮಾತನ್ನು ಮಹಾಸ್ವಾಮಿಗಳು ಚಿತ್ತಕ್ಕೆ ತಂದುಕೊಳ್ಳಬೇಕು. ಈ ಉಲೂಕರಾಜನಾದರೂ ಮಹಾಬಲಶಾಲಿ. ನಮ್ಮ ಬಲವಾದರೂ ಚದರಿಹೋಗಿದೆ. ಈಗ ನಾವೆಲ್ಲರೂ ಹೋಗಿ ಆ ಉಲೂಕರಾಜನನ್ನು ಕಂಡು, ಓಲೈಸಿ ಬಾಳು" ಎಂದು ಹೇಳಿತು. ವುದೇ ಸರಿಯಾದ. ಮಾರ್ಗ'' ಎಂದು ಹೇಳಿತು. ಅದೀಪಿಯೆಂಬ ಪ್ರಧಾನಿ ಕಾಗೆ «ಎಲೇ ಸ್ವಾಮಿಯೇ ! ಈ ಉಲೂಕರಾಜನನ್ನು ವಂಚಿಸುವುದಕ್ಕೆ ಅನೇಕ ಉಪಾಯಗಳುಂಟು'' ಎಂದು ಹೇಳಿತು. ಅದನ್ನು ಕೇಳಿ «ಆ ಉಪಾಯವೇನು?'' ಎಂದು ಆ ವಾಯಸರಾಜನು ಪ್ರಶ್ನಿಸಲು, ಆದೀಪಿ ಹೇಳುತ್ತದೆ.

ಶಥೆ:- ಗಾಳ ದೇಶದಲ್ಲಿ ವಿಂಧ್ಯಾಸರ್ವತವುಂಟು, ಆ ಪರ್ವತದ ತಪ್ಪ ಲಲ್ಲಿ ವೇದಾವತಿಯೆಂಬ ಪಟ್ಟಣ, ಆ ಪಟ್ಟಣಕ್ಕೆ ಕೇಸರಿಯೆಂಬ ಹೆಸ ರಿನ ರಾಜ, ಇವನು ಧರ್ಮದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು. ಆ ಪುರದಲ್ಲಿ ಶ್ರುತಿವಿದನೆಂಬ ಒಬ್ಬ ವಿಪ್ರನು ಅನೇಕ ಶಾಸ್ತ್ರಗಳನ್ನು ಓದಿ 'ಕೊಂಡು ಚೌಷಸ್ಟಿವಿದ್ಯಾ ಸ್ರವೀಣನಾಗಿ ಸುಖದಿಂದ ವಾಸವಾಗಿದ್ದನು. ಒಂದು ದಿನ ಅನೇಕ ಶಾಸ್ತ್ರಗಳನ್ನು ವಿಚಾರ ಮಾಡಿ ಅವಲೋಕಿಸುತ್ತಿ ದ್ಹಾಗ್ರ ಯಮುನಾ ತೀರದಲ್ಲಿ ಹುಟ್ಟಿದ ಅಚ್ಚಬಿಳಿಯ ಹೋತನನ್ನು ಯಜ್ಞ ಮಾಡುವುದರಿಂದ ಮುಕ್ತಿಹೊಂದುತ್ತಾರೆಂಬ ವಾಕ್ಯವನ್ನು ಕಂಡನು. ಈ ಬ್ರಾಹ್ಮಣನು ಸಂತೋಷಪಟ್ಟು, ಅಂಥ ಮುಕ್ತಿ ಪಡೆಯಬೇಕೆಂದು ನಿರ್ಧ ಶಿಸಿಕೊಂಡು, ಮನೆಯನ್ನು ಬಿಟ್ಟು ಹೊರಹೊರಟನು. ಹೀಗೆ ಹೋಗುತ್ತ ಅವನು ಕಾಶಿಯನ್ನು ತಲಸಪಿದನು. ಅಲ್ಲಿದ್ದ ಒಬ್ಬ ಗೃಹಸ್ಥನ ಬಿಳಿಯ ಹೋತನನ್ನು ದಾನವಾಗಿ ಬೇಡಿದನು. ಆ ಗೃಹಸ್ಥನು `ಈ ಬ್ರಾಹ್ಮಣನ ವೃತ್ತಾಂತವನ್ನೆ ಲ್ಲ ಕೇಳಿ, "ಈತನು ಸದಾಚಾರ ಸಂಸನ್ನನಾಗಿದ್ದಾನೆ. ಈಗ ಧರ್ಮಕಾರ್ಯಕ್ಕಾಗಿ ಹೋತನನ್ನು ಬೇಡುತ್ತಿದ್ದಾನೆ'' ಎಂದು ತನ್ನ ಹತ್ತಿರವಿದ್ದ ಹೋತಗಳಲ್ಲಿ ಒಂದನ್ನು ತೆಗೆದುಕೊಂಡು ಹೋಗಲು ಹೇಳಿ ದನು. ಆ ಬ್ರಾಹ್ಮಣನು ಒಂದು ದೊಡ್ಡ ಚೆಲುವಾದ ಹೋತನನ್ನು ತೆಗೆದು ಕೊಂಡು ಹೊರಟನು. ದಾರಿಯಲ್ಲಿ ಆ ಹೋತವು ಅತ್ತಿತ್ತ ಓಡುತ್ತ ಅವ ನಿಗೆ ಕಿರುಕುಳವನ್ನುಂಟುಮಾಡಿತು, ಆಗ ಬ್ರಾಹ್ಮಣನು ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು ಮುಂದಕ್ಕೆ ಹೊರಟನು, ಇದನ್ನು ದೂರ ದಲ್ಲಿ ನಾಲ್ವರು, ಕಿರಾತರು ನೋಡಿ, ಮನಸ್ಸಿನಲ್ಲಿ ಹಿಗ್ಗಿ, ಈ ಬ್ರಾಹ್ಮಣ ನನ್ನು ವಂಚಿನಿ ಹೋತನನ್ನು ಎತ್ತಿ ಹಾಕಬೇಕೆಂದು ಆಲೋಚಿಸಿಕೊಂಡರು, ಈ ನಾಲ್ವರಲ್ಲಿ ಒಬ್ಬೊಬ್ಬನು ಒಂದೊಂದು ಹರಿದಾರಿಯ ಅಂತರದಲ್ಲಿ ನಾಲ್ಕು ಕಡೆಯಲ್ಲಿ ನಿಂತುಕೊಂಡರು. ಈ ಬ್ರಾಹ್ಮಣನು ಬರುವುದನ್ನು ಕಂಡು ಮೊದಲನೆಯ ಕಿರಾತನು, “ಎಲೇ, ಬ್ರಾಹ್ಮಣೋತ್ರಮನೇ! ನೀನು ಸತ್ತು ಹೋದ ಹೋತನನ್ನು ಎತ್ತಿಕೊಂಡು ಹೋಗುತ್ತಿದ್ದೀಯೇ !” ಎಂದನು. ಈ ಮಾತನ್ನು ಆ ಬ್ರಾಹ್ಮಣನು ಕೇಳಿ ಅದನ್ನು ಕಿವಿಯಲ್ಲಿ ಹಾಕಿ ಕೊಳ್ಳದೆ ಮುಂದಕ್ಕೆ ಸಾಗಿದನು. ಮುಂದೆ ಎರಹನೆಯ ಕಿರಾತನು ಬ್ರಾಹ್ಮ ಣನನ್ನು ಕಂಡು ""ಇಡೀನಯ್ಯಾ! ಸತ್ತಹೋತನನ್ನು ಎತ್ತಿಕೊಂಡು ಹೋಗು ತ್ರಿದ್ದೀಯೇ !'' ಎಂದನು. ಬ್ರಾಹ್ಮಣನು ಈ ಮಾತನ್ನು ಕೇಳದ ಹಾಗೆ ಮುಂದಕ್ಕೆ ಹೋದನು. ಮೂರನೆಯ ಕಿರಾತನೂ ಹೀಗೆಯೇ ನುಡಿದನು. ಬ್ರಾಹ್ಮಣನು ಅದನ್ನೂ ಕೇಳದೆಯೇ, ಮನಸ್ಸಿನಲ್ಲಿ ಏನೇನೋ ಯೋಚಿ ಸುತ್ತ ಮುಂದಕ್ಕೆ ಹೊರಟನು, ಕೊನೆಯಲ್ಲಿ ನಾಲ್ಕನೆಯ ಕಿರಾತನು ಬ್ರಾಹ್ಮ ಣನನ್ನು ನೋಡಿ, ««ಬ್ರಾಹ್ಮಣೋತ್ತಮನೇ |! ಈ ಸತ್ತ ಹೋತನನ್ನು ಏನು ಕಾರಣ ಎತ್ತಿಕೊಂಡು ಹೋಗುತ್ತಿದ್ದೀಯೆ! ನೀನು ಮೂರ್ವನೇ ! ಅಥವಾ ಭ್ರಾಂತನೇ !'' ಎಂದು ಕೇಳಿದನು, ಈ ಬ್ರಾಹ್ಮಣನು ಈ ನಾಲ್ವರೂ ಹೇಳಿದ ಮಾತನ್ನೂ ಕೇಳಿ, ನಿಸ್ಮೃತನಾಗಿ, ತಾನು ತರುವಾಗ ಜೀವಿಸಿದ್ದ ಹೋತವು ಈಗ ಸತ್ತು ಹೋಗಿರಬೇಕೆಂದು ಅದನ್ನು ಅಲ್ಲಿಯೇ ಬಿಟ್ಟು ನದಿಯಲ್ಲಿ ಸ್ನಾನ ಮಾಡಿ ತನ್ನ ಮನೆಗೆ ಹೋದನು. ಇತ್ತ ಆ ಕಿರಾತರು ಆ ಹೋತನನ್ನು ತೆಗೆದುಕೊಂಡು ಹೋಗಿ, ಚೆನ್ನಾಗಿ ಭಕ್ಷಿಸಿ ತೃಪ್ತರಾದರು, ಆದ್ದರಿಂದ ಯಾವುದಾದರೊಂದು ಉಪಾಯದಿಂದ ಕಾರ್ಯವನ್ನು ಸಾಧಿಸಿಕೊಳ್ಳ ಬೇಕೆಂದು ಅದೀಪಿಯೆಂಬ ಪ್ರಧಾನಿ ಹೇಳಿತು. ಚಿರಂಜೀವಿಯೆಂಬ ಕಾಗೆ, ದೃಷ್ಟಾಂತದಿಂದ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿತು.

ಕಥ:- “ಪಾರಿಯಾತ್ರೆಯೆಂಬ ದೇಶದಲ್ಲಿ ಧಾರಾಗೃಹತಿ ಎಂಬಒಂದು ವನ. ಆ ವನದಲ್ಲಿ ನಿರ್ಮಲವಾದ ಸರೋವರವೊಂದರಲ್ಲಿ ಅನೇಕ. ಕಪ್ಪೆ ಗಳು ಬಹುಕಾಲದಿಂದ ವಾಸವಾಗಿದ್ದುವು. ಅಲ್ಲಿ ಒಂದು ಕಾಳೋರಗವು ಸ್ಥಳ ಮಾಡಿಕೊಂಡಿದ್ದಿತು. ಅದು ಈ ಕಪ್ಪೆಗಳನ್ನು ನೋಡಿ, ಇವುಗಳನ್ನು ತಿನ್ನುವುದಕ್ಕೆ ಏನು ಉಪಾಯ ಮಾಡಬೇಕೆಂದು ಆಲೋಚಿಸಿ ಕೊನೆಯಲ್ಲಿ ಒಂದು ಉಪಾಯವನ್ನು ಕಂಡುಕೊಂಡಿತು. ಈ ಹೆಬ್ಬಾವು ಒಂದು ದಿನ ಸರೋವರದ ಸಮಿಪಕ್ಕೆ ಹೋಗಿ, ಅನೇಕ ವಿಧವಾಗಿ ಪ್ರಳಪಿಸುತ್ತ ಶೋಕ ಮಾಡಿತು. ಇದನ್ನು ಕಪ್ಪೆಗಳು ನೋಡಿ, ಆಶ್ಚ ರ್ಯಪಟ್ಟು,”ಎಲೇ, ಸರ್ವ ಉರಗಗಳಲ್ಲಿ ಶ್ರೇಷ್ಠ ನಾದಾತನೆ! ನಿನ್ನ “ ದುಃಖಕ್ಕೆ ಕಾರಣ ವೇನು?” ಎಂದು ಬೆಸಗೊಂಡುವು. ಅದಕ್ಕೆ ಸರ್ಪವು “ ಏನೆಂದು ಹೇಳಲಿ! ನಾನು ಸುಮ್ಮಸುಮ್ಮನೆ ಭಾರದ್ವಾಜನೆಂಬ ಋಷಿಶ್ರೇಷ್ಠನನ್ನು ಕಚ್ಚಲಾಗಿ ಆ ಋಷಿ ನನ್ನ ಮೇಲೆ ಬಹಳ ಕೋಪಮಾಡಿಕೊಂಡು, “ಎಲೇ, ಸರ್ಪವೇ! ನೀನು ನಿನಗೆ ಆಹಾರವಾಗಿದ್ದ ಕಪ್ಪೆಗಳಿಗೆ ವಾಹನವಾಗಿರು’ ಎಂದು ಶಾಪಕೊಟ್ಟನು. ಈ ಖುಷಿಶ್ರೇಷ್ಠನ ವಾಕ್ಯವು ತಪ್ಪದು. ನನಗೆ ಆಹಾರ ವಾದುವುಗಳಿಗೆಯೇ ನಾನು ವಾಹನವಾಗಬೇಕಾಯಿತಲ್ಲ! ಎಂದು ಚಿಂತಿಸಿ, ದುಃ ಖಿಸುತ್ತಿದ್ದೇನೆ” ಎಂದಿತು. ಈ ಮಾತನ್ನು ಕೇಳಿ, ಕಪ್ಪೆಗಳು ಸುಮ್ಮ ನಾದುವು, ಆಗ ಸರ್ಪವು “ ಎಲೇ, ಕಪ್ಪೆಗಳೇ! ನಮ್ಮ ನಿಮ್ಮ ಪೂರ್ವದ ವೈರವನ್ನು ಮನಸ್ಸಿನಲ್ಲಿ ಹಿಡಿಯದೆಯೆ ನನ್ನ ಯೋಗಕ್ಷೇಮವನ್ನು ನೋಡಿ ಕೊಳ್ಳಿ. ನನ್ನನ್ನು ಗಾಸಿ ಮಾಡಿ ಕೊಲ್ಲದೆ, ನನ್ನ ಮೇಲೆ ಸರಿಯಾಗಿ ಎರಿಕೊಳ್ಳಿ. ನನ್ನನ್ನು ರಕ್ಷಿಸುವ ಭಾರವು ಇನ್ನು ಮೇಲೆ ನಿಮ್ಮ ಮೇಲೆಯೇ ಇದೆ’’ ಎಂದು ಬಹಳ ದೈನ್ಯವಾಗಿ ಪ್ರಾರ್ಥಿಸಿತು. ಅದಕ್ಕೆ ಕಪ್ಪೆಗಳು “ ನೀನು ಭಯಪಡಬೇಡ ಎಂದು ಸರ್ಪಕ್ಕೆ ಧೈರ್ಯ ಹೇಳಿದುವು. ಆ ಮೇಲೆ ಕಪ್ಪೆಗಳು ಸರ್ಪವನ್ನು ವಾಹನವನ್ನಾಗಿ ಮಾಡಿಕೊಂಡು ಸಂತೋಷ ನಾಗಿ ಕೆಲವು ದಿವಸ ಇದ್ದುವು. ಒಂದು ದಿನ ಆ ಸರೋವರದೊಳಗಿನ ಕಪ್ಪೆಗಳೆಲ್ಲ ಸೇರಿ “ ನಾವು ಹುಟ್ಟಿದಂದಿನಿಂದ ಒಂದೇ ಸ್ಥಳದಲ್ಲಿ ಅಚಲವಾಗಿ ಇದ್ದು ಬಿಟ್ಟಿದ್ದೇವೆ. ಇದರಿಂದ ನಮಗೆ ಕೂಪಮಂಡೂಕವೆಂಬ ಅಪಖ್ಯಾತಿ ಯುಂಟಾಗಿದೆ. ಈಗ ನಾವು ಪುಣ್ಯಕ್ಷೇತ್ರಗಳನ್ನಾ ದರೂ ಸಂದರ್ಶಿಸಿಕೊಂಡು ಬರೋಣ. ದೈವಾನುಗ್ರ ಹದಿಂದ ನಮಗೆ ವಾಹನವೊಂದು ಲಭಿಸಿದೆ ‘’ .ಎಂದು ಸಂತೋಷದಿಂದ ನಿಶ್ಚಯ ಮಾಡಿಕೊಂದು ಐದಾರು ಕಪ್ಪೆಗಳು ಈ ಸರ್ಪದ ಮೇಲೆ ಹತ್ತಿ “ ನಮ್ಮನ್ನು ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡ ಹೋಗಿ, ಅವುಗಳನ್ನು ತೋರಿಸಿಕೊಂಡು ಬಾ” ಎಂದುವು. ಸರ್ಪವು ಸಂತೋಷಪಟ್ಟು ಅವುಗಳನ್ನು ತನ್ನ ಮೇಲೇರಿಸಿಕೊಂಡು ಪರ್ವತದ ತಪ್ಪ ಲಿಗೆ ಒಯ್ದು ಭಕ್ಷಿಸಿಬಿಟ್ಟಿತು. ಆದ ಕಾರಣ ಈ ಉಪಾಯದಂತೆ ನಮ್ಮ ವೈರಿಯನ್ನು ಕೊಲ್ಲಬೇಕು. ಎಂದು ಚಿರಂಜೀವಿ ಮುಂದೆ ಏನು ಮಾಡ ಬೇಕೆಂಬುದನ್ನು ಹೇಳಿತು. “ ಇಂದಿನ ರಾತ್ರಿ ನನ್ನನ್ನು ಕೊಂದಂತೆ ಮಾಡಿ, ಎರಡನೆಯ ಪ್ರಾಣಿಯ ರಕ್ತದಿಂದ ನನ್ನನ್ನು ಮುಳುಗಿಸಿ ಈ ವೃಕ್ಷದ ಕೆಳಗೆ ಹಾಕಿಬಿಡಿ. ನೀವು ಪರಿನಾರವನ್ನೆಲ್ಲ ಕೂಡಿಕೊಂಡು ಎರ ಡನೆಯ ಪರ್ವತದ . ಮೇಲೆ ಹೋಗಿ ನೆಲೆಸಿಕೊಳ್ಳಿ. ಆಗ ಆ.ಗೂಗೆ ನನ್ನನ್ನು ನೋಡಿ, ತನ್ನ ಶತ್ರುವಿಗೆ ಬೇಕಾಗದ ಪಕ್ಷಿ ಇದು ಎಂದು ತಿಳಿದು ನನ್ನಲ್ಲಿ ವಿಶ್ವಾಸವಿಟ್ಟು ತನ್ನ ಬಳಿಯಲ್ಲಿಯೇ ಇಟ್ಟುಕೊಳ್ಳುವುದು, ನಾನು ಸಮಯ ಸಾಧಿಸಿ, ಆ ಉಲೂಕರಾಜನನ್ನು ನಾಶಮಾಡುವೆನು” ಎಂದು ಉಪಾಯವನ್ನು ಹೇಳಿತು. ಇದನ್ನು ಕೇಳಿ, ಆ ವಾಯಸವು ಸಂತೋಷ ಪಟ್ಟು “ ನಿನ್ನ ಮನಸ್ಸಿಗೆ ಬಂದ ಹಾಗೆ ಮಾಡು? ಎಂದು ಹೇಳಿ, ಎರಡ ನೆಯ ಪಕ್ಷಿಯ ರಕ್ತವನ್ನು ಚಿರಂಜೀವಿಯ ಮೈಗೆ ಲೇಪಿಸಿ, ಆ ವೃಕ್ಷದ ಕೆಳಗಿರಿಸಿ, ತನ್ನ ಪರಿವಾರದೊಂದಿಗೆ ಬೇರೆ ಪರ್ವತಕ್ಕೆ ಹೊರಟುಹೋಯಿತು. ಇತ್ತ ಚಿರಂಜೀವಿ ನರಳುತ್ತ ಮರದ ಕೆಳಗೆ ಬಿದ್ದುಕೊಂಡಿತು. ಆ ಸಮಯದಲ್ಲಿ ಉಲೂ ಕರಾ ಜನು ತನ್ನ ಅನುಚರರನ್ನು ಕೂಡಿ ಕೊಂಡು ಅಲ್ಲಿಗೆ ಬಂದು ವೃಕ್ಷಕ್ಕೆ ಮುತ್ತಿಗೆ ಹಾಕಿದನು, ಅಲ್ಲಿ ಕಾಗೆ ಗಳು ಒಂದೂ ಇದ್ದಿಲ್ಲ. ಇದನ್ನು ನೋಡಿ ಆಶ್ಚರ್ಯಪಟ್ಟು, ಆ ಗೂಗೆ ತನ್ನವರನ್ನು “ಕಾಗೆಗಳು ಯಾವ ಮಾರ್ಗದಿಂದ ಎಲ್ಲಿಗೆ ಹೋದುವು?” ಎಂದು ಕೇಳಿ “ನೀವು ಇದನ್ನು ತಿಳಿದುಕೊಂಡು ಬರಬೇಕು. ಆ ಮೇಲೆ ಕಾಗೆಗಳಿದ್ದಲ್ಲಿಗೆ ಹೋಗಿ ಅವುಗಳನ್ನು ಮುತ್ತೋಣ’’ ಎಂದು ಹೇಳಿತು. ಇದನ್ನು ಕೇಳಿ ಚಿರಂಜೀವಿ ಆ ಉಲೂಕರಾಜನನ್ನು ಕುರಿತು ಮೆಲ್ಲಗೆ“ಸ್ವಾಮೀ, ಮೇಘವನರ್ಮನೆಂಬ ವಾಯಸರಾಜನು ಮಹಾ ಮೂರ್ಖನು, ನಾನು ಆ ಉಲೂಕರಾಜನನ್ನು ಓಲೈಸಿ ಬದುಕೆಂದು ಎಷ್ಟು ವಿಧದಿಂದ ಬುದ್ಧಿ ಹೇಳಿದರೂ, ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಪ್ರಧಾನಿ ಗಳಿಂದ ನನ್ನನ್ನು ಹಿಂಸೆಪಡಿಸಿ, ಅನೇಕ ವಿಧದಿಂದ ಭಂಗಕ್ಕೀಡುಮಾಡಿ ತಾನು ಈ ಸ್ಥಳವನ್ನು ಬಿಟ್ಟು ಹೊರಟುಹೋದನು. ನಾನು ಅವನಿಗೆ ಹಿತ ವನ್ನು ಬಗೆದರೆ, ಅವನಿಂದ ನನಗೆ ಈ ಗತಿಯುಂಟಾಯಿತು.’’ ಎಂದು ಬಿನ್ನ ವಿಸಿಕೊಂಡಿತು. ಆ ಉಲೂಕರಾಜನು ತನ್ನ ಪ್ರಧಾನಿಗಳನ್ನು ಕರೆದು «ಈ ಚಿರಂಜೀವಿ ಆಡುವ ಮಾತು ಎಷ್ಟರಮಟ್ಟಿಗೆ ಸತ್ಯವಾಗಿದೆ? ಇದ ರಲ್ಲಿ ಕಸಟಿವೇನಾದರೂ ಇದೆಯೇ?” ಎಂದು ಕೇಳಿದನು. ಅದಕ್ಕೆ ರಕ್ತಾಕ್ಷ ವೆಂಬ ಪ್ರಧಾನಿಗೂಗೆ, “ ಈ ಚಿರಂಜೀವಿ ಮೇಘೆನರ್ಮನ ಮುಖ್ಯಸ್ರಧಾನಿ. ನಾವು ಈಗ ಇವನಿಗೆ ಆಶ್ರಯವನ್ನು ಕೊಟ್ಟು, ಆ ವಾಯಸದ ಮರ್ಮವನ್ನು ಇವನಿಂದ ತಿಳಿದುಕೊಳ್ಳ ಬೇಕು, ಇವನಿಂದ ನಮ್ಮ ಕೆಲಸವು ಕೈಗೂಡು ವುದು, ಇವನನ್ನು ಸನ್ಮಾನಿಸುವುದು ನಮಗೆ ಹಿತಕರವಾಗಬಹುದು’’ ಎಂದು ತನ್ನ ಬುದ್ಧಿಗೆ ತೋರಿದುದನ್ನು ಹೇಳಿತು. ಧೂಮ್ರಾಕ್ಷವೆಂಬ ಪ್ರಧಾನಿ ಗೂಗೆ “ದೇವರು, ಇವನು ಏನೋ ಕಪಟದಿಂದ ವರ್ಶಿಸುತ್ತಿರುವಂತೆ ಕಾಣು ತ್ತದೆ. ಈತನಿಗೆ ನಾವು ಘನತೆಯನ್ನು ಕೊಟ್ಟರೆ ಇವನಿಂದ ನಮಗೆ ಹಿತವಾಗಲಾರದು. ತಮ್ಮ ಸ್ವಾಮಿಯ ಕಾರ್ಯವನ್ನು ಸಾಧಿಸುವುದಕ್ಕಾಗಿ ಈ ವೇಷವನ್ನು ಹಾಕಿದಂತೆ ಕಾಣುತ್ತದೆ. ಹೀಗೆ ಕಪಟವೇಷದಿಂದ ವರ್ತಿಸಿ, ಎಷ್ಟೋ ಜನರನ್ನು ನಾಶಮಾಡಿದವರುಂಟು, ಇದಕ್ಕೆ ಒಂದು ಕಥೆಯುಂಟು,’’ ಎಂದು ಆ ಕಥೆಯನ್ನು ಹೀಗೆ ಹೇಳಿತು.

ಕಥೆ- ಕೊಂಕಣ ದೇಶದಲ್ಲಿ, ತುಂಗಭದ್ರಾತೀರದಲ್ಲಿ ಜಲಪಾದ ನೆಂಬ ಒಬ್ಬ ಖುಸಿಶ್ರೇಷ್ಠನಿದ್ದನು. ಅವನು ಅರ್ಫೈವನ್ನು ಕೊಡುತ್ತಿರುವ ಸಮಯದಲ್ಲಿ ಒಂದು ಮೂಷಕವು ಅವನ ಹಸ್ತದಲ್ಲಿ ಬಂದಿತು. ಆ ಖಷಿ ಅದನ್ನು ಕಂಡು “ನನ್ನ ಕೈಯಲ್ಲಿ ಇರುವ ಈ ಇಲಿಯನ್ನು ಸ್ರೀ ರೂಪವಾಗಿ ಮಾರ್ಪಡಿಸುವೆನು’’ ಎಂದು ದಿವ್ಯಮಂತ್ರವನ್ನು ಜಪಿಸಿ, ಉದಕವನ್ನು ಪ್ರೋಕ್ಷಿಸಿದನು. ಕೂಡಲೆ ಆ ಇಲಿ ದಿವ್ಯಸ್ರ್ರೀಯಾಗಿ ಪರಿಣಮಿಸಿತು. ಆಮೇಲೆ ಆ ಖಹಿ ಈ ಸ್ತ್ರೀಯನ್ನು ಯಾರಿಗೆ ಮದುವೆ ಮಾಡಿ ಕೊಡಬೇಕೆಂದು ಯೋಚಿಸುತ್ತ, ಸೂರ್ಯನಿಗೆ ಇವಳನ್ನು ಕೊಟ್ಟು ಮದುವೆ ಮಾಡೋಣನೆಂದು, ಸೂರ್ಯನ ಬಳಿಗೆ ಹೋದನು. ಋಷಿ ಸೂರ್ಯನನ್ನು ಕುರಿತು “ಎಲೈ, ಜಗಚ್ಚಕ್ಷುವೇ | ಈ ಕನ್ನಿಕೆಯನ್ನು ಪರಿ ಗ್ರಹಿಸು” ಎಂದು ಕೇಳಿಕೊಂಡು. ಅದಕ್ಕೆ ಸೂರ್ಯನು “ಜಗತ್ತಿನಲ್ಲಿ ನನ್ನನ್ನು ಶ್ರೇಷ್ಠನೆಂದು ಹೇಳುತ್ತಾರೆ. ಆದರೆ, ನನ್ನ ತಾಸತ್ರಯಗಳು ಏನು ಎಂಬುದನ್ನು ವಿಚಾರ ಮಾಡುವುದಿಲ್ಲ. ಮೇಘವು ನನ್ನನ್ನು ಆವ ರಿಸಿದ ಕೂಡಲೇ ನನ್ನ ತೇಜಸ್ಸು ಕುಂದಿ ಹೋಗುತ್ತದೆ. ಆ ಮೇಘವೇ ನನಗಿಂತ ಅಧಿಕವಾದುದು. ಆದುದರಿಂದ ಈ ಕನ್ನಿಕೆಯನ್ನು ಆ ಮೇಫಕ್ಕೆ ಕೊಟ್ಟು ಮದುನೆಮಾಡುವುದು ಒಳ್ಳೆಯದು’’ ಎಂದು ಹೇಳಿದನು. ಈ ಮಾತುಗಳನ್ನು ಕೇಳಿ, ಋಷಿ ಮೇಘದ ಬಳಿಗೆ ಬಂದು “ಮೇಫುರಾಜನೆ, ಈ ಕನ್ನಿಕೆಯನ್ನು ಸ್ವೀಕರಿಸು” ಎಂದನು. ಅದಕ್ಕೆ ಮೇಘರಾಜನು “”ನಾನು ಒಂದು ಸ್ಥಳದಲ್ಲಿ ಅಚಲವಾಗಿ ಇರುವವ ನಲ್ಲ. ಸಂಚಾರವೇ ನನ್ನ ಗುಣವಾಗಿದೆ. ಈ ಸ್ತ್ರೀಯನ್ನು ಕೂಡಿಕೊಂಡು ಒಂದೇ ಸ್ಥಳದಲ್ಲಿರುವುದು ಹೇಗೆ ಸಾಧ್ಯವಾದೀತು? ಪರ್ವತರಾಜನು ತನ್ನ ಸ್ಥಳವನ್ನು ಬಿಡದೆ, ಒಂದೇ ಎಡೆಯಲ್ಲಿ ಸ್ಥಿರವಾಗಿರುವನು. ಅವನಿಗೆ ಈ ಕನ್ನಿಕೆಯನ್ನು ಕೊಡುವುದು ಉಚಿತವಾಗಿ ಕಾಣುವುದು’’ ಎಂದು ಹೇಳಿದನು. ಮೇಘರಾಜನ ಮಾತನ್ನು ಕೇಳಿ ಖಷಿ ಪರ್ವತದ ಬಳಿಗೆ ಬಂದು, “ಎಲ್ಲೆ ಪರ್ವತರಾಜನೇ, ಈ ಕನ್ನಿಕೆಯನ್ನು ಅಂಗೀಕರಿಸು.’’ ಎಂದು ಕೇಳಿಕೊಂಡನು. ಅದಕ್ಕೆ ಸರ್ವತರಾಜನು “ನನ್ನ್ನ ಕಷ್ಟವೇನೆಂದು ಹೇಳಲಿ! ಇಲಿಗಳು, ಹೆಗ್ಗಣಗಳು ಹೆಗಲಿರುಳು ನನ್ನನ್ನು ಬಾಧಿಸುತ್ತಿರು ತ್ತಿವೆ. ನನಗೆ ಯಾವ ಸಮಯದಲ್ಲಿ ನಾಶವುಂಟಾಗುವುದೋ ಎಂದು ನಾನು ಚಿಂತಿಸುತ್ತಿರುತ್ತೇನೆ. ಇದರಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲದಂತಾಗಿದೆ. ಈ ಕನ್ನಿಕೆಯನ್ನು ಮದುವೆ ಮಾಡಿಕೊಂಡು ನಾನೇನು ಸುಖಸಡಬಲ್ಲೆನು? ಆದುದರಿಂದ ಈ ಮದುವೆ ನನಗೆ ಬೇಡ’’ವೆಂದು ನಿರಾಕರಿಸಿ ಬಿಟ್ಟನು. ಋಷಿಗೆ ಈಗ ತುಂಬಾ ಚಿಂತೆಯಾಯಿತು. ಮೂವರಲ್ಲಿ ಯಾರೂ ಈ ಕನ್ನಿಕೆ ಯನ್ನು ವರಿಸಲು ಸಮ್ಮತಿಸಲಿಲ್ಲ. ತಿರಸ್ಕರಿಸಿಬಿಟ್ಟರು. ಈ ಹೆಣ್ಣಿನಲ್ಲಿ ಏನೋ ದೋಷವಿರಬೇಕೆಂದು ಯೋಚಿಸುತ್ತ ಆ ಪರ್ವತದ ತಪ್ಪಲಲ್ಲಿ ಮಲಗಿ ನಿದ್ದೆ ಹೋದನು. ಅಷ್ಟರಲ್ಲಿ ಆ ಕನ್ನಿಕೆ ತನ್ನ ಮೊದಲಿನ ರೊಪ ವನ್ನು ಧರಿಸಿ, ಇಲಿಯಾಗಿ ಆ ಪರ್ವತವನ್ನು ಕೆದರತೊಡಗಿದಳು. ಇದನ್ನು ನೋಡಿ, ಪರ್ವತವು ಆ ಖಸಿಯನ್ನು ಎಚ್ಚರಿಸಿ, ಮಹಾಖುಹಿಯೇ, ಈ ಮೊದಲೇ ನಾನು ಇಲಿ ಹೆಗ್ಗಣಗಳ ಉಪದ್ರವವನ್ನು ತಾಳಲಾರದೆ ಹಿಂಸೆ ಗೊಳಗಾಗಿಜ್ದೀನೆ. ಈ ನಿನ್ನ ಕನ್ಸಿಕೆಯಾದರೋ, ಇಲಿಯಾಗಿ ನನಗೆ ಮತ್ತಷ್ಟು ಪ್ರಯಾಸ ಕೊಡುತ್ತಿದ್ದಾಳೆ, ನೋಡು.'' ಎಂದಿತು. ಇದನ್ನು ಕೇಳಿ ಆ ಖುಷಿ ಕನ್ನಿಕೆಯನ್ನು ಕಾಣದೆ, ಇಲಿ ಪರ್ವತವನ್ನು ಕೆದರುತ್ತಿ ರುವುದನ್ನು ನೋಡಿ, ತುಂಬ ಆಶ್ಚರ್ಯಪಟ್ಟುದಲ್ಲದೆ, ಅವನಿಗೆ ಮಿತಿ ಮೀರಿದ ಕೋಪವುಂಟಾಯಿತು. ಆಗ ಅವನು ಇಲಿಯೆಂದು ಕರುಣೆಯನ್ನು ' ತೋರಿ ದಿವ್ಯಸುಂದರಿಯನ್ನಾಗಿ ಮಾಡಿದರೆ ಅದು ತನ್ನ ನಿಜ ಸ್ವರೂಪವನ್ನು ಬಿಡದೆ ಹೋಯಿತು. ಇದಕ್ಕೆ ಈ ರೂಪವೇ ಇರಲಿ ಎಂದು ಶಾಪವನ್ನು ಕೊಟ್ಟು ತನ್ನ ಆಶ್ರಮಕ್ಕೆ ಹೊರಟುಹೋದನು. ಆದುದರಿಂದ ದುರ್ಜನರಿಗೆ ಯಾವ ಉಪಕಾರವನ್ನು ಮಾಡಿದರೂ, ಅವರು ತಮ್ಮ ನೀಚಗುಣವನ್ನು ಬಿಡುವುದಿಲ್ಲ; ಕೇಡನ್ನೆೇ ಬಗೆಯುತ್ತಾರೆ. ಇವನನ್ನು ನಮ್ಮ ಸ್ಥಳದಲ್ಲಿ ಇಟ್ಟುಕೊಳ್ಳ ಬಾರದು, ಎಂದು ಹೇಳಿ ಮತ್ತೊಂದು ಕಥೆಯನ್ನು ವಿವರಿಸಿತು.

ಬ್ರಹ್ಮೆಪುರನೆಂಬ ಒಂದು ಅಗ್ರಹಾರದಲ್ಲಿ ಪುಣ್ಯವರ್ತನನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನ ಮನೆಯಲ್ಲಿ ಒಂದು ಹೋರಿ ಇದ್ದಿತು. ಅದು ಬಹು ದುಷ್ಪ ಹೋರಿ. ದಿನಾಗಲೂ ಆ ಊರಿನ ಹೊಲಗಳನ್ನು ಹೊಕ್ಕು, ತುಡುಗುತಿಂದು ಬರುತ್ತಿತ್ತು. ಹೀಗೆ ತುಡುಗು ಮೇದು ಅದು ಒಳ್ಳೆಯ ಪುಷ್ಪಕಾಯವಾಗಿದ್ದಿತು, ಇದನ್ನು ನೋಡಿ ಒಂದು ಆಕಳು «« ನೀನು ಶರೀರದಿಂದ ಇಷ್ಟು ಬಲಿತುಕೊಂಡಿರುವುದಕ್ಕೆ ಕಾರಣವೇನು? ನನ್ನನ್ನು ನೋಡು, ಎಷ್ಟು ಕೃಶವಾಗಿದ್ದೇನೆ.” ಎಂದು ಹೇಳಿತು, ಅದಕ್ಕೆ ಆ ದುಷ್ಪ ವೃಷಭವು " ರಾತ್ರಿಯಲ್ಲಿ ನಾನು ಹೊಲಗಳಿಗೆ ಹೋಗ ಮೇದು ಬರುತ್ತೇನೆ. ಬೇಕಾದರೆ ನೀನೂ ನನ್ನ ಸಂಗಡ ಬರಬಹುದು” ಎಂದು ಕರೆಯಿತು. ಆಕಳು ಅದಕ್ಕೆ ಒಪ್ಪಿಕೊಂಡು ಅದರ ಸಂಗಡ ಹೋಯಿತು, ಎರಡೂ ಒಂದು ಹೊಲವನ್ನು ಹೊಕ್ಕುವು. ಚೆನ್ನಾಗಿ ಬೆಳೆದಿರುವ ಹೊಲ ವನ್ನು ನೋಡಿ, ಹೆಸುನಿಗೆ ತುಂಬ ಸಂತೋಷವಾಯಿತು. ಅದು ತನ್ನನ್ನು ಮರಿತು ಮೇಯುತ್ತ ನಿಂತಿರುವಾಗ ಆ ಹೊಲದ ಯಜಮಾನನು ಕೋಲನ್ನು ಹಿಡಿದುಕೊಂಡು ಹೊಡೆಯುತ್ತೇನೆಂದು ಧಾನಿಸಿಬಂದನು. ಇದನ್ನು ನೋಡಿ ಹೋರಿ ಅವನ ಕೈಗೆ ಸಿಕ್ಕದೆ ಓಡಿಹೋಯಿತು. ಹಸು ಮಾತ್ರ ಓಡಿ ಹೋಗಲಾರದೆ, ಆ ಯಜಮಾನನ ಕೈಗೆ ಸಿಕ್ಕಿ ಬಿದ್ದಿತು. ಯಜಮಾನನು ಆ ಆಕಳ ಒಡೆಯನಲ್ಲಿಗೆ ಅದನ್ನು ಹಿಡಿದುಕೊಂಡು ಹೋಗಿ ಅದರ ತುಡು ಗುಣಿತನವನ್ನು ಹೇಳಿದನು. ಆ ಆಕಳ ಯಜಮಾನನು ಅಂದಿನಿಂದ ಹಸು ವಿನ ಕೊರಳಿಗೆ ಭಾರವಾದ ಗುದ್ದಿಗೆಯನ್ನು ಶಟ್ಟಿಬಿಟ್ಟನ್ನು ಆದಕಾರಣ ದುರ್ಜನರ ಸಹವಾಸ ಮಾಡುವುದರಿಂದ ಇಂಥ ಕಷ್ಟ ವೊದಗುವುದು. ಇದೆಲ್ಲವನ್ನು ಕೇಳಿ, ಕ್ರೂರಾಕ್ಷನು “ಈ ಚಿರಂಜೀವಿ ಮಹಾ ವಿವೇಕಿ, ಇವನ ಸಹವಾಸದಿಂದ ನಮಗೆ ಪ್ರಯೋಜನವುಂಟು'' ಎಂದು ಹೇಳಿ ತನ್ನಮಾತನ್ನು ಒಂದು ಕಥೆಯಿಂದ ಸಮರ್ಥಿಸಿದನು.

ಗಾರಿಪುರವೆಂಬ ನಟ್ಟಣಕ್ಕೆ ಅನಿನೇಕಶೀಲನೆಂಬ ರಾಜನು, ಅವನು ತನ್ನ ಭೃತ್ಯರಲ್ಲಿ ವಿಶ್ವಾಸವಿಲ್ಲದೆ, ಒಂದು ವಾನರವನ್ನು ಸಾಕಿ ಕೊಂಡಿದ್ದನು. ಅದಕ್ಕೆ ರಾಜನು ಸಮಸ್ತವಸ್ರ್ರಾಭರಣಗಳಿಂದ ಶೃಂಗಾರ ಮಾಡಿ, ಅದನ್ನು ನಂಬಿಕೊಂಡು ತನ್ನ ಮೈಗಾವಲಿನಲ್ಲಿ ಇರಿಸಿಕೊಂಡಿ ದ್ಹನು. ಒಂದು ದಿವಸ ರಾಜನು ತನ್ನಅರಮನೆಯಲ್ಲಿ ನಿದ್ದೆ ಹೋಗುತ್ತಿದ್ದಾಗ ರಾಜನ ವಸ್ತ್ರದ ಮೇಲೆ ಹತ್ತೆಂಟು ನೊಣಗಳು ಕುಳಿತಿದ್ದುವು, ಇದನ್ನು ಆ ಕೋತಿ ಕಂಡು, ಈ ಕ್ಷುದ್ರಜೀನಿಗಳು ನನ್ನ ಸ್ವಾಮಿಯ ಮೈಮೇಲೆ ಕುಳ್ಳಿ ರಬಹುದೇ, ಎಂದು ಕೋಪಿಸಿಕೊಂಡು ಖಡ್ಗದಿಂದ ಹೊಡೆಯಿತು. ರಾಜನಿಗೆ ಬಲವಾದ ಪೆಟ್ಟು ತಾಕಿ ಅವನು ಸತ್ತುಹೋದನು, ಆದ್ದರಿಂದ ಅನಿನೇಕಿಯಾದವನೊಡನೆ ಮಿತ್ರತ್ವವನ್ನು ಬೆಳಸುವುದಕ್ಕಿಂತಲೂ ವಿವೇಕಿ ಯಾದನನೊಡನೆ ಜಗಳವಾಡುವುದು ಮೇಲು, ಹೇಗೆಂದರೆ;

ಕರ್ಣಪುರವೆಂಬ ಪಟ್ಟಿಣದಲ್ಲಿ ವಿವೇಕಶರೀರನೆಂಬ ರಾಜನು ರಾಜ್ಯಭಾರ ಮಾಡಿಕೊಂಡಿದ್ದನು. ಅವನಿಗೆ ಸಂತಾನವಿಲ್ಲದೆ “ಅಪುತ್ರಸ್ಯ ಗತಿರ್ನಾಸಿ,” ಎಂಬ ಶ್ರುತಿವಾಕ್ಯವನ್ನು ತಿಳಿದು ಯಾವಾಗಲೂ ಅವನು ಚಿಂತಾಕ್ರಾಂತನಾಗಿರುತ್ತಿದ್ದನು. ಸಂತಾನವಾಗುವುದಕ್ಕಾಗಿ ಏನಾದರೂ ಉಪಾಯಗಳಿವೆಯೇ? ಯಂತ್ರ-ತಂತ್ರಗಳಾವುಗಳಿಂದಲಾದರೂ ಪ್ರಯೋ ಜನವಾದೀತೇ? ಎಂದು ಅವನು ಮಂತ್ರಿಗಳನ್ನು ವಿಚಾರಿಸಿದನು. ಅಷ್ಟ ರಲ್ಲಿ ಒಬ್ಬ ಬ್ರಾಹ್ಮಣನು “ ರಾಜನಿಗೆ ಪುತ್ರಸಂತಾನವಿಲ್ಲದಿರುವುದನ್ನು ತಿಳಿದು, ಉಪಾಯವನ್ನು ಹೇಳುವುದಕ್ಕಾಗಿ ಬಂದಿದ್ದೇನೆ “ ಎಂದು ಬಿನ್ನ ವಿಸಿಕೊಂಡನು. ರಾಜನು ಆ ಬ್ರಾಹ್ಮಣನನ್ನು ಕರೆಸಿ, ಸತ್ಕರಿಸಿ ಪುತ್ರೋ ಶ್ಸತ್ತಿಗಾಗಿ ತಾವು ಅನುಗ್ರಹಿಸಬೇಕು ಎಂದು ಬೇಡಿಕೊಂಡನು. ಬ್ರಾಹ್ಮ ಣನು ಒಂದು ಯಂತ್ರವನ್ನು ಪಟ್ಟಿಮಹಿಷಗೆ ಕಟ್ಟ ಮಂತ್ರಿಸಿದನು. ಅದರ ಪ್ರಭಾವದಿಂದ ಮಹಾರಾಣಿ ಗರ್ಭವನ್ನು ಧರಿಸಿದಳು. ನವಮಾಸ ತುಂಬಿದ ಮೇಲೆ ಅವಳು ದಿವ್ಯಪುತ್ರರತ್ನ ವೊಂದನ್ನು ಹೆತ್ತಳು. ಇದ ರಿಂದ ಸಂತುಷ್ಟನಾಗಿ ರಾಜನು ಮಗುವಿಗೆ ಜಾತಕರ್ಮ ನಾಮಕರಣಾ ದಿಗಳನ್ನು ಬಹು ವೈಭವದಿಂದ ಮಾಡಿ, ಆ ಬ್ರಾಹ್ಮಣನಿಗೆ ಅನಘಣ್ಯವಾದ ಒಂದು ರತ್ನವನ್ನು ಬಹುಮಾನವಾಗಿ ಕೊಟ್ಟನು. ಬ್ರಾಹ್ಮಣನು ಆ ರತ್ನವನ್ನು ತೆಗೆದುಕೊಂಡು ಹರ್ಷಿತನಾಗಿ ತನ್ನ ಊರಿಗೆ ಹೊರಟನು. ಅವನ ಊರು ಬಹಳ ದೂರದಲ್ಲಿದ್ದುದರಿಂದ ಆ ರತ್ನವನ್ನು ಯಾರಾದರೂ ಕಿತ್ತುಕೊಂಡು ಹೋಗುವರೆಂಬ ಭಯದಿಂದ ಅದನ್ನು ನುಂಗಿಬಿಟ್ಟನು, ಬ್ರಾಹ್ಮಣನು ಈ ರತ್ನವನ್ನು ನುಂಗಿದುದನ್ನು ಒಬ್ಬ ಕಳ್ಳನು ಹೇಗೋ ಕಂಡುಕೊಂಡು ಆ ಬ್ರಾಹ್ಮಣನ ಹಿಂದುಹಿಂದೆಯೇ ಹೋಗುತ್ತ ನಿರ್ಮಾನುಷವಾದ ಸ್ಥಳದಲ್ಲಿ ಅವನನ್ನು ತಡೆದು, “ಬ್ರಾಹ್ಮಣನೇ, ನೀನು ರತ್ನವನ್ನು ನುಂಗಿದ್ದೀಯೆ. ಅದನ್ನು ಬೇಗ ಕಾರಿಬಿಡು, ಇಲ್ಲವಾದರೆ ನಿನ್ನ ಹೊಟ್ಟಿ ಸೀಳಿ ಅದನ್ನು ತೆಗೆದುಕೊಳ್ಳು ತ್ತೇನೆ ಎಂದು ಗದ್ದರಿಸಿದನು. ಆ ಬ್ರಾಹ್ಮಣನು ಬಹಳ ಬುದ್ಧಿನಂತನು. ಸಮಯಕ್ಕೆ ತಕ್ಕ ಹಾಗೆ ಧೈರ್ಯ ತಂದುಕೊಂಡು ಆ ಕಳ್ಳನನ್ನು ಕುರಿತು, “ಅಯ್ಯಾ, ನಾನಾದರೋ ಬಡಬ್ರಾಹ್ಮಣ. ನನಗೆ ರತ್ನ ವೆಲ್ಲಿಂದ ಬರಬೇಕು? ನೀನಾದರೋ ಕಳ್ಳನು, ನಿನ್ನಲ್ಲಿ ರತ್ನಗಳು ಇರುವುದು ಸಾಧ್ಯವಿದೆ. ನೀನೇ ಆ ರತ್ನಗಳನ್ನು ಯರಿಗುಗೊತ್ತಾಗದಂತೆ, ನುಂಗಿ ಬಿಟ್ಟದ್ದೀಯೆ ಎಂದು ದೊಡ್ಡ ದ್ವನಿಯಿಂನ ಗದ್ಧಲವನ್ನೆ ಬೈಸುತ್ತ ಮುಂದಕ್ಕೆ ಹೋದನು. ಕಳ್ಳನು ಆ ಬ್ರಾಹ್ಮಣನನ್ನು ಮುಂದಕ್ಕೆ ಹೋಗಲು ಬಿಡದೆ ಅವನನ್ನು ತರುಖ್ಯ ರತ ಶ್ಲ ವನ್ನು ಉಗುಳುವಂತೆ ಹೆದರಿಸುತ್ತಿದ್ದನು. ಬ್ರಾಹ್ಮ ಣನೂ ಸಹ “ ಟೀ ರತ್ನ ಗಳನ್ನು ಉಗುಳು ಎಂದು ಕೂಗಿಕೊಳ್ಳುತ್ತಿ ದ್ದನು, ಇಷ್ಟರಲ್ಲಿ ಎಂಟು. ಹತ್ತು ಜನ ಪಥಿಕರು ಇವರಿಬ್ಬರ ಕಾದಾ ಟಿವನ್ನು ಕೇಳಿ, ವೇಗವಾಗಿ ಅಲ್ಲಿಗೆ ಬಂದರು. ಅವರು ಇವರಿಬ್ಬರನ್ನು ಹತ್ತಿರದ ಗ್ರಾಮವೊಂದಕ್ಕೆ ಕರೆದುಕೊಂಡು ಹೋಗಿ, ಅಲ್ಲಿಯ ಗ್ರಾಮಾಧಿ ಕಾರಿಗೆ ಇವರಿಬ್ಬರ ದೂರನ್ನು ಹೇಳಿದರು, ಆ Ji ಬಹಳ : ವಿಚಾರಪರನಾದುದರಿಂದ್ಕ ಅವರಿಬ್ಬರನ್ನೂ ಬಂಧಿಸ್ಸಿ ಬ್ರಾಹೆ ೈಣನನ್ನು ಕುರಿತು, ನೀನು ನುಂಗಿರುವ ಆ ರು ರತ್ನ ವನ್ನು ಉಗುಳಿ ಬಿಡು. ಕಳ್ಳನು ನುಂಗಿರುವ ರತ್ನಗಳನ್ನು ಉಗುಳಿಬಿಡಲಿ, “ಇಲ್ಲವಾದರೆ ನಿಮ್ಮಿಬ್ಬರ ಕೊಟ್ಟಿ ಯನ್ನು ನೀಕಿಬಿಡುತಿನು ಎಂದು ಹೇಳಿ ಖಡ್ಗವನ್ನು ಹಿರಿ ದನು. ಆ ಕಳ್ಳನು ಮನಸ್ಸಿನಲ್ಲಿ «« ಈ ಬ್ರಾ ಹ್ಮಣನು ಒಂದು ರತ್ನ ನುಂಗಿರುವುದನ್ನು ನಾನು ನೋಡಿದ್ದೇನೆ. ಆ ರತ್ನವು ಅವನ ಹೊಟ್ಟೆಯ ಲ್ಲಿಯೇ ಇದೆ, ಇವನ ಹೊಟ್ಟಿ ಯನ್ನು ಸೀಳಿದರೆ ಅಲ್ಲಿಂದ ರತ್ನವು ಹೊರ ಡುವುದು ಖಂಡಿತ, ನನ್ನ ಬಳೆಯಲ್ಲಾ ದರೋ ರತ ಗಳಿಲ್ಲ, ಆ ಬಾ ್ರಿಹ್ಮಣನ ಹೊಟ್ಟೆಯನ್ನು ಸೀಳಿದ ಮೇಲೆ ಅಲ್ಲಿನ ರತ ವನ್ನು “ನೋಡಿ, ಈ ಗ್ರಾಮಾಧಿ ಕಾರಿ ನನ್ನ ಹೊಟ್ಟೆಯನ್ನು ಸೀಳಡೆಬಿಡನು. ಅದ್ದರಿಂದ ನೊಡರೇ ನಾನು ಹೊಟ್ಟಿ ಯನ್ನು ಸೀಳಿಸಿಕೊಳ್ಳು ವುದು ಒಳ್ಳೆ ಯದು. ಬಡ ಬ್ರಾ ಹ್ಮಣನು ಬದು ಕಿಕೊಳ್ಳ ಲಿ” ಎಂದು ನಿರ್ಧರಿಸಿಕೊಂಡು, ಆ ಗ್ರಾಮಾಧಿಕಾರಿಗೆ ಮೊದಲು ತನ್ನ ಹೊಟ್ಟಿ ಯನ್ನುಸೀಳಬೇಕಾಗಿ ಪ್ರಾರ್ಥಿಸಿದನು. ಕೂಡಲೇ ಆ ಕಳ್ಳನ ಹೊಟ್ಟೆಯನ್ನು ಸೀಳಿಸಿ ನೋಡಲಾಗಿ ರತ್ನಗಳಾವುವೂ ಕಾಣಲಿಲ್ಲ, ಈ ಬ್ರಾಹ್ಮಣನಲ್ಲಿಯೂ ಕೂಡ ರತ್ನಗಳು ಇರಲಾರನೆಂದು ನಿಶ್ಚಯಮಾಡಿ ಕೊಂಡು, ಆಬ್ರಾಹ್ಮಣನನ್ನು ಹಾಗೆಯೇ ಬಿಟ್ಟು ಬಿಟ್ಟನು, ಆದ್ದರಿಂದ ಉತ್ತಮ ಪುರುಷನು ಎರಡನೆಯವರ ಹಿತಕ್ಕಾಗಿ ತನ್ನ ಪ್ರಾಣವನ್ನಾದರೂ ಅರ್ಪಿಸಿಬಿಡುತ್ತಾನೆ. ಈ ಕಳ್ಳನು ತಾನು ಸತ್ತು ಬ್ರಾಹ್ಮಣನಿಗೆ ಪ್ರಾಣದಾನ ಮಾಡಿದನು. ಕೊನೆಯಲ್ಲಿ ಕಳ್ಳನಿಗೆ ಉತ್ತೆಮನೆಂಬ ಹೆಸರು ಬಂದಿತು, ಆದರೆ ದುರ್ಜನರ ರೀತಿಯೇ ಬೇರೆ ಹೇಗೆಂದರೆ;-

ಹೇಮಾವತಿಯೆಂಬ ನದಿಯ ತೀರದಲ್ಲಿ ಗರಳಾಪುರನೆಂಬ ಪಟ್ಟಣವು. ಅಲ್ಲಿ ಭಾಸ್ಕರವರ್ಮನೆಂಬ ಬ್ರಾಹ್ಮಣೋತ್ತಮನು ವೇದ ಶಾಸ್ತ್ರಸಂಪನ್ನನಾಗಿ ಜೀವಿಸುತ್ತಿದ್ದನು. ಆತನಿಗೆ ಛಾಯಾದೇವಿಯೆಂಬಳು “ಹೆಂಡತಿ. ಇವರಿಗೆ ಮೂರು ಜನ ಮಕ್ಕಳು. ಇವರೆಲ್ಲರೂ ಸುಖದಿಂದ ಕಾಲ ಕಳೆಯುತ್ತಿರಲ್ಕು ಒಂದು ದಿನ ರಾತ್ರಿ ಆ ಬ್ರಾಹ್ಮಣನ ಮನೆಯಲ್ಲಿ ದ್ವ ಆಕಳುಗಳನ್ನು ಕದ್ದೊಯ್ಯಬೇಕೆಂದು ಒಬ್ಬ ಕಳ್ಳನು ಬರುತ್ತಿದ್ದನು. ಆಗ ಮಾರ್ಗದಲ್ಲಿ, ಅತ್ಯುಗ್ರವಾದ ಒಂದು ಬಹ್ಮರಾಕ್ಷಸವನ್ನು ಕಂಡು ಭಯಗ್ರಸ್ತನಾಗಿ “ನೀನು ಯಾರು?'' ಎಂದು ಪ್ರಶ್ನಿಸಿದನು, ಅದಕ್ಕೆ ಬಹ್ಮರಾಕ್ಷಸವು, "4 ನಾನು ಸತ್ಯವಚನನ್ನೆ:ಬ ಹೆಸರಿನ ಬ್ರಾಹ್ಮಣನು, ನೀನು ಯಾರು? ಬೇಗನೇ ಹೇಳು '' ಎಂದು ಗದ್ದರಿಸಿತು. ಆ ಮಾತನ್ನು ಕೇಳಿ ಕಳ್ಳನು ನಾನು ಒಬ್ಬ ಕಳ್ಳ. ಇವೊತ್ತು ರಾತ್ರಿ ಬ್ರಾ ಹ್ಮಣನೊಬ್ಬನ ಮನೆಯಲ್ಲಿರುವ ಎರಡು ಆಕಳುಗಳನ್ನು ಅಪಹೆರಿಸ ಬೇಕೆಂದು ಹೋಗುತ್ತಿದ್ದೇನೆ” ಎಂದು ಹೇಳಿದನು. ಅದಕ್ಕೆ ಬಹ್ಮ ರಾಕ್ಷಸವು "ಎಲೇ ಮಿತ್ರನೇ! ಆ ಬ್ರಾಹ್ಮಣನು ತುಂಬ ಪನಿತ್ರನಾದವನು. ನಾನು ಮೊದಲು ಅವನನ್ನು ಭಕ್ತಿಸುತ್ತೇನೆ. ಹೀಗೆ ನನ್ನ ಕಾರ್ಯವೂ ಆಗು ತ್ರದೆ; ನೀನೂ ನಿನ್ನ ಕಾರ್ಯನನ್ನುಮಾಡಿಕೊಳ್ಳ ಬಹುದು.''ಎಂದಿತು. ಹೀಗೆ ಮಾತಾಡಿಕೊಂಡು ಆ ಬ್ರಹ್ಮರಾಕ್ಷಸವೂ ಕಳ್ಳನೂ ಆ ಬ್ರಾಹ್ಮಣನ ಮನೆಗೆ ಹೋದರು. ಆ ಸಮಯದಲ್ಲಿ ಆ ಬ್ರಾಹ್ಮಣನು ಮಲಗಿ ನಿದ್ದೆ ಹೋಗುತ್ತಿ ದ್ದನು. ಇದನ್ನು ಕಂಡು, ರಾಕ್ಷಸವು ಬ್ರಾಹ್ಮಣನನ್ನು ಭಕ್ಷಿಸಬೇಕೆಂದು ಅನನ ಸಮೀಪಕ್ಕೆ ಹೋಗುವುದನ್ನು ನೋಡಿ, ;ಕಳ್ಳನು ರಾಕ್ಷಸವನ್ನು ಕುರಿತು "ಮಿತ್ರನೇ! ನಾನು ಮೊದಲು ಆತನ ಆಕಳುಗಳನ್ನು ತೆಗೆದು ಕೊಳ್ಳುತ್ತೇನೆ. ಆಮೇಲೆ ನೀನು ಬ್ರಾಹ್ಮಣನನ್ನು ಭಕ್ಷಿಸು" ಎಂದನು. ಅದಕ್ಕೆ ರಾಕ್ಷಸವು "ಎಲೇ ಗೆಳೆಯನೇ! ನೀನು ಆಕಳುಗಳನ್ನು ತೆಗೆದು ಕೊಳ್ಳುವನಲ್ಲಿದ್ದರೆ ಬ್ರಾಹ್ಮಣನು ಎಚ್ಚೆತ್ತರೆ ನಮ್ಮ ಕೆಲಸವೆಲ್ಲ ಕೆಟ್ಟು ಹೋಗುವುದು. ಆದ್ದರಿಂದ ನಾನು ಮೊದಲು ಅವನನ್ನು ಭಕ್ಷಿಸುತ್ತೇನೆ. ಬಳಿಕ ನೀನು ನಿರ್ಭಯದಿಂದ ಅವುಗಳನ್ನು ತೆಗೆದುಕೊಂಡು ಹೋಗು" ಎಂದಿತು. ಈ ಪ್ರಕಾರ ಒಬ್ಬರಲ್ಲೊಬ್ಬರು ವಿವಾದಿಸುತ್ತಿರುವ ಶಬ್ದವನ್ನು ಕೇಳಿ, ಮನೆಯವರೆಲ್ಲರೂ ಎಚ್ಚತ್ತುಕೊಂಡರು. ಮನೆಯವರು ಎದ್ದುದನ್ನು ನೋಡಿ, ಕಳ್ಳನೂ ರಾಕ್ಷಸನೂ ಅಲ್ಲಿಂದ ಮಾಯವಾಗಿ ಹೋದರು. ಹೀಗೆಯೇ ಇವನು ತಮ್ಮ ಅರಸನ ಕೈಕೆಳಗೆ ಬೇಸತ್ತು ಬಂದಿದ್ದಾನೆ. ಈತನು ನಮಗೆ ಹಿತಕಾರಿಯಾಗುತ್ತಾನೆ. ಆದ್ದರಿಂದ ಇವನನ್ನು ಕರೆದುಕೊಂಡು ಹೋಗಬೇಕೆಂದು ಧೂಮ್ರಾಕ್ಷನೆಂಬ ಪ್ರಧಾನನು ನುಡಿದನು. ಅದಕ್ಕೆ ವಕ್ರನಾಶನನೆಂಬ ಪ್ರಧಾನನು ಒಂದು ಕಥೆಯನ್ನು ಹೇಳಿದನು.

ನರ್ಮದಾತೀರದಲ್ಲಿ ಒಂದು ಪಟ್ಟಣ. ಅಲ್ಲಿ ಸೋಮದತ್ತ ನೆಂಬ ಬ್ರಾಹ್ಮಣನೊಬ್ಬನು ಒಂದು ತೋಟವನ್ನು ಮಾಡಿಕೊಂಡು ಇರು 'ಕ್ರಿದ್ದನು, ಆ ತೋಟದಲ್ಲಿ ನಾನಾವಿಧವಾದ ಫಲಗಳು ಪಕ್ಟವಾಗಿದ್ದುವು. ಅದನ್ನು ನೋಡಿ ಜಂಬುಕಗಳು ತೋಟದಲ್ಲಿ ನುಗ್ಗಿ ಆ ಹಣ್ಣುಗಳನ್ನು ತಿಂದು ಹೋಗುತ್ತ ಕಿರುಕುಳವನ್ನುಂಟು ಮಾಡುತ್ತಿದ್ದುವು. ಬ್ರಾಹ್ಮಣನು ನರಿಗಳ ಕಾಟವನ್ನು ತಪ್ಪಿ ಸಿಕೊಳ್ಳ ಲು ನಾನಾ ಪ್ರಕಾರದ ಬಲೆಗಳನ್ನೊಡ್ಡಿ ಆ ನರಿಗಳನ್ನು ಬಡಿಯಲು ಎನ್ನೊ! ಪ್ರಯತ್ನಿ ಸಿದನು, ಆದಕೆ ಏನೂ ಪ್ರಯೋಜನವಾಗಲಿಲ್ಲ. ಈ ನರಿಗಳ ಉಸಟಳದಿಂದ ತೋಟಿವು ಸರ್ವನಾಶವಾಗುವ ಹೊತ್ತು ಬಂತು. ಆ ಬ್ರಾಹ್ಮಣನು ಚಿಂತಾಧಿಕ್ಯದಿಂದ ಈ ನರಿಗಳನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಒಂದು ಉಪಾಯ ವನ್ನು ಕಂಡು ಹಿಡಿದನು. ಬ್ರಾಹ್ಮಣನು ಒಂದು ದಿನ ತನ್ನ ಎಡಗೈಯಲ್ಲಿ ಬುತ್ತಿಯನ್ನೂ, ಬಲಗೈಯಲ್ಲಿ ಸೊಳ್ಳೆ ಯನ್ನೂ ಹಿಡಿದುಕೊಂಡು, ಸತ್ತ ಹಾಗೆ ತೋಟದಲ್ಲಿ ಬಿದ್ದುಕೊಂಡನು. ನಿತ್ಯದಂತೆ ಸಂಗಳ ಸಮುದಾಯವು ತೋಟಿ ವನ್ನು ನುಗ್ಗಿ, ಹೀಗೆ ಬಿದ್ದಿರುವ ಬ್ರಾಹ್ಮಣನನ್ನು ನೋಡಿ, “ಸತ್ತವರು ಹೀಗೆಲ್ಲ ಬುತ್ತಿಯನ್ನೂ, ದೊಣ್ಣೆಯನ್ನೂ ಹಿಡಿದುಕೊಂಡಿರುತ್ತಾರೆಯೇ? ಇದರಲ್ಲಿ ಏನೋ ರಹಸ್ಯವಿರಬೇಕು.'' ಎಂದು ಆಲೋಚಿಸಿಕೊಂಡ್ಕು ಈ ಊರಿನಲ್ಲಿ ಯಾರಾದರೂ ಸತ್ತುದಕ್ಕೆ ಅಳುತ್ತಿದ್ದಾರೆಯೇ ಇಲ್ಲವೇ ನೋಡೋಣವೆಂದು, ನಿಶ್ಚಯಿಸಿಕೊಂಡು ಆ” ಊರ ಹತ್ತಿರ ಬಂದುವು. ಊರಿನಲ್ಲಿ ಯಾವ ವಿಧವಾದ ರೋದನ ಧ್ವನಿ ಇರದೆ ಇದ್ದದನ್ನು ತಿಳಿದು ಬ್ರಾಹ್ಮಣನು ನಮ್ಮನ್ನು ಕೊಲ್ಲಬೇಕೆಂದು ಉಪಾಯಮಾಡಿದ್ದಾನೆ, ಅದ್ದರಿಂದ ನಾವು ಇನ್ನು ಮೇಲೆ ಈ ತೋಟಕ್ಕೆ ಬರುವುದು ಕ್ಷೇಮವಲ್ಲ ವೆಂದು ಎಚ್ಚರಿಸಿ ಆ ಸ್ಥಳವನ್ನು ಬಿಟ್ಟು ಹೊರಟು ಹೋದವು. “ಇದೇ ಪ್ರಕಾರ ಈ ಚಿರಂಜೀವಿ ಪ್ರಧಾನಿ ಯಾವುದೋ ಕಪಟೋಪಾಯ ದಿಂದ ನಮ್ಮಲ್ಲಿಗೆ ಬಂದಿದ್ದಾನೆ. ಆದ್ದರಿಂದ ಇವನಿಗೆ ಆಶ್ರಯವನ್ನು ಕೊಡಬಾರದು” ಎಂದು ವಕ್ರನಾಶನು ತನ್ನ ಅಭಿಪ್ರಾಯವನ್ನು ವ್ಯಕ್ತ ಗೊಳಿಸಿದನು. ವಕ್ರನಾಶನನ ಅಭಿಪ್ರಾಯವನ್ನು ತಿಳಿದು, ದ್ವೀಪಾಕ್ಷನೆಂಬ ಪ್ರಧಾನಿ “ಕೆಟ್ಟ ಕುಲವನ್ನು ಉದ್ದರಿಸುವುದು, ಕೆಟ್ಟಿರುವ ಕೆಳವರ್ಗದವರನ್ನು ಕಟ್ಟ ಸುವುದು, ಕಂಗೆಟ್ಟು ಬಂದು ಮೊರೆಹೊಕ್ಕವರಿಗೆ ಅಂಜಬೇಡವೆಂದು ಅರ ಸರು ಅಭಯವನ್ನು ಕೊಡುವುದು, ಗೋಬ್ರಾಹ್ಮಣರನ್ನು ರಕ್ಷಿಸುವುದು, ಹಾಳಾದ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವುದು, ಈ ಎಲ್ಲ ಸದ್ಗುಣಗಳುಳ್ಳ ವನು ಲೋಕದಲ್ಲಿ ಪುಣ್ಯಪುರುಷನೆಂದು ಹೆಸರುವಾಸಿಯಾಗು ವನು. ಇದಲ್ಲದೆ ' ಪೂರ್ವದಲ್ಲಿ ತ್ರೀಮಹಾನಿಷ್ಣು ಪರೋಪಕಾರವನ್ನೂ ಮೋಕ್ಷವನ್ನೂ ತಕ್ಕಡಿಯಲ್ಲಿ ಒಂದೊಂದು ಕಡೆಯಿಟ್ಟು ತೂಕಮಾಡಿದನು. ಆಗ ಪರೋಪಕಾರವೇ ಹೆಚ್ಚಳವಾಯಿತು. ಈ ಕಾರಣದಿಂದಲೇ ನಾರಾ ಯಣನು ಲೋಕಕ್ಕೆ ಪರೋಪಕಾರವನ್ನು ಮಾಡಬೇಕೆಂದು ದಶಾವತಾರ ವನ್ನು ತಾಳಿ ಪ್ರಪಂಚವನ್ನು ಉದ್ದಾರಮಾಡಿದನು. ಇದಕ್ಕೆ ಮತ್ತೊಂದು ಕಥೆಯುಂಟು'" ಎಂದು ಆ ಕಥೆಯನ್ನು ಬಿತ್ತರಿಸಿದನು.

ಕಥೆ: ಧರ್ಮವತಿಯೆಂಬ ಸುತ್ತ ಇದಲ್ಲಿ ಜಟಾಶಿಖಿ ಎಂಬ ರಾಜನೊಬ್ಬನು ಲೋಕೋಪಕಾರ ಮಾಡುತ್ತ ಒಳ್ಳೆಯ ಧರ್ಮದಿಂದ ರಾಜ್ಯವಾಳುತ್ತಿದ್ದ. ಆ ರಾಜನ ಧರ್ಮಗುಣವನ್ನು ಪರೀಕ್ಷಿಸಬೇಕೆಂದು ದೇವೇಂದ್ರನು ಪಾರಿ ವಾಳ ಹಕ್ಕಿಯ ರೂಪವನ್ನು ಹೂಡಿದನು. ಯಜ್ಞ ಪುರುಷನು ಹದ್ದಿನ ರೂಪ ವನ್ನು ತಾಳಿ, ಇವನ ಹತ್ತಿರ ಬಂದರು. ಆ ಪಾರಿವಾಳವನ್ನು ಹದ್ದು ಮುರಿವೆನೆಂದು ಬೆನ್ನಟ್ಟಿ ಕೊಂಡು ರಭಸದಿಂದ ಹಾರಿಬರುತ್ತಿತ್ತು. ಆಗ ಪಾರಿವಾಳವು ರಾಜನ ಹತ್ತಿರ ಬಂದು ಅವನನ್ನು ಮೊರೆಹೊಕ್ಕಿತು. ಅದನ್ನು ಬೆನ್ನಟ್ಟಿಕೊಂಡು ಬಂದ ಹದ್ದು ರಾಜನನ್ನು ಸಮೀಪಿಸಿ, “ಮಹಾರಾಜನೆ, ನಿನ್ನಲ್ಲಿ ನನ್ನ ಆಹಾರವಿದೆ. ಅದನ್ನು ಕೊಟ್ಟು ಬಿಡು” ಎಂದು ಕೇಳಿತು. ಆಗ ರಾಜನು «ನಿನಗೆ ಬೇಕಾದದ್ದು ಆಹಾರವಷ್ಟೆ? ಈ ಪಾರಿವಾಳದ ತೂಕದಷ್ಟು ಮಾಂಸವನ್ನು ನನ್ನ ಶರೀರದಿಂದ ಕೊಡುವೆನು” ಎಂದು ತಕ್ಕಡಿಯನ್ನೂ, ಚಮ್ಮಟಗೆಯನ್ನೂ ತರಿಸಿ, ತನ್ನ ದೇಹದಿಂದ ಖಂಡವನ್ನು ತೆಗೆದು, ಒಂದು ಕಡೆಯಲ್ಲಿ, ಆ ಹಕ್ಕಿಯನ್ನು ಕುಳ್ಳಿರಿಸಿ, ಮತ್ತೊಂದು ಕಡೆಯಲ್ಲಿ ಖಂಡವನ್ನು ಹಾಕಿದನು. ಆದರೆ ಎಷ್ಟು ಖಂಡವನ್ನು ಹಾಕಿದರೂ ಅದು ಆ ಹಕ್ಕಿಯ ತೂಕಕ್ಕೆ ಸರಿ ಹೋಗಲಿಲ್ಲ. ಕೊನೆಗೆ, ತಾನೇ ತಕ್ಕಡಿಯಲ್ಲಿ ಕುಳಿತು ಕೊಂಡನು. ಆಗ ದೇವೇಂದ್ರನೂ ಯಜ್ಞ ಪುರುಷನೂ, ಇವನ ಧರ್ಮ ಬುದ್ಧಿಗೆ ಮೆಚ್ಚಿ, ಆ ರಾಜನಿಗೆ ಬೇಡಿದ ವರವನ್ನು ಕೊಟ್ಟು, ಅಂತರ್ಧಾನ ವಾದರು. ಆದ್ದರಿಂದ ಮೊರೆ ಹೊಕ್ಕವರನ್ನು ಕಾಯುವುದು ಶ್ರೇಷ್ಠವಾದ ಧರ್ಮವೆಂದು ದ್ವೀಪಾಕ್ಷನು ಅಭಿಪ್ರಾಯ ಪಟ್ಟನು. ಆ ಉಲೂಕರಾಜನು ತನ್ನ ಐದನೆ ಪ್ರಧಾನರ ಅಭಿಪ್ರಾಯವನ್ನು ಕೇಳಿದ ಮೇಲೆ, ಈ ಚಿರಂಜೀವಿಯನ್ನು ತಮ್ಮ ಹತ್ತಿರ ಇಟ್ಟುಕೊಳ್ಳುವುದು ಸರಿಯೆಂದು ನಿಶ್ಚಯಿಸಿ, ಅದನ್ನು ತಾವಿರುವ ಸ್ಥಳಕ್ಕೆ ಕರೆದೊಯ್ದನು. ಚಿರಂಜೀವಿ ಆ ಗೋಬೆಗಳ ರಾಜನ ಆಶ್ರಯದಲ್ಲಿರುತ್ತಾ ಆ ಸ್ಥಳವನ್ನೆಲ್ಲ ಚೆನ್ನಾಗಿ ಪರೀಕ್ಷಿಸಿತು. ಗುಹೆ- ಗುಹಾಂತರಗಳನ್ನೆಲ್ಲ ನೋಡಿಕೊಂಡು, ಎಲ್ಲ ರಹಸ್ಯಸ್ಥಾನಗಳನ್ನು ತಿಳಿದುಕೊಂಡಿತು. ವಕ್ರನಾಶನ ಪ್ರಧಾನಿಯಾ ದರೋ ರಾಜನನ್ನು ಕರಿತು ಪುನಃ, "ಎಲೇ ರಾಜನೇ! ನಮ್ಮ ಗುಹೆಯ ಕುಲಕ್ಕೆ ನಿಮ್ಮ ದೋಷದಿಂದ ನಾಶವಾಗುವ ಸಮಯ ಬಂದಿತು. ಎರಡ ನೆಯವರ ದೋಷವನ್ನು ರಾಜನಿಗೆ ಬಿನ್ನಯಿಸುವುದು ನಮ್ಮ ಕರ್ತವ್ಯ, ಆದರೆ, ರಾಜನೇ ಹಿತವನ್ನು ಕೇಳದಿದ್ದರೆ ನಮಗಾವ ಉಪಾಯವುಂಟು?'' ಎಂದು ಎಚ್ಚರಿಸಿದನು. ವಕ್ರನಾಶನನ ಈ ಮಾತುಗಳನ್ನು ಉಲೂಕರಾಜನು ಪುನಃ ತಿರಸ್ಕರಿಸಿ ಬಿಟ್ಟನು, ಈಗ ಚಿರಂಜೀವಿಗೆ ರಾಜಾಶ್ರಯದಿಂದ ತುಂಬ ನೆಮ್ಮದಿ ಯುಂಟಾಯಿತು; ಅಲ್ಲದೆ, ಉಲೂಕರಾಜನು ತನ್ನಲ್ಲಿ ಸಂಪೂರ್ಣ ವಿಶ್ವಾಸ. ವನ್ನಿಟ್ಟ್ವದ್ದಾನೆಂಬ ನಿಶ್ಚಯವೂ ಆಯಿತು. ಹೀಗಿರುತ್ತಿರುವಾಗ, ಚಿರಂ ಜೀವನಿ ತನ್ನಲ್ಲಿ ತಾನು "ನಾನು ಇವರೆಲ್ಲರೊಡನೆ ಈ ಗುಹೆಯಲ್ಲಿ ವಾಸವಾಗಿದ್ದರೆ, ನನ್ನ ಮನೋಭಿಪ್ರಾಯವು ಸಿದ್ಧಿಸದು, ಅಲ್ಲದೆ ನನ್ನ ಕಪಟೋಪಾಯವನ್ನು ಈ ಗೂಗೆಗಳು ಹೇಗಾದರೂ ತಿಳಿದುಕೊಂಡಾವು! ಆದುದರಿಂದ ನಾನು ಈ ಗುಹೆಯೊಳಗೆ ಇರುವುದು ಒಳ್ಳೆಯದಲ್ಲ. ಈ ಗುಹೆಯ ಹೊರಗೆ ಬಾಗಿಲಿನ ಮುಂದೆ ಇದ್ದುಕೊಂಡು ನನ್ನ ಮನೋಭಿಲಾಷೆಯನ್ನು ಪೂರ್ಣ ಮಾಡಿಕೊಳ್ಳಬೇಕು" ಎಂದು ಥಿಶ್ಚಯ ಸಿಕ್ಕಿತು. ಹೀಗೆ ನಿಶ್ಚಯ ಮಾಡಿಕೊಂಡು ಚಿರಂಜೀವಿ ಗೂಗೆರಾಜನನ್ನುದ್ದೇಶಿಸಿ "ಮಹಾಸ್ವಾಮಿ! ನಾನು ನೀಚಜಾತಿಯಲ್ಲಿ ಹುಟ್ಟಿದ ಕಾಗೆ; ಉಚ್ಚಜಾತಿಯವರಾದ ತಮ್ಮ ಜೊತೆಯಲ್ಲಿ ಈ ಗುಹೆಯೊಳಗೆ ಇರಲು ನಾನು ಅರ್ಹನಲ್ಲ. ಆದಕಾರಣ ತಮ್ಮ ಗುಹಾದ್ವಾರದಲ್ಲಿದ್ದುಕೊಂಡು ನಿಷ್ಟಸಟಿದಿಂದ ತಮ್ಮ ಸೇವೆ ಮಾಡಿಕೊಳ್ಳುತ್ತೇನೆ. ಭಕ್ತಿಯಿಂದ ಕೂಡಿದ ಪವಿತ್ರನಾದ ಸೇವಕನು ಎಲ್ಲಿದ್ದರೂ ಸಂಶಯಕ್ಕೆಡೆಯಿರುವುದಿಲ್ಲ. ತಾವು ನನ್ನ ಈ ಪ್ರಾರ್ಥನೆಯನ್ನು ಮನ್ನಿಸಿ ಅನುಗ್ರಹಿಸಬೇಕು," ಎಂದು ಬೇಡಿಕೊಂಡಿತು. ಈ ಮಾತನ್ನು ಕೇಳಿ ಉಲೂಕರಾಜನು ಒಡಂಬಟ್ಟು ಚಿರಂಜೀವಿಗೆ ಗುಹಾದ್ವಾರದಲ್ಲಿರುವಂತೆ ಆಜ್ಞಾಪಿಸಿದನು. ಈ ಏರ್ಪಾಟನ್ನು ನೋಡಿ, ವಕ್ರನಾಶನನು ಮತ್ತೊಮ್ಮೆ "ಎಲ್ಲೆ ರಾಜನೇ! ನಿನ್ನ ಮಂತ್ರಿಗಳೆಲ್ಲರೂ ಮೂರ್ಯರು. ನೀನು ಅವರಂತೆಯೇ ನಡೆದುಕೊಳ್ಳುತ್ತ್ತಿದ್ದೀಯೆ," ಎಂದು ಎಚ್ಚರಕೊಟ್ಟು, "ಇದಕ್ಕೊಂದು ಪೂರ್ವದ ಕಥೆಯಿದೆ. ದಯವಿಟ್ಟು ಅದನ್ನು ಆಲಿಸು."

ಒಂದಾನೊಂದು ವೃಕ್ಷದ ಮೇಲೆ ಒಂದು ಸಕ್ಷಿಗೂಡನ್ನು ಕಟ್ಟಿಕೊಂಡು ನಿತ್ಯವೂ ಸುವರ್ಣದ ಹಿಕ್ಕೆಯನ್ನು ಹಾಕುತ್ತಿತ್ತು. ಹೀಗಿರುವಾಗ ಒಂದು ದಿನ ಒಬ್ಬ ಬೇಟೆಗಾರನು ಬಂದನು. ಅದೇ ಸಮಯದಲ್ಲಿ ಆ ಪಕ್ಷಿ ಮಲವಿಸರ್ಜನೆಮಾಡಿತು. ಅದೆಲ್ಲ ಬಂಗಾರವಾದುದನ್ನು ಕಂಡು ಬೇಟಿಗಾರನು ಬಹಳ ಆಶ್ಚರ್ಯಪಟ್ಟು "ನಾನು ಚಿಕ್ಕಂದಿನಿಂದ ಅನೇಕ ಅರಣ್ಯಗಳನ್ನು ತಿರುಗಿದ್ದೇನೆ. ಅನೇಕ ಪಕ್ಸಿಜಾತಿಗಳನ್ನು ನೋಡಿದ್ದೇನೆ. ಆದರೆ ಇಂಥ ಪಕ್ಷಿಯನ್ನು ಇದುವರೆಗೆ ಎಲ್ಲೆಲ್ಲಿಯೂ ನೋಡಿಲ್ಲ. ಈ ಪಕ್ಷಿಯನ್ನು ಕೊಲ್ಲದೆ ಜೀವಸಹಿತವಾಗಿ ಹಿಡಿಯಬೇಕು," ಎಂದು ಮನಸ್ಸಿನಲ್ಲಿ ಯೋಚಿಸಿ ಆ ವೃಕ್ಷಕ್ಕೆ ಒಂದು ಬಲೆಯನ್ನು ಒಡ್ಡಿದನು. ಪಕ್ಲಿ ಬಲೆಯಲ್ಲಿ ಸಿಕ್ಕಿಕೊಂಡಿತು. ಬೇಟಿಗಾರನು ಆ ಪಕ್ಸಿಯನ್ನು ಹಿಡಿದು ಪಂಜರದೊಳಗೆ ಹಾಕಿಕೊಂಡು ತನ್ನ ಮನೆಗೆ ತೆಗೆದುಕೊಂಡು ಹೋದನು. ಮನೆಗೆ ತೆಗೆದುಕೊಂಡು ಹೋದಮೇಲೆ, ಅವನಿಗೆ ಒಂದು ದೊಡ್ಡ ಯೋಚನೆಯುಂಬಾಯಿತು. "ಈ ಪಕ್ಷಿ ನನ್ನ ಬಳಿಯಲ್ಲಿದ್ದ ವರ್ತಮಾನವು ಅರಸನಿಗೆ ತಿಳಿದರೆ, ಅವನು ವ್ಯರ್ಥವಾಗಿ ನನ್ನ ಪ್ರಾಣವನ್ನು ತೆಗೆದುಕೊಳ್ಳುವನು. ಮತ್ತು ಈ ಪಕ್ಷಿಯನ್ನು ತೆಗೆದುಕೊಂಡು ಹೋಗುವನು. ಆದುದರಿಂದ ಈ ಗುಣನಿಧಿಯಾದ ಪಕ್ಸಿಯನ್ನು ಈ ಕ್ಷಣದಲ್ಲಿಯೇ ನಾನೇ ಅರಸನಿಗೆ ಕೊಟ್ಟು ಬಿಡುವುದು ಉತ್ತಮ,"ವೆಂದು ಅವನು ನಿಶ್ಚಯಿಸಿಕೊಂಡನು. ಅದೇ ಪ್ರಕಾರವಾಗಿ, ಅವನು ಆ ಪಕ್ಸಿಯನ್ನು ಅರಸನ ಹತ್ತಿರ ತೆಗೆದುಕೊಂಡು ಹೋಗಿ ಆ ವೃತ್ತಾಂತವನ್ನೆಲ್ಲ ರಾಜನಿಗೆ ಶ್ರುತಪಡಿಸಿದನು. ರಾಜನು ಸಂತೋಷದಿಂದ ಆ ಪಕ್ಸಿಯನ್ನು ಸ್ವೀಕರಿಸಿ ಒಂದು ರತ್ನ ಖಚಿತವಾದ ಪಂಜರದಲ್ಲಿರಿಸಿದನು. ರಾಜನ ಪ್ರಧಾನಿ ಈ ವಿದ್ಯಮಾನವನ್ನೆಲ್ಲ ನೋಡಿ, ರಾಜನನ್ನು ಕುರಿತು "ರಾಜನೇ! ಈ ಲುಬ್ಬಕನ ವರ್ತನವಿನಲ್ಲಿ ವಿಚಿತ್ರವಾಗಿದೆ. ಈ ಪಕ್ಷಿ ಸ್ವರ್ಣದ ಹಿಕ್ಕೆಯನ್ನು ಇಡುತ್ತದೆಯೇ? ಹಾಗಿದ್ದ ಪಕ್ಷದಲ್ಲಿ ಅವನು ನಿನಗೆ ತಂದುಕೊಡುತ್ತಿದ್ದನೇ? ಈ ಪಕ್ಸಿಯಿಂದ ಏನೂ ಪ್ರಯೋಜನವಿಲ್ಲ, ಇದನ್ನು ಬಿಟ್ಟು ಬಿಡಬೇಕು," ಎಂದು ಹೇಳಿದನು. ರಾಜನು ಪ್ರಧಾನಿಯ ಮಾತುಗಳನ್ನು ಕೇಳಿ ನಂಬಿ, ಆ ಪಕ್ಷಿಯನ್ನು ಬಿಡುಗಡೆ ಮಾಡಿ ಬಿಟ್ಟನು. ಕೂಡಲೇ ಪಕ್ಷಿ ಹಾರಿ ಹೋಗಿ ರಾಜಮಂದಿರದ ಶಿಖರದ ಮೇಲೆ ಕುಳಿತು "ನಾನೇ ಮೊದಲನೆಯ ಮೂರ್ಬ ಎಂದುಕೊಂಡಿದ್ದೆನು, ಈ ವ್ಯಾಧನು ಎರಡನೆಯ ಮೂರ್ಬನು. ಪ್ರಧಾನಿಯು ಮೂರನೆಯ ಮೂರ್ಬನು. ರಾಜನಾದರೋ ನಾಲ್ಕನೆಯ ಮೂರ್ಬನು," ಎಂದು ಉಚ್ಚದ್ದನಿಯಲ್ಲಿ ಹೇಳಿ ಹಾರಿಹೋಯಿತು. ಆದ್ದರಿಂದ, "ಗೂಗೆರಾಜನೇ! ನಾವೂ ಅಂಥ ಮೂರ್ಬರಾಗಕೂಡದು" ಎಂದು ನುಡಿದು ವಕ್ರನಾಶನ ಪ್ರಧಾನಿ ತನ್ನ ಸರಮಮಿತ್ರರಾದ ಇತರ ಮಂತ್ರಿಗಳನ್ನುದ್ದೇಶಿಸಿ“ಇಂದಿನವರೆಗೆ ನಾವೆಲ್ಲರೂ ಈ ಉಲೂಕರಾಜನ ಆಶ್ರಯದ ಲ್ಲಿದ್ದೆವು. ಇನ್ನು ಮೇಲೆ ನಾನು ಮಾತ್ರ ಈ ಆಶ್ರಯವನ್ನು ಬಿಟ್ಟು ಬಿಟ್ಟು ಬೇಕಿಯಸ್ಪಳದಲ್ಲಿ ಆಶ್ರಯಪಡೆಯಬೇಕಾಗುತ್ತದೆ, ಏಕೆಂದರೆ ವಿಷತ್ತುಸಂಭ ವಿಸುವುದಕ್ಕೆ ಪೂರ್ವದಲ್ಲಿಯೇ ವಿಚಾರ ಮಾಡುವವನು ಸುಖವನ್ನು ಹೊಂದು ತ್ತಾನೆ. ಹೇಗೆಂದರೆ, ಒಂದು ನರಿ ತನ್ನ ಗುಹೆಯನ್ನು ಉದ್ದೇಶಿಸಿ ಮಾತ ನಾಡಿ, ಸುಖವನ್ನು ಹೊಂದಿತು. ಹಾಗೆಯೇ ನಾವು ಮಾಡುವುದು ಒಳ್ಳೆ ಯದು'' ಎಂದು ಹೇಳಿತು. ಉಳಿದ ಪ್ರಧಾನರು "ಆ ನರಿ ಗುಹೆಯನ್ನು ಮಾತಾಡಿಸಿದುದು ಹೇಗೆ? ವಿಸ್ತರಿಸಿ ಹೇಳಬೇಕು” ಎಂದು ಕೇಳಲು, ವಕ್ರ ನಾಶನನು ಆ ಕಥೆಯನ್ನು ವಿವರಿಸಿದನು.

ಕಥೆಃ. ಒಂದು ಕಾಡಿನಲ್ಲಿ ದೀರ್ಫದಂತನೆಂಬ ಸಿಂಹ ಒಂದು ದಿನ ಆಹಾರಸಿಮಿತ್ತವಾಗಿ ಅಲೆದಲೆದು ಬಹಳ ಆಯಾಸಗೊಂಡಿತು. ಆದರೆ ಅದಕ್ಕೆ ತಿನ್ನಲು ಆಹಾರವೇನೂ ದೊರೆಯಲಿಲ್ಲ. ಅಷ್ಟರಲ್ಲಿ ಸಾಯಂಕಾಲವಾ ಯಿತು, ಸಿಂಹವು ಸಮೀಪದಲ್ಲಿದ್ದ ಒಂದು ಪರ್ವತದ ಗುಹೆಯನ್ನು ಸಮೀ ನಿಸಿ "ಈ ಗುಹೆಯನ್ನು ಪ್ರವೇಶಿಸಿ ಈ ರಾತ್ರಿಯಲ್ಲಿ ನಾನು ಇಲ್ಲಿಯೇ ವಾಸಮಾ ಡಿಕೊಂಡಿದ್ದರೆ ಯಾವ ಪ್ರಾಣಿಯಾದರೂ ರಾತ್ರಿ ಹೊತ್ತು ಈ ಗುಹೆಯಲ್ಲಿ ಬರಬಹುದು. ನನಗೆ ಆಗ ಒಳ್ಳೆ ಯ ಆಹಾರ ಸಿಕ್ಕುವುದು, ಅದನ್ನು ಭಕ್ಷಿಸಿ ನಾನು ತೃಪ್ರಿಹೊಂದುವೆನು” ಎಂದು ಸಂಕಲ್ಪಿಸಿ ಆ ಗುಹೆಯಲ್ಲಿ ಅಡಗಿ ಕೊಂಡಿತು. ಅಷ್ಟರಲ್ಲಿ ಆ ಗುಹೆಯ ಯಜಮಾನನಾದ ಲಂಬಪುಚ್ಛ ವೆಂಬ ನರಿ ತನ್ನ ಸ್ಥಾನಕ್ಕೆ ಬಂದು, ಅಲ್ಲಿ ಸಿಂಹದ ಹೆಜ್ಜೆ ಮೂಡಿರುವುದನ್ನು ನೋಡಿ, ಅನುಮಾನನಟ್ಟತು. « ಈ ಗುಹೆಯಲ್ಲಿ ಸಿಂಹವು ಪ್ರವೇಶ ಮಾಡಿದೆಯೇ, ಇಲ್ಲವೇ? ಇದನ್ನು ಪರೀಕ್ಷಿಸಬೇಕು, ಪರೀಕ್ಷಿಸಿದ ಮೇಲೆ ನಾನು ಗುಹೆಯೊಳಗೆ ಹೋಗುವುದು ಕ್ಷೇಮಕರವಾಗುವುದು ? ಹೀಗೆಂದು ಆಲೋಚಿಸಿಕೊಂಡು, ಗುಹೆಯ ದ್ವಾರದಿಂದ ಸ್ವಲ್ಪ ದೂರದಲ್ಲಿ ನಿಂತು ಆ ನರಿ “ಎಲೇ, ಗುಹೆಯೇ? ಎಲೇ, ಗುಹೆಯೇ?'' ಎಂದು ಎರಡು ಸಾರಿ ದೊಡ್ಡ ಧ್ವನಿಯಲ್ಲಿ ಕೂಗಿತು. ಹೀಗೆ ಕೂಗಿ ಸ್ವಲ್ಪಹೊತ್ತು ಸುಮ್ಮನಿದ್ದು ಆ ಮೇಲೆ * ಗುಹೆಯೇ! ನೀನು ನನ್ನ ಶಬ್ದವನ್ನು ಗುರು ತಿಸಲಿಲ್ಲವೇ? ದಿನಾಗಲೂ ನಾನು ಇದೇ ರೀತಿಯಲ್ಲಿ ಕೂಗಿದಾಗ ನೀನು ನನ್ನ ಧ್ವನಿಯನ್ನು ಗುರುತಿಸಿ ಕೂಡಲೇ ಪ್ರತ್ಯುತ್ತರವನ್ನು ಕೊಡುತ್ತಿದ್ದೆ. ಇವೊತ್ತು ಮಾತಾಡದೆ, ಸುಮ್ಮನೆ ಇದ್ದೀಯೆ. ಕಾರಣವೇನೋ ಗೊತ್ತಾ ಗಲಿಲ್ಲ. ನೀನು ಶೀಘ್ರದಲ್ಲಿಯೇ ಉತ್ತರ ಕೊಟ್ಟರೆ ಸರಿ, ಇಲ್ಲದಿದ್ದರೆ ನಾನು ಎರಡನೆಯ ಸ್ಥಳಕ್ಕೆ ಹೊರಟುಹೋಗುವೆನು” ಎಂದು ಹೇಳಿತು. ಸಿಂಹವು ನರಿಯ ಮಾತುಗಳನ್ನೆಲ್ಲ ಕೇಳಿ, ತನ್ನಮನಸ್ಸಿನಲ್ಲಿ“ ಈ ಗುಹೆ ನರಿಯೊಡನೆ ದಿನಾಗಲೂ ಮಾತಾಡುತ್ತಿತ್ತು. ಇವೊತ್ತು ನಾನು ಇಲ್ಲಿರುವುದನ್ನು ನೋಡಿ, ಭಯದಿಂದ ಮಾತಾಡದೆ ಸುಮ್ಮನೆ ಇದೆ. ಆದ್ದರಿಂದ ನಾನೇ ಈ ನರಿಗೆ ಉತ್ತರವನ್ನು ಕೊಡಬೇಕು. ” ಎಂದು ಯೋಚಿಸುತ್ತಿರುವಷ್ಟರಲ್ಲಿ ಆ ನರಿ ಮತ್ತೊಮ್ಮೆ “ ಗುಹೆಯೇ! ಎಲ್ಲೊ ಗುಹೆಯೇ!” ಎಂದು ಕಕಿಯಿತು. ಆಗ ಸಿಂಹವು ಪ್ರತ್ಯುತ್ತರವನ್ನು ಕೊಟ್ಟಿತು. ನರಿ ಅದನ್ನು ಕೇಳಿ,“ ಸಿಂಹವು ನನ್ನ ಗುಹೆಯನ್ನು ಆಕ್ರಮಿಸಿಕೊಂಡಿದೆ, ಇನ್ನು ನಾನು ಅಲ್ಲಿ ಹೋಗು ವುದು ಕ್ಷೇಮವಲ್ಲ'' ಎಂದು ಮೆತ್ತಗೆ ಹೊರಟುಹೋಯಿತು. ಹೀಗೆ ಆ ವಕ್ರನಾಶನನು, “ ತಾನು ಯಾವುದಾದರೂ ಒಂದು ಕಾರ್ಯ ವನ್ನು ಮಾಡಬೇಕಾದಾಗ ಪೂರ್ವಾಪರವನ್ನು ವಿಚಾರ ಮಾಡಿ ನಿರ್ಧರಿಸಿ ಕೊಳ್ಳಬೇಕು'' ಎಂದು ಹೇಳಿ, ತನ್ನ ಆಪ್ತರನ್ನು ಕೂಡಿಕೊಂಡು ಎರಡ ನೆಯ ಪರ್ವತಕ್ಕೆ ಹೊರಟುಹೋಯಿತು. ಇತ್ತ ಆ ಚಿರಂಜೀವಿ ವಕ್ರನಾಶನನು ಹೊರಟುಹೋದುದನ್ನು ನೋಡಿ ಬಹಳ ಸಂತೋಷವನ್ನು ಹೊಂದಿತು. " ಇನ್ನು ಮೇಲೆ ನನ್ನ ಕಾರ್ಯವು ಕೈಗೂಡುವುದು, ನಮ್ಮ ಕುಲಕ್ಕೆ ತೀವ್ರವೇ ಕಲ್ಯಾಣವಾಗುವುದು, ಇನ್ನು ಈ ಎಲ್ಲ ಗೂಗೆಗಳನ್ನು ಕೊಲ್ಲುವುದು ಅಂಥ ಅಶಕ್ಯವಾದ ಕಾರ್ಯವೇನೂ ಅಲ್ಲ. ವಿಕೆಂದರೆ ಚತುರನಾದ ಮಂತ್ರಿ ಇಲ್ಲದಿರುವ ರಾಜನು ಶೀಘ್ರ ದಲ್ಲಿ ನಾಶ ಹೊಂದುವನು. ಚತುರಮಂತ್ರಿ ಕಪಟಮಿತ್ರನಿಗೆ ಶತ್ರು. ಈಗಾದರೋ ಈ ಉಲೂಕರಾಜನ ಹತ್ತಿರ ಚತುರರಾದ ಮಂತ್ರಿಗಳಾರೂ ಉಳಿಯಲಿಲ್ಲ. ಇನ್ನು ನಾನು ನಮ್ಮ ಕಲ್ಯಾಣಕ್ಕಾಗಿ ಮುಂದಿನ ಕಾರ್ಯ ಮ ಕೈಕೊಳ್ಳ ಬೇಕು'' ಎಂದು ಮನಸ್ಸಿನಲ್ಲಿಯೇ ನಿಶ್ಚಯಮಾಡಿಕೊಂಡಿತು ಈ ಪ್ರಕಾರವಾಗಿ ನಿಶ್ಚಯಮಾಡಿಕೊಂಡು ಆ ಚಿರಂಜೀವಿ ಕಾಗೆ ದಿನಾಗಲೂ ಒಂದೊಂದು ಕಟ್ಟಿಗೆಯ ತುಂಡನ್ನು ತಂದು, ಆ ಗುಹಾದ್ವಾರ ದಲ್ಲಿ ಶೇಖರಿಸಿತೊಡಗಿತು. ಹೀಗೆ ಕಟ್ಟಿಗೆಯ ತುಂಡುಗಳನ್ನು ಹೇರಳ ವಾಗಿ ಕೂಡಿಸಿದ ಮೇಲೆ, ಆ ಗೂಗೆಗಳ ಕಣ್ಣಿಗೆ ಬೀಳದಂತೆ ಅದು ಮೆಲ್ಲಗೆ ಅಲ್ಲಿಂದ ನುಸುಳಿಕೊಂಡು, ತನ್ನ ಒಡೆಯನಾದ ಮೇಘೆನರ್ಮನೆಂಬ ಕಾಕ ರಾಜನ ಬಳಿಗೆ ಹೋಯಿತು. ೬೦ ಹೋಗಿ ತಾನು ಮಾಡಿದ ಎಲ್ಲ ಉಪಾ ಯಗಳನ್ನೂ ತನ್ನ ಒಡೆಯನ ಮುಂಜಿ ನಿನಂತಿ ಮಾಡಿಕೊಂಡಿತು. ಮುಂಜಿಸ ಮಾಡಬೇಕೆಂಬುದನ್ನು ಕುರಿತು «« ಎಲೇ, ರಾಯನೇ! ನೀವೆಲ್ಲರೂ ಒಂದೊಂದು ಕಟ್ಟಿಗೆಯ ಕೊಳ್ಳೆಯನ್ನು ಕಚ್ಚಿಕೊಂಡು ಬಂದು, ನಾನಿರುವ ಗುಹೆಯ ಮೇಲೆ ಎಸೆಯಬೇಕು. ನಾನು ಶೇಖರಿಸಿಟ್ಟಿರುವ ಕಟ್ಟ ಗೆಗಳಿಗೆ ಬೆಂಕಿ ಹತ್ತಿಕೊಂಡು ಗುಹೆಯೆಲ್ಲಾ ದಹಿಸಿ, ಎಲ್ಲ ಗೂಗೆಗಳೂ ಭಸ್ಮೆ ವಾಗಿ ಹೋಗುವುವು. ನೀವು ಆಲಸ್ಯ ಮಾಡದೆ, ಈ ಕ್ಷಣದಲ್ಲಿಯೇ ನಡೆಯಬೇಕು. ನಮ್ಮ ಕಾರ್ಯವು ಸಿದ್ಧಿಸುವುದು. ತಡಮಾಡಿದರೆ, ನಮ್ಮ ಈ ರಹಸ್ಯವು ಶತ್ರುವಿಗೆ ತಿಳಿದು, ಅವನು ಸ್ಥಳಾಂತರಕ್ಕೆ ಹೊರಟು ಹೋಗಿ ಬಿಡಬಹುಡು. ಗಜ ನಾನು ಮಾಡಿದ ವಾಯುಗಳು ವ್ಯರ್ಥವಾಗುವುವು '' ಎಂದು ನಿವೇದಿಸಿಕೊಂಡಿತು. ಈ ರೀತಿಯಲ್ಲಿ ಚಿರಂ ಜೀನಿ ಮಾಡಿದ ಸೂಚನೆಯನ್ನು ಕೇಳಿ, ಮೇಫೆವರ್ಮ ಕಾಕರಾಜನು ತತ್ಕ್ಷಣವೇ ತನ್ನ ಪರಿವಾರನನ್ನೆ ಲ್ಲ ಕೂಡಿಕೊಂಡು, ಒಂದೊಂದು ಕೊಳ್ಳೆ ಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹಾರಿಹೋಗಿ ಗೂಗೆಗಳ ಗುಹಾದ್ವಾ ರದ ಮುಂಜಿ ಎಸೆದನು. ಆ ಕೂಡಲೇ ಆ ಕಟ್ಟಿಗೆಗಳೆಲ್ಲ ಹೊತ್ತಿಕೊಂಡು ಹೊಗೆ ಗುಹೆಯೊಳಗೆಲ್ಲ ವ್ಯಾಪಿಸಿಕೊಂಡಿತು. ಗೂಗೆಗಳಿಗೆ ಹೊರಗೆ ಹೋಗಲು ಸಾಧ್ಯವೇ ಆಗಲಿಲ್ಲ. ಆ ಸಮಯದಲ್ಲಿ ವಕ್ರನಾಶನ ಪ್ರಧಾ ನಿಯ ವಾಕ್ಯವನ್ನು ಸ್ಮರಿಸಿಕೊಂಡು «« ಅಯ್ಯೊ! MS ನಮ್ಮ ಪ್ರಧಾನಿಯ ಮಾತನ್ನು ಕೇಳದೆ ಇದ್ದುದರಿಂದಲೇ ಈ ಫಲ ಲಭಿಸಿತು.'” ಎಂದು RE ತನ್ನ ಪರಿವಾರದೊಂದಿಗೆ ದುಃಖಪಡುತ್ತಿರುವಷ್ಟರ ಲ್ಲಿಯೇ ಅಗ್ನಿಜ್ವಾಲೆಗಳೆಲ್ಲ ನಾಲ್ಕೂ ಕಡೆಗೆ ಹಬ್ಬಿ ಗೂಗೆಗಳೆಲ್ಲ ಸುಟ್ಟು ಭಸ್ಮವಾಗಿ ಹೋದುವು. ವೈರಿ ನಾಶವಾದುದನ್ನು ನೋಡಿ, ಮೇಘೆವರ್ಮ ಕಾಗೆ ಅತ್ಯಂತ ಸಂತೋಷವನ್ನು ತಾಳಿ ತನ್ನ ಪರಿವಾರದೊಂದಿಗೆ ತಾನು ವಾಸಿಸುತ್ತಿದ್ದ ವೃಕ್ಷವನ್ನು ಸೇರಿ ಸುಖದಿಂದ ರಾಜ್ಯವಾಳುತ್ತಿದ್ದಿತು. ಹೀಗೆ ರಾಜ್ಯವಾಳು ತ್ರಿದ್ದಾಗ್ಯ ಒಂದು ದಿನ ಮೇಘೆವರ್ಮನು ಸುಖಸಂಕಥಾವಿನೋದದಿಂದ ಸಿಂಹಾಸನದ ಮೇಲೆ ಕುಳಿತುಕೊಂಡಾಗ ಅವನು ಚಿರಂಜೀವಿ ಪ್ರಧಾನಿ ಯನ್ನು ಕುರಿತು "ನೀನು ಶತ್ರುವಿನ ಮನೆಯಲ್ಲಿದ್ದುಕೊಂಡು ಹೇಗೆ ಕಾರ್ಯ ವನ್ನು ಸಾಧಿಸಿದೆ? ವಿಸ್ತರವಾಗಿ ಬಿನ್ನವಿಸು” ಎಂದು ಕೇಳಿದನು. ಅದಕ್ಕೆ ಚಿರಂಜೀನಿ «« ಮಹಾರಾಜನೇ, ಆ ಉಲೂಕರಾಜನಲ್ಲಿ ಇದ್ದ ಪ್ರಧಾನಿ ಗಳಲ್ಲಿ ವಕ್ರನಾಶನನೊಬ್ಬನೇ ಮಹಾಚತುರನು, ಉಳಿದ ಪ್ರಧಾನಿಗಳೆ ಬ್ಲರೂ ಮಹಾಮೂರ್ಬರು. ಆದ್ದರಿಂದ ನಾನು ಆ ವಕ್ರನಾಶನನು ಅಲ್ಲಿಂದ ತೊಲಗಿ ಹೋಗುವ ಹಾಗೆ ಉಪಾಯ ಮಾಡಿದೆನು, ಆ ಉಪಾ ಯದಿಂದ ಉಲೂಕರಾಜನಿಂದ ವಕ್ರನಾಶನನಿಗೆ ಅಸಮಾನನುಂಟಾಯಿತು. ಮೂರ್ಯನಾದ ರಾಜನು ತನಗೆ ಅಪಮಾನ ಮಾಡಿದರೆ, ಚತುರನಾದ ಮಂತ್ರಿ ಅವನ ಆಶ್ರಯದಲ್ಲಿರಲು ಇಸ್ವಪಡುವನೇ? ವಕ್ರನಾಶನನು ತನಗುಂಟಾದ ಅಪಮಾನವನ್ನು ಸಹಿಸದೆ ತನ್ನ ಪರಿವಾರ ಸಮೇತವಾಗಿ ಸ್ಥಳಾಂತರಕ್ಕೆ ಹೊರಟುಹೋದನು, ಇದರ ಪರಿಣಾಮವಾಗಿ ಎಲ್ಲ ಘೊಕ ಗಳು ದಹಿಸಿ ನಷ್ಟ ವಾದುವು? ಎಂದು ಅರಿಕೆಮಾಡಿಕೊಂಡಿತು. ಚಿರಂ ಜೀನಿಯ ಈ ಸಾಹಸವನ್ನೂ, ಸಮಯೋಚಿತವಾದ ಅದರ ಕುಶಲೋಪಾ ಯವನ್ನೂ ರಾಜನು ಮುಕ್ತಕಂಠದಿಂದ ಶ್ಲಾಫಿಸಿದನು. ಮೇಘವರ್ಮನು «« ಎಲ್ಲೇ, ಚೆರಂಜೀವಿಯೇ! ಅಧಮ ಪುರುಷರು ವಿಫ್ನೆ ಭಯದಿಂದ ಕಾರ್ಯ ವನ್ನು ಆರಂಭಿಸುವುದೇ ಇಲ್ಲ. ಮಧ್ಯಮಪುರುಷರು ಕಾರ್ಯವನ್ನಾ ರಂಭಿಸಿ ವಿಫ್ನ್ನ ಬಂದೊಡನೆಯೇ ಬಿಟ್ಟು ಬಿಡುತ್ತಾರೆ. ಉತ್ತಮಪುರುಷರು ಸಾವಿರಾರು ವಿಘ್ನಗಳು ಬಂದೊದಗಿದರೂ ಕೈಹಿಡಿದ ಕಾರ್ಯವನ್ನು ಬಿಡದೆ ಅದನ್ನು ಪೂರ್ತಿಗೊಳಿಸುತ್ತಾರೆ. ಹಾಗೆಯೇ ನೀನು ಅನೇಕ ಪ್ರಕಾರದ ಕಷ್ಟಗಳನ್ನು ಅನುಭವಿಸಿ, ನಿನ್ನ ಬುದ್ಧಿ ಬಲದಿಂದ ಶತ್ರುಗಳನ್ನು ಸಂಹೆರಿಸಿ ನಮಗೆ ಕೀರ್ತಿಯನ್ನೂ ರಾಜ್ಯವನ್ನೂ ಸಂಪಾದಿಸಿಕೊಟ್ಟಿ, " ಅಗ್ನಿಯಣ್ಮ ಶತ್ರುಖುಣಗಳನ್ನು ಶೇಷವಾಗಿ ಇರಿಸಬಾರದು. ಅವು ಉಳಿದರೆ ಪುನಃ ವೃದ್ಧಿ ಯಾಗುಗುತ್ತವೆ. ನೀನಾದರೋ ನಿನ್ನ ಕುಶಲಮತಿಯಿಂದ ಅನೇಕ ಪಕ್ಷಿಗ ಳನ್ನು ಏಕಕಾಲದಲ್ಲಿ ಕೊಲ್ಲುವ ಹಾಗೆ ಮಾಡಿದೆ''ಎಂದು ಚಿರಂಜೀವಿಯನ್ನು ಪುನಃ ಪುನಃ ಕೊಂಡಾಡಿದರು ರಾಜನ ಪ್ರಶಂಸೆಯನ್ನು ಕೇಳಿ “ತಮ್ಮ ಅನುಗ್ರಹಬಲದಿಂದ ನನ್ನ ಕಾರ್ಯವು ಸಾಧಿಸಿತು'' ಎಂದು ನಿನಯದಿಂದ ಚಿರಂಜೀವಿ ವಂದಿಸಿತ್ತು. ಮೇಘೆವರ್ಮನು ಹೆರ್ಹಿತನಾಗಿ ಚಿರಂಜೀವಿಗೆ ಸಪ್ತಾಂಗಗಳನ್ನು ಮೆಚ್ಚು ಕೊಟ್ಟು ಅದನ್ನು ಬಹಳವಾಗಿ ಮನ್ನಿಸಿದನು. ಹೀಗೆ ಈ ಕಥಾಸಮೂಹವನ್ನು ವಿಷ್ಣುಶರ್ಮನು ರಾಜಪುತ್ರರಿಗೆ ಹೇಳಿ ಸಂಧಿವಿಗ್ರಹೆವೆಂಬ ತೃತೀಯ ತಂತ್ರವನ್ನು ಮುಗಿಸಿದನು.

“ ರಾಜಪುತ್ರರೇ, ಸಂಕಟಕಾಲದಲ್ಲಿ ಯಾವನು ತನ್ನ ಬುದ್ಧಿಯನ್ನು ಕಳೆದುಕೊಳ್ಳು ವುದಿಲ್ಲವೋ, ಅವನು ಮಹಾವಿಪತ್ತು ಬಂದರೂ, ಅದನ್ನು ದಾಟ ಸುಖವಾಗಿ ಉಳಿಯುತ್ತಾನೆ. ಹೀಗೆಯೇ ಒಂದು ಮಂಗವು ಮೊಸ ಳೆಯ ಕೈಯಿಂದ ತಪ್ಪಿಸಿಕೊಂಡು ಬದುಕಿತ್ತು.” ಎಂದು ವಿಷ್ಣುಶರ್ಮ ಬ್ರಾಹ್ಮಣನು ಹೇಳಿದೊಡನೆಯೇ “ ಇದು ಹೇಗೆ ನಡೆಯಿತು? ದಯ ವಿಟ್ಟು ನಮಗಾಗಿ ಆ ಕಥೆಯನ್ನು ವಿಸ್ತರಿಸಿ ಹೇಳಬೇಕು'' ಎಂದು ರಾಜ ಕುಮಾರರು ಕೇಳಿದರು. ವಿಷ್ಣುಶರ್ಮನು ಆ ಕಥೆಯನ್ನು ವಿವರಿಸಿದನು.
ಕಥೆ -ಗಂಗಾತೀರದಲ್ಲಿ ಒಂದು ವನಾಂತರದೊಳಗೆ ನೇರಿಲ ಮರ ವೊಂದುಂಟು, ಆ ಮರದ ಮೇಲೆ ಸುಮುಖನೆಂಬ ವಾನರವೊಂದು ವಾಸ ವಾಗಿತ್ತು. ಅದು ಆ ವೃಕ್ಷದ ಫಲಗಳನ್ನು ಭಕ್ಷಿಸಿಕೊಂಡು ಕಾಲಕಳೆಯು ತ್ತಿತ್ತು. ಹೀಗಿರುತ್ತಿರುವಾಗ ಒಂದು ದಿವಸ ಒಂದು ಮೊಸಳೆ ಆ ವೃಕ್ಷದ ಕೆಳಗಣ ನದಿಯ ತೀರದಲ್ಲಿ ಬಂದಿತು. ಆಗ ಆ ವಾನರವು ನೇರಿಲ ಹಣ್ಣು ಗಳನ್ನು ತಿನ್ನು ್ತಿದ್ದಿತು. ಆ ಸಮಯದಲ್ಲಿ ಒಂದು ಹಣ್ಣು ಕೈಯಿಂದ ಜಾರಿ ಗಂಗಾತೀರದಲ್ಲಿ ಬಿದ್ದಿತು ಬಿದ್ದ ಆ ಫಲವನ್ನು ಮೊಸಳೆ ತಿಂದು “ ಅಹಾ! ಈ ಹೆಣ್ಣು ಬಹೆಳ ಸ್ವಾರಸ್ಯವಾಗಿದೆ? ಎಂದು ವಿಸ್ಮಯ ಪಟ್ಟು ಈ ವಾನರ ನೊಡನೆ ಸ್ನೇಹವನ್ನು ಬೆಳೆಸಬೇಕೆಂದು ಭಾವಿಸಿ, ಮತ್ತಷ್ಟು ಹತ್ತಿರ ಬಂದು ಬಹೆಳ ವಿನಯದಿಂದ "ಎಲೇ, ಸ್ವಾಮಿಯೇ! ನೀನು ಮಹಾಪುರುಷನು, ನಿನ್ನನ್ನು ಅವತಾರ ಸ್ವರೂಪನೆಂದೇ ಭಾವಿಸುತ್ತೇನೆ. ಆದ್ದರಿಂದ ನಿನ್ನಂಥ ಮಹಾತ್ಮನೊಡನೆ ಸ್ನೇಹ ಬೆಳೆಸಬೇಕೆಂದು ಅಪೇಕ್ಸಿಸಿದ್ದೇನೆ. ಉತ್ತಮರ ಸ್ನೇಹೆವು ಮೊದಮೊದಲು ಅಲ್ಪವಾಗಿ ತೋರಿದರೂ, ಬರಬರುತ್ತ ಘನ ವಾಗುತ್ತದೆ. ಅದೇ ಅಲ್ಪನ ಮಿತ್ರತ್ವವು ಮೊದಲು ಘನವಾಗಿ ತೋರಿ, ಕಡೆಯಲ್ಲಿ ಕ್ಷೀಣವಾಗುತ್ತದೆ. ನೀರಿನ ಸಣ್ಣ ಹನಿಗಳೆಲ್ಲ ಕೂಡಿ ಮಹಾ ಸಮುದ್ರವಾಗುತ್ತದೆ. ಅದೇ ಮರದ ನೆರಳು ಉದಯದಲ್ಲಿ ವಿಸ್ತಾರವಾಗಿ ರುತ್ತದೆ; ಮಧ್ಯಾಹ್ನವಾದಂತೆಲ್ಲ ಬಯಲಾಗುತ್ತದೆ. ಹೀಗೆಯೇ ಉತ್ತಮರ ಮತ್ತು ನೀಚರ ಸಹವಾಸದ ಪರಿಣಾಮವಾಗಿ, ನೀನು ಸದ್ಗುಣಗಳುಳ್ಳ ವನಾದ್ಧರಿಂದ, ನಿನ್ನಲ್ಲಿ ನಾನು ಸ್ನೇಹವನ್ನು ಯಾಚಿಸಿದ್ದೇನೆ. ದಯವಿಟ್ಟು ನೀನು ಇದಕ್ಕೆ ಸಮ್ಮತಿಸಬೇಕು ಎಂದು ದೈನ್ಯದಿಂದ ಸ್ನೇಹಭಿಕ್ಷೆಯನ್ನು ಯಾಚಿಸಿತು. ಈ ಮಾತುಗಳನ್ನು ಕೇಳಿ ಮರ್ಕಟವು ಸಂತೋಷಪಟ್ಟು, "ಈ ಮೊಸಳೆ ಮಹಾಜ್ಞಾನಿಯೆಂದು ತೋರುತ್ತದೆ. ಇದರಿಂದ ಉತ್ತಮರ ಸಹವಾಸವು ಲಭಿಸಿದಂತಾಯಿತು" ಎಂದು ನಂಬಿ, ಆ ಮೊಸಳೆಯ ಸಂಗಡ ಸ್ನೇಹವನ್ನು ಒಪ್ಪಿಕೊಂಡಿತು. ಆ ಮೊಸಳೆ ದಿನದಿನವೂ ಆ ನೆರಿಲ ಮರದ ಕೆಳಗೆ ಬರಲು ಆರಂಭಿಸಿತು. ಅದು ಬಂದಾಗಲೆಲ್ಲ ಮಂಗವು ನೆರಿಲ ಹಣ್ಣುಗಳನ್ನು ಕೆಳಗೆ ಬಿಸಾಡುತ್ತಿತ್ತು, ಮೊಸಳೆ ಆ ಹಣ್ಣುಗಳನ್ನು ಸಂತೋಷದಿಂದ ತಿಂದು ಅದರ ಜೊತೆಯಲ್ಲಿ ಕೆಲವು ಹೊತ್ತು ಸುಖಗೋಷ್ಠಿಯಲ್ಲಿದ್ದು, ತಿರುಗಿ ತನ್ನ ಸ್ಥಳಕ್ಕೆ ಹೋಗುತ್ತಿತ್ತು. ಇದೇ ಪ್ರಕಾರ ಎಷ್ಟೋ ದಿನಗಳು ಕಳೆದುವು. ಅವೆರಡರ ಸ್ನೇಹವು ಬಹಳ ಗಾಢವಾಗಿ ಬೆಳೆಯಿತು. ಮನೆಯಿಂದ ಹೊರಟುಹೋದವನು ಎಷ್ಟು ಹೊತ್ತಾದರೂ ತಿರುಗಿ ಮನೆಗೆ ಬರುವುದೇ ಇಲ್ಲ. ಏನು ಕಾರಣವೋ ತಿಳಿಯದು. ಈ ವಿಚಾರದಲ್ಲಿ ತಿಳಿವಳಿಕೆ ಬೇಕಾಗಿತ್ತು” ಎಂದು ಯೋಚಿಸಿ, ಈ ಕೆಲಸಕ್ಕಾಗಿ ಒಬ್ಬ ದೂತಿಯನ್ನು ಕಳಿಸಿಕೊಟ್ಟಳು. ಆ ಮೊಸಳೆದೂತಿ ಗಂಡು ಮೊಸಳೆಯ ಜಾಡನ್ನು ಹಿಡಿದು, ಅದು ಹೋಗುವ ಸ್ಥಳವನ್ನು ಗೊತ್ತು ಹಚ್ಚಿ, ಅದು ಅಲ್ಲಿ ಮಾಡುವ ಕೆಲಸವನ್ನು ನೋಡಿ ಹಿಂದಿರುಗಿತ್ತು. ಹಿಂದಿರುಗಿ ಬಂದು ಆ ವಿಚಾರವನ್ನು ತನ್ನ ಒಡತಿಗೆ ತಿಳಿಸಿದಾಗ ಅವಳು " ಅಮ್ಮಾ, ನಿನ್ನ ಯಜಮಾನನು ಬಹುದೂರ ಯಾರ ಸಂಗ..." ಅವನು ಬಹುದೂರ ಪರಿಧಿಯಲ್ಲಿದ್ದಾನೆ, ಅದೇಕೆ ಅವನ ಮನೆಗೆ ಬರಲು ತಡವಾಗುತ್ತದೆ. ನಾನು ಇದನ್ನು ಕಣ್ಣಾರೆ ನೋಡಿಬಂದಿದ್ದೇನೆ" ಎಂದು ಅರಿಕೆ ಮಾಡಿದಳು. ಮೊಸಳೆಯ ಹೆಂಡತಿಗೆ ಇದನ್ನು ಕೇಳಿ ಅತ್ಯಂತ ದುಃಖವಾಯಿತು. ತನ್ನ ಗಂಡನ ವರ್ತನೆಯಲ್ಲಿ ಅದಕ್ಕೆ ಅನುಮಾನ ಹುಟ್ಟಿಕೊಂಡಿತು. ಆ ದೂತಿಯನ್ನು ತಕ್ಷಣವೇ ತನ್ನ ಗಂಡನನ್ನು ಕರೆದುಕೊಳ್ಳಲು ಹೇಳಿದಳು. ಆ ದೂತಿ ಗಂಡು ಮೊಸಳೆಯ ಹತ್ತಿರ ಬಂದು, “ಅಮ್ಮಾ, ನಿನ್ನ ಪತಿಯ ಮನೆಗೆ ಹೊರಟು ಬರಲು ಬಹಳ ತಡವಾಗಿದೆ. ಅವನು ಬರಲು ಇಷ್ಟಪಡುವವನಲ್ಲ. ನನ್ನನ್ನು ತಮ್ಮ ಬರುವಿಕೆಗಾಗಿ ಕಳಿಸಿಕೊಟ್ಟರು" ಎಂದನು. ಈ ವಿಚಾರವನ್ನು ಕೇಳಿ, ಹೆಣ್ಣು ಮೊಸಳೆಯ ದುಃಖ ಅಪಾರವಾಯಿತು. ಹೇಗೆ ಹೋದರೂ ಆ ವಾನರನನ್ನು ಕೊಲ್ಲಬೇಕೆಂದು ನಿರ್ಧರಿಸಿಕೊಂಡಿತು. ಆದುದರಿಂದ, ದೂತನನ್ನು ತಕ್ಷಣವೇ ತನ್ನ ಗಂಡನನ್ನು ಕರೆದುಕೊಳ್ಳಲು ಕಳಿಸಿಕೊಟ್ಟಳು. ದೂತಿಯನ್ನು ಸಮೀಪಿಸಿ, ಹೆಣ್ಣು ಮೊಸಳೆಯ ದುಃಖವನ್ನು ವಿವರವಾಗಿ ವಿವರಿಸಿ, "ನೀನು ಬಂದಕೆ ನಿನ್ನ ಹೆಂಡತಿ ಉಳಿಯುತ್ತಾಳೆ. ಇಲ್ಲವಾದರೆ, ಅವಳ ಪ್ರಾಣಕ್ಕೆ ಅಪಾಯವುಂಟು" ಎಂದು ಸ್ಪಷ್ಟವಾಗಿ ಹೇಳಿದನು. ಆ ದೂತಿ ಹೇಳಿದ ಮಾತನ್ನು ಕೇಳಿ, "ಲೋಕದಲ್ಲಿ ಸಂಸಾರ ಸುಖಕ್ಕೆ ಸ್ತ್ರೀಯರೇ ಕಾರಣ. ಆದ್ದರಿಂದ ನೀನು ಈಗಲೇ ಹೋಗಿ ಮೂರುನಾಲ್ಕು ದಿನಸ ಅಲ್ಲಿಯೇ ಇದ್ದು, ನಿನ್ನ ಪತ್ನಿಗೆ ಸಮಾಧಾನವಾದ ಮೇಲೆ ತಿರುಗಿ ಬಾ'' ಎಂದು ಮೊಸಳೆಗೆ ಹಿತೋಸದೇಶವನ್ನು ಮಾಡಿತು, ಆಗ ಮೊಸಳೆ ಆಲ್ಲಿಂದ ಹೊರಡಲು ಸಿದ್ದವಾಯಿತು. ಆ ವಾನರವು ಮೊಸ ಳೆಗೆ ಕೆಲವು ನೇರಿಲ ಹೆಣ್ಣುಗಳನ್ನಿತ್ತು ಅವುಗಳನ್ನು ಆದರ ಹೆಂಡತಿಗೆ ಕೊಡಬೇಕೆಂದು ಹೇಳಿತು. ಮೊಸಳೆ ಆ ನೇರಿಲ ಹೆಣ್ಣುಗಳನ್ನು ತೆಗೆದು ಕೊಂಡು ತನ್ನ ಮನೆಗೆ ಬಂದು, ತನ್ನ ಸ್ನೇಹಿತನು ಕಳಿಸಿದ ಹಣ್ಣುಗಳನ್ನು ಪತ್ನಿಗೆ ಕೊಟ್ಟಿತು. ಆ ಹೆಣ್ಣು ಮೊಸಳೆ ಆ ಹಣ್ಣುಗಳನ್ನು ಅತ್ಯಾ ದರದಿಂದ ತಿಂದು ಹಣ್ಣುಗಳ ಅಮೃತನುಯವಾದ ರುಚಿಯನ್ನು ಆಸ್ವಾ ದಿಸುತ್ತ ಬಹಳ ಸಂತೋಷಸಟ್ಟಿತು. ಆಗ ಅದು ತನ್ನ ಪ್ರಿಯನನ್ನು ಉದ್ದೇಶಿಸಿ, “ಎಲ್ಫೈ, ಪ್ರಾಣನಾಥನೇ! ಈ ಫಲಗಳ ರುಚಿ ಅಮೃತ ಸಮಾ ನವಾಗಿದೆ. ಇಂಥ ಹಣ್ಣುಗಳನ್ನು ದಿನಾಗಲೂ ಭಕ್ಷಿಸುವ ಆ ಮರ್ಕಟನ ಎದೆಯಲ್ಲಿ ಅಮೃತದ ಕುಪ್ಪೆ ಇರಬೇಕು. ಅದನ್ನು ನೀನು ದಯವಿಟ್ಟು, ನನ್ನ ಮೇಲಿನ ಪ್ರೀತಿಯಿಂದ ನನಗೆ ತಂದುಕೊಟ್ಟರೆ ನಾನು ಅದನ್ನು ಕುಡಿದು ಮರಣರಹಿತವಾಗಿ, ನಿನ್ನ ಸಂಗಡ ಬಹುಕಾಲ ಸುಖದಿಂದ' ಜೀವಿ ಸುವೆನು. ನೀನು ಆ ಅಮೃತದ ಕುಸ್ಸೆಯನ್ನು ನನಗೆ ತಂದುಕೊಡು '' ಎಂದು ತನ್ನ ಗಂಡನನ್ನು ಅಂಗಲಾಚಿ ಬೇಡಿಕೊಂಡಿತು. ಪತ್ಟಿಯ ಮಾತುಗಳನ್ನು ಕೇಳಿ, ಗಂಡುಮೊಸಳೆ “ ನನ್ನ ಪ್ರಾಣಕಾಂತೆಯೆ, ಆ ವಾನರಕ್ಕೂ ನನಗೂ ತುಂಬ ಸ್ನೇಹ, ನಿಶ್ವಾಸ. ಇಂಥ ಸ್ನೇಹಕ್ಕೆ ಭಂಗ ಬರುವಂತೆ ನೀನು ವಿಪರೀತವಾದ ಮಾತುಗಳನ್ನು ಆಡಬಹುದೇ? ಎಂದು ನುಡಿಯಿತು. ಆ ಮಾತಿಗೆ ಹೆಣ್ಣು ಮೊಸಳೆ “ನನ್ನಲ್ಲಿ ನಿನಗೆ ಪ್ರೀತಿಯಿಲ್ಲವೇ? ನಿನಗೆ ನಾನು ಬೇಕಾಗಿದ್ದ ಸಕ್ಷದಲ್ಲಿ ಅದರ ಅಮೃತದ ಕುಪ್ಸೆಯನ್ನು ನನಗೆ ತಂದಕೊಡು ಇಲ್ಲವಾದರೆ ನಾನು ಪ್ರಾಣತ್ಯಾಗ ಮಾಡಿಕೊಳ್ಳು ವೆನು''ಎಂದು ಹಟದ ಮಾತಾಡಿತು. ಆ ಮಾತಿಗೆ ಗಂಡು ಮೊಸಳೆ “ಸ್ನೇಹಿತರನ್ನು ಸಹೋ ದರರಿಗಿಂತಲೂ ಅಧಿಕವೆಂದು ಭಾವಿಸಬೇಕು, ಆದಕಾರಣ ನನ್ನ ಸ್ನೇಹಿತ ರಲ್ಲಿ ನೀನು ದುರಾಲೋಚನೆಯನ್ನು ಮಾಡಬಾರದು” ಎಂದು ಸಮಾಧಾನ ವನ್ನು ಹೇಳಿತು. ಆದರೂ ಆ ಹೆಣ್ಣು ಮೊಸಳೆ ತನ್ನಹಟಿವನ್ನುಬಿಡದೆ “ನೀನು ನನ್ನ ಮಾತನ್ನು ಇದುವರೆಗೆ ಎಂದೂ ತಿರಸ್ಕರಿಸಲಿಲ್ಲ. ಈಗಾದರೋ ನನ್ನ ಮನೋಭಂಗವನ್ನು ಮಾಡುತ್ತಿರುವೆ, ಇದರಿಂದ ನಾನು ನಿನಗೆ ಬೇಕಾ ಗಿಲ್ಲವೆಂದು ತೋರುತ್ತದೆ. ಪತಿಗೆ ಬೇಕಾಗದ ಹೆಣ್ಣು ಜೀವಿಸಿದ್ದು ಏನು ಪ್ರಯೋಜನ? ನಾನು ನನ್ನ ಪ್ರಾಣವನ್ನು ಕಳೆದುಕೊಳ್ಳುವುದೇ ಒಳ್ಳೆ ಯದು” ಎಂದು ತನ್ನ ನಿಶ್ಚಯವನ್ನು ತಿಳಿಸಿತು. ಹೆಂಡತಿಯ ಈ ಖಂಡಿತವಾದ ವಾಕ್ಯವನ್ನು ಕೇಳಿ ಗಂಡು ಮೊಸಳೆ “ ಕೊನೆಗೆ ನೀನು ನಿನ್ನ ಹಟವನ್ನು ಬಿಡದಾದೆ. ಆ ವಾನರವಾದರೋ ಅಸಾಧ್ಯವಾದುದು, ನಿನ್ನ ಮುಂದೆಯಾ ದರೋ ನನ್ನ ಉಪಾಯವೊಂದೂ ನಡೆಯದಾಗಿಜೆ. ಆದರೂ ಪ್ರಯತ್ನ ಮಾಡಿ ನೋಡುತ್ತೇನೆ” ಎಂದು ಹೆಂಡತಿಗೆ ಹೇಳಿ, ಅಲ್ಲಿಂದ ಹೊರಟು ಸುಮುಖವೆಂಬ ವಾನರವಿದ್ದೆಡೆಗೆ ಬಂದಿತು. ವಾನರವು ತನ್ನ ಸ್ನೇಹಿತನು ಬಂದುದನ್ನು ನೋಡಿ, ಮನಸ್ಸಿನಲ್ಲಿಯೇ ಹಿಗ್ಗಿ, « ಎಲ್ಲೊ ಮಿತ್ರನೇ, ನೀನು ಪುನ: ಬಂದುದು ನನಗೆ ಸಂತೋಷವನ್ನು ಂಟುಮಾಡಿದೆ, ಆದರೆ ನಿನ್ನ ಮುಖವು ಖಿನ್ನನಾಗಿರುವಂತೆ ಕಾಣುತ್ತದೆ. ಮನೆಯಲ್ಲಿ ಎಲ್ಲರೂ: ಕ್ಲೇಮವಷ್ಟೆ? > ಎಂದು ಕುಶಲ ಪ್ರಶ್ನೆಯನ್ನು ಮಾಡಿತು. ಅದಕ್ಕೆ ಮೊಸಳೆ “ ಮಿತ್ರನೇ, ಮನೆಯಲ್ಲಿ ಎಲ್ಲ ಕ್ಷೇಮವಾಗಿದೆ. ಆದರೆ ನಿನ್ನ ಅತ್ತಿಗೆ ಯಾದ ನನ್ನ ಹೆಂಡತಿ ನನಗೆ ನಿಷ್ಮುಕೋಕ್ತಿಗಳನ್ನಾಡಿ, ನನ್ನನ್ನು ನಿನ್ನ ಲ್ಲಿಗೆ ಕಳಿಸಿಕೊಟ್ಟಿದ್ದಾಳೆ. ಅವಳು ಹೇಳಿದ ಮಾತುಗಳನ್ನು ಕೇಳು «ನೀನು ನಿಷ್ಕುರನು ಕೃತಫ್ನುನು, ಯಾರಿಂದ ನೀನು ನಿತ್ಯವೂ ಹೆಣ್ಣುಗಳನ್ನು ತಿಂದು ಉನಜೀವಿಸಿರುವೆಯೋ, ಅವರನ್ನು ಒಮ್ಮೆಯಾದರೂ ಸನ್ಮಾನಿಸಿ ನಮ್ಮ ಮನೆಗೆ ಕರೆದುಕೊಂಡು ಬರಲಿಲ್ಲ. ನೀನೇ ಅವರ ಮನೆಗೆ ಹೋಗಿ ದಿನಾಗಲೂ ಅವರು ಕೊಡುವ ಉತ್ತಮ ಫಲಗಳನ್ನು ತಿಂದು ಬರುತ್ತೀಯೆ- ಹೋಗು ೩ಂದೇ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಾ' ಎಂದು ಜರೆದು ಕಳಿಸಿದಳು. ಆದ್ದರಿಂದ ನೀನು ನನ್ನ ಮನೆಗೆ ಬರುವ ಕೃಪೆ ಮಾಡ ಬೇಕು. ನಿನ್ನ ಆತಿಥ್ಯಕ್ಕಾಗಿ ನಿನ್ನ ಅತ್ತಿಗೆ ನಾನಾ ವಿಧವಾದ ಪಕ್ವಾನ್ನ ಗಳನ್ನು ಸಿದ್ಧಮಾಡಿದ್ದಾಳೆ. ಅವಳು ನಿನ್ನ ಮಾರ್ಗವನ್ನು ಥಿರೀಕ್ಷಿಸುತ್ತಿ ದ್ದಾಳೆ ’ ಎಂದು ಹೇಳುತ್ತ ವಾನರನನ್ನು ತನ್ನ ಮನೆಗೆ ಆಮಂತ್ರಿಸಿತು. ಮೊಸಳೆಯ ಮಾತುಗಳನ್ನು ಕೇಳಿ ವಾನರವು «« ಅಯ್ಯಾ, ಸ್ನೇಹಿತನೇ, ನಾನು ಈ ನೀರಿನಲ್ಲಿ ಬರುವುದಕ್ಕೆ ಆಗುವುದೇ! ನೀನೇ ನಿನ್ನ ಪತ್ನಿಯನ್ನು ಇಲ್ಲಿಗೆ ಕರೆದುಕೊಂಡು ಬಾ'' ಎಂದು ಹೇಳಿತು. ಇದನ್ನು ಕೇಳಿ ಮೊಸಳೆ «« ಸಖನೇ, ನಾನು ಈ ಗಂಗಾತೀರದ ಸಮೀಪಕ್ಕೆ ಬರುತ್ತೇನೆ. ನೀನು ನನ್ನ ಬೆನ್ನ ಮೇಲೆ ಕುಳಿತುಕೊ, ನಿನ್ನನ್ನು ಎತ್ತಿಕೊಂಡು ಹೋಗುತ್ತೇನೆ'' ಎಂದಿತು, ಮೊಸಳೆಯ ಮಾತಿನಲ್ಲಿ ವಿಶ್ವಾಸವನ್ನಿಟ್ಟು, ಆ ವಾನರವು ಅದರ, ಬೆನ್ನ ಮೇಲೆ ಕುಳಿತುಕೊಂಡಿತು. ಕೂಡಲೇ ಮೊಸಳೆ ನೀರಿನಲ್ಲಿ ಹಾರಿಕೊಂಡು ರಭಸವಾಗಿ ಈಸುತ್ತ ಮುಂದಕ್ಕೆ ನಡೆಯಿತು. ಇದನ್ನು ನೋಡಿ, ವಾನರವು, «« ಮಿತ್ರನೇ, ನನಗೇಕೋ ಭಯವಾಗುತ್ತಿದೆ. ನೀನು ಮೆಲ್ಲಗೆ ನಡೆ” ಎಂದು ಕೇಳಿಕೊಂಡಿತು. ಮೊಸಳೆ ವಾನರದ ಮಾತನ್ನು ಕೇಳಿ "ಈ ವಾನರವಾದರೋ ನನ್ನ ಸ್ವಾಧೀನವಾಯಿತು. ಇನ್ನು ಇದಕ್ಕೆ ನನ್ನ ಅಭಿಪ್ರಾಯವನ್ನು ಹೇಳಿದರೆ, ಯಾವ | ಅಭ್ಯಂತರವೂ ಇರ ಲಾರದು.'' ಎಂದು ನಿಶ್ಚಯಿಸಿಕೊಂಡು “ಎಲೈ, ವಾನರವ ನೀನು ಈಗ ನಿನ್ನ ಇಷ್ಟದೇವತೆಯನ್ನು ಸ್ಮರಿಸು, ನನ್ನ ಪತ್ನಿಯ ಆಗ್ರಹದಿಂದ, ನಾನು ನಿನ್ನನ್ನು ಕೊಲ್ಲುವದಕ್ಕೆಂದು ಕರೆದುಕೊಂಡು ಹೋಗುತ್ತಿದ್ದೇನೆ'' ಎಂದು ಹೇಳಿತು. ವಾನರವು ಮೊಸಳೆಯ ಅಭಿಪ್ರಾಯವನ್ನು ತಿಳಿದು ಗಾಬರಿಯಾಗಿ, ಸ್ನೇಹಿತನೇ ನಾನೇನು ಅಪರಾಧ ಮಾಡಿದೆನು? ನೀನು ನನ್ನನ್ನು ಕೊಲ್ಲುವ ಮನಸ್ಸನ್ನೇಕೆ ಮಾಡಿದೆ ?'' ಎಂದು ಕೇಳಿತು. ಅದಕ್ಕೆ ಮೊಸಳೆ ನನ್ನ ಪತ್ನಿ ನಿನ್ನ ಎದೆಯಲ್ಲಿರುವ ಅಮೃತಕಲಶವನ್ನು ತನಗೆ ತಂದು ಕೊಟ್ಟರೆ, ಒಳ್ಳೆಯದು; ಇಲ್ಲದಿದ್ದರೆ ಪ್ರಾಣವನ್ನು ಕಳೆದು ಕೊಳ್ಳುತ್ತೇನೆಂದು ಹೇಳಿದ್ದಾಳೆ. ಅದಕ್ಕಾಗಿ ನಿನ್ನನ್ನು ಕರೆದು ಕೊಂಡು ಹೋಗುತ್ತಿದ್ದೇನೆ'' ಎಂದು ತನ್ನ ರಹಸ್ಯವನ್ನು ಬಹಿರಂಗಪಡಿಸಿತು. ಆಗ ವಾನರವು ತನ್ನ ಮನಸ್ಸಿನೊಳಗೆ "ಈ ದುರ್ಜನರ ಸಮಾಗಮದಿಂದ ನನಗೆ ಇಂಥ ಅವಸ್ಥೆ ಒದಗಿತು. ಇದು ನನ್ನನ್ನು ಕೊಲ್ಲದೆ ಬಿಡದು' ಎಂದು ಆಲೋಚಿಸಿಕೊಂಡು ಮೊಸಳೆಗೆ « ಎಲೈ, ಮೂರ್ನೆ, ಇಂಥ ಕಾರ್ಯಕ್ಕಲ್ಲದೆ, ಈ ದೇಹವು ಬೇರಾವ ಕಾರ್ಯಕ್ಕಾಗುವುದು? ನೀನು ವೃಕ್ಷದ ಮೇಲೆ ನಾನು ಇದ್ದ ಸ್ಥಳ ದಲ್ಲಿಯೇ ಈ ಮಾತನ್ನು ಹೇಳಿದ್ದರೆ ಎಷ್ಟು ಒಳ್ಳೆಯದಾಗುತ್ತಿತ್ತು. ನಾನು ಬರುವಾಗ ತೆಗೆದಿಟ್ಟಿದ್ದ ಆ ಅಮೃತದ ಕಲಶವನ್ನು ಅಲ್ಲಿಯೇ ನಿನಗೆ ಕೊಟ್ಟು ಬಿಡುತ್ತಿದ್ದೆ. ನೀರಿನ ಮೇಲೆ ಅಮೃತಕಲಶವನ್ನು ತೆಗೆದು ಕೊಂಡು ಹೋಗಬಾರದೆಂದು ನನ್ನ ದೇಹದಲ್ಲಿದ್ದ ಆ ಕಲಶವನ್ನು ಮರದ ಮೇಲೆ ಇಟ್ಟು ಬಿಟ್ಟಿದ್ದೆ. ಈಗಾದರೂ ಏನಾಯಿತು? ನನ್ನನ್ನು ಆ ಮರದ ಎಡೆಗೆ ತೆಗೆದುಕೊಂಡು ಹೋಗು. ಆ ಕಲಶವನ್ನು ತೆಗೆದು ಕೊಂಡು ಬರೋಣ'' ಎಂದು ಹೇಳಿತು, ಇದನ್ನು ಕೇಳಿ ಮೊಸಳೆ ನಿಜವೆಂದೇ ನಂಬಿ, ಆ ವಾನರವನ್ನು ಹಾಗೆಯೇ ಬೆನ್ನಮೇಲೇರಿಸಿ ಕೊಂಡು ತಿರುಗಿ ಆ ವೃಕ್ಷದ ಹತ್ತಿರ ಬಂದಿತು. ವೃಕ್ಷವನ್ನು ಸಮೀಪಿಸಿ ದೊಡನೆಯೇ ವಾನರವು ಅಮೃತದ ಕಲಶವನ್ನು ತರುವೆನೆಂದು ಹೇಳಿ ಅಲ್ಲಿಂದ ಹಾರಿ, ಮರದ ಮೇಲೇರಿ ಕುಳಿತುಕೊಂಡಿತು. ಆಗ ಆ ವಾನರಕ್ಕೆ ಪುನಃ ಜೀವ ಬಂದಂತಾಯಿತು. ಅದು ತನ್ನ ಮನಸ್ಸಿನಲ್ಲಿ “ಅಂದು ನನಗೆ ಒದಗಿದ ಅಪಮೃತ್ಯು ತಪ್ಪಿ ಹೋಯಿತಲ್ಲಾ” ಎಂದು ಸಂತೋಷಪಟ್ಟಿತು. ಅಷ್ಟರಲ್ಲಿ ಆ ಮೊಸಳೆ ವಾನರವನ್ನು ಕುರಿತು "" ಎಲೇ, ಮಿತ್ರನೇ, ನಿನ್ನ ಅಮೃತದ ಕಲಶವನ್ನು ಬೇಗನೇ ಕೊಡು, ನನ್ನ ಹೆಂಡತಿಗೆ ಅದನ್ನು ಕೊಟ್ಟು ಬರುತ್ತೇನೆ” ಎಂದು ಹೇಳಿತು. ಅದನ್ನು ಕೇಳಿ ವಾನರವು ನಕ್ಕು « ಎಲೆ ಮೂರ್ಖನೆ, ದೇಹವನ್ನು ಬಿಟ್ಟು ಕಲಶ ಹೊರಗಿರುವುದುಂಟೇ! ನೀನು ಬಹಳ ದೊಡ್ಡ ಮನುಷ್ಯನು. ನಿನ್ನಂಥ ಉತ್ತಮ ಪುರುಷನ ಸ್ನೇಹವು ನನಗೆ ದೊರೆಕೊಂಡಿತ್ತು. ತನ್ನ ಆದಾಯವನ್ನರಿಯದೆ ವೆಚ್ಚ ಮಾಡುವವನೂ, ತನ್ನ ಸತ್ತ್ವವನ್ನರಿಯದೆ ಜಗಳವಾಡುವವನೂ ಯಾವು ದಾದರೊಂದು ಕೆಲಸವನ್ನು ಪೂರ್ವಭಾವಿಯಾಗಿ ಆಲೋಚಿಸದೆ ಮಾಡುವ ವನೂ ಪರರ ಗುಣಗಳನ್ನರಿಯದೆ ಸ್ನೇಹವನ್ನು ಮಾಡುವವನೂ ತನ್ನಿಂದ ತಾನೇ ಕೆಟ್ಟು ಹೋಗುವನು. ಅದರಂತೆಯೇ ನಾನೂ ನಿನ್ನಂಥ ದುರ್ಜನ ನ ಸಹವಾಸವನ್ನು ಮಾಡಿ ಕೆಟ್ಟುಹೋಗುತ್ತಿದ್ದೆನು” ಎಂದು ಹೇಳಿತು. ವಾನರವು ಮಾಡಿದ ಈ ಉಪಾಯದಿಂದ ಮೊಸಳೆ ಮನಸ್ಸಿನಲ್ಲಿ ತನ್ನ ಕಾರ್ಯವು ಸಿದ್ಧಿಸದೆ ತಾನು ಮೋಸ ಹೋಗುವುದಕ್ಕೆ ಪಶ್ಚಾತ್ತಾಪ ಪಟ್ಟಿತು ತನ್ನ ಉದ್ದೇಶವನ್ನು ವಾನರಕ್ಕೆ ಮಾರ್ಗದಲ್ಲಿಯೇ ಹೇಳಿ ವ್ಯರ್ಥವಾಗಿ ಮೋಸ ಹೋದೆನಲ್ಲಾ ಎಂದು ಅದು ತಳಮಳಗೊಂಡಿತು. ಆದರೂ ಅದು ಈ ವಾನರವು ತನ್ನಲ್ಲಿ ಪುನಃ ವಿಶ್ವಾಸವಿಡುವ ಹಾಗೆ ಹೇಗಾದರೂ ಅದನ್ನು ಒಪ್ಪಿಸಬೇಕೆಂದು ಆಲೋಚಿಸಿಕೊಂಡು, “ಎಲೆ, ಗೆಳೆಯನೇ! ನಿನ್ನನ್ನು ಪರೀಕ್ಷಿಸಬೇಕೆಂದು ನಾನು ಹಾಗೆ ಹೇಳಿದೆನಲ್ಲದೆ ನಿನಗೆ ಅಪಕಾರ ಮಾಡ ಬೇಕೆಂದು ಉದ್ದೇಶಿಸಿರಲಿಲ್ಲ. ಹಾಗೆ ನಿನ್ನನ್ನು ಹಿಂಸಿಸಬೇಕೆಂದು ನಿಜವಾಗಿಯೂ ನಾನು ಭಾವಿಸಿದ್ದರೆ, ನಾನು ಪುನಃ ನಿನ್ನ ಸ್ಥಳಕ್ಕೆ ತಿರುಗಿ ತಂದು ಬಿಡುತ್ತಿದ್ದೆನೇ? ಶರೀರವನ್ನು ಬಿಟ್ಟು ಕುಪ್ಪೆ ಬೇರೆ ಸ್ಥಳದಲ್ಲಿ ಇರುವುದಿಲ್ಲವೆಂಬುದು ಸಣ್ಣ ಮಗುವಿಗೂ ಗೊತ್ತು. ಎಂದ ಮೇಲೆ ನಾನು ನೀನು ಹೇಳುವುದನ್ನು ನಂಬಿ ನಿನ್ನನ್ನು ಇಲ್ಲಿಗೆ ತರುತ್ತಿದ್ದೆನೇ? ನನ್ನಲ್ಲಿ ದುರುದ್ದೇಶವೇನೂ ಇಲ್ಲ. ಕೇವಲ ಹಾಸ್ಯಕ್ಕಾಗಿ ಹೀಗೆ ಮಾಡಿದೆನು. ನೀನು ಅದನ್ನು ನಿಜವೆಂದೇ ಗ್ರಹಿಸಿದೆ. ಈಗ ನಾನು ಮಾಡಿದ ಹಾಸ್ಯವನ್ನು ಮನಸ್ಸಿಗೆ ತಂದುಕೊಳ್ಳದೆ, ನೀನು ನನ್ನ ಮನೆಗೆ ಬಾ. ನಿನ್ನನ್ನು ಗೌರವಿಸ ಬೇಕೆಂದು ನನ್ನ ಪತ್ನಿ ಬಹಳ ಶ್ರಮಪಟ್ಟು ಭಕ್ಷ್ಯಭೋಜ್ಯಗಳನ್ನು ಅಣಿ ಮಾಡಿಟ್ಟುಕೊಂಡು ನಿನ್ನ ದಾರಿಯನ್ನು ನೋಡುತ್ತಿದ್ದಾಳೆ” ಎಂದು ಸಂತೈಸತೊಡಗಿತು. ಸುಮುಖವೆಂಬ ಆ ವಾನರವು ಮೊಸಳೆಯ ಈ ಮಾತುಗಳನ್ನು ಕೇಳಿ “ಎಲವೋ, ನಿನ್ನ ಮಾತಿಗೆ ನಾನು ಪುನಃ ಮೋಸ ಹೋಗಿ ನಿನ್ನ ಸಂಗಡ ಬರುವೆನೆಂದು ತಿಳಿದುಕೊಂಡೆಯಾ ! ನಾನು ಮೂಖ೯ನಲ್ಲ. ಇಲ್ಲಿಂದ ನೀನು ಸುಮ್ಮನೆ ಹೊರಟು ಹೋಗು '' ಎಂದು ಗದ್ದರಿಸಿತು. “ಮಿತ್ರೋತ್ತಮನೇ, ನೀನುಬಾರದಿದ್ದರೆ, ನನ್ನ ಪತ್ನಿ ನನ್ನನ್ನು ಕೃತ ಘ್ನನೆಂದು ತಿಳಿದುಕೊಳ್ಳುತ್ತಾಳೆ. ನಾನು ನಿನ್ನನ್ನು ಬಿಟ್ಟುಹೋಗಲಾಗ್Éನು. ಕೊನೆಗೆ ಆಹಾರವನ್ನು ತ್ಯಜಿಸಿಯಾದರೂ ನನ್ನ ಪ್ರಾಣವನ್ನು ನಿನ್ನ ಸಮ್ಮುಖದಲ್ಲಿಯೇ ಬಿಡುವೆನು” ಎಂದು ಹೇಳಿ ಆ ಮೊಸಳೆ ಅಲ್ಲಿಯೇ ನಿಂತಿತು. ಮೊಸಳೆಯ ಮಾತುಗಳನ್ನು ಕೇಳಿ, ಮಂಗವು “ಓಮ್ಮೆ ಮೋಸ ಹೋಗಿ ಮತ್ತೆ ಅದೇ ದಾರಿಯನ್ನು ತುಳಿಯಲೇ? ನಿನ್ನ ಸವಿಯಾದ ಮಾತಿಗೆ ನಾನು ಮಾರು ಹೋಗುವುದಿಲ್ಲ. ಹೀಗೆಯೇ ಹಿಂದೆ ಒಂದು ನರಿ ಸವಿ ಸವಿ ಮಾತನ್ನಾಡಿ, ಒಂದು ಕತ್ತೆಗೆ ವಿಶ್ವಾಸವನ್ನು ಹುಟ್ಟಿಸಿ ಅದನ್ನು ಕೊಂದಿತು. ಅದರ ಹಾಗೆಯೇ ನೀನೂ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀಯೆ?” ಎಂದಿತು. ಮೊಸಳೆ “ನರಿ ಕತ್ತೆಯನ್ನು ಹೇಗೆ ಕೊಂದಿತು?'' ಎಂದು ಕೇಳಲು, ವಾನರವು ಹೇಳುತ್ತದೆ.

ಪ್ರಮೋದವೆಂಬ ವನಾಂತರದಲ್ಲಿ ಪಿಂಗಲಾಕ್ಷನೆಂಬ ಸಿಂಹೆಕ್ಕೆ ಬುದ್ಧಿಯುಕ್ತವಿಂಬ ನರಿ ಪ್ರಧಾನಿಯಾಗಿತ್ತು. ಒಮ್ಮೆ ಆ ಸಿಂಹಕ್ಕೆ ಮಹಾ ವ್ಯಾಧಿಯೊಂದು ಪ್ರಾಪ್ತವಾಯಿತು. ಆಗ ಅದು ತನ್ನ ಪ್ರಧಾನಿಯನ್ನು ಕರೆದು “ಪ್ರಧಾನಿಯೇ, ಈ ನನ್ನ ವ್ಯಾಧಿ ಗುಣವಾಗಬೇಕಾದರೆ, ನಾನು ಗಾರ್ದಭವೊಂದನ್ನು ಭಕ್ಷಿಸಬೇಕು. ಅದಕ್ಕಾಗಿ ನೀನು ಒಂದು ಕತ್ತೆಯನ್ನು ನನಗೆ ಆಹಾರಕ್ಕಾಗಿ ಒದಗಿಸಿ ಕೊಡು, ಅದರಿಂದ ನಾನು ಬದುಕುವೆನು. ಇಲ್ಲದಿದ್ದರೆ, ಬದುಕಲಾರೆನು'' ಎಂದು ಹೇಳಿತು. ಆ ನರಿ ಅದಕ್ಕೆ ಒಪ್ಪಿಕೊಂಡು ಅರಣ್ಯದಲ್ಲಿ ಹುಡುಕುತ್ತ ಒಂದು ಹಳ್ಳದೆಡೆಯಲ್ಲಿ ಮೇಯುತ್ತಿದ್ದ ಅಗಸನ ಲಂಬಕರಣನೆಂಬ ಕತ್ತೆಯೊಂದನ್ನು ಕಂಡಿತು. ಕಂಡು ಅದರ ಬಳಿಗೆ ಬಂದು "ಎಲೇ, ಗಾರ್ದಭರಾಜ, ನಿನಗೆ ನಮ್ಮ ಸಿಂಹರಾಜನ ಬಳಿ ಯಲ್ಲಿ ಪ್ರಧಾನಿ ಕೆಲಸವನ್ನು ಕೊಡಿಸುತ್ತೇನೆ. ನಿನಗೆ ಸಿಂಹನ ಆಶ್ರಯವು ದೊರೆತು ನೀನು ದೊಡ್ಡವನಾಗುವೆ'' ಎಂದು ಅನೇಕ ರೀತಿಯಲ್ಲಿ ಬೋಧಿಸಿ ಒಪ್ಪಿಸಿ, ಅದನ್ನು ಸಿಂಹದ ಹತ್ತಿರ ಕರೆದುಕೊಂಡು ಹೋಯಿತು. ನರಿ ಗಾರ್ದಭವನ್ನು ಕರೆದುಕೊಂಡು ಬಂದುದನ್ನು ನೋಡಿ, ಸಿಂಹವು ಹರ್ಷಾತಿ ಶಯದಿಂದ ಗರ್ಜಿಸಿತು. ಆ ಸಿಂಹೆ ಧ್ವನಿಯನ್ನು ಕೇಳಿ ಕತ್ತೆ ಹೆದರಿಕೊಂಡು ಅಲ್ಲಿಂದ ಓಡಲಾರಂಭಿಸಿತು. ಹೀಗೆ ಓಡುತ್ತ ಹೋಗಿ ತನ್ನ ಸ್ಥಳಕ್ಕೆ ತಲುಪಿತು. ಆಗ ಸಿಂಹವು ನರಿಯನ್ನು ಕುರಿತು "ಎಲೇ ಪ್ರಧಾನಿಯೇ, ನೀನು ಕರೆದು ತಂದ ಕತ್ತೆ ಓಡಿಹೋಯಿತು. ನೀನು ಮತ್ತೊಮ್ಮೆ ಅದನ್ನು ಇಲ್ಲಿಗೆ ಕರೆದು ಕೊಂಡು ಬಾ.'' ಎಂದು ಆಜ್ಞಾ ಪಿಸಿತು. ಅದಕ್ಕೆ ನರಿ “ಇವೊತ್ತು ನಿನ್ನ ಪರಾಕ್ರಮದ ಆಳ ನನಗೆ ಗೊತ್ತಾಯಿತು. ನಿನ್ನ ಇದಿರಿ ನಲ್ಲಿಯೇ ಆ ಗಾರ್ದಭವು ಓಡಿಯಿತು. ಎಂದ ಮೇಲೆ ನೀನು ಆನೆ ಯನ್ನೇನು ಕೊಲ್ಲಬಲ್ಲೆ” ಎಂದು ಆ ಸಿಂಹವನ್ನು ತೆಗಳಿತು. ನರಿಯ ಈ ತೆಗಳಿಕೆಯನ್ನು ಕೇಳಿ ಸಿಂಹವು ಖಿನ್ನವಾಗಿ ಸುಮ್ಮನಾಯಿತು, ಆಗ ನರಿ "ಸಿಂಹರಾಜನೇ, ಈಗ ಆದದ್ದಾಯಿತು. ನಾನು ಮತ್ತೊಂದು ಸಾರಿ, ಆ ಕತ್ತೆಯನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತೇನೆ. ಆಗಲಾದರೂ ನೀನು ಶಾಂತವಾಗಿದ್ದು ಆ ಕತ್ತೆಯನ್ನು ಕೊಂದು ಭಕ್ಷಿಸು.'' ಹೀಗೆ ಹೇಳಿ, ಆ ಲಂಬಕರ್ಣ ಗಾರ್ದಭನಲ್ಲಿಗೆ ಬಂದು "ಗಾರ್ದಭರಾಜನೇ, ನೀನೇಕೆ ಓಡಿ ಬಂದೆ.'' ಎಂದು ಕೇಳಿತು. ಅದಕ್ಕೆ ಆ ಕತ್ತೆ "ಎಲೈ, ಪ್ರಾಣಿಯೇ ನೀನು ನನ್ನನ್ನು ಕರೆದೊಯ್ದು, ಮೃತ್ಯುವಿನ ಬಾಯೊಳಗೆ ಕೊಟ್ಟಿದ್ದೆ. ಆದರೆ ನನ್ನ ದೈವಯೋಗದಿಂದ ನಾನು ಉಳಿದೆನು. ವಜ್ರದ ಹಾಗೆ ಬಲಿಷ್ಠವಾದ ದೇಹವುಳ್ಳ ಆ ಪ್ರಾಣಿಯಾದರೂ ಯಾರು? ಎಂದು ವಿಚಾರಿಸಿತು. ಇದನ್ನು ಕೇಳಿ ಗಹಗಹಿಸಿ ನಕ್ಕು, "ನೀನು ಮೂರ್ಖನೆಂದು ಕಾಣುತ್ತದೆ. ನೀನು ಬಂದದುನ್ನು ನೋಡಿ, ಆ ಸಿಂಹರಾಜನು ಅತ್ಯಂತ ಹರ್ಷದಿಂದ ನಿನ್ನನ್ನು ಆಲಂಗಿಸಿಕೊಂಡು ನಿನಗೆ ಪ್ರಧಾನಿ ಕೆಲಸವನ್ನು ಕೊಡುತ್ತಿದ್ದನು. ನೀನು ಅವನನ್ನು ನೋಡಿದೊಡನೆಯೇ ವ್ಯರ್ಥವಾಗಿ ಭಯಗೊಂಡು ಓಡಿಹೋದೆ. ಈಗಲಾದರೂ ನೀನು ನನ್ನ ಸಂಗಡ ಬಾ? ಎಂದು ಕತ್ತೆಗೆ ವಿಶ್ವಾಸವುಂಟಾಗುವಂತೆ ಮಾಡಿ ಅದನ್ನು ಸಿಂಹರಾಜನ ಹತ್ತಿರ ಕರೆದುಕೊಂಡು ಹೋಗಿ ಕೊಲ್ಲಿಸಿ, ಅವೆರಡೂ ಅದನ್ನು ತಿಂದು ಬಿಟ್ಟವು, ಹೀಗೆ ಕತ್ತೆ ತನ್ನ ಅಪರಬುದ್ಧಿಯಿಂದ ತನಗೆ ಮೃತ್ಯುವನ್ನು ತಂದುಕೊಂಡಿತು. ನಾನು ಒಮ್ಮೆ ಹೀಗೆ ಸಿಕ್ಕಿ ಬಿದ್ದು ನನ್ನ ಬುದ್ಧಿ ಬಲ ದಿಂದ ಬಿಡಿಸಿಕೊಂಡು ಬಂದಿದ್ದೇನೆ, ಇನ್ನು ಮೇಲೆ ಪುನಃ ನನ್ನ ಕೈಯಲ್ಲಿ ಸಿಕ್ಕುವುದಕ್ಕೆ ನಾನು ಗಾರ್ಧಭನ ಹಾಗೆ ಮೂರ್ಖನೇ ? ಛೀ ! ಮರುಳೆ ಇನ್ನು ನಾನು ನಿನ್ನ ಸಂಗಡ ಬರುತ್ತೇನೆಯೇ? ಇನ್ನು ನಿನ್ನ ಸ್ನೇಹ ಸಾಕು.'' ಈ ರೀತಿಯಲ್ಲಿ ಆ ವಾನರವು ಗಾರ್ದಭನ ಕಥೆಯನ್ನು ಹೇಳಿ ಮುಂದೆ ಅದೇ ಮಾತನ್ನು ಸಮರ್ಥಿಸುತ್ತ ಮತ್ತೊಂದು ಕಥೆಯನ್ನು ಹೇಳಿತು.

ಕಥೆ : - ಅವಂತಿಕಾ ಪಟ್ಟಣದಲ್ಲಿ ಸುಶರ್ಮನೆಂಬ`ಬ್ರಾ ಹ್ಮಣನೊಬ್ಬನು ವೇದಶಾಸ್ತ್ರ ಸಂಪನ್ನನಾಗಿ ಜೀವಿಸುತ್ತಿದ್ದನ್ನು ಇವನು ಅಷ್ಟದರಿದ್ರ ನು. ತನ್ನ ನಿತ್ಯ ಕರ್ಮಗಳಿಗೆ ಚ್ಯುತಿಬಾರದಂತೆ ನಡೆಯುತ್ತ, ಯದೃಚ್ಛಾ ಲಾಭದಿಂದ ಸಂತುಷ್ಟನಾಗಿದ್ದನು. ಇವನು ಪ್ರತಿನಿತ್ಯವೂ ಪ್ರಾತಃಕಾಲದಲ್ಲೆದ್ದು ನದೀ ತೀರಕ್ಕೆ ಹೋಗಿ ಸ್ನಾನ, ದೇವತಾರ್ಚನೆಗಳನ್ನು ನೇರವೇರಿಸಿ, ಆ ಊರಿನ ಒಂದು ಮಂಟಪದಲ್ಲಿ ಪುರಾಣವನ್ನು ಹೇಳುವ ಪದ್ಧತಿಯನ್ನಿಟ್ಟುಕೊಂಡಿ ದ್ದನು. ಅವನು ಪುರಾಣ ಹೇಳುವ ಕಾಲದಲ್ಲಿ ಒಂದು ಸರ್ಪವು ದಿನಾಗಲೂ ಬಂದು ಪುರಾಣ ಶ್ರವಣಮಾಡಿ ಸಂತೋಷಪಟ್ಟುಕೊಂಡು ಹೋಗುತ್ತಿದ್ದಿತು. ಹೀಗೆ ಇರುತ್ತಿರುವಾಗ ಒಮ್ಮೆ ಆ ಬ್ರಾಹ್ಮಣನು ಕೆಲವು ದಿನಗಳವರೆಗೆ ದೇಶಾಟನಕ್ಕಾಗಿ ಹೋದನು. ದಿನಾಗಲೂ ಪುರಾಣವನ್ನು ಕೇಳಿ ಸಂತೋಷಪಡುತ್ತಿದ್ದ ಆ ಸರ್ಪಕ್ಕೆ ಬ್ರಾಹ್ಮಣನು ಊರಿಗೆ ಹೋದುದರಿಂದ ಪುರಾಣ ಕೇಳುವ ಪುಣ್ಯವು ತಪ್ಪಿಹೋಯಿತು. ಇದರಿಂದ ಅದು ಮನಸ್ಸಿನಲ್ಲಿ ತಲ್ಲಣಗೊಳ್ಳುತ್ತ ಪುರಾಣ ಶ್ರವಣಮಾಡುವ ಸಂದರ್ಭವು ತಪ್ಪಿದುದಕ್ಕೆ ಪರಿತಾಪಪಡುತ್ತಿತ್ತು. ಕೆಲವು ದಿನಗಳಾದ ಮೇಲೆ ಆ ಬ್ರಾಹ್ಮಣನು ಮರಳಿಬಂದನು. ಆ ಸರ್ಪವು ಬ್ರಾಹ್ಮಣನನ್ನು ಕುರಿತು, “ ಬ್ರಾಹ್ಮಣೋತ್ತಮನೇ , ನೀನು ಇಷ್ಟು ದಿನ ಪುರಾಣವನ್ನು ಹೇಳಲು ಬರಲೇ ಇಲ್ಲವಲ್ಲ! ಏನು ಕಾರಣ” ಎಂದು ಪ್ರಶ್ನಿಸಿತು. ಅದಕ್ಕೆ ಬ್ರಾಹ್ಮಣನು "" ನಾನು ದರಿ ದ್ರನಾದ ಪ್ರಯುಕ್ತ ಸಂಸಾರ ನಿರ್ವಹಣಕ್ಕಾಗಿ ಯಾಚನಾರ್ಥ ಪರಸ್ಥಳಕ್ಕೆ ಹೋಗಿದ್ದೆನು'' ಎಂದು ಹೇಳಿದನು. ಅದಕ್ಕೆ ಸರ್ಪವು " ಬ್ರಾಹ್ಮಣನೇ, ಇವೊತ್ತಿನಿಂದ ನೀನು ಎಲ್ಲಿಗೂ ಹೋಗಬೇಡ, ನಿನಗೆ ನಾನು ಪ್ರತಿ ದಿನವೂ ಒಂದೊಂದು ರತ್ನವನ್ನು ಕೊಡುವೆನು '' ಎಂದು ಕಟ್ಟಳೆಯನ್ನು ಮಾಡಿ ಹೇಳಿತು. ಹೀಗೆಯೇ ಪ್ರತಿದಿನವೂ ಒಂದೊಂದು ರತ್ನವನ್ನು ಕಟ್ಟಳೆಯಂತೆ ಕೊಡುತ್ತಿತ್ತು. ಬ್ರಾಹ್ಮಣನಿಗೆ ವೃದ್ಧಾಪ್ಯವೊದಗಿತು, ಅವನು ಪರಲೋಕದಲ್ಲಿ ಮೋಕ್ಷವನ್ನು ಸಂಪಾದಿಸಲು ತಾನು ಏನು ಮಾಡಬೇಕೆಂಬುದನ್ನು ಕುರಿತು ಆಲೋಚಿಸಿ ಯಾತ್ರೆಗೆ ಹೊರಡಲು ನಿರ್ಧರಿಸಿಕೊಂಡನು. ಆಗ ಅನನು ತನ್ನ ಪುತ್ರನಾದ ಚೋರಬುದ್ಧಿಯೆಂಬವನನ್ನು ಕರೆದು " ಮಗನೇ, ನೀನು ನಿತ್ಯದಲ್ಲೂ ಈ ಸರ್ಪಕ್ಕೆ ಪುರಾಣಶ್ರವಣ ಮಾಡಿಸು, ಅದು ದಿನಕ್ಕೆ ಒಂದೊಂದು ರತ್ನವನ್ನು ಕೊಡುವುದು, ಆ ರತ್ನವನ್ನು ತೆಗೆ ದುಕೊಂಡು ನೀನು ಸುಖವಾಗಿ ಜೀವಿಸು'' ಎಂದು. ತನ್ನ ಮಗಳಿಗೆ ಆಜ್ಞಾಪಿಸಿದನು. ಇದರಂತೆಯೇ ಆ ಬ್ರಾಹ್ಮಣನು ಆ ಸರ್ಪವನ್ನು ಕರಿದು “ ನಾನು ಯಾತ್ರೆಗೆ ಹೋಗುತ್ತೇನೆ. ಇನ್ನು ಮೇಲೆ ನೀನು ನನ್ನ ಮಗನು ಹೇಳುವ ಪುರಾಣವನ್ನು ಶ್ರ ಕ್ರವಣಮಾಡುತ್ತ » ನಿನ್ನ ಕಟ್ಟಳೆ ಚತ ಒಂದೊಂದು. ರತ್ನವನ್ನು ಕೊಡುತ್ತಿ ರು” ಎಂದು FE ಹೀಗೆ ಏರ್ಪಾಟುಮಾಡಿ, ಆ ಬ್ರಾಹ್ಮಣನು ವಾರಣಾಸಿಗೆ ಯಾತ್ರೆ ತೆರಳಿ ದನು, ಆ ಮಗನು ತಂದೆಯ ಆಜ್ಞೆಯ ಮೇರೆಗೆ ದಿನಾಗಲೂ ಆ ಸರಕ್ಕೆ ಪುರಾಣವನ್ನು ಹೇಳತೊಡಗಿದನು. ಸರ್ಪವೂ ತನ್ನ ಮಾತಿನಂತೆ ಒಂದೊಂದು ರತ್ನವನ್ನು ಕೊಡುತ್ತಿತ್ತು. ಇದೇ ಪ್ರಕಾರವಾಗಿ ಕೆಲವು ದಿನಗಳು ಸುಖದಿಂದ ಕಳೆದುವು. ಒಂದುದಿನ ಆ ಬ್ರಾಹ್ಮಣಪುತ್ರನು ಪುರಾಣವನ್ನು ಹೇಳಿ, ರತ್ನವನ್ನು ತೆಗೆದುಕೊಂಡು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ನೇಶ್ಯಾಸ್ತ್ರೀಯನ್ನು ಕಂಡನು. ಅವಳು ಮಹಾರೂಪವತಿ. ಆ ವೇಶ್ಯಾಸ್ತ್ರೀಯ ಹಾವಭಾವ ವಿಲಾಸಗಳಿಗೆ ಮರುಳಾಗಿ, ಆ ಬ್ರಾಹ್ಮಣ ಪುತ್ರನ ಮನಸ್ಸು ಚಂಚಲನಾಯಿತು. ಅವನು ನೇರವಾಗಿ ಮನೆಗೆ ಹೋಗದೆ, ಆ ವೇಶ್ಯಾಸ್ತ್ರೀಯ ಗೃಹಕ್ಕೆ ಹೋಗಿ ಸರ್ಪವು ಕೊಟ್ಟ ರತ್ನ ವನ್ನು ಅವಳಿಗಿತ್ತು, ಆ ರಾತ್ರಿಯನ್ನೆಲ್ಲ ಅಲ್ಲಿಯೇ ಕಳೆದನು. ಹೀಗೆಯೇ ಆ ಬ್ರಾಹ್ಮಣಕುಮಾರನು ಪ್ರತಿನಿತ್ಯವೂ ಆ ವೇಶ್ಯಾಸ್ತ್ರೀಯ ಸಹವಾಸವನ್ನು ಮಾಡುತ್ತ, ಸರ್ಪವು ಕೊಟ್ಟಿ ರತ್ನವನ್ನು ಆವಳಿಗೆಯೆ ಕೊಡುತ್ತ ಸ್ತ್ರೀಲಂಸ ಟನಾಗಿ ಕಾಲಕಳೆಯುತ್ತಿದ್ದನು. ಹೀಗೆ ಇರುತ್ತಿರುವಾಗ, ಒಂದು ದಿನ ಆ ಚೋರಬುದ್ಧಿಯನ್ನು ಕುರಿತು ವೇಶ್ಯೆ, 4 ನಿನ್ನ ತಂದೆ ಮಹಾದರಿದ್ರನು. ಅವನು ನಿತ್ಯದಲ್ಲಿ ಉಣ್ಣುವುದಕ್ಕೂ ಕೂಳು ಕಾಣುತ್ತಿದ್ದಿಲ್ಲ. ನೀನಾದರೋ ನಿತ್ಯವೂ ನನಗೆ ಒಂದೊಂದು ರತ್ನವನ್ನು ತಂದುಕೊಡುತ್ತಿರುವೆ. ನಿನಗೆ ಈ ರತ್ನಗಳು ಹೇಗೆ ಬಂದುವು ಹೇಳು. ನೀನು ಇದನ್ನು ಹೇಳದಿದ್ದರೆ, ನನ್ನ ಮನೆಗೆ ಇನ್ನು ಮೇಲೆ ಬರಬೇಡ'' ಎಂದು ಚಾಟಸಿದಳು. ಆ ಜೋರ ಬುದ್ಧ ಆ ನೇಶ್ಯಾಸ್ತ್ರೀಯ ಮೇಲಣ: ವ್ಯಾಮೋಹದಿಂದ 44 ನನಗೆ ಈ ರತ್ನ ವನ್ನು ಒಂದು ಸರ್ಪವು. ದಿನಾಗಲೂ ಕೊಡುತ್ತಿದೆ” ಎಂದು ಹೇಳಿ ಬಿಟ್ಟನು. ಬ್ರಾಹ್ಮಣಪುತ್ರನ ಮಾತನ್ನು ಕೇಳಿ ಆ ವೇಶ್ಯೆ " ಎಲ್ಫೈ, ಬ್ರಾಹ್ಮಣಕುಮಾರನೇ, ನೀನು ಪುರಾಣವನ್ನು ಹೇಳಿ ಪ್ರತಿನಿತ್ಯವೂ ಆ ಸರ್ಪದ ಇದಿರು «" ದೇಹಿ'' ಎಂದು ಏಕೆ ಕೈಚಾಚಬೇಕು? ಆ ರತ್ನಗಳ ನ್ಲೆಲ್ಲ ಒಮ್ಮೆಲೇ ಪಡೆಯುವ ಉಪಾಯವನ್ನು ಮಾಡಬಾರದೇ? ನಾನು ಆ ಉಪಾಯವನ್ನು ಹೇಳಿಕೊಡುತ್ತೇನೆ. ಅದರ ಹಾಗೆ ನಡೆದಕಿ, ನಿನಗೆ ಈ ದೈನ್ಯವೃತ್ತಿ ತಪ್ಪಿಹೋಗುವುದು. ನೀನು ನಾಳೆ ಪುರಾಣವನ್ನು ಹೇಳಲು ಹೋಗುನವೆಯಷ್ಟೇ ? ಆಗ ಆ ಸರ್ಪವು ನಿನಗೆ ರತ್ನವನ್ನು ಕೊಡುವ ಸಮ ಯದಲ್ಲಿ ಅದನ್ನು ಕೊಂದುಬಿಡು. ಆ ಮೇಲೆ ಅದರ ಹೊಟ್ಟೆಯನ್ನು ಬಗಿದು, ರತ್ನ್ನಗಳನ್ನೈಲ್ಲ ತೆಗೆದುಕೊಂಡು ಇಲ್ಲಿಗೆ ಬಾ'' ಎಂದು ದುರ್ಬುದ್ಧಿಯನ್ನು ಬೋಧಿಸಿದಳು. ವೇಶ್ಯಾಸ್ತ್ರೀಯ ಈ ಬುದ್ಧಿ ವಾದವನ್ನು ಕೇಳಿ ಅದು ಸರಿ ಯೆಂದು ಒಪ್ಪಿಕೊಂಡು ಹಾಗೆಯೇ ಮಾಡುವುದಾಗಿ ಹೇಳಿ ಅವನು ಅಲ್ಲಿಂದ ಹೊರಟನು. ತಿರಿದಿಕೊಂಡು ತಿನ್ನುವವನು ಬಯಲ ಭ್ರಾಂತಿಯಿಂದ ಸರ ಮವಿಲಾಸಿಯಾಗುವುದೂ, ಹಣವಿಲ್ಲದವನು ಮಹಾಕಾಮಿಯಾಗುವುದೂ, ಅತ್ಯಂತ ವೃದ್ಧನು ವಿಟನಾಗುವುದೂ, ಎಲ್ಲವನ್ನು ತಿಳಿದು ಹಿರಿಯನೆಂ ದೆನಿಸಿ ಕೊಂಡವನು ಮೂರ್ಬರೊಡನಾಡುವುದೂ, ಪ್ರೌಢನಾದವನು ಮುಗ್ಭ ಯುವತಿಯ ಸಹವಾಸ ಮಾಡುವುದೂ, ಇವೈದು ಮಹಾದುಃಖಕ್ಕೆ ಕಾರಣ. ಹೀಗೆ ನೀತಿಯಿರುವುದರಿಂದ ದರಿದ್ರನೂ ಮೂರ್ಬನೂ ಆದ ಆ ವಿಪ್ರನು ನೇಶ್ಯಾಸ್ತ್ರೀಯ ಮೇಲಣ ವ್ಯಾಮೋಹದಿಂದ 'ಮಾರನೆಯ ದಿನ ಒಂದು ಕತ್ತಿಯನ್ನಡಗಿಸಿಕೊಂಡು ಸರ್ಪಕ್ಕೆ ಪುರಾಣಶ್ರವಣಮಾಡಿಸಿ ಮುಗಿ ಸಿದನು, ಆ ಮೇಲೆ ಸರ್ಪವು ರತ್ನವನ್ನು ಕೊಡಲು ಮುಂದುವರಿಯಿತು. ಆ ಸಮಯದಲ್ಲಿ ಬ್ರಾಹ್ಮಣನು ಕತ್ತಿಯನ್ನೆಕ್ತಿ ಹೊಯ್ಯಲು ಆ ಸರ್ಪವು ಸರ ಕೃನೆ ಸರಿದು ಬಲವಾದ ಏಟನ್ನು ತನ್ಪಿಸಿಕೊಂಡರೂ, ಗಾಯಹೊಂದಿ ಆ ಬ್ರಾಹ್ಮಣನ ಮೇಲೆ ವಿಷವನ್ನು ಕಾರಿತು. ಅದರಿಂದ ಬ್ರಾಹ್ಮಣನು ಭಸ್ಮವಾಗಿ ಪಂಚತ್ವವನ್ನು ಹೊಂದಿದನು. ಕಲವು ಡಿನಗಳು ಕಳೆದ ಮೇಲೆ ಅವನ ತಂದೆ ಯಾದ ಸುಶರ್ಮನು ಕಾಶೀಯಾತ್ರಿಯನ್ನು ಮುಗಿಸಿಕೊಂಡು ಕಾವಡಿಯನ್ನು ಹೊತ್ತು ಮನೆಗೆ ಹಿಂದಿರುಗಿದನು. ಮನೆಯವರೆಲ್ಲರೂ ಇವನು ಬಂದುದನ್ನು ನೋಡಿ ಶೋಕಿಸಲು ಆರಂಭಿಸಿದರು. ಬ್ರಾಹ್ಮಣನು ಭ್ರಾಂತನಾಗಿ ಏನಾಯಿತೆಂದು ಕೇಳಿದನು. ಮನೆಯವರು “ನೀನು ಸರ್ಪಕ್ಕೆ ಪುರಾಣವನ್ನು ಹೇಳುವ ಹಾಗೆ ಮಗನಿಗೆ ಕಟ್ಟು ಮಾಡಿ ಹೋದೆ. ನಿನ್ನ ಮಗನನ್ನು ಸರ್ಪವು ಕಚ್ಚಿ ಕೊಂದಿತು. ಸರ್ಪದ ಸಹವಾಸವನ್ನು ನೀನು ಮಾಡಿಸಿದುದರಿಂದ ಹೀಗಾಯಿತು” ಎಂದು ಗೋಳಾಡಿದರು. ಅದನ್ನು ಕೇಳಿ, ಆ ಬ್ರಾಹ್ಮಣನು “ಇದರಲ್ಲಿ ಸರ್ಪದ ದೋಷವೇನಿದೆ? ಸಮಸ್ತ ವೇದ ಶಾಸ್ತ್ರಗಳನ್ನು ಕೇಳುವುದರಿಂದ ಬುದ್ಧಿ ಪ್ರಕಾಶಿಸುವುದು; ವ್ಯಸನದಿಂದ ಮನುಷ್ಯನು ಮೂರ್ಖನಾಗುವನು; ಯೌವನ ಮದದಿಂದ ಸ್ತ್ರೀಯರು ಲಾವಣ್ಯವತಿಯರಾಗುವರು; ಮಹಾನದಿ ನೀರಿನಿಂದ ಉಕ್ಕೇರುವುದು; ಚಂದ್ರಕಾಂತಿ ರಾತ್ರಿ ಹೆಚ್ಚುವುದು; ಧೈರ್ಯದಿಂದ ಯೋಗ ಸಿದ್ಧಿಸುವುದು; ನೀತಿಯಿಂದ ಅರಸರು ಒಲಿಯುವರು. ಆದ್ದರಿಂದ ನನ್ನ ಮಗನು ವ್ಯಸನದಿಂದ ಕೆಟ್ಟುದೇ ಹೊರತು, ಆ ಸರ್ಪದಿಂದ ಮೃತಿಹೊಂದಿದವನಲ್ಲ. ಇದರಲ್ಲಿ ಸರ್ಪದ ದೋಷವೇನೂ ಇಲ್ಲ” ಎಂದು ಹೇಳಿ ತನ್ನ ಮಗನ ಮೂರ್ಖತೆಯನ್ನು ವ್ಯಸನಕ್ಕೆ ಹೊತ್ತುಕೊಂಡನು. ಆ ಮೇಲೆ ತಾನು ಮಜ್ಜನ, ಭೋಜನಾದಿಗಳನ್ನು ತೀರಿಸಿಕೊಂಡು, ಆ ದಿನ ನಿಶ್ರಾಂತಿಯಿಂದ ಇದ್ದನು. ಮಾರನೆಯ ದಿನ ನಿತ್ಯದಂತೆ ಸ್ನಾನ, ದೇವತಾರ್ಚನೆಗಳನ್ನು ಮುಗಿಸಿಕೊಂಡು, ಮುನ್ನಿನಂತೆ ಆ ಸರ್ಪದ ಬಳಿಗೆ ಬಂದು ಪುರಾಣವನ್ನು ಹೇಳುವುದಕ್ಕೆ ಆರಂಭಿಸಿದನು. ಆ ಬ್ರಾಹ್ಮಣನು ಪುರಾಣ ಹೇಳುವುದನ್ನು ನೋಡಿ, ಸರ್ಪವು ಅವನನ್ನು ಕುರಿತು, “ಎಲ್ಲೋ ಮರುಳು ಹಾರುವನೇ. ನಿನ್ನ ಮಗನು ನನ್ನನ್ನು ಹೊಡೆದು ಗಾಯಗೊಳಿಸಿದನು. ನಾನು ನಿಷನ್ನದಿಂದ ಅವನನ್ನು ಕಚ್ಚಿ ಕೊಂದೆನು. ಇನ್ನು ಮುಂದೆ ನನಗೂ ನಿನಗೂ ಸ್ನೇಹವಿಲ್ಲ. ಇಂದು ನೀನು ಬಂದುದರಿಂದ ಇವತ್ತಿಗೆ ಮಾತ್ರ ನಿನ್ನ ಪುರಾಣವನ್ನು ಕೇಳಿ, ನಾನು ರತ್ನವನ್ನು ಕೊಡುತ್ತೇನೆ. ನೀನು ಅದನ್ನು ತೆಗೆದುಕೊಂಡು ಹೋಗು. ಆದರೆ ನಾಳೆ ಬಂದರೆ ಕೆಟ್ಟುಹೋಗೀಯೆ” ಎಂದು ಸಾರಿ ಸಾರಿ ಹೇಳಿ, ಆ ಬ್ರಾಹ್ಮಣನನ್ನು ಕಳಿಸಿಬಿಟ್ಟಿತು. ಸರ್ಪದ ಈ ನುಡಿಯನ್ನು ಕೇಳಿ ಬ್ರಾಹ್ಮಣನು ಬಹಳ ವ್ಯಥೆಗೊಂಡು ತನ್ನ ಮನೆಗೆ ಮರಳಿ. ಅವನು ತನ್ನಿಗಾದ ಈ ಅನುಭವವನ್ನು ಒಂದು ಕಥೆಯ ಮೂಲಕ ತನ್ನ ಬಂಧುಬಳಗದವರಿಗೆ ಹೀಗೆ ವಿವರಿಸಿದನು.

ಕಥೆ:- ಧಾರಾಪುರವೆಂಬ ಪಟ್ಟಣದಲ್ಲಿ ಭೋಜರಾಜನು ಮಹಾ ಪರಾಕ್ರಮದಿಂದಲೂ, ಧರ್ಮದಿಂದಲೂ ರಾಜ್ಯವಾಳುತ್ತಿದ್ದನು. ಆ ರಾಜನು ಒಂದು ದಿನ ರಾತ್ರಿ ತನ್ನ ಪಟ್ಟಣದಲ್ಲಿ ಹೆಚ್ಚಿನ ವೃತ್ತಾಂತವನ್ನು ತಿಳಿಯಲು ಕರಿಯಗೊಂಗಡಿಯನ್ನು ಹೊದ್ದುಕೊಂಡು ರೂಪವನ್ನು ಮರೆಸಿ ರಾಜಬೀದಿಯಲ್ಲಿ ಸಂಚಾರ ಹೊರಟನು. ಆಗ ಅವನು ಒಬ್ಬ ದರಿದ್ರನಾದ ಬ್ರಾಹ್ಮಣನ ಮನೆಯ ಮುಂದೆ ಬಂದನು. ಆ ಬ್ರಾಹ್ಮಣನು ಮಹಾದರಿದ್ರನು, ಅವನು ತನ್ನ ಪತ್ನಿಯನ್ನು ಉದ್ದೇಶಿಸಿ, “ಎಲ್ಲೇ ಪತ್ನಿಯೇ, ನಾನು ಅಷ್ಟರ ದರಿದ್ರನು. ದಿನವೂ ಆಹಾರಕ್ಕಾಗಿ ಪರರನ್ನು ಯಾಚಿಸಬೇಕಾಗಿದೆ. ನನ್ನ ಪೂರ್ವಸಂಚಿತದಿಂದ, ನಾಳೆ ನನಗೆ ಯಾರಾದರೂ ಮೂರು ಉದ್ದಿನಕಾಳಸ್ತು ಚಿನ್ನವನ್ನು ಕೊಟ್ಟರೆ, ನನಗೆಷ್ಟು ಸಂತೋಷವಾದೀತು! ಈ ಲೋಕದಲ್ಲಿ ಇಷ್ಟು ಚಿನ್ನವನ್ನು ಕೊಡುವಂಥವರಾರುಂಟು?” ಎಂದು ಚಿಂತಿಸುತ್ತ ಹೇಳುತ್ತಿರುವ ಮಾತನ್ನು ರಾಜನು ಕೇಳಿದನು. ಈ ಮಾತುಗಳನ್ನು ಆಲಿಸಿ ಭೋಜರಾಜನು ಅಂದಿನ ತನ್ನ ರಾತ್ರಿಯ ಸಂಚಾರವನ್ನು ಮುಗಿಸಿಕೊಂಡು, ತಿರುಗಿ ಅರಮನೆಗೆ ಹೋದನು. ಮರುದಿನ ರಾಜನು ಭಟರನ್ನು ಕಳಿಸಿ ಆ ಬ್ರಾಹ್ಮಣನನ್ನು ಕರೆಯಿಸಿಕೊಂಡು “ಎಲೈ, ಬ್ರಾಹ್ಮಣನೇ, ನಿನ್ನೆ ರಾತ್ರಿ ನೀನು ಮೂರು ಉದ್ದಿನಕಾಳಿನಷ್ಟು ಚಿನ್ನವನ್ನು ಕೊಡುವವರಾರಿದ್ದಾರೆ?” ಎಂದು ವ್ಯಾಕುಲಗೊಂಡನು. “ನೀನು ನಿನ್ನ ಮನಸ್ಸಿಗೆ ಬಂದಷ್ಟು ದ್ರವ್ಯವನ್ನು ತೆಗೆದುಕೊಂಡು ಹೋಗು” ಎಂದು ತನ್ನ ಭಂಡಾರವನ್ನು ತೋರಿಸಿದನು. ಆ ಭಂಡಾರವನ್ನು ನೋಡಿ ಬ್ರಾಹ್ಮಣನಿಗೆ ಅಪರಿಮಿತವಾದ ಸಂತೋಷವಾಯಿತು. ಅವನು ಅವತ್ತು ಅಸ್ತಮಾನವಾಗುವವರೆಗೆ ಬೇಸರವಿಲ್ಲದೆ, ದ್ರವ್ಯವನ್ನು ಹೊತ್ತುಕೊಂಡು ಹೋಗಿ ಮನೆಯಲ್ಲಿ ಹಾಕತೊಡಗಿದನು. ಬ್ರಾಹ್ಮಣನು ಹೀಗೆ ಮಾಡುವುದನ್ನು ರಾಜನು ನೋಡಿ ಬೆರಗಿ, ಅವನನ್ನು ಕರೆದು “ಎಲೈ, ವಿಪ್ರನೇ, ಮೂರು ಉದ್ದಿನಕಾಳಷ್ಟು ಚಿನ್ನವಾದರೆ ಸಾಕೆಂದು ಹೇಳಿ, ಈಗ ಮೂರು ಕೋಟಿ ದ್ರವ್ಯವನ್ನು ಅಡಕಿದೆ. ನಿನ್ನ ಅಪೇಕ್ಷೆ ಇನ್ನೂ ಈಡೇರಲಿ ಲ್ಲವೇ? ” ಎಂದು ಕೇಳಿದನು. ಅದಕ್ಕೆ ಆ ಬ್ರಾಹ್ಮಣನು “ಮಹಾರಾಜನೇ, ಮನಸ್ಸಿನ ಆಶೆಗೆ ಕಡೆಮೊದಲುಂಟೇ ? ಎಷ್ಟು ಲಾಭವಿದ್ದರೂ ಮನು ಹೈನು ಅಷ್ಟು ಲೋಭಿಯಾಗುವನು, ಅವನ ಮನಸ್ಸು ತೃಪ್ತಿ ಹೊಂದದು” ಎಂದು ರಾಜನಿಗೆ ನೀತಿಯನ್ನು ಬೋಧಿಸಿದನು. ರಾಜನು ಬ್ರಾಹ್ಮಣನ ಸಮಯೋಚಿತವಾದ ಮಾತನ್ನು ಮೆಚ್ಚಿ, ಅವನಿಗೆ ಮತ್ತಷ್ಟು ದ್ರವ್ಯವನ್ನು ಕೊಟ್ಟು ಕಳಿಸಿದನು.. ಆದಕಾರಣ ನನ್ನ ಮಗನೂ ಅತ್ಯಾಶೆಯಿಂದ ಹೆಚ್ಚು ರತ್ನಗಳನ್ನು ಪಡೆಯಬೇಕೆಂದು ಆ ಸರ್ಪವನ್ನು ಕೊಲ್ಲಬೇಕೆನ್ನುವಷ್ಟರಲ್ಲಿ ವಿಧಿ ಅವನನ್ನೇ ಕೊಂದುಬಿಟ್ಟಿತು. ಅತ್ಯಾಶೆ ಗತಿಗೆಡಿಸುವುದು’ ಎಂಬ ಮಾತು ಸುಳ್ಳಾದೀತೇ ? !’ ಎಂದು ಸುಶರ್ಮನೆಂಬ ಆ ಬ್ರಾಹ್ಮಣನು ಅತ್ಯಾಶೆಯಿಂದ ಉಂಟಾಗುವ ಕೇಡನ್ನು ತನ್ನ ಬಂಧುವರ್ಗದವರಿಗೆ ಹೇಳಿ ಅವರನ್ನು ಸಮಾಧಾನ ಮಾಡಿದನು. ಆದ್ದರಿಂದ “ಎಲೇ, ಮೊಸಳೆಯೇ, ಆ ಸರ್ಪಕ್ಕೂ, ಆ ಬ್ರಾಹ್ಮಣನಿಗೂ ಸಖ್ಯವು ಮುಂದೆ ಏರ್ಪಟ್ಟಿತೇ ? ಹಾಗೆಯೇ ನನಗೂ ನಿನಗೂ ಇನ್ನು ಮೇಲೆ ನಂಟುತನ ಉಂಟಾಗಲಾರದು” ಎಂದು ಆ ವಾನರವು ಮೊಸಳೆಗೆ ಹೇಳಿ, ಮತ್ತೊಂದು ಕಥೆಯನ್ನು ಉಸುರಿತು.

ಕಥೆಃ- ದೇವಸೇನ ಪುರವೆಂಬ ಒಂದು ಪಟ್ಟಣ; ಅಲ್ಲಿ ನಂದಮಹೀ ಪಾಲನೆಂಬ ರಾಜನು ಸುಖದಿಂದ ರಾಜ್ಯವಾಳುತ್ತಿದ್ದನು. ಆ ಪಟ್ಟಣದಲ್ಲಿ ವೀರವರ್ಮನೆಂಬ ಹರದನು ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದನು, ಆ ಹರದನಿಗೆ ನೇತ್ರಾವತಿಯೆಂಬವಳು ಪತ್ನಿ, ಅವಳು ಮಹಾಸುಂದರಿ, ಹೀಗೆ ಈ ದಂಪತಿಗಳು ಆನಂದದಿಂದ ಕಾಲಕಳೆಯುತ್ತಿದ್ದರು. ಆ ಪಟ್ಟ ಣದ ರಾಜನು ಒಂದುದಿನ ಬೇಟೆಯನ್ನಾಡಿ, ರಾಜಬೀದಿಯಲ್ಲಿ ತನ್ನ ಅರ ಮನೆಗೆ ಹೋಗುತ್ತಿರುವಾಗ ಈ ವೀರವರ್ಮನ ಪತ್ನಿ ತನ್ನ ಮನೆಯ ಉಪ್ಪರಿಗೆಯಲ್ಲಿ ಒಯ್ಯಾರದಿಂದ ಬಳುಕುತ್ತಿರುವುದನ್ನು ನೋಡಿ, ಅವಳ ರೂಪಕ್ಕೆ ಬೆರಗುಗೊಂಡನು. ಅವನು ತನ್ನ ಮನಸ್ಸಿನಲ್ಲಿ “ ಇಂಥ ಸುಂದರ ಸ್ತ್ರೀ ನನ್ನ ಪಟ್ಟಣದಲ್ಲಿರುವಳೇ? ಇವಳು ಸಾಕ್ಷಾತ್ ಅಪ್ಸರೆಯಿರಬೇಕಲ್ಲದೆ ನಾಡಾಡಿಯಾಗಿರಲಾರಳು. " ಎಂದು ಅವಳ ರೂಪವನ್ನೇ ಚಿಂತಿಸುತ್ತ ಪೂರ್ತಿಯಾಗಿ ಮೋಹಗೊಂಡನು. ಅವನು ಕಾಮಪರವಶನಾಗಿ ಅರ ಮನೆಗೆ ಬಂದನು. ಬಂದ ಕೂಡಲೇ ಪ್ರಧಾನಿಯನ್ನು ಕರೆಸಿ, ತನ್ನ ಮನ ಸ್ಸಿನ ವಿಕಾರವನ್ನು ಬಿಚ್ಚಿ ಹೇಳಿದನು. ಪ್ರಧಾನಿ ರಾಜನಿಗೆ ಉಂಟಾದ ಈ ಮನೋವಿಕಾರವನ್ನು ನೋಡಿ, “ ಮಹಾಪ್ರಭುವೇ, ವೇಶ್ಯಾಸ್ತ್ರೀಯರ ಸಹವಾಸವನ್ನು ಮಾಡಿದರೆ, ಮಾನ, ಧನ-ಇವೆರಡೂ ನಾಶವಾಗುತ್ತವೆ. ಸೇವಕಿಯ ಸಹವಾಸಮಾಡಿದರೆ, ಕುಲಕ್ಷಯವಾಗುವುದು. ವಿಧವಾಸ್ತ್ರೀಯರ ಸಂಪರ್ಕ ಮಾಡುವುದರಿಂದ ಲಕ್ಷ್ಮಿ ತ್ಯಜಿಸುವಳು, ಪರಸ್ತ್ರೀಯರ ಸಂಗ ದಿಂದ ಎಲ್ಲವೂ ನಾಶವಾಗಿ ನರಕವು ಪ್ರಾಪ್ತವಾಗುವುದು, ನೀನು ಸಕಲ ವಿದ್ಯೆಗಳನ್ನು ಬಲ್ಲವನಾದ್ದರಿಂದ ಇಂಥ ನೀತಿಬಾಹಿರವಾದ ಕಾರ್ಯವನ್ನೆ ಣಿಸಬೇಡ” ಎಂದು ಬೋಧಿಸಿದನು. ಅದಕ್ಕೆ ರಾಜನು “ ನಿನ್ನ ಬೋಧ ಹಾಗಿರಲಿ. ನೀನು ನನಗೆ ಆ ವ್ಯಾಪಾರಿಯ ಪತ್ನಿಯನ್ನು ತಂದುಕೊಡು ” ಎಂದು ಆಜ್ಞಾಪಿಸಿದನು. ರಾಜನ ಆಜ್ಞೆಗೆ ಹಸಾದವೆಂದು ನುಡಿದು, ಪ್ರಧಾನಿ ಹರದನನ್ನು ಕರೆಸಿ, " ಎಲೇ, ವರ್ತಕನೇ, ನೀನು ದೇಶಾಂತರಕ್ಕೆ ಹೋಗಿ ನಮ್ಮ ಪ್ರಭುವಿಗಾಗಿ ಅನರ್ಘವಾದ ರತ್ನಗಳನ್ನು ತೆಗೆದು ಕೊಂಡು ಬಾ ” ಎಂದು ಕಟ್ಟಪ್ಪಣೆ ಮಾಡಿದನು. ರಾಜಾಜ್ಞೆಯನ್ನು ಕೇಳಿ ವರ್ತಕನು ಮನೆಗೆ ಬಂದು, ಆ ವೃತ್ತಾಂತವನ್ನು ತನ್ನ ಪತ್ನಿಗೆ ಹೇಳಿ, ತಾನು ದೇಶಾಂತರಕ್ಕೆ ಹೊರಡಲು ಅಣಿಮಾಡಿಕೊಂಡನು. ಅವನು ತಾನು ಹೋಗುವಾಗ, ತಾನು ಅಕ್ಕರೆಯಿಂದ ಸಾಕಿದ ಒಂದು ಗಿಳಿಂ 125/161 ಮಾರ್ಜಾಲವನ್ನೂ ಕರೆದು, “ ನಾನು ದೇಶಾಂತರಕ್ಕೆ ಹೊರಟದ್ದೇನೆ. ಮನೆಯಲ್ಲಿ ನನ್ನ ಪತ್ನಿ ಒಬ್ಬಳೇ ಇದ್ದಾಳೆ. ನೀವು ಸರಿಯಾಗಿ ನೋಡಿ ಕೊಂಡಿರಬೇಕು” ಎಂದು ಹೇಳಿ, ತನ್ನ ಕೆಲಸಕ್ಕೆ ಹೊರಟು ಹೋದನು. ವ್ಯಾಪಾರಿ ಹೋದ ದಿವಸವೇ ರಾಜನು ಸರ್ವಾಲಂಕಾರಗಳಿಂದ ಭೂಷಿ ತ ನಾ ಗಿ, ರಾತ್ರಿ ಆ ವ್ಯಾಪಾರಿಯ ಮನೆಗೆ ಬಂದನು. ಒಬ್ಬ ಹೊಸಬನು ಬಂದಿರುವುದನ್ನು ನೋಡಿ, ಬೆಕ್ಕು, “ಎಲೆ, ರಾಮಾ (ಗಿಳಿ), ನಮ್ಮ ಮನೆಗೆ ಕಳ್ಳನು ಬಂದಿದ್ದಾನೆ. ನಮ್ಮ ಯಜಮಾನನಾದರೋ ಮನೆಯಲ್ಲಿಲ್ಲ. ಇದಕ್ಕೆ ಏನು ಉಪಾಯ?” ಎಂದು ಗಿಳಿಯನ್ನು ಕೇಳಿತು. ಅದಕ್ಕೆ ಆ ಗಿಳಿ, “ಏ, ಬುದ್ಧಿಹೀನವಾದ ಬೆಕ್ಕೇ, ಈಗ ಬಂದಾತನು ನಂದರಾಜನು, ಕಳ್ಳನಲ್ಲ. ಈತನು ನಮ್ಮನ್ನು ಕಾಪಾಡುತ್ತಿರುವ ನಮ್ಮ ಯಜಮಾನನ ಸ್ವಾಮಿ. ಅಲ್ಲದೆ, ನಮ್ಮ ರಾಜನಿಗೆ ಸರನಾರೀಸಹೋದರನೆಂಬ ಬಿರುದುಂಟು, ನೀನು ಕೇಳಿಲ್ಲವೇ? ತನ್ನ ಆಜ್ಞೆಯಿಂದ ವರ್ತಕನು ಸ್ಥಳಾಂತರಕ್ಕೆ ಹೋಗಿರುವುದರಿಂದ, ಆ ಮನೆತನವನ್ನು ರಕ್ಷಿಸುವ ಭಾರವು ತನ್ನ ಮೇಲೆ ಇದೆ ಎಂದು ತಿಳಿದು, ಈ ರಾತ್ರಿ ನಮ್ಮ ಯೋಗಕ್ಷೇಮ ನೋಡಿಕೊಳ್ಳಲು ಬಂದಿರುವ ನಷ್ಟೇ ಹೊರತು, ಬೇರಾವ ದುರುದ್ದೇಶದಿಂದ ಅಲ್ಲ,” ಎಂದು ಗಟ್ಟಿಯಾಗಿ ಹೇಳಿತು. ಗಿಳಿಯ ಮಾತನ್ನು ಕೇಳಿ, ರಾಜನು ತನ್ನ ಅಸದ್ವೃತ್ತಿಗೆ ಲಜ್ಜೆಪಟ್ಟು ಅಲ್ಲಿಂದ ಹೊರಟುಹೋದನು. ತನ್ನ ಒಡೆಯನ ಪತ್ನಿಗೆ ಬಂದ ವಿಪತ್ತನ್ನು ಆ ಗಿಳಿಯೂ, ಬೆಕ್ಕೂ ಪರಿಹರಿಸಿದ್ದವು. ಅದೇ ರೀತಿಯಾಗಿ ಈಗಲಾದರೂ ನಾನು ಆ ರಾಜನಂತೆ ಒಮ್ಮೆ ತಪ್ಪುದಾರಿ ತುಳಿದು ಅದರಿಂದ ಪಾರಾಗಿ ಬಂದಿದ್ದೇನೆ. ಇನ್ನು ಮುಂದೆ ಅದೇ ದಾರಿಯನ್ನು ತುಳಿದೇನೆ? ನಿನಗೂ ನನಗೂ ಇನ್ನಾವ ಸ್ನೇಹವೂ ಏರ್ಪಡಬೇಡ,” ಎಂದು ಆ ವಾನರವು ಮೊಸಳೆಯನ್ನು ಮೂದಲಿಸಿತು. ಆ ಮೊಸಳೆ ಮರ್ಕಟದ ಮೂದಲಿಕೆಯನ್ನು ಕಿವಿಗೆ ಹಾಕಿಕೊಂಡು, ಮತ್ತೆ, "ಎಲೆ, ವಾನರನೆ, ನೀನು ಮಹಾ ಸತ್ಯವಂತನು, ನಿನ್ನ ಶರೀರವನ್ನು ಕೊಡುವೆನೆಂದು ವಚನವನ್ನಿತ್ತಿರುವೆ. ಈಗ ನೀನು ಸತ್ಯಭ್ರಷ್ಟನಾಗುವೆಯಾ?" ಎಂದು ಕೇಳಿತು. ಅದಕ್ಕೆ ವಾನರವು ಒಂದು ಕಥೆಯನ್ನು ಹೇಳುತ್ತ ಉತ್ತರ ನೀಡಿತು.

ಗೋದಾವರಿಯ ತೀರದಲ್ಲಿ ಇಬ್ಬರು ಯತೀಶ್ವರರು ಪಂಚಾಗ್ನಿ ಮಧ್ಯದಲ್ಲಿ ಕುಳಿತುಕೊಂಡು ಉಗ್ರ ತಪಸ್ಸನ್ನು ಮಾಡುತ್ತಿದ್ದರು. ಒಂದು ದಿನ, ಇವರು ಕುಳಿತಿದ್ದ ಮಾರ್ಗವಾಗಿ ಒಂದು ಮದುವೆಯ ದಿಬ್ಬಣವು ಹೊರಟುಹೋಯಿತು. ಈ ಮದುವೆಯ ದಿಬ್ಬಣವನ್ನು ಬೆನ್ನಟ್ಟಿ ಹತ್ತಿರುವ ಐವತ್ತು ಜನ ಕಳ್ಳರು ಓಡೋಡಿ ಬರುತ್ತಿದ್ದರು. ಅಷ್ಟರಲ್ಲಿ ಆ ದಿಬ್ಬಣ ಕಳ್ಳರ ಕಣ್ಮರೆಯಾಗಿ, ಈ ಕ್ಷಿಷಿಗಳ ಮುಂಭಾಗ ಹಾಯ್ದು ದೂರ ಹೋಯಿತು. ಕಳ್ಳರು ಆ ಕ್ಷಿಷಿಗಳನ್ನು ಸಮೀಪಿಸಿ, "ಈ ಮಾರ್ಗದಿಂದ ಮದುವೆಯ ದಿಬ್ಬಣವೊಂದು ಹಾಯ್ದುಹೋಯಿತೇ?” ಎಂದು ಕೇಳಿದರು. ಅದಕ್ಕೆ ಆ ಇಬ್ಬರು ಕ್ಷಿಷಿಗಳಲ್ಲಿ ಒಬ್ಬನು ಇಲ್ಲವೆಂದನು, ಮತ್ತೊಬ್ಬ ಕ್ಷಿಷಿ ಸರ್ವಸಂಗ ಪರಿತ್ಯಾಗಮಾಡಿದ ಯತಿಗಳು ನಿಜವನ್ನೇ ಹೇಳಬೇಕು ಎಂದು ಬುದ್ಧಿಯಿಂದ ಆ ಮಾರ್ಗವಾಗಿ ದಿಬ್ಬಣವು ಹೋದುದನ್ನು ಹೇಳಿಬಿಟ್ಟನು. ಆ ಕಳ್ಳರು ತ್ವರೆಯಿಂದ ಹೋಗಿ ದಿಬ್ಬಣದವರನ್ನು ಮುತ್ತಿಸಿ ಸುಲಿಗೆ ಮಾಡಿದರು. ಇತ್ತ ಆ ಕ್ಷಿಷಿಗಳಿಬ್ಬರೂ ಕಾಲಾಧೀನರಾದರು. ಯಮದೂತರು ಇವರ ಪುಣ್ಯಪಾಪ ವಿಚಾರಣೆಗಾಗಿ ಇವರನ್ನು ಯಮರಾಜನ ಎದುರು ನಿಲ್ಲಿಸಿದರು. ಆಗ ಚಿತ್ರಗುಪ್ತರು ಆ ಕ್ಷಿಷಿಗಳ ಪುಣ್ಯಪಾಪ ಕೃತಿಗಳನ್ನು ಒಂದೊಂದಾಗಿ ವಿವರಿಸುತ್ತ, “ಒಬ್ಬ ಕ್ಷಿಷಿ ಆ ದಿಬ್ಬಣವನ್ನು ಕಂಡೆನೆಂದು ಸತ್ಯವನ್ನು ಹೇಳಿ, ಪ್ರಾಣಿಹಿಂಸೆಯನ್ನು ಮಾಡಿಸಿದನು. ಮತ್ತೊಬ್ಬ ಕ್ಷಿಷಿಯಾದರೋ ತತ್ಕಾಲೋಚಿತವಾಗಿ ಅಸತ್ಯವನ್ನು ನುಡಿದನು. ಇವರಿಬ್ಬರ ಪಾಪಪುಣ್ಯಗಳನ್ನು ತಾವೇ ನಿರ್ಧಾರಮಾಡಬೇಕು” ಎಂದು ಬಿನ್ನಸಿದರು. ಅದಕ್ಕೆ ಯಮಧರ್ಮರಾಜನು, “ದಿಬ್ಬಣವನ್ನು ಕಂಡಿಲ್ಲವೆಂದು ಅಸತ್ಯ ಹೇಳಿದ ಕ್ಷಿಷಿ ಪುಣ್ಯದ ಕೆಲಸವನ್ನು ಮಾಡಿದನು. ಆದ್ದರಿಂದ ಇವನು ಸ್ವರ್ಗಕ್ಕೆ ಅರ್ಹನು. ದಿಬ್ಬಣವನ್ನು ಕಂಡೆನೆಂದು ಹೇಳಿದ ಕ್ಷಿಷಿ ಪಾಪಕರ್ಮವನ್ನು ಮಾಡಿದನು, ಆದ್ದರಿಂದ ಅವನು ನರಕಭಾಜಿ” ಎಂದು ತೀರ್ಮಾನ ಮಾಡಿದನು. “ಆದ್ದರಿಂದ ಎಲೆ, ಮೊಸಳೆಯೇ, ಸಮಯವನ್ನು ಅರಿತು ಸತ್ಯಾಸತ್ಯವನ್ನು ಆಚರಿಸುವುದರಿಂದ ಇಹಕ್ಕೂ, ಪರಕ್ಕೂ ಒಳ್ಳೆಯದಾಗುವುದು. ಅರಸನು ಮುನಿದು ಒಬ್ಬನ ಪ್ರಾಣವನ್ನು ತೆಗೆದುಕೊಳ್ಳುವಲ್ಲಿ, ಸತ್ಪುರುಷನಿಗೆ ವಿಪತ್ತು ಬಂದಲ್ಲಿ, ವಿವಾಹಕಾಲದಲ್ಲಿ ಸುಳ್ಳು ಹೇಳಿದರೆ ದೋಷವಿಲ್ಲ ಎಂಬ ನೀತಿ ಇದೆ. ಅದರಂತೆಯೇ ನಾನು ನನ್ನ ಪ್ರಾಣವನ್ನು ಉಳಿಸಿ ಬದುಕಲು ಸುಳ್ಳು ಹೇಳಿದ್ದೇನೆ.” ಕೊಳ್ಳಲು ಸುಳ್ಳು ಹೇಳಿದೆನು. ಇದರಲ್ಲಿ ದೋಷವಿಲ್ಲ. ನೀನು ಬಂದ ಹಾದಿಗೆ ಸುಂಕವಿಲ್ಲವೆಂಬಂತೆ ಹೊರಟು ಹೋಗು.'' ಎಂದು ನಿಷ್ಠುರವಾಗಿ ಆ ವಾನರವು ಹೇಳಿಬಿಟ್ಟಿ ತು. ವಾನರದ ನಿಷ್ಕುರೋಕ್ಕಿಯನ್ನು ಕೇಳಿ, ಆ ಮೊಸಳೆ ತಾನು ತನ್ನ ಮಿತ್ರನಿಗೆ ಅನ್ಯಾಯ ಮಾಡಿದುದಕ್ಕೆ ಮನಸ್ಸಿನಲ್ಲಿ ವ್ಯಥೆಸಟ್ಟು ಕೊಂಡು ತನ್ನ ಸ್ಥ ಳ್ಳ ಹೊರಟು ಹೋಯಿತು. ಆ ವಾನರವು ದೈವ ಸಂಕಲ್ಪದಿಂದ ಬದು ಕೆಡಿನೌದು ಹಿಗ್ಗಿ, ಹಣ್ಣುಗಳನ್ನು ತಿನ್ನುತ್ತ ವೃಕ್ಷದ ಮೇಲೆ ಸುಖ ವಾಗಿದ್ದಿತು. “ಕೇಳಿದಿರಾ! ರಾಜಪುತ್ರರೇ, ಕೈಗೆ ಬಂದ ತುತ್ತು ಬಾಯಿಗೆ ಬರ ಲಿಲ್ಲವೆಂಬಂತಿದೆ ಈ ಲಬ್ಧನಾಶವು. ನೀವು ಇದನ್ನು ಅರಿತು ಬುದ್ಧಿವಂತ ರಾಗಿ'' ಎಂದು ಆ ವಿಷ್ಣುಶರ್ಮನು ಹೇಳಿ ಆ ಲಬ್ಧ ನಾಶವೆಂಬ ನಾಲ್ಕ ನೆಯ ತಂತ್ರವನ್ನು ಮುಗಿಸಿದನು,

ರಾಜಕುಮಾರರೇ, ಎರಡನೆಯವರ ದುಷ್ಕರ್ಮವನ್ನು ನೋಡಿ ಅಥವಾ ಕೇಳಿ ಬುದ್ಧಿವಂತರಾದವರು ಹಾಗೆ ಮಾಡಬಾರದು, ಹಾಗೆ ಮಾಡಿ ಮಂದಮತಿಯಾದ ನಾವಲಿಗನು ಮಣಿಭದ್ರನೆಂಬ ಸೆಟ್ಟಿಯ ಗುಣಶೀಲ ವನ್ನು ಅರಿಯದೆ ವಿಪತ್ತಿಗೊಳಗಾದನು.” ಎಂದು ವಿಷ್ಣುಶರ್ಮನು ಹೇಳಲು, ಆ ರಾಜಪುತ್ರರು ಅದು ಹೇಗೆ ನಾವಲಿಗನು ನಿಪತ್ತಿಗೊಳಗಾ ದನು? '' ಎಂದು ವಿಚಾರಿಸಿದರು, ಅದಕ್ಕೆ ವಿಷ್ಣುಶರ್ಮನು ಆ ಕಥೆಯನ್ನು ವಿವರಿಸಿದನು, ಕಥೆ:. ದಕ್ಷಿಣ ದೇಶದ ಒಂದು ಪಟ್ಟಣದಲ್ಲಿ ಮಣಿಭದ್ರನೆಂಬ ಒಬ್ಬ ಹೆರದನಿದ್ದನು. ಅವನು ಸದಾಚಾರ ಸಂಪನ್ಮ್ನನಾಗಿ, ಜೀವಿಸುತ್ತಿ ದೃನು. ಆದರೆ ಅವನು ಬಹಳ ಬಡವನು, ಅವನು ಒಂದು ದಿನ ರಾತ್ರಿ ತಾನು ಮಲಗಿಕೊಳ್ಳುವಾಗ ತನ್ನ ಬಡತನವನ್ನು ನೆನೆದು ನಾಚಿಕೆ ಪಟ್ಟು ಕೊಂಡು, «ನನ್ನಂಥ ದರಿದ್ರ ಸಿಗೆ ಧಿಕ್ಕಾರ ! ಏಕೆಂದರ್ಕೆ ಧನಹೀನ ರಾದವರಲ್ಲಿ ದಯ, ಶಾಂತಿ, ಮುಂತಾದ ಸದ್ಗುಣಗಳಿದ್ದರೂ, ಅವು ಜನ ರಿಗೆ ನಿಪರೀತವಾಗಿ ತೋರುತ್ತವೆ. ಇದಲ್ಲದೆ, ಜೀವನದಲ್ಲಿ ಕ್ಷಣಕ್ಷಣಕ್ಕೆ ಸಂತಾಪ ತಲೆದೋರಿ ತನ್ನ ಕುಟುಂಬ ಪೋಷಣೆಯ ಚಿಂತೆಯಲ್ಲಿಯೇ ಅವನ ಬುದ್ಧಿ ಮಂದವಾಗಿ ಹೋಗುತ್ತದೆ. ಧಾನ್ಯಾದಿ ಪದಾರ್ಥಗಳು ಇಲ್ಲದ ಮನೆ ಶ್ಮಶಾನದಂತೆ ಕಾಣುತ್ತದೆ. ದರಿದ್ರನಾದವನು, ದಿವ್ಯನಿದ್ವಾಂ ಸನೂ, ಗುಣಯುಕ್ತನೂ ಆಗಿದ್ದರೂ ಸಭೆಯಲ್ಲಿ ಮಾತಾಡಿದರೆ, ಸಭಿಕರು ಅವನ ಪಾಂಡಿತ್ಯವನ್ನಾಗಲ್ಕಿ ಗುಣವನ್ನಾಗಲಿ ಮೆಚ್ಚುವುದಿಲ್ಲ. ದಾರಿದ್ರ್ಯ ದಿಂದ ಈ ವಿಧವಾಧ ದುಃಖವು ಮನುಷ್ಯನಿಗೆ ಪ್ರಾಪ್ತವಾಗುತ್ತದೆ.ಆದ್ದರಿಂದ ನಾನು ಇನ್ನು ಮೇಲೆ,ಆಹಾರವನ್ನು ತ್ಯಜಿಸಿ ,ನನ್ನ ಹರಣವನ್ನು ಬಿಟ್ಟು ಬಿಡುವೆನು "ಎಂದು ನಿಶ್ಶಯಿಸಿ ಹಾಗೆಯೇ ನಿದ್ದೆಹೋದನು .ಆ ರಾತ್ರಿ ಅವನ ಕುಲದೈವವಾದ ಪದ್ಮನಿಧಿ ಗೋಸಾವಿಯ ರೂಪು ಧರಿಸಿ ಕೊಂಡು ಸ್ವಪ್ನದಲ್ಲಿ ,"ಎಲೆ,ಮಣಿಭದ್ರನೇ ನಿನ್ನ ಸದಾಚಾರವನ್ನು ನಾನು ಮೆಚ್ಚಿದ್ದೇನೆ .ನಾಳೆ ಇದೇ ರೂಪದಿಂದ ನಾನು ನಿನ್ನ ಮನೆಗೆ ಬರುತ್ತೇನೆ .ಆಗ ನೀನು ನನ್ನ ತಲೆಯ ಮೇಲೆ ದೊಣ್ಣೆಯಿಂದ ಪ್ರಹಾರ ಮಾಡು. ಆ ಸಮಯದಲ್ಲಿ ನಾನು ಅಕ್ಷಯವಾದ ಒಂದು ದ್ರವ್ಯನಿಧಿಯಾಗುವೆನು . ನೀನು ಅದನ್ನು ತೆಗೆದುಕೊಂಡು ಸುಖವಾಗಿ ಜೀವಿಸುಕೊಂಡಿರು " ಎಂದು ಹೇಳಿ ಅದೃಶ್ಯನಾದನು .ಹೀಗೆ ಸ್ವಪ್ನವನ್ನು ಕಂಡು ,ಮಣಿಭದ್ರನು ಎಚ್ಚತ್ತು,"ಈ ಸ್ವಪ್ನವು ಸತ್ಯವಿರಬಹುದೇ ?ನಾನು ಯಾವಾಗಲೂ ನನ್ನ ದಾರಿದ್ರ್ಯದ ಮೂಲಕ ದ್ರವ್ಯದ ಚಿಂತೆ ಮಾಡುತ್ತಿರುವುದರಿಂದ ಈ ವಿಧವಾಧ ಭ್ರಾಂತಿಯುಂಟಾಗಿರಬಹುದೇ " ಎಂಬ ವಿಚಾರದಲ್ಲಿ ಮಗ್ನನಾಗಿ ,ಬೆಳಗಾಗುವರೆಗೆ ಹಾಗೆಯೇ ನಿದ್ದೆಯಿಲ್ಲದೆಯೇ ಕಾಲಕಳೆದನು .ಪ್ರಾತಃಕಾಲ ಸಮಯದಲ್ಲಿ ಕಂಡ ಕನಸು ಶೀಘ್ರದಲ್ಲಿಯೇ ಫಲಕೊಡುತ್ತದೆಯೆಂದು ಹಿರಿಯರು ಹೇಳುವ ಮಾತನ್ನು ಜ್ಞಾಪಿಸಿಕೊಳ್ಳುತ್ತ ಆ ಹರದನು.ಪ್ರಾತರ್ವಿಧಿಯನ್ನು ಮುಗಿಸಿ ,ಅದೇ ಯೋಚನೆಯಲ್ಲಿದ್ದನು .ಅಷ್ಟರಲ್ಲಿ ಹಿಂದಿನ ಇರುಳು ಸ್ವಪ್ನದಲ್ಲಿ ಕಂಡ ಹಾಗೆ ,ಒಬ್ಬ ಗೋಸಾವಿ ಪ್ರತ್ಯಕ್ಷವಾಗಿ ಅವನ ಮನೆಗೆ ಬಂದನು .ಅವನನ್ನು ನೋಡಿ ಮಣಿಭದ್ರನು ತಾನು ಕಂಡ ಕನಸು ಸತ್ಯವೆಂದು ಭಾವಿಸಿ ,ಗೋಸಾವಿ ಕನಸಿನಲ್ಲಿ ಹೇಳಿದ ಹಾಗೆ ,ಆ ಪ್ರತ್ಯಕ್ಷ ಗೋಸಾವಿಯ ತಲೆಯ ಮೇಲೆ ಒಂದು ದೊಣ್ಣೆಯಿಂದ ಹೊಡೆದನು.ಹೊಡೆದನೋ ಇಲ್ಲವೋ ,ಗೋಸಾವಿಯ ಸ್ಥಳದಲ್ಲಿ ಸುವರ್ಣದ ರಾಶಿ ಕಂಡಿತು .ಆಗ ಅತ್ಯಾನಂದಪಟ್ಟು ಆ ಮಣಿಭದ್ರನು ಸುವರ್ಣದ ರಾಶಿಯನ್ನು ತನ್ನ ಮನೆಯೊಳಗೆ ತೆಗೆದುಕೊಂಡು ಹೋಗಿ ಇಟ್ಟನು. ಈ ವಿಚಿತ್ರ ವಿದ್ಯಮಾನವನ್ನೆಲ್ಲ ಅಲ್ಲಿಯೇ ಕುಳಿತಿದ್ದ ಒಬ್ಬ ಕ್ಷೌರಕನು ನೋಡಿ ಆಶ್ಚರ್ಯಪಟ್ಟು ತನ್ನ ಮನೆಗೆ ಹೋಗಿ ,ತಾನೂ ಒಬ್ಬ ಗೋಸಾವಿಯ ತಲೆಯನ್ನು ಹೊಡೆದು ಆ ಮಣಿಭದ್ರನಂತೆ ಶ್ರೀಮಂತನಾಗಬೇಕೆಂದು ಯೋಚಿಸಿದನು .ಹೀಗೆ ಯೋಚನೆ ಮಾಡಿ ಅವನು ಆ ಊರಲ್ಲಿರುವ ಗೋಸಾವಿಗಳನ್ನು ಕಂಡು ನಮಸ್ಕಾರ ಮಾಡಿ ,ಅತ್ಯಂತ ವಿನಯದಿಂದ ,ತಾವು ಸರ್ವರಿಗೆ ಜ್ನ್ಯಾನವನ್ನು ಉಪದೇಶಿಸಿ ಮೋಕ್ಷಮಾರ್ಗವನ್ನು ತೋರಿಸುತ್ತೀರಿ .ಎಲ್ಲರ ಮನೆಗೂ ಹೋಗಿ ಭಿಕ್ಷಾಟನ ಮಾಡುವುದು ತಮ್ಮ ಧರ್ಮವಾಗಿದೆ.ಆದ್ದರಿಂದ ತಾವು ಅನುಗ್ರಹ ಮಾಡಿ ಇವತ್ತು ನನ್ನ ಮನೆಗೆ ದಯಮಾಡಿಸಿ ನನ್ನ ಆತಿಥ್ಯವನ್ನು ಸ್ವೀಕರಿಸಿ ,ನನ್ನನ್ನು ಉದ್ಧರಿಸಬೇಕು .ತಾವೆಲ್ಲರೂ ದಯಮಾಡಿಸಿ್ದಾರೆ ನನ್ನ ಭಾಗ್ಯಕ್ಕೆ ಎಣೆಯಿಲ್ಲವೆಂದು ಭಾವಿಸುವೆನು " ಎಂದು ಬಿನ್ನವಿಸಿಕೊಂಡನು .ಆ ಗೋಸಾವಿಗಳಲ್ಲಿ ಹಿರಿಯನಾದ ಒಬ್ಬನು ," ಎಲೆ ,ನಾವಿಕನೇ,ನಿನ್ನ ಜಾತಿಯಲ್ಲಿಯೇ ಇಂಥ ಭಿಕ್ಷಾಟನ ಮಾಡುವವರು ಇದ್ದಾರೆ .ಅವರನ್ನೇ ನೀವು ಯಾವಾಗಲೂ ಆಹ್ವಾನಿಸಿ,ಆತಿಥ್ಯವನ್ನು ಮಾಡುತ್ತೀರಿ .ಹಾಗೆಯೇ ನೀನು ಮಾಡುವುದನ್ನು ಬಿಟ್ಟು ನಮ್ಮನ್ನು ಏಕೆ ಆಮಂತ್ರಿಸುವೆ ?" ಎಂದು ಕೇಳಿದನು .ಆ ಮಾತಿಗೆ ನಾವಲಿಗನು,"ತಮ್ಮ ಧರ್ಮೋಪದೇಶವನ್ನು ನಾನು ಎಷ್ಟೋ ಸಾರಿ ಕೇಳಿ ಮೆಚ್ಚಿದ್ದೇನೆ .ತಮಗೆ ಸನ್ಮಾನವನ್ನು ಮಾಡಬೇಕೆಂದು ನಾನು ಬಹಳ ದಿನಗಳಿಂದ ಆಪೇಕ್ಷೆಯಿಟ್ಟುಕೊಂಡಿದ್ದೇನೆ .ಆದ್ದರಿಂದ ನನ್ನ ಪ್ರಾರ್ಥನೆಯನ್ನು ಮನ್ನಿಸಿ,ತಾವುಗಳು ಅಗತ್ಯವಾಗಿ ನನ್ನ ಮನೆಯವರೆಗೆ ಆಗಮಿಸುವ ಕೃಪೆಮಾಡಬೇಕು " ಎಂದು ಮತ್ತೊಮ್ಮೆ ಪ್ರಾರ್ಥಿಸಿದನು .ಕ್ಷೌರಕನ ಈ ಪ್ರಾರ್ಥನೆಯನ್ನು ಮನ್ನಿಸಿ ಹಿರಿಯ ಗೋಸಾವಿ ಅವನೊಡನೆ ಹೊರಟನು .ಅವನ ಹಿಂದೆಯೇ ಉಳಿದವರೂ ಹೊರಟರು .ಆ ನಾವಲಿಗನು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ,ಒಂದು ಸ್ಥಳದಲ್ಲಿ ಆಸನವನ್ನು ಹಾಕಿ ಕುಳ್ಳಿರಿಸಿದನು .ಹೀಗೆ ಅವರನ್ನು ಕುಳ್ಳಿರಿಸಿ , ನಾವಲಿಗನು ಮನೆಯೊಳಗೆ ಹೋಗಿ ,ಒಂದು ದೊಣ್ಣೆಯನ್ನು ತೆಗೆದುಕೊಂಡು ಬಂದು ಆ ಹಿರಿಯ ಗೋಸಾವಿಯ ಮಸ್ತಕದ ಮೇಲೆ ,ದೊಣ್ಣೆಯಿಂದ ಬಲವಾಗಿ ಪ್ರಹಾರ ಮಾಡಿದನು .ಆಗ ಗೋಸಾವಿ ಅಯ್ಯೋ ,ಎಂದು ಕಿರಿಚಿಕೊಂಡು ನೆಲಕ್ಕುರುಳಿ ಮೂರ್ಛಿತನಾದನು.. ಇದನ್ನು ನೋಡಿ ಅವನ ಸಂಗಡ ಬಂದ ಗೋಸಾವಿಗಳೆಲ್ಲರೂ ಕೋಲಾಹಲ ನನ್ನೆ ಬ್ಚಿ ಸಿದರು. ಈ ವಾರ್ತೆ, ಆ ಪಟ್ಟಿ ಣದ ಅಧಿಕಾರಿಗೆ ತಲಸಿತು. ಅವನು ಭಟರನ್ನೂ ನಾನಲಿಗನನ್ನೂ ಹೆಡಮುರಿಗೆ ಕಟ್ಟ ಕರೆದುಕೊಂಡು ಬರು ವಂತೆ ಆಜ್ಞಾಪಿಸಿದನು. ಭಟರು ಕ್ಸರಕನನ್ನು BR ಹೆಡಮುರಿಗೆ ಕಟ್ಟಿ ಕರೆದುಕೊಂಡು ಹೋದರು. ನ್ಯಾಯಾಧಿಕಾರಿ ನಾವಲಿಗನನ್ನು ಕುರಿತು "ನೀನು ಗೋಸಾವಿಯನ್ನೇಕೆ ಹೊಡೆದೆ?” ಎಂದು ಪ್ರಶ್ನಿಸಿದನು. ಅದಕ್ಕೆ ನಾಪಿತನು «ಮಹಾಸ್ವಾಮಿ, ನಾನು ಹೀಗೆ ನನ್ನ ಬುದ್ಧಿ ಯಿಂದ ಮಾಡ ಲಿಲ್ಲ. ಈ ಪಟ್ಟಿ ಣದಲ್ಲಿರುವ ಮಣಿಭದ್ರನೆಂಬ ಹರದನು ಮಾಡಿದುದನ್ನು ನೋಡಿ, ನಾನೂ ಹಾಗೆ ಮಾಡಿದೆನು'' ಎಂದು ಉತ್ತರ ಕೊಟ್ಟನು. ನ್ಯಾಯಾಧಿಕಾರಿ ನಾಪಿತನ ಮಾತನ್ನು ಕೇಳಿ, ಆ ಮಣಿಭದ್ರನನ್ನು ತನ್ನ ಆಸ್ಚಾ ನಕ್ಕೆ ಕರೆಸಿ ವಿಚಾರಿಸಿದನು. ಮಣಿಭದ್ರ ನು ನ್ಯಾಯಾಧೀಶನ ನೀಡೆ ಯಾನ ಮಾತನ್ನೂ ಆಡದೆ ತನಗೆ ಏನೂ ಗೊತ್ತಿಲ್ಲದಂತೆ ಸುಮ್ಮನೆ ನಿಂತು ಕೊಂಡಿದ್ದನು. ನ್ಯಾಯಾಧೀಶನು ಆ ಹರದನಲ್ಲಿ. ಯಾವ ದೋಷವನ್ನೂ ಕಾಣದೆ, ಇದು ಈ ನಾವಲಿಗನ ಕುಕರ್ಮವಿರಬೇಕೆಂದು ನಿರ್ಧರಿಸಿ, ಆ ಕ್ಸೌರಕನನ್ನು ಶೂಲಕ್ಕೆ ಹಾಕಬೇಕೆಂದು ಆಜ್ಞಾ ಪಿಸಿ, ಅವನನ್ನು ವಧಾ ಸ್ಥಾ ಕಕ್ಕೆ ಕಳಿಸಿಬಿಟ್ಟ ನು ಆ ಮೇಲೆ ನ್ಯಾಯಾಧೀಶನು ಮಣಿಭದ್ರ ನನ್ನು ಉದ್ದೇಶಿಸಿ, ಕುಪರೀಕ್ಷಣದಿಂದ ಒಬ್ಬ ಬ್ರಾಹ್ಮಣನ ಪತ್ನಿ ಹೇಗೆ ಸಂತಾ ಸಕ್ಕೆಗುರಿಯಾದಳು ಎಂಬ ಪೂರ್ವನಿದರ್ಶನವನ್ನು ಪ್ರಸ್ತಾಸಿಸಿದನು. «ಅದು ಹೇಗೆ ಮಹಾಸ್ವಾಮೀ, ದಯವಿಟ್ಟು ವಿವರಿಸಬೇಕು” ಎಂದು ಮಣಿಭದ್ರನು ಪ್ರಾರ್ಥಿಸಲು ಆ ನ್ಯಾಯಾಧಿಕಾರಿ ಹೀಗೆ ಹೇಳಿದನು.

ಕಥೆ: ಉಜ್ಜ ಯನಿಯೆಂಬ ಸಟ್ಟಣದಲ್ಲಿ ದೇವರರ್ಮನೆಂಬ ಒಬ್ಬ ಬ್ರಾ ಹ್ಮಣನು ಇರುತ್ತಿದ್ದನು. ಆತನ ಪತ್ತಿ ಪುತ್ರ ಸಂತಾನನಿಲ್ಲದ್ದ ರಿಂದ ಒಂದು ಮುಂಗುಲಿಯನ್ನು ಮಗನಂತೆ ಸಾಕಿಕೊಂಡಿದ್ದಳು. ಹೀಗೆ ಇರು ಪ್ರಿರುವಾಗ, ಆ ಬ್ರಾಹ್ಮಣನ ಪತ್ನಿಗೆ ಪುತ್ರೋತ್ಸವವಾಯಿತು. ಒಮ್ಮೆ ಅವಳು ತನ್ನ ಶಿಶುವನ್ನು ತೊಟ್ಟಿಲಲ್ಲಿ ಮಲಗಿಸಿ ಗಂಡನನ್ನು ಕರೆದು “ ಸ್ವಾಮೀ ನಾನು ನೀರು ತರುವುದಕ್ಕೆ ಹೋಗುತ್ತೀನೆ. ತೊಟ್ಟಿಲಲ್ಲಿ ಕೂಸು ಮಲಗಿದೆ; ನೋಡಿಕೊಳ್ಳ ಬೇಕು. ಮುಂಗುಲಿ ಕೂಸನ್ನು ಗಾಸಿ ಮಾಡೀತು” ಎಂದು ತನ್ನ ಪತಿಗೆ ಎಚ್ಚರವಾಗಿರುವಂತೆ ಹೇಳಿ ಹೊರಟು ಹೋದಳು. ಆ ಸಮಯದಲ್ಲಿ ಬ್ರಾಹ್ಮಣನು ಶಿಶು ನಿದ್ದೆ ಹೋಗುತ್ತಿರು ವುದನ್ನು ಕಂಡು ಯಾವುದೋ ಒಂದು ಕಾರ್ಯಕ್ಕಾಗಿ ಹೊರಗೆ ಹೋದನು, ಇವನು ಹೋದಕೂಡಲೈ ಒಂದು ಕೃಷ್ಣಸರ್ಪವು ಬಂದು ತೊಟ್ಟಿ ಲ ಕಡೆಗೆ ಹೋಗತೊಡಗಿತು. ಅದನ್ನು ಈ ಮುಂಗುಲಿ ನೋಡಿ, ತತ್‌ಕ್ಷಣವೇ ಆ ಸರ್ಪವನ್ನು ಎರಡು ತುಂಡು ಮಾಡಿಬಿಟ್ಟಿತು. ಹಾವನ್ನು ಕೊಂದು ಮಗು ವನ್ನು ಉಳಿಸಿದ ತನ್ನ ಸಾಹಸವನ್ನು ಯಜಮಾನನಿಗೆ ತೋರಿಸಬೇಕೆಂದು ಆ ಮುಂಗುಲಿ ಹೊರಗೆ ಬರುವುದಕ್ಕೂ ಆ ಬ್ರಾಹ್ಮಣನ ಪತ್ನಿ ನೀರಿನ ಕೊಡ ವನ್ನು ಹೊತ್ತುಕೊಂಡು ಒಳಗೆ ಬರುವುದಕ್ಕೂ ಸರಿಹೋಯಿತು. ಆಗ ಅವಳು ಮುಂಗುಲಿಯ ಮುಖವು ರಕ್ತಮಯವಾದದ್ದನ್ನು ನೋಡಿ, ಇದು ತನ್ನ ಶಿಶುವನ್ನು ಕೊಂದಿರಬೇಕೆಂದು ಆಲೋಚಿಸಿ, ತನ್ನ ತಲೆಯಮೇಲಿನ ನೀರ ಕೊಡವನ್ನು ಮುಂಗುಲಿಯ ಮೇಲೆ ಎಸೆದುಬಿಟ್ಟಳು, ಮುಂಗುಲಿ ಅಲ್ಲಿಯೇ ಸತ್ತುಹೋಯಿತು, ಆ ಮೇಲೆ ಅವಳು ಮನೆಯೊಳಗೆ ಹೋಗಿನೋಡುತ್ತಾಳೆ ತೊಟ್ಟಿ ಲಲ್ಲಿ ಕೂಸು ಮಲಗಿ ಸುಖವಾಗಿ ನಿದ್ದೆ ಹೋಗುತ್ತಿದೆ. ಹತ್ತಿರವೇ ಒಂದು ಸರ್ಪವು ಎರಡು ತುಂಡಾಗಿ ಬಿದ್ದಿದೆ. ಈ ದೃಶ್ಯವನ್ನು ಕಂಡು, ಅವಳು ಬಹಳ ವ್ಯಸನಪಟ್ಟು “ ನಾನು ನಿಚಾರವಿಲ್ಲದೆ ಮುಂಗುಲಿ ಯನ್ನು ವ್ಯರ್ಥವಾಗಿ ಕೊಂದೆನಲ್ಲಾ !'' ಎಂದು ತೋಕಿಸುವುದಕ್ಕಾರಂಭಿಸಿ ದಳು. ಅಷ್ಟರಲ್ಲಿ ಹೊರಗಿನಿಂದ ಅವಳ ಗಂಡನು ಬಂದು ರೋದಿಸುವುದಕ್ಕೆ ಕಾರಣವೇನೆಂದು ಕೇಳಿದನು. ಅವಳು “.ನೀನು ಮಗುವನ್ನು ನೋಡಿ ಕೊಂಡಿರು” ಎಂದು ನಾನು ಹೇಳಿದ್ದರೂ ಯಾವುದೋ ಕಾರ್ಯಲೋಭ ದಿಂದ ಹೊರಗೆ ಹೊರಟುಹೋದೆ. ಅದರ ಪರಿಣಾಮವಾಗಿ ಈ ಮುಂಗು ಲಿಗೆ ಮರಣವೊದಗಿತು. ಅತಿ ಲೋಭವುಳ್ಳ ಪುರುಷನ ಮಸ್ತಕದ ಮೇಲೆ ಚಕ್ರವು ತಿರುಗುತ್ತಿರುತ್ತದಂತೆ” ಎಂದು ನುಡಿದಳು. ತನ್ನ ಸತಿಯ ಮಾತನ್ನು ಕೇಳಿ, ಅವಳ ಅಭಿಪ್ರಾಯನೇನೆಂದು ಆ ಬ್ರಾಹ್ಮಣನು ಪ್ರಶ್ನಿಸಿ ದನು. ಅದಕ್ಕೆ ಅವಳು ಹೀಗೆ ಹೇಳಿದಳು.

ಕಥೆಃ- ಅಮರಾವತಿಯೆಂಬ ಪಟ್ಟಣದಲ್ಲಿ ನಾಲ್ಕುಮಂದಿ ಬ್ರಾಹ್ಮ ಣರು ಅನೋನ್ಯನೈ ತ್ರಿಯಿಂದಿದ್ದರು, ಅವರು ಒಂದು ದಿನ ತಮ್ಮೊಳಗೆ ಆಲೋಚಿಸುತ್ತ “ ನಾವು ದಾರಿದ್ರ್ಯದಿಂದ ಬಹಳ ಕಷ್ಟಪಡುತ್ತಿದ್ದೇವೆ. ಹೇಗಾದರೂ ಮಾಡಿ ಧನವನ್ನು ಸಂಪಾದಿಸಬೇಕು. ಈ ಸ್ಥಳದಲ್ಲಿರುವುದ ರಿಂದ ನಮಗೆ ಧನ ಸಂಪಾದಿಸಲು ಸಾಧ್ಯವಿಲ್ಲ ಆದ್ದರಿಂದ ಬೇರೆಯ ಸ್ಥಳಕ್ಕೆ ಹೋಗಿ, ಧನಾರ್ಜನೆ ಮಾಡಬೇಕು. ದರಿದ್ರನಿಗೆ ವನವಾಸದ ಹೊರತು ಸುಖನೆಲ್ಲಿಯದು? ಈಗ ನಾವು ನಾಲ್ವರೂ ದೇಶಾಂತರಕ್ಕೆ ಹೋಗೋಣ?” ಎಂದು ನಿರ್ಧರಿಸಿಕೊಂಡು ಹೊರಟರು. ಹೀಗೆಯೇ ಈ ನಾಲ್ವರೂ ಹೋಗುತ್ತಿರುವಾಗ್ಯ ದಾರಿಯಲ್ಲಿ ಸಮೀಪದಲ್ಲಿಯೇ ಭೈರವಾ ನಂದನೆಂಬ ಯೋಗೀಶ್ವರನಿರುವನೆಂಬ ಸಂಗತಿಯನ್ನು ಅವರು ತಿಳಿದು ಕೊಂಡರು. ತಿಳಿದುಕೊಂಡು ಅವನ ಮಠಕ್ಕೆ ಹೋಗಿ, ಯೋಗೀಶ್ವರನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಆತನ ಮಹಿಮೆಯನ್ನು ಕೊಂಡಾಡಿದರು. ಇವರ ಸ್ತುತಿಗೆ ಸಂತುಷ್ಟನಾಗಿ, ಆ ಯತಿ ಇವರನ್ನು ಉಪಚರಿಸಿ "ನೀವು ಇಲ್ಲಿಗೆ ಏಕೆ ಬಂದಿರಿ?'' ಎಂದು ವಿಚಾರಿಸಿದನು. ಅದಕ್ಕೆ ಅನರು “ಮಹಾ ಸ್ವಾಮೀ, ನಾವು ಬಡತನದಿಂದ ಬಳಲುತ್ತಿದ್ದೇವೆ. ಈಗ ದ್ರವ್ಯದ ಅಪೇ ಕ್ಷೆಯಿಂದ ಊರನ್ನು ಬಿಟ್ಟು ಸಂಚಾರ ಹೊರಟದ್ದೇವೆ. ಆದರೇನು? ಆ ದ್ರವ್ಯವು ನಮಗೆ ಹೇಗೆ ಸಿಕ್ಕೀತು? ದ್ರವ್ಯ ಸಂಪಾದನೆಗಾಗಿ ನಾವು ಯಾವ ಉಪಾಯ ಮಾಡಬೇಕೋ ತಿಳಿಯದಾಗಿಹೆ, ಈಗ ನಾವು ತಮ್ಮ ಸನ್ನಿಧಿಯಲ್ಲಿ ಬಂದಿದ್ದೇವೆ. ನಮ್ಮ ಮೇಲೆ ತಾವು ದಯತೋರಿಸಬೇಕು ” ಎಂದು ಯತಿಯನ್ನು ಪ್ರಾರ್ಥಿಸಿದರು, ಆ ಯತಿ ಈ ನಾಲ್ವರ ದೀನಾ ವಸ್ಥೆ ಯನ್ನು ನೋಡಿ ಮರುಕಪಟ್ಟನು. ಆಗ ಅವನು ತನಗೆ ಗೊತ್ತಿದ್ದ ಚತುಃಷಸ್ಟಿ ನಿದ್ಯಾಬಲದಿಂದ ನಾಲ್ಕು ಬತ್ತಿಗಳನ್ನು ನಿರ್ಮಿಸಿ, ಒಬ್ಬೊಬ್ಬನ ತಲೆಯ ಮೇಲೆ ಒಂದೊಂದು ಬತ್ತಿಯನ್ನು ಇಟ್ಟನು. ಹೀಗೆ ಬತ್ತಿಯನ್ನು ತಲೆಯ ಮೇಲೆ ಇಟ್ಟು, ಅನಂತರ ಅವನು ಅವರನ್ನು ದ್ದೇಶಿಸ್ಕಿ “ ನೀವೆ ಲ್ಲರೂ ಹಿಮಾಲಯ ಪರ್ವತದ ಮಾರ್ಗವನ್ನು ಹಿಡಿದು ಉತ್ತರಕ್ಕೆ ಹೋಗಿರಿ. ಹೀಗೆ ಹೋಗುತ್ತಿರುವಾಗ ವೊದಲು ಯಾರ ತಖೆಯ ಮೇಲಿಂದ ಬತ್ತಿ ಎಲ್ಲಿ ಬೀಳುವುದೋ, ಆ ಸ್ಥಳದಲ್ಲಿ ಭೂಮಿಯನ್ನು ಅಗೆದು ನೋಡಿ. ಅದರಲ್ಲಿ ಕಂಡ ಪದಾರ್ಥನನ್ನು ಯಥೇಚ್ಛವಾಗಿ ತೆಗೆದುಕೊಂಡು ಹೋಗಿ '' ಎಂದು ಅನುಗ್ರಹಿಸಿದನು. ಆ ನಾಲ್ವರು ಬ್ರಾಹ್ಮಣರು ಮುನೀಶ್ವರನ ಅಸ್ಸಣೆಯನ್ನು ಪಡೆದು ಅಲ್ಲಿಂದ ಅವನು ಆಜ್ಞಾ ನಿಸಿದಂತೆ ಉತ್ತರದ ಕಡೆಗೆ ಹೊರಟಿರು, ಹೀಗೆಯೇ ಮಾರ್ಗಕ್ರಮಣಮಾಡುತ್ತ ಹೋಗುತ್ತಿರುವಾಗ, ಒಬ್ಬ ಬ್ರಾಹ್ಮಣನ ತಲೆಯ ಮೇಲಿನ ಬತ್ತಿ ಕೆಳಗೆ ಬಿದ್ದಿತು. ಅನನು ಕೂಡಲೆ ನೆಲನನ್ನು ಅಗೆದು ನೊಡಲಾಗಿ ತಾಮ್ರದ ಗಣಿಯೊಂದು ಹೊರ ಬತು. ಅದನ್ನು ಕಂಡು ಅವನು ತನ್ನ ಸ್ನೇಹಿತರನ್ನು ಕರೆದು “ ಎಲ್ಫೆ, ಸ್ನೇಹಿತರೇ! ನೀವು ನಿಮಗೆ ಬೇಕಾದಷ್ಟು ತಾಮ್ರವನ್ನು ತೆಗೆದುಕೊಳ್ಳಿರಿ” ಎಂದನು. ಅದಕ್ಕೆ ಆ ಮೂವರು ಬ್ರಾಹ್ಮಣರು “ಎಲೇ, ಮೂರ್ಯನೇ? ಈ ತಾಮ್ರವನ್ನು ಎಷ್ಟು ತೆಗೆದುಕೊಂಡರೂ ನಮ್ಮ ಬಡತನವು ಹಿಂಗುವುಜೀ? ನಾವು ಮುಂದಕ್ಕೆ ಹೋಗುತ್ತೇವೆ. ನೀನು ಬೇಕಾದರೆ ಅದನ್ನು ತೆಗೆದು ಕೊಂಡು ಹೋಗು'' ಎಂದು ಹೇಳಿ ಮುಂದಕ್ಕೆ ಹೊರಟುಹೋದರು. ಆ ಬ್ರಾಹ್ಮಣನಾದರೋ, ತನ್ನ ಸಾಮರ್ಥ್ಯವಿದ್ದಷ್ಟು ತಾಮ್ರವನ್ನು ತೆಗೆದು ಕೊಂಡು ತನ್ನ ಮನೆಗೆ ಹಿಂದಿರುಗಿದನು. ಇತ್ತ ಈ ಮೂವರು ಬ್ರಾಹ್ಮಣರು ಮಾರ್ಗಹಿಡಿದು ಮುಂದಕ್ಕೆ ಹೋಗುತ್ತಿರುವಾಗ, ದಾರಿಯಲ್ಲಿ ಎರಡನೆಯವನ ತಲೆಯ ಮೇಲಿನ ಬತ್ತಿ ಬಿದ್ದಿತು. ಬತ್ತಿ ಬಿದ್ದ ಕೂಡಲೆ, ಅವನು ಆ ಸ್ಥಳವನ್ನು ಅಗೆದು ನೋಡಿ ದನು, ಅಲ್ಲಿ ಅಪಾರವಾದ ಬೆಳ್ಳಿ ಗೋಚರವಾಯಿತು. ಅದನ್ನು ಕಂಡು ಅವನು ತನ್ನ ಇಬ್ಬರು ಸ್ನೇಹಿತರಿಗೆ “ ನಿಮಗೆ ಬೇಕಾಗುವಷ್ಟು ಬೆಳ್ಳಿ ಯನ್ನು ಹೊತ್ತುಕೊಳ್ಳಿರಿ ಹೋಗೋಣ '' ಎಂದನು, ಅದಕ್ಕೆ ಅವರು " ಏನಯ್ಯಾ, ಇನ್ನು ಮೇಲೆ ಮುಂದೆ ನಮಗೆ ಬಂಗಾರ ಸಿಕ್ಕೀತು. ಈ ಬೆಳ್ಳಿ ಯಿಂದೇನಾಗುವುದು? ನಾವು ಮುಂದಕ್ಕೆ ಹೋಗುತ್ತೇವೆ ” ಎಂದು ಹೇಳಿ ಮುಂದೆ ಸಾಗಿದರು. ಈ ಎರಡನೆಯ ಬ್ರಾಹ್ಮಣನು ತನಗೆ ಸಾಧ್ಯ ವಿರುವಷ್ಟು ಬೆಳ್ಳಿಯನ್ನು ಹೊತ್ತುಕೊಂಡು ತಿರುಗಿ ತನ್ನ ಮನೆಯ ಕಡೆ ಹೊರಟನು, ಆ ಇಬ್ಬರು ಬ್ರಾಹ್ಮಣರು ಮುಂದುಮುಂದಕ್ಕೆ ಹೋಗುತ್ತಿರಲು, ಮೂರನೆಯವನ ತಬೆಯ ಮೇಲಿನ ಬತ್ತಿಯೂ ಬಿದ್ದಿತು. ಆ ಸ್ಥಳವನ್ನು ತೋಡಿದಾಗ, ಚಿನ್ನದ ಗಣಿ ಕಂಡುಬಂತು. ಅವನು ಬಹಳ ಸಂತೋಷಪಟ್ಟು, ತನ್ನ ಮಿತ್ರನನ್ನು ಕರೆದು "ನಮಗೆ ಬೇಕಾಗುವಷ್ಟು ಚಿನ್ನವನ್ನು ತೆಗೆದುಕೊಂಡು ಹೋಗೋಣ” ಎಂದನು. ಅದಕ್ಕೆ ನಾಲ್ಕನೆಯವನು "ಏಳೆಲೇ, ಮಂದಮತಿಯೇ! ಈ ಚಿನ್ನಕ್ಕಿಂತಲೂ ಶ್ರೇಷ್ಠವಾದುದು ರತ್ನ. ನನಗೆ ಆ ರತ್ನದ ಗಣಿ ಸಿಕ್ಕಬಹುದೇನು, ಆದ್ದರಿಂದ ನನಗೆ ಈ ಚಿನ್ನ ಬೇಡ. ನೀನು ಬೇಕಾದರೆ ತೆಗೆದುಕೋ" ಎಂದು ಹೇಳಿ ಮುಂದಕ್ಕೆ ಹೋಗಲು ಸಿದ್ಧನಾದನು. ಅವನ ಮಾತುಗಳನ್ನು ಕೇಳಿ ಮೂರನೆಯ ಬ್ರಾಹ್ಮಣನು “ಒಳ್ಳೆಯದು. ನೀನು ಹಾಗೆಯೇ ಮಾಡು. ನಾನು ಈ ಚಿನ್ನವನ್ನು ತೆಗೆದುಕೊಂಡು ನೀನು ಬರುವವರೆಗೆ ನಿನ್ನ ಮಾರ್ಗ ನಿರೀಕ್ಷಿಸುತ್ತ ಇಲ್ಲಿಯೇ ಕುಳಿತಿರುತ್ತೇನೆ. ಆದ್ದರಿಂದ ನೀನು ಬೇಗನೇ ಹೋಗಿಬರಬೇಕು” ಎಂದನು. ಅದಕ್ಕೆ ಆ ನಾಲ್ಕನೆಯ ಬ್ರಾಹ್ಮಣನು ಒಪ್ಪಿಕೊಂಡು ಮುಂದೆ ನಡೆದನು. ಹೀಗೆಯೇ, ಮಾರ್ಗವನ್ನು ಅತಿಕ್ರಮಿಸುತ್ತ ಅವನು ಹೋಗುತ್ತಿರುವಾಗ, ಅವನಿಗೆ ಬಹಳ ಬಳಲಿಕೆಯಾಯಿತು. ಬಿಸಿಲಿನ ತಾಪದಿಂದ ಬಾಯಾರಿಕೆಯಿಂದ ಬಡದಿ, ಬೆಂಡಾಗಿ ಹೋದನು. ಅವನಿಗೆ ನೀರಡಿಕೆಯಿಂದ ಮುಂದೆ ದಾರಿಯೇ ಕಾಣದೆ, ಆ ಯತಿ ಹೇಳಿದ ಮಾರ್ಗವನ್ನು ಬಿಟ್ಟು, ತಬ್ಬಿಬ್ಬಾಗಿ ಅಡ್ಡದಾರಿಯನ್ನು ಹಿಡಿದನು. ಅದು ಅವನನ್ನು ದೊಡ್ಡ ಅರಣ್ಯದೊಳಗೆ ಕರೆದುಕೊಂಡು ಹೋಯಿತು. ಹಾಗೆಯೇ ಅವನು ಮುಂದಕ್ಕೆ ಹೋಗುತ್ತಿರಲು, ಅವನು ಒಬ್ಬ ಮನುಷ್ಯನ ತಲೆಯ ಮೇಲೆ ಚಕ್ರವೊಂದು ತಿರುಗುತ್ತಿರುವುದನ್ನು ಕಂಡನು. ಆ ಮನುಷ್ಯನ ಸರ್ವಾಂಗವೂ ರಕ್ತಮಯವಾಗಿತ್ತು. ಆ ಬ್ರಾಹ್ಮಣನು ಆ ಮನುಷ್ಯನ ಹತ್ತಿರ ಹೋಗಿ "ನೀನು ಯಾರು? ನಿನ್ನ ಮಸ್ತಕದ ಮೇಲೆ ಈ ಚಕ್ರವು ಏನು ಕಾರಣ ತಿರುಗುತ್ತಿದೆ?" ಎಂದು ಕೇಳಿದ ಕೂಡಲೆ, ಆ ಮನುಷ್ಯನ ಮಸ್ತಕದ ಮೇಲಿನ ಚಕ್ರವು ಈ ಬ್ರಾಹ್ಮಣನ ಮಸ್ತಕದ ಮೇಲೆ ಬಂದು ಕುಳಿತಿತು. ಬ್ರಾಹ್ಮಣನಿಗೆ ತುಂಬಾ ಬಿಗೆಯಾಯಿತು. ಅವನು "ಈ ಚಕ್ರವು ನನ್ನ ತಲೆಯ ಮೇಲೆ ಏಕೆ ಕುಳಿತಿತು?" ಎಂದು ಆ ಮನುಷ್ಯನನ್ನು ಕೇಳಿದನು. "ಅಯ್ಯಾ! ಮಹಾಪುರುಷನೇ! ಇಷ್ಟು ದಿನ ನಾನು ಈ ಅವಸ್ಥೆಯನ್ನು ಅನುಭವಿಸುತ್ತಿದ್ದೆ. ನನಗೆ ಒಂದು ನಿರ್ದಿಷ್ಟ ಕಾಲದವರೆಗೆ ಈ ಚಕ್ರವನ್ನು ಧರಿಸಿರಬೇಕೆಂಬ ಆದೇಶವಿತ್ತು. ನಾನು ನಿನ್ನಂತೆಯೇ ಆ ಸಿದ್ಧ 'ಬತ್ತಿ'ಯನ್ನು ಹೊತ್ತುಕೊಂಡು ಜಮತ್ತೊಬ್ಬನು ಬಂದು ನನ್ನನ್ನು ಪ್ರಶ್ನಿಸುವವರೆಗೆ ಈ ಚಕ್ರವು ನನ್ನ ತಲೆಯ ಮೇಲೆ ಇರಬೇಕು ಎಂಬ ಶಾಪವಿತ್ತು. ಆ 'ಪ್ರಶ್ನೆಯನ್ನು ಕೇಳಿದ ಕೂಡಲೆ, ಈ ಚಕ್ರವು ಅವನ ತಲೆಯ ಮೇಲೆ ಹೋಗುವುದೆಂಬ ನಿರ್ದೇಶನವಿತ್ತು. ಈಗ ನೀನು ಪ್ರಶ್ನೆ ಕೇಳಿರುವುದರಿಂದ ಈ ಚಕ್ರವು ನಿನ್ನ ತಲೆಯ ಮೇಲೆ ಬಂದಿದೆ. ನಾನಾದರೋ ಈ ಚಕ್ರಬಾಧೆಯಿಂದ ಮುಕ್ತನಾದೆನು" ಎಂದು ಆ ಮನುಷ್ಯನು ಹೇಳಿದನು. ಆ ಮಾತನ್ನು ಕೇಳಿ ಈ ನವೀನ ಚಕ್ರಧಾರಿ "ನೀನು ಈ ಸ್ಥಳದಲ್ಲಿ ಎಷ್ಟು ದಿನಗಳಿಂದ ಈ ಚಕ್ರವನ್ನು ಧರಿಸಿಕೊಂಡು ಇದ್ದೆ? ನಿನ್ನ ಆಹಾರ, ನೀರು ಎಲ್ಲಿಂದ ಪ್ರಾಪ್ತವಾಗುತ್ತಿತ್ತು?" ಎಂದು ಕೇಳಿದನು. ಅದಕ್ಕೆ ಆ ಪೂರ್ವ ಚಕ್ರಧಾರನು "ನಾನಿದ್ದದ್ದು ಎಷ್ಟು ಕಾಲದಿಂದಲೋ, ರಾಮರಾಜ್ಯದ ಕಾಲಕ್ಕೆ. ನನಗೆ ದಾರಿದ್ರ್ಯವಿದ್ದಂತೆ ಈಗ ಸ್ವಲ್ಪ ಸ್ವಲ್ಪ ನೆನಪಾಗುತ್ತಿದೆ. ಆ ದಾರಿದ್ರ್ಯವನ್ನು ಸಹಿಸದಂತಾಗಿ ನಾನು ನಿನ್ನ ಹಾಗೆಯೇ ಸಿದ್ಧ 'ಬತ್ತಿ'ಯೊಂದನ್ನು ಹೊತ್ತುಕೊಂಡು ಬಂದು ಈ ಚಕ್ರದೊಳಗೆ ಸಿಕ್ಕಿಬಿದ್ದೆನು. ಇಲ್ಲಿಯ ಕಷ್ಟದಿಂದ ನನಗೆ ಹಸಿವೂ, ಬಾಯಾರಿಕೆಯೂ ಕಾಣುತ್ತಿಲ್ಲ. ಈ ಸ್ಥಳಕ್ಕೆ ಬಂದವನು ದುಃಖವನ್ನೇ ಅನುಭವಿಸಬೇಕಾಗುತ್ತದೆ, ಬೇರೆ ಉಪಾಯವಿಲ್ಲ. ಈ ಸ್ಥಳದಲ್ಲಿ ಅಪರಿಮಿತವಾದ ಧನವಿದೆ, ಅದನ್ನು ಯಾರೂ ತೆಗೆದುಕೊಂಡುಹೋಗಬಾರದೆಂಬ ಉದ್ದೇಶದಿಂದ ಕುಬೇರನು ಹೀಗೆ ಏರ್ಪಡಿಸಿದ್ದಾನೆ. ಇನ್ನು ಮೇಲೆ ನನಗೆ ಇಲ್ಲಿರಲು ಸಾಧ್ಯವಿಲ್ಲ. ಹೊರಟುಹೋಗುತ್ತೇನೆ” ಎಂದು ಹೇಳಿ ಅಲ್ಲಿಂದ ಕಣ್ಮರೆಯಾದನು. ಇತ್ತ ಸುವರ್ಣ ಸಿಕ್ಕಿದ ಆ ಮೂರನೆಯ ಬ್ರಾಹ್ಮಣನು ತನ್ನ ಸ್ನೇಹಿತನು ಬರಲು ತಡವಾದುದನ್ನು ಕಂಡು ಬೇಸತ್ತು ಅವನನ್ನು ಹುಡು ಕುತ್ತ ಮುಂದೆ ಮುಂದೆ ನಡೆದನು. ಅವನು ಎಷ್ಟೋ ದೂರ ಹೋದ ಮೇಲೆ, ಅರಣ್ಯದಲ್ಲಿ ಆ ನಾಲ್ಕನೆಯವನ ತಲೆಯ ಮೇಲೆ ಚಕ್ರ ತಿರುಗುವುದನ್ನು ಕಂಡು ಅವನ ಸಮೀಪಕ್ಕೆ ಬಂದು "ಎಲೇ, ಮಿತ್ರನೇ! ಇದು ಏನು?" ಎಂದು ವಿಚಾರಿಸಿದನು. ಅದಕ್ಕೆ ಆ ಚಕ್ರಧರನು "ಅಯ್ಯಾ, ಸ್ನೇಹಿತನೇ! ಇದು ಅತಿರೋಹ ಮಾಡಿದುದರ ಫಲ" ಎಂದು ಹೇಳಿದನು. ಅದನ್ನು ಕೇಳಿ ಆ ಸುವರ್ಣಸಿದ್ದಿ ಬ್ರಾಹ್ಮಣನು, ಮತಿ ಹೀನನಿಗೆ ಸ್ವಲ್ಪ ವಿದ್ಯೆಯಿಂದ ಗರ್ವವುಂಟಾಗಿ, ಅವನು ಎರಡನೆಯವರ ಬುದ್ಧಿವಾದಕ್ಕೆ ಕಿವಿಗೊಡದೆ, ಸಿಂಹಕ್ಕೆ ಪ್ರಾಣ ಪ್ರತಿಷ್ಠಾಪನ ಮಾಡಿ ನಾಶಹೊಂದಿದವರಂತೆ ನಾಶ ಹೊಂದುತ್ತಾರೆ" ಎಂದನು. ಅದಕ್ಕೆ ಆ ಚಕ್ರಧರನು "ಅದು ಹೇಗೆ ನಡೆಯಿತು" ಎಂದು ಕೇಳಲು ಸುವರ್ಣಸಿದ್ದಿ ಹೀಗೆ ಹೇಳಿದನು.

ಕಥೆ: ತುಳಜಾಪುರನೆಂಬ ಪಟ್ಟಣದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಒಟ್ಟಿಗೆ ನಿತ್ಯಾಭ್ಯಾಸ ಮಾಡಿಕೊಂಡಿದ್ದರು. ಅವರಲ್ಲಿ ಮೂವರು ಮಂತ್ರವಿದ್ಯೆಯನ್ನು ಕಲಿತುಕೊಂಡರು. ತ್ರವಿದ್ಯೆಯನ್ನು ಆರ್ಜಿಸಿದ ಮೇಲೆ ಅವರು ತಮ್ಮಲ್ಲಿ "ನಾವು ಸಂಪಾದಿಸಿದ ನಿತ್ಯಾಬಲದಿಂದ ರಾಜಾಶ್ರಯವನ್ನು ಸಡೇತು ಹೇರಳವಾಗಿ ದ್ರವ್ಯವನ್ನು ದೊರಕಿಸಿಕೊಳ್ಳಬೇಕು" ಎಂದು ಆಲೋಚಿಸಿದರು. ಅವರಲ್ಲಿ ಎರಡನೆಯವನು, "ಎಲ್ಲಾ ಮಿತ್ರರೇ! ನಮ್ಮಲ್ಲಿ ನಾಲ್ಕನೆಯವನು ವಿದ್ಯಾಹೀನನಾಗಿದ್ದಾನೆ. ಅವನಿಗೆ ನಾವು ದೊರಕಿಸುವ ದ್ರವ್ಯದೊಳಗಿನ ಭಾಗವು ಸಿಕ್ಕಲಾರದು. ಅವನು ತನ್ನ ಮನೆಗೆ ಹೊರಟುಹೋಗಲಿ" ಎಂದು ಹೇಳಿದನು. ಅದಕ್ಕೆ ಮತ್ತೊಬ್ಬನು "ಅಯ್ಯಾ, ಮಿತ್ರನೇ, ಈ ಮಾತು ವಿದ್ಯಾಸಂಪನ್ನರಾದ ನಮ್ಮಂಥವರಿಗೆ ಉಚಿತವಲ್ಲ. ಏಕೆಂದರೆ ಈ ವಿದ್ಯಾಹೀನನಾದ ಮಿತ್ರನೂ ನಾವೂ ಚಿಕ್ಕಂದಿನಿಂದ ಒಂದೇ ಕಡೆಯಲ್ಲಿದ್ದು ವಿದ್ಯೆಯನ್ನು ಕಲಿತಿದ್ದೇವೆ. ಅಲ್ಲದೆ, ಇವನು ಒಳ್ಳೆಯ ವ್ಯವಹಾರಜ್ಞನಾಗಿದ್ದಾನೆ. ಸಮಯವರಿತು ನಡೆಯವಲ್ಲಿ, ರಾಜಾಸ್ಥಾನದಲ್ಲಿ ಚಾತುರ್ಯದಿಂದ ಹೊರತು, ಕೇವಲ ವಿದ್ಯೆಯಿಂದ ಹೆಚ್ಚು ಶೋಭಿಸುವುದಿಲ್ಲ, ಆದ್ದರಿಂದ ಇವನಿಗೂ ಒಂದು ಭಾಗ ಕೊಡಬೇಕು" ಎಂದು ಹೇಳಿದನು. ಸ್ವಲ್ಪ ಚರ್ಚೆಯಾದಮೇಲೆ ಮೇಲೆ, ವಿದ್ಯೆಯನ್ನ ರಿಯದ ಆ ನಾಲ್ಕನೆಯವನಿಗೂ ತಮ್ಮ ಸಂಪಾದನೆ ಯಲ್ಲಿ ಒಂದು ಭಾಗ ಕೊಡಬೇಕೆಂಬುದಾಗಿ ಅವರು ನಿರ್ಧರಿಸಿಕೊಂಡರು, ಆ ಮೇಲೆ ಆ ನಾಲ್ವರೂ ಕೂಡಿ ದೇಶಾಂತರಕ್ಕೆ ಹೊರಟರು. ಅವರು ದಾರಿ ಹಿಡಿದು ಹೋಗುವಾಗ, ಒಂದು ಸಿಂಹವು ಸತ್ತು ಬಿದ್ದಿರುವುದನ್ನು ಕಂಡರು. ಅವರಲ್ಲಿ ಒಬ್ಬನು ಸತ್ತಿದ್ದ ಆ ಸಿಂಹದ ಹತ್ತಿರ ಹೋಗಿ, “ ಮಿತ್ರರೇ, ನಾವು ಆರ್ಜಿಸಿದ ಮಂತ್ರನಿದ್ಯಾಬಲದಿಂದ ಈ ಸತ್ತಿರುವ ಸಿಂಹಕ್ಕೆ ಪ್ರಾಣ ವನ್ನು ತಂದುಕೊಡಬೇಕು'' ಎಂದನು, ಈ ಮಾತನ್ನು ಕೇಳಿ ವ್ಯವಹಾರ ಚತುರನಾದ ಆ ನಾಲ್ಕನೆಯ ಸ್ನೇಹಿತನು, “ ಮಿತ್ರರೇ, ಈ ಸಿಂಹವು ಪುನಃ ಜೀವ ಬಂದು ಬದುಕಿದರೆ ನಮ್ಮೆಲ್ಲರನ್ನೂ ಕೊಂದುಬಿಟ್ಟೀತು, ಆದ್ದ ರಿಂದ ಅದಕ್ಕೆ ಪ್ರಾಣಪ್ರತಿಷ್ಠಾ ಪನೆ ಮಾಡುವುದು ಸರ್ವಥಾ ಯೋಗ್ಯವಲ್ಲ” ಎಂದು ಬಹು ಪ್ರಕಾರವಾಗಿ ಹೇಳಿದನು. ಆದರೆ ಮಂತ್ರಜ್ಞರಾದ ಆ ಮೂವರು ಮಿತ್ರರು ಇವನ ಮಾತುಗಳನ್ನು ಕೇಳದೆ, ಆಗ್ರಹದಿಂದ ಆ ಸಿಂಹವು ಸಜೀವಿಯಾಗಬೇಕೆಂದು ಮಂತ್ರ ಗಳನ್ನು ಉಚ್ಚ ರಿಸತೊಡಗಿದರು. ಇದನ್ನು ನೊಡಿ, ಆ ವ್ಯವಹಾರ ME ಇಂಥ EE ಕಾರ್ಯ ವನ್ನು ಮಾಡುವವರ ಸಹವಾಸದಿಂದ ದೂರವಿರುವುದು ಮೇಲೆಂದೆಣಿಸಿ ತಾನು ಸ್ವಲ್ಪ ಬ್ಬ ದೂರ ಹೋಗಿ ಒಂದು ಮರವನ್ನು ಹತ್ತಿಕುಳಿತುಕೊಂಡನು. ಅಷ್ಟರಲ್ಲಿ ಸ್ನೇಹಿತರ ಮಂತ್ರೋಚ್ಚಾ ರಣೆಯಿಂದ. ಸಿಂಹಕ್ಕೆ ಪ್ರಾಣ ಬಂದ್ಕು ತತ್ಕ್ಷಣನೇ ಆದು ಆ ಮೂವರನ್ನು. ತಿಂದುಬಿಟ್ಟಿ ತು. ಆದ ಕ ವಿದ್ಯೆ ಗಿಂತಲೂ ಬುದ್ಧಿ ವಿಶೇಷ ಇ ಆ ಸುವರ್ಣಸಿದ್ದಿ ಹೇಳಿದನು. ಇದ ಲ್ಲದೆ, ಒಂದು ಕತ್ತೆಗೆ ಸುಮತಿಯ ಬ ನರಿ ಗಾಯನ ನಿಷೇಧ ಮಾಡಿ ದ್ದರೂ ಆ ಗಾರ್ದಭವು ನರಿಯ ಮಾತನ್ನು ಮೀರಿ, ಧ್ವನಿ ಮಾಡಿ, ಬಂಧ ನದಲ್ಲಿ ಜೂ ನಿನ್ನ ಅವಸ್ಥೆ ಯಾಜ ಯದು ಆ ಚಕ್ರಧಾರಿಗೆ ಸುವ ರ್ಣಸಿದ್ಧಿ ಹೇಳಿದ ದನು. ಸ ಕ್ರಧಾರಿ, “y ಕತ್ತಿ ಯ ಕಥೆಯನ್ನು ನಿರನಿಸ ಬೆಳಕು '' ಎಂದು ಕೇಳಿದುವಕ್ಕೆ ಆ ಸುವರ್ಣಸಿದ್ಧಿ ಕಥೆಯನ್ನು ಹೇಳದ

ಕಥೆ: ಒಂದು ಕಾಡಿನಲ್ಲಿ ಒಂದು ಕತ್ತೆಯೂ, ಒಂದು ನರಿಯೂ ವಾಸಿ ಸುತ್ತಿದ್ದುವು. ಇವೆರಡೂ ದಿನಾಗಲೂ ಮ್ಮದಿಯ ಹೊಲಕ್ಕೆ ನುಗ್ಗಿ, ಬೆಳೆ ಗಿಡಗಳನ್ನು ತಿಂದು ಪುನಃ ಅರಣ್ಯಕ್ಕೆ ಹೋಗುತ್ತಿದ್ದುವು . ಒಂದು ದಿನ ಇವು ಯಥೇಷ್ಟವಾಗಿ ಮೇಯುತ್ತಿರುವ ಸಮಯದಲ್ಲಿ ಆ ಕತ್ತೆ ನರಿಯನ್ನು ಕುರಿತು, “ಎಲಾ ಮಿತ್ರನೇ! ನೋಡು, ಬೆಳುದಿಂಗಳು ಹೇಗೆ ಹರಡಿದೆ. ನನ್ನ ಮನಸ್ಸಿಗಾದರೋ ಅತ್ಯಂತ ಉಲ್ಲಾಸವಾಗಿ ಗಾನ ಮಾಡಬೇಕೆಂದು ಎನ್ನಿಸುತ್ತದೆ. ಅದ್ದರಿಂದ ನಾನು ಈಗ ಹಾಡುತ್ತೇನೆ'' ಎಂದಿತು. ಅದನ್ನು ಕೇಳಿ, ನರಿ “ಎಲಾ, ಕತ್ತೆಯೇ! ನೀನು ಈಗ ಹಾಡಬೇಡ. ನೀನು ಗಾಯನ ಮಾಡಿದರೆ, ಆ ಗಾಯನವನ್ನು ಕೇಳಿ ಹೊಲದವರು ಎಚ್ಚತ್ತು ಬಂದು ನಿನ್ನನ್ನು ತಾಡಿಸುವರು. ನೀನು ಮೌನವಾಗಿರು'' ಎಂದಿತು. ಅದಕ್ಕೆ ಆ ಕತ್ತೆ "ಎಲಾ, ನರಿಯೇ, ನಿನಗೆ ಈ ಗಾಯನದ ವಿಚಾರವಾಗಿ ಯಾವ ಜ್ಞಾನವೂ ಇಲ್ಲ; ಅಲ್ಲದೆ ಅದರ ಸ್ವಾರಸ್ಯವೂ ನಿನಗೆ ತಿಳಿಯದು. ಅದಕ್ಕಾಗಿಯೇ, ನನ್ನನ್ನು ಹಾಡಬೇಡವೆಂದು ನಿಷೇಧ ಮಾಡುತ್ತಿರುವೆ'' ಎಂದು ನರಿಯ ಮಾತನ್ನು ತಿರಸ್ಕರಿಸಿ ಹಾಡಲು ಪ್ರಾರಂಭಿಸಿತು. ಅದರ ಧ್ವನಿ ಸುತ್ತಲೂ ಹರಡಿತು. ಆಗ ಹೊಲದ ಯಜಮಾನನು ಎಚ್ಚತ್ತು ಓಡಿಬಂದು ಆ ಕತ್ತೆಯನ್ನು ಹಿಡಿದು ಚೆನ್ನಾಗಿ ಹೊಡೆದನು. ಅದನ್ನು ನೋಡಿ ನರಿ, "ನಾನು ಹೇಳಿದ ಬುದ್ಧಿವಾದವನ್ನು ಕೇಳದೆ ಇದ್ದುದರಿಂದ ಈ ಕತ್ತೆಗೆ ಈ ಅವಸ್ಥೆ ಯುಂಭಾಯಿತು'' ಎಂದು ತನ್ನ ಮನಸ್ಸಿನಲ್ಲಿ ಭಾವಿಸುತ್ತ ಓಡಿಹೋಯಿತು. ಹೀಗೆಂದು ಸುವರ್ಣಸಿದ್ಧಿ ಹೇಳಿದ ಕಥೆಯನ್ನು ಕೇಳಿ ಆ ಚಕ್ರಧರನು, “ಎಲಾ ಮಿತ್ರನೇ, ಮತ್ತೊಬ್ಬರು ಹೇಳಿದ ಹಿತವಾಕ್ಯವನ್ನು ಕೇಳಿ ಮಂಥರನೆಂಬ ಒಬ್ಬ ನರಿಯು ಮರಣ ಹೊಂದಿದನು. ಆದ್ದರಿಂದ ಮತ್ತೊಬ್ಬರ ಹಿತವಾದವನ್ನು ಕೇಳಬೇಕು'' ಎಂದನು. ಅದಕ್ಕೆ ಸುವರ್ಣಸಿದ್ಧಿ ಆ ಕಥೆಯೇನು ಎಂದು ಪ್ರಶ್ನಿಸಲು, ಚಕ್ರಧರನು ಕಥೆಯನ್ನು ಹೀಗೆ ವಿವರಿಸಿದನು.

ಫಥೆ:- ನಾರಾಯಣಪುರವೆಂಬ ಪಟ್ಟಣದಲ್ಲಿ ಮಂಥರನೆಂಬ ಹೆಸರಿನ ಒಬ್ಬ ನೆಯ್ಯಾರನಿದ್ದನು. ಅವನು ಚಿತ್ರವಿಚಿತ್ರವಾದ ವಸ್ತ್ರಗಳನ್ನು ನೇಯ್ದು, ತನ್ನ ಪತ್ನಿಯೊಡನೆ ಸುಖವಾಗಿ ಜೀವನವನ್ನು ಸಾಗಿಸುತ್ತಿದ್ದನು. ಒಮ್ಮೆ ಅವನ ಮಗ್ಗವು ಮುರಿದುಹೋಯಿತು. ಆ ಮಗ್ಗವನ್ನು ಸರಿಸಡಿ ಸಲುವು ಅವನು ಕಟ್ಟಿಗೆಯನ್ನು ತರುವುದಕ್ಕೆಂದು ಅಡವಿಗೆ ಹೋಗಿ ಒಂದು ದೊಡ್ಡ ವೃಕ್ಷವನ್ನು ಕಡಿಯತೊಡಗಿದನು. ಆ ವೃಕ್ಷದ ಮೇಲೆ ಇದ್ದ ಒಂದು ಪಕ್ಷಿ ಈ ನೆಯ್ಯಾರನನ್ನು ಕುರಿತು, "ಎಲೆ, ಮನುಷ್ಯನೇ, ನನ್ನ ಸ್ಥಳಕ್ಕೆ ಬಂದು ನೀನು ನನಗೆ ವೃಥಾ ಉಪದ್ರವನ್ನು ಉಂಟುಮಾಡುತ್ತಿರುವೆ, ನಿನಗೇನು ಬೇಕು ಕೇಳು. ನಾನು ನಿನಗೆ ವರವನ್ನು ಕೊಡುತ್ತೇನೆ" ಎಂದಿತು. ಆ ಮಾತನ್ನು ಕೇಳಿ ನೆಯ್ಯಾರನು "ನೀನು ಬೇಡಿದುದನ್ನು ಕೊಡಬಹುದಾದರೆ, ನಾನು ನನ್ನ ಮನೆಗೆ ಹೋಗಿ ಎಲ್ಲರನ್ನೂ ವಿಚಾರಿಸಿಕೊಂಡು ನಂತರ ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಹೇಳಿ ತನ್ನ ಮನೆಯ ಕಡೆ ತಿರುಗಿದನು. ಹೀಗೆ ಬರುತ್ತಿರುವಾಗ ಅವನು ದಾರಿಯಲ್ಲಿ ತನ್ನ ಮಿತ್ರನಾದ ಒಬ್ಬ ನಾಪಿತನನ್ನು ಕಂಡನು. ಆ ನಾಪಿತನಿಗೆ ನೆಯ್ಯಾರನು ತನಗೆ ಅಡವಿಯಲ್ಲಾದ ಅನುಭವವನ್ನು ತಿಳಿಸಿದನು. ಮುಂದೆ ತಾನು ಏನು ಮಾಡಬೇಕೆಂಬುದನ್ನು ಕುರಿತು ಅವನನ್ನು ವಿಚಾರಿಸಿದನು. ಅದಕ್ಕೆ ಆ ನಾಪಿತನು "ಮಿತ್ರನೇ, ನೀನು ರಾಜ್ಯದ ಪದವಿಯನ್ನು ಕೇಳು. ನಾನು ರಾಜನಾದರೆ, ನಾನು ನಿನ್ನ ಕೈಕೆಳಗಿನ ಮಂತ್ರಿಯಾದೇನೆ" ಎಂದು ಬುದ್ಧಿಯನ್ನು ಹೇಳಿದನು. ಈ ಮಾತನ್ನು ಕೇಳಿ, ನೆಯ್ಯಾರನು ಅಲ್ಲಿಂದ ತನ್ನ ಮನೆಗೆ ಹೋಗಿ ಸಕಲ ವೃತ್ತಾಂತವನ್ನು ತನ್ನ ಹೆಂಡತಿಗೆ ಹೇಳಿದನು. ಅಲ್ಲದೆ, ಆ ನಾಪಿತನು ಹೇಳಿದ ಬುದ್ಧಿವಾಕ್ಯವನ್ನೂ ವಿವರಿಸಿದನು. ಅದನ್ನೆಲ್ಲ ಕೇಳಿ ಹೆಂಡತಿ "ರಾಜಪದವಿಯಿಂದ ನಮಗೆ ಅಷ್ಟೇನೂ ಸುಖವು ಲಭಿಸಲಾರದು. ಅರಸರಿಗೆ ರಾಜ್ಯದಿಂದ ಅನೇಕ ತೊಂದರೆಗಳು ಉಂಟಾಗುತ್ತವೆ, ಅವರ ಜೀವನವು ನಿಶ್ಚಿತವಾಗಿ ಇರಲಾರದು. ನಮಗೆ ಆ ಪದವಿ ಬೇಡ. ಈಗ ನಮಗೆ ಬೇಕಾದುದನ್ನು ನಾವು ಕೇಳಿಕೊಳ್ಳಬೇಕು. ನಮ್ಮ ಉದ್ಯೋಗವು ಹೆಚ್ಚಾಗಿ ನಡೆಯುವುದಕ್ಕೆ ಮತ್ತೊಂದು ಮುಖವನ್ನೂ ಇನ್ನೂ ಎರಡು ಕೈಗಳನ್ನೂ ಹೆಚ್ಚಾಗಿ ಬೇಡು" ಎಂದು ಹೇಳಿದಳು. “ಇನ್ನು ನಮ್ಮ ಉದ್ಯೋಗವು ಬೆಳೆದು ನಾವು ಒಂದಕ್ಕೆ ಎರಡು ವಸ್ತ್ರಗಳನ್ನು ಸಿದ್ಧಮಾಡಿ, ಅವುಗಳನ್ನು ಮಾರುವುದರಿಂದ ಬರುವ ಹಣದಿಂದ ನಮ್ಮ ಸಂಸಾರವನ್ನು ಸುಖವಾಗಿ ನಡೆಸಬಹುದು” ಎಂದು ಹೇಳಿದಳು. ಕೊಂಡು ಹೋಗಬಹುದು”? ಎಂದು ಬುದ್ಧಿ ಹೇಳಿದಳು. ತನ್ನ ಸತ್ಲಿಯ ಅಭಿ ಪ್ರಾಯವನ್ನು ಕೇಳಿ ಸಂತೋಷಸಟ್ಟು, ಆ ನೆಯ್ಯಾರನು ಪುನಃ ಆ ವೃಕ್ಷದ ಬಳಿಗೆ ಹೋಗಿ ಆ ಪಕ್ಷಿಯನ್ನು ಕುರಿತು, «ಎಲೇ, ಪಕ್ತಿರಾಜನೇ! ನೀನು ನನ್ನ ಮೇಲೆ ಕೃಪೆ ತೋರುವುದಾದರೆ, ನನಗೆ ಮತ್ತೊಂದು ಮುಖವನ್ನೂ, ಇನ್ನೂ ಎರಡು ಕೈಗಳನ್ನೂ ಹೆಚ್ಚಾಗಿ ದಯಾಪಾಲಿಸು” ಎಂದು ಪ್ರಾರ್ಥಿಸಿ ದನು, ಈ ನೆಯ್ಕಾರನ ಪ್ರಾರ್ಥನೆಯನ್ನು ಕೇಳಿ ಆ ಪಕ್ಷಿ, “ತಥಾಸ್ತು” ಎಂದಿತು, ಆ ಕ್ಷಣದಲ್ಲಿಯೇ, ನೆಯ್ಯಾರನಿಗೆ ಎರಡು ಮುಖಗಳೂ ನಾಲ್ಕು ಕೈಗಳೂ ಉಂಟಾದುವು, ಅವನು ತನ್ನ ಮನಸ್ಸಿನಲ್ಲಿ ಹಿಗ್ಗಿ, ತನ್ನ ಮನೆಯ ಕಡೆ ಹೊರಟನು, ದಾರಿಯಲ್ಲಿ ಜನರು ಈ ವಿಕಾರವಾದ ಅದ್ಭುತ ರೂಪ ವನ್ನು ಕಂಡು ಇದು ರಾಕ್ಷಸವೇ ಇರಬೇಕೆಂದು ತಿಳಿದು, ಕಲ್ಲುಗಳನ್ನು ಎಸೆದು ಅವನನ್ನು ಕೊಂದು ಬಿಟ್ಟರು. ಆದ್ದರಿಂದ ತನ್ನ ಪ್ರಾರಬ್ಭಾನು ಸಾರವಾಗಿ ಆಗಬೇಕಾದುದು ತಪ್ಪಲಾರದು. ಹೀಗೆಂದು ಚಕ್ರಧರನು ಹೇಳಿದ ಕಥೆಯನ್ನು ಸುವರ್ಣಸಿದ್ಧಿ ಕೇಳಿ "ಅಯ್ಯಾ, ಮಿತ್ರನೇ, ಬುದ್ಧಿ ವಂತರಾದವರು ಹೆಚ್ಚಿಗೆ ಲೋಭ ಮಾಡಬಾ ರದು. ಅತಿಲೋಭಿಯಾಗುವುದರಿಂದ ಚಂದ್ರಶರ್ಮನೆಂಬವನಿಗೆ ಉಂಟಾದ ಹಾನಿಯಂತೆಯೇ ಹಾನಿ ಒದಗಿ ದುಃಖಕ್ಕೆ ಈಡಾಗಬೇಕಾಗುವುದು” ಎಂದನು. ಚಕ್ರಧರನು "ಚಂದ್ರ ಶರ್ಮನಿಗೆ ಹಾಕಿ ಹೇಗೆ ಉಂಟಾಯಿತು ? ನಿರೂಪಿಸು” ಎಂದು ಕೇಳಿದುದಕ್ಕೆ ಸುವರ್ಣಸಿದ್ಧಿ ಆ ಕಥೆಯನ್ನು ನಿರೂಪಿಸಿದನು.

ಗೌಡದೇಶದಲ್ಲಿ ಚಂದ್ರಶರ್ಮನೆಂಬ ಬ್ರಾಹ್ಮಣನು ಯಜ್ಞ ಸೇವೆ ಯೆಂಬ ತನ್ನ ಸತಿಯೊಡನೆ ವಾಸವಾಗಿದ್ದನು. ಅವನು ಮುಹಾದರಿದ್ರನಾಗಿದ್ದು ದರಿಂದ ದಿನಾಗಲೂ ಯಾಚನೆಮಾಡಿ ಹೊಟ್ಟಿ ಹೊರೆಯುತ್ತಿದ್ದನು. ಅವನು ಭಿಕ್ಸಾ ವೃತ್ತಿಯಿಂದ ಸಂಪಾದಿಸಿದಹಿಟ್ಟನ್ನು ಒಂದು ಮಡಕೆಯಲ್ಲಿ ತುಂಬಿಟ್ಟು ಕೊಂಡಿದ್ದನು, ಹೀಗಿರುತ್ತಿರುವಾಗ, ಆ ಬ್ರಾಹ್ಮಣನ ಪತ್ನಿ ಗರ್ಭಿಣಿಯಾದಳು. ಅವನು ಒಂದು ದಿನ ಒಬ್ಬ ಗೃಹಸ್ಥನ ಮನೆಯಲ್ಲಿ ಭೋಜನ ತೀರಿಸಿಕೊಂಡ್ಕು ಮನೆಗೆ ಹಿಂದಿರುಗಿ ಆ ಹಿಟ್ಟಿನ ಗಡಿಗೆಯನ್ನು ತನ್ನ ಮುಂದೆಯೇ ಇಟ್ಟು ಕೊಂಡು ತನ್ನ ಪತ್ನಿಯ ಸಂಗಡ ಸರಸಗೋಷ್ಠಿಯಲ್ಲಿದ್ದನು. ಆ ಸಮಯದಲ್ಲಿ ಆ ಬ್ರಾಹ್ಮಣನು ತನ್ನ ಪತ್ನಿಯನ್ನುದ್ದೇಶಿಸಿ, “ ನಿನ್ನ ಗರ್ಭ ದಲ್ಲಿರುವ ಸಂತಾನವು ಗಂಡೇ? ಹೆಣ್ಣೇ ?' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವಳು, “ ಇದನ್ನು ತಿಳಿದುಕೊಂಡು ನೀವೇನು ಮಾಡುವಿರಿ ?'' ಎಂದು ವಿಚಾರಿಸಿದಳು. ಅವನು, "" ಎಲೇ, ಪ್ರಿಯಳೇ, ಮನುಷ್ಯನಾದ ವನು ಮುಂದಣ ಕಾರ್ಯವನ್ನು ಮೊದಲೇ ಅರಿತಿರಬೇಕು. ಆದ್ದರಿಂದ ನಿನ್ನ ಹೊಟ್ಟಿ ಯಲ್ಲಿರುವ ಸಂತಾನವು ಯಾವುದೆಂಬುದನ್ನು ನಾವು ಈಗಲೇ ತಿಳಿದುಕೊಂಡರೆ, ಮುಂದೆ ಅದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡ ಬಹುದು '' ಎಂದು ಬಹಳ ಸಂತೋಷದಿಂದ ಹೇಳಿದನು, ದರಿದ್ರನಾದ ವನಿಗೆ ಅನ್ನೋದಕವು ಎತ್ತ ಣಿಂದಲಾದರೂ ಸರಿಹೋಗುವಷ್ಟು ಸಿಕ್ಕಿ ಜೀವ ನಕ್ಕೆ ಬೇರೆ ಚಿಂತೆಯಿಲ್ಲದಿದ್ದಕ್ಕೆ, ಅವನು ಜಗತ್ತಿನಲ್ಲಿ ತನಗೆ ಸರಿಯಾದ ವನು ಯಾರೂ ಇಲ್ಲವೆಂದು ಭಾವಿಸುತ್ತಾನೆ. ಕುಬೇರನ ಧಥನವೆಲ್ಲವೂ ತೃಣ ಸಮಾನವೆಂದು ಬಗೆಯುತ್ತಾನೆ. ಹರಿಹರ-ಬ್ರಹ್ಮಾದಿಗಳೂ ತನಗೆ ಸರಿ ಯಲ್ಲವೆಂದು ಅಹೆಂಕಾರಪಡುತ್ತಾನೆ. ಹೀಗೆಯೇ ಆ ಬ್ರಾಹ್ಮಣನು ಪರಾ ನ್ನವನ್ನು ಭುಂಜಿಸಿ ತನ್ನನ್ನು ತಾನರಿಯದೆ ಪತ್ನಿಯನ್ನು ಕುರಿತು, “ನಿನ್ನ ಹೊಟ್ಟಿ ಯಲ್ಲಿರುವುದು ಗಂಡು ಕೂಸು. ನೀನು ಒಳ್ಳಯ ಲಗ್ನದಲ್ಲಿ ಆ ಗಂಡು ಮಗುವನ್ನು ಹೆರುನೆ. ಆ ಮಗುವಿಗೆ ಜಾತಕರ್ಮ, ನಾಮಕರಣ್ಕ ಮುಂಜೆಮದುವೆಗಳನ್ನು ನಾವು ಬಹಳ ಸಂಭ್ರಮದಿಂದ ನೆರವೇರಿಸಬೇಕು. ಅದಕ್ಕಾಗಿ ನಮಗೆ ಹೇರಳವಾದ ಕೊಕ್ಕವು ಬೇಕಾಗುವುದು. ನಾವು ಆ ಹೆಣವನ್ನು ಈಗಿಸಿಂದಲೇ ಗಳಿಸಬೇಕು” ಎಂದು ಹೇಳಿದನು, ತನ್ನ ಮಾತನ್ನು ಮುಂದುವರಿಸುತ್ತ, ಆ ಬ್ರಾಹ್ಮಣನು “ಎಲೇ, ಪತ್ನಿಯೇ, ಮುಂದೆ ಮಹಾ ದುರ್ಭಿಕ್ಷಕಾಲವು ಪ್ರಾಪ್ತವಾಗುತ್ತದೆ. ಆಗ ನಾವು ಶೇಖ ರಿಸಿಟ್ಟಿರುವ ಈ ಹಿಟ್ಟನ್ನು ಮಾರಿದರೆ, ನಮಗೆ ಹೇರಳವಾದ ಹಣವು ಬರು ವುದ, ಆ ಹಣದಿಂದ ಹತ್ತೆಂಟು ಎಮ್ಮೆಗಳನ್ನು ಕೊಂಡುಕೊಳ್ಳ ಬಹುದು. ಇಂಥ ದೊಡ್ಡ ಹೆಯನದಿಂದ ನಮಗೆ ಹಾಲು ಸಮೃದ್ಧವಾಗಿ ಲಭಿಸುವುದು. ಅದನ್ನು ಮಾರಿದರೆ ನಮಗೆ ಮತ್ತಷ್ಟು ಹೆಚ್ಚು ದುಡ್ಡು ಸಿಕ್ಕುವುದು. ಆ ದುಡ್ಡನ್ನು ಹಾಗೆಯೇ ಶೇಖರಿಸಿಟ್ಟು ಕೊಳ್ಳ ಬೇಕು. ಆ ಎಮ್ಮೆಗಳು ಕರುಗ ಳನ್ನು ಹಾಕಿ, ಅನು ದೊಡ್ಡು ವಾದ ಮೇಲೆ, ಅವುಗಳ ಹಯನದಿಂದ ನಮಗೆ ಇನ್ನೂ ಹೆಚ್ಚಿನ ದ್ರವ್ಯವು ಸಿಕ್ಕುವುದು. ಆ ಎಮ್ಮೆಗಳನ್ನು ಮಾರಿದರೆ ನಮಗೆ ಅಧಿಕಧನ ಪ್ರಾಪ್ತವಾಗುವುದು. ಆ ಧನದಿಂದ ಮೂರುನಾಲ್ಕು ದಿವ್ಯಾಶ್ವಗಳನ್ನು ಕೊಂಡು ಅವುಗಳನ್ನು ಚನ್ನಾಗಿ ಮೇಯಿಸಿ ಒಬ್ಬ ಸರ ದಾರನಿಗೆ ಮಾರಿದರೆ ನಮಗೆ ಎಷ್ಟೋ ದ್ರವ್ಯವು ಸಿಕ್ಕುವುದು, ಆ ದ್ರವ್ಯ ವನ್ನು ನಾವು ಒಬ್ಬ ವರ್ತಕನಿಗೆ ಬಡ್ಡಿಗೆ ಸಾಲ ಕೊಡಬೇಕು. ಆ ಗಂಟನ ಬಡ್ಡಿಯಿಂದ ನಮಗೆ ತಿಂಗಳೊಂದಕ್ಕೆ ಎರಡು ಸಾವಿರ ದ್ರವ್ಯದ ವರಮಾನ ವಾಗುವುದು. ಹೀಗೆಯೇ ಕೆಲವು ದಿನಗಳನ್ನು ಕಳೆದ ಮೇಲೆ ನಾನು ಧನ ಪತಿಯಾಗುವೆನು. ಸರ್ವಜನರಲ್ಲಿ ನನ್ನ ಗೌರವವು ಹೆಚ್ಚುವುದು. ಸಮಸ್ತ ಜನರು ನನ್ನನ್ನುಆಶ್ರಯಿಸುವರು. ನನ್ನ ಬಾಗಿಲನ್ನು ಕಾಯುವ ಜನರೆಷ್ಟೋ ಆಗ! ಇಷ್ಟು ವೈಭವವು ಪ್ರಾಪ್ರವಾದಾಗ ಇಂಥ ಚಿಕ್ಕ ಮನೆಯಲ್ಲಿ ಇರು ವುದಕ್ಕಾದೀತೇ? ನನ್ನ ಗೌರವಕ್ಕೆ ಅನುಗುಣವಾಗಿ ಈ ಮನೆಯನ್ನು ಬಿಚ್ಚಿಸಿ, ದೊಡ್ಡ ದೊಂದು ಉಪ್ಪರಿಗೆಯ ಮನೆಯನ್ನು ಕಟ್ಟಸುವೆನು. ಆ ಮನೆಯಲ್ಲಿ ಸುಖೋಸಜೀವನಕ್ಕೆ ಯೋಗ್ಯವಾದ ಮಂಚ, ಸುಪ್ಪತ್ತಿಗೆಯ ಹಾಸಿಗೆ ಮೊದಲಾದ ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಳ್ಳು ವೆನು. ಇದರಿಂದ ಲೋಕದಲ್ಲೆಲ್ಲ ನಾನು ಮಹಾಧನಾಢ್ಯನೆಂದು ಖ್ಯಾತಿಯನ್ನು ಹೊಂದುವೆನು. ಇಂಥ ಶ್ರೀಮಂತನಾದ ನಾನು ನನ್ನ ಮಗನಿಗೆ ನಾಲ್ಕು ಮಂದಿ ಕನ್ಯೆಯರನ್ನು ತಂದು ಮದುವೆ ಮಾಡಿ, ಅವರ ಊಳಿಗಕ್ಕಾಗಿ ಹತ್ತು ಜನ ತೊತ್ತುಗಳನ್ನು ನಿಯಮಿಸುವೆನು. ನನ್ನ ಮನೆಯಲ್ಲಿ ನೂರಾರು ಜನ ಆಳುಗಳೂ, ಸೇವಕರೂ ಜೀವಿಸಿಕೊಂಡಿರುವರು, ನನ್ನ ಮಗನ ನಾಲ್ವರು ಹೆಂಡಂದಿರಿಗೆ ಹತ್ತೆಂಟು ಜನ ಮಕ್ಕಳಾಗುವುವು. ಆ ಮೊಮ್ಮಕ್ಕಳನ್ನು ಎತ್ತಿಕೊಂಡು ನಾನು ಆಡಿಸುತ್ತಿರುವ ಸಮಯದಲ್ಲಿ ಈ ನಮ್ಮ ಎಮ್ಮೆಯ ಕರುಗಳು ಹಾರುತ್ತ ಬಂದು, ನನ್ನ ಮೊಮ್ಮಕ್ಕಳನ್ನು ಹಾಯಲಾಗಿ ನಾನು ಸುಮ್ಮನೇ ಕುಳಿತಿರುವೆನೇ? ಆ ಕರುಗಳನ್ನು ನನ್ನ ಕೈಯಲ್ಲಿರುವ ಈ ಕೋಲಿನಿಂದ ಹೀಗೆ ಹೊಡೆಯುತ್ತೇನೆ'' ಎಂದು ಹೇಳಿ ತನ್ನ ಮುಂದೆ ಇಟ್ಟುಕೊಂಡಿದ್ದ ಆ ಹಿಟ್ಟಿನ ಮಡಕೆಯನ್ನು ಬಲ ವಾಗಿ ಹೊಡೆದನು. ಏಟು ಬಿದ್ದಕೂಡಲೇ ಆ ಮಣ್ಣಿನ ಮಡಕೆ ಒಡೆದು, ಅದರಲ್ಲಿದ್ದ ಹಿಟ್ಟಿಲ್ಲ ಕೆಳಗೆ ಬಿದ್ದು ಮಣ್ಣು ಪಾಲಾಯಿತು, ಆದ ಕಾರಣ ವ್ಯರ್ಥವಾಗಿ ಕಲ್ಪನೆ ಮಾಡಬಾರದು. ಈಗ ಸ ಅತಿ ಲೋಭಿಯಾದುದರಿಂದ ನಿನಗೆ ಈ ಅವಸ್ಥೆ ಪ್ರಾಪ್ತವಾಯಿತು, ಲೋಭದ ಮಹಿಮೆ ಹೀಗೆ ಇರುವುದು. ಅತಿ ಲೋಭಿಯಾಗಿದ್ದ ಚಂದ್ರಸೇನರಾಜನ ಸೇನೆಯೆಲ್ಲವೂ ಲೋಭದ ಮಹಿಮೆ ಯಿಂದ ನಾಶನಾಗಿಹೋಯಿತೆಂದು ಸುವರ್ಣಸಿದ್ಧಿ ಚಕ್ರಧರನಿಗೆ ಹೇಳಿದನು. ಆ ರಾಜಸೇನೆ ನಾಶವಾದುದು ಹೇಗೆಂದು ಚಕ್ರಧರನು ಕೇಳಿದುದಕ್ಕೆ ಚಂದ್ರಸೇನರಾಜನ ಕಥೆಯನ್ನು ಸುವರ್ಣಸಿದ್ಧಿ ಹೀಗೆ ಬಿತ್ತರಿಸಿದನು.

ಅಯೋಧ್ಯಾ ಸಟ್ಟಿ ಣದಲ್ಲಿ ಚಂದ್ರಸೇನನೆಂಬ ರಾಜನು ರಾಜ್ಯಭಾರ ಮಾಡಿಕೊಂಡಿದ್ದನು, ಅವನ ಮಗನಿಗೆ ... ಆಟದಲ್ಲಿ ತುಂಬ ಇಷ್ಟ, ಆದ್ದರಿಂದ ಆ ರಾಜಪುತ್ರನು ವಾನರಗಳ ೦ಪನ್ನೇ ಸಾಕಿಕೊಂಡಿದ್ದನು. ಆ ಸ್ಥಳದಲ್ಲಿ ಇದ್ದ ಒಬ್ಬ (ಯ ಒಂದು ತಗರಿಗೂ ದೆ ಚ ಹುಟ್ಟಿತು. ಇದನ್ನು ಆ ವಾನರಗಳಲ್ಲಿನ ಒಂದು ಚತುರ ವಾನರವು EER ತನ್ನ ಬಂಡಿಗೆ, «6ಈ ಸ್ಥಳದಲ್ಲಿ ಕಲಹವು ಉತ್ಸನ್ನ "| ಆದಕಾರಣ "ಇನ್ನು ಮೇಲೆ ನಾವು ಇಲ್ಲಿರುವುದು ನಮಗೆ ಕ್ಷೇಮವಲ್ಲ. ಈ ಸ್ಥಳವನ್ನು ಬಿಟ್ಟು ನಾವೆಲ್ಲರೂ ಅರಣ್ಯಕ್ಕೆ ಹೊರಟು ಹೋಗೋಣ” ಎಂದು ಹೇಳಿತು. ಆ ವಾನರದ ಮಾತನ್ನು ಕೇಳಿ ಉಳಿದ ವಾನರಗಳು, ""ಎಲೇ, ಅಣ್ಣನೇ ' ನೀನು ವೃದ್ಧನು. ವೃದ್ಧಾ ಪ್ಯದಿಂದ ನಿನ್ನ ಬುದ್ಧಿ ಹೋಗಿದೆ, ಆದ್ದರಿಂದ ನಾನಾ ವಿಧವಾಗಿ ಕುತರ್ಕವನ್ನು ಮಾಡು ತ್ರಿರುವೆ. ಈ ರಾಜಾಶ್ರಯದಲ್ಲಿ ನಮಗೆ ಯಾನ ಕೊರತೆಯಿದೆ? ಅನೇಕ ವಿಧವಾದ ಆಜಾ ನಿತ್ಯವೂ ನಮಗೆ ದೊರೆಯುತ್ತಿಲ್ಲವೇ? ಇಂಥ ಅನುಕೂಲ ಸ ಸ್ಥಳವನ್ನು ಬಿಟ್ಟು ಅರಣ ಕ್ಕೆ ಹೋಗಿ, ಕಾಡು "ಹಣ್ಣು ಗಳನ್ನು ತಿಂದು ಜೀವಿಸುವುದು ಒಳ್ಳೆಯದೇ ? ನಮಗೆ ಆಗಬೇಕಾದದ್ದೆಲ್ಲ ಈ ರಾಜಾಸ್ಥಾನದಲ್ಲಿಯೇ ಆಗಲಿ'' ಎಂದು ಹೇಳಿದುವು. ವಾನರಗಳ ಈ ಅಭಿಪ್ರಾಯವನ್ನು ಕೇಳಿ ಆ ವೃದ್ಧ ವಾನರವು ಇನ್ನು ಮೇಲೆ ಅಲ್ಲಿರುವು ದುಹಿತಕರವಲ್ಲವೆಂದು ತಿಳಿದು ಮೊದಲು ತಾನು ತರ್ಕಿಸಿಕೊಂಡಂತೆ, ತನಗೆ ಬೇಕಾದ ವಾನರಗಳನ್ನು ಸಂಗಡ ಕರೆದುಕೊಂಡು ಅರಣ್ಯಕ್ಕೆ ಹೊರಟು ಹೋಯಿತು, ಕೆಳಿವು. ದಿನಗಳು ಕಳೆದ ಮೇಲೆ ಆ ಸ್ಪಳದಲ್ಲಿದ್ದ ತಗರು ಒಂದು ದಿನ ಆ ಅಡುಗೆಯವನನ್ನು ಬಲವಾಗಿ ಹಾಯಿತು. ಆಗೆ ಅಡುಗೆ ಯವನು ಕೋಪಾನಿಷ್ಟನಾಗಿ, ನು ರುವ ಒಂದು ಕಟ್ಟ ಗೆಯನ್ನೆ ತ್ತಿ ಆ ತಗರನ್ನು ಹೊಡೆದನು, ಆ ಕಟ್ಟಿಗೆಯ ಉರಿ ತಗರಿನ ಮೈಮೇಲಿನ ಕೂದಲುಗಳಿಗೆ ಹತ್ತಿಕೊಂಡು, ಸುಡುವುದಕ್ಕಾರಂಭಿಸಿತು. ತಗರು ಗಾಬರಿ ಯಾಗಿ, ಅಲ್ಲಿಂದ ಓಡಿ ಹೋಗಿ, ಕುದುರೆಯ ಲಾಯದೊಳಗೆ ಒಟ್ಟಿದ್ದ ಹುಲ್ಲಿನ ರಾಶಿಯೊಳಗೆ ಸೇರಿಕೊಂಡಿತು. ಬೆಂಕಿ ಹುಲ್ಲಿಗೆ ತಗಲಿ, ಆ ಲಾಯವೆಲ್ಲ ಸುಟ್ಟು ಹೋಯಿತು. ಇದರಿಂದ ಆ ಲಾಯದಲ್ಲಿದ್ದ ಕೆಲವು ಕುದುರೆಗಳು ಸತ್ತು ಹೋದುವು. ಕೆಲವು ಕುದುರೆಗಳಿಗೆ ಮೈಯೆಲ್ಲ ದಹಿಸಿ, ಗಾಯವಾಯಿತು. ಈ ವರ್ತಮಾನನು ರಾಜನವರೆಗೆ ಹೋಯಿತು. ರಾಜನು ಅಶ್ವವೈದ್ಯನನ್ನು ಕರೆಸಿ «ಈ ಕುದುರೆಗಳ ಗಾಯವು ವಾಸಿ ಯಾಗಬೇಕಾದರೆ ಏನುಉಪಾಯ ಮಾಡಬೇಕು?'' ಎಂದು ವಿಚಾರಿಸಿದನು. ಅದಕ್ಕೆ ವೈದ್ಯನು, "ಕುದು ಕೆಗಳ ಗಾಯವು ಮಾಯಬೇಕಾದರ್ಕೆ ವಾನರದ ತೈಲವನ್ನು ತೆಗೆಸಿ, ಕುದುರೆಗಳಿಗೆ ಲೇಪಿಸಬೇಕು” ಎಂದು ಚಿಕಿತ್ಸೆ ಹೇಳಿ ದನ್ನು ಅಶ್ವೈದ್ಯನ ಈ ಅಭಿಪ್ರಾ ಯವನ್ನು ಕೇಳಿ ರಾಜನು ಸೆ ಸೇವಕರನ್ನು ಕರೆದು, “ನಮ್ಮ ರಾಜಧಾನಿಯಲ್ಲಿರುವ ಕೋತಿಗಳೆಲ್ಲವನ್ನೂ ಕೊಂದು ತೈಲ ತೆಗೆದು ಅಶ್ವಗಳನ್ನು ಗುಣಸಡಿಸಬೇಕು'' ಎಂದು ಆಜ್ಞಾಸಿಸಿದನು. ರಾಜಾಜ್ಞೆಯನ್ನು ಕೇಳಿ ಸೇವಕರು ಮಂಗಗಳನ್ನು ಕೊಂದು ಬಿಟ್ಟರು ಇತ್ತ ಈ ವರ್ತಮಾನವು ಆ ಚತುರವಾದ ವೃದ್ಧವಾನರಕ್ಕೆ ಮುಟ್ಟಿತು. ಅದು ಈ ಸಂಗತಿಯನ್ನು ಕೇಳಿ ಬಹಳ ವ್ಯಾಕುಲಗೊಂಡು, ಇದರ ಸೇಡು ತೀರಿಸಿಕೊಳ್ಳ ಬೇಕೆಂದು ಮನಸ್ಸಿನಲ್ಲಿ ಫಿಶ್ಚಯಿಸಿಕೊಂಡಿತು. ಹೀಗೆ ಆ ವಾನರವು ನಿಶ್ಚಯ ಮಾಡಿಕೊಂಡು, ಅರಣ್ಯದಲ್ಲಿ ಸಂಚರಿಸುತ್ತಿರುವಾಗ, ಅತ್ಯಂತ ರಮ್ಯವಾದ ಒಂದು ದೊಡ್ಡ ಸರೋವರವನ್ನು ಕಂಡು, ಅದರಸಮೀಪಕ್ಕೆ ಹೋಗಿ, ಅಲ್ಲಿ ಮನುಷ್ಯಸಂಚಾರವೇ ಸು ನೋಡಿ ಅಶ್ವ ರ್ಯಸಟ್ಟ ತು. ಆ ವಾನರವು, "(ಇಲ್ಲಿ ಮನುಷ್ಯ ಸಂಚಾರನಿಲ್ಲದಿರುವು ದಕ್ಕೆ RN ಕಾರಣನಿರಬಹುದು. ಪ್ರಾಯಶಃ ಈ ಸರೋ ವರದಲ್ಲಿ ಒಂದು ರಾಕ್ಷಸವು ವಾಸವಾಗಿರಬೇಕು''ಎಂದು "ಊಹಿಸಿ ಆ ಸರೋ ವರಕ್ಳೈ ಸ್ವ ಸ್ವಲ್ಪ ದೂರದಲ್ಲಿ ನಿಂತುಕೊಂಡು ಒಂದು ಕಮಲದ ದಳವನ್ನು ತೆಗೆದು ಕೊಂಡು ಅದರಲ್ಲಿ ನೀರನ್ನು ತುಂಬಿಕೊಂಡು ಕುಡಿಯುವುದಕ್ಕಾರಂಭಿಸಿತು. ಅದನ್ನು ಕಂಡು, ಆ ಸರೋನರದಲ್ಲಿ ವಾಸವಾಗಿದ್ದ ಒಂದು ರಾಕ್ಷಸವು ನೀರಿನಿಂದ ಹೊರಗೆ ಬಂದು ಆ ವಾನರವನ್ನು ಕುರಿತು, «ಎಲ್ಫೈ ವಾನ ರನೇ, ನಿನ್ನ ಚಾತುರ್ಯವನ್ನು ನೋಡಿ, ಪ್ರಸನ್ನ ನಾಗಿರುನೆನು. ನನ್ನಕೊರಳೊಳಗಿನ ಈ ರತ್ನ ಮಾಲೆಯನ್ನು ಕಿಗೆದುಕೋ' ಎ ನುಡಿದು, ರತ್ನ ಮಾಲೆಯನ್ನು ಆ ಮಂಗನಿಗೆ ಕೊಟ್ಟಿತು. ವಾನರವು ಬಹಳ ಸಂತೋ ಸದಿಂದ ರತ್ನಮಾಲೆಯನ್ನು ಸ್ವೀಕರಿಸಿ ರಾಕ್ಷಸನನ್ನು “ನಿನ್ನ ಶಕ್ತಿ ಈ ನೀರಿನಲ್ಲಿ ಎಷ್ಟು ಇರುವುದು?” ಎಂದು ಪ್ರಶ್ನಿಸಿತು. ಆದಕ್ಕೆ ಆ ರಾಕ್ಷಸವು, ಸಾಹಸ್ರ್ಯ ಸಾಹಸ್ರ ಸಂಖ್ಯೆಯ ಮನಪ್ಯರು ಈ ಉದಕದಲ್ಲಿ ಬಂದರೆ, ಅವರನ್ನೆಲ್ಲ ಹೊರಗೆ ಹೋಗದಂತೆ, ಒಂದೇ ಕ್ಷಣದಲ್ಲಿ ನುಂಗಿ ಬಿಡುವಷ್ಟು ಸಾಮರ್ಥ್ಯವು ನನಗೆ ಉಂಟು'' ಎಂದು ಹೇಳಿತು. ಆ ಮಾತನ್ನು ಕೇಳಿ ವಾನರವು ನಿನಗೆ ಯಥೇಚ್ಛವಾದ ಆಹಾರವನ್ನು ತಂದುಕೊಡುವೆನು'' ಎಂದು ಹೇಳಿ ಆ ರತ್ನ ಮಾಲೆಯನ್ನು ತನ್ನ ಕೊರ ಳೊಳಗೆ ಹಾಕಿಕೊಂಡು, ನೇರವಾಗಿ ಆ ಚಂದ್ರಸೇನ ರಾಜನ ಅರಮನೆಗೆ ಬಂದಿತು. ಆ ಮೇಲೆ, ಅಲ್ಲಿ ರಾಜನನ್ನು ಕಂಡು "ಎಲ್ಪೆ, ರಾಜನೇ! ನಿನಗೆ ನಾನು ಬಹಳ ಯಣಿಯಾಗಿನೆ ನೆ, ಎಸ್ಟೋ ಕಾಲ "ನ್ನ ಆಶ್ರಯ ದಲ್ಲಿದ್ದುಕೊಂಡು, ನಿನ್ನ ಅನ್ನ ಜ್‌ ನನ್ನ ಈ ಶರೀರವು ಬಿಳೆದಜೆ. ಇನ್ನ ಉಪಕಾರಕ್ಕೆ ಪ್ರತಿಯಾಗಿ ಈ ರತ್ನ ಮಾಳೆಯನ್ನು ನಿನಗೆ ಅರ್ಪಿಸುತ್ತೇನೆ. ದಯಮಾಡಿ ಇದನ್ನು ಸ್ವೀಕರಿಸು'' ಎಂದು ಪ್ರಾರ್ಥಿಸಿತು. ರಾಜನು ಆ ಮಂಗನ ಕೃತಜ್ಞ ತೆಯನ್ನು ನೋಡಿ ಸ೧ತೋಷಸಟು ರತ್ತಮಾಲೆ ಇ ವೆ ದ ಯನ್ನು ತೆಗೆದುಕೊಳ್ಳುತ್ತ, ವಾನರನೇ! ಈ ರತ್ನಮಾಲೆಯನ್ನು “ನೀನು ಎಲ್ಲಿಂದ ತಂದಿರುವೆ?’’ ಎಂದು ಕೇಳಿದನು. ಅದಕ್ಕೆ ಆ ವಾನರವು, “ನಾನು ವಾಸಿಸುವ ೬ರಣ್ಯದಲ್ಲಿ ಒಂದು ಅಮೋಘವಾದ ಸರೋನರ ವಿಜಿ. ಆ ಸರೋವರದಲ್ಲಿ ಸೂರ್ಯೋದಯಕ್ಕೆ ಪೂರ್ವವೇ ಹಾರಿಕೊಂಡವರಿಗೆ ಇಂಥ ರತ್ನಮಾಲೆ ದೊರೆಯುತ್ತದೆ’’ ಎಂದು ಹೇಳಿತು. ಆ ವಾನರದ ಮಾತನ್ನು ಕೇಳಿ ರಾಜನು, “” ನಾನು ಆ ಸರೋವರಕ್ಕೆ ಬರುವೆನು?’’ ಎಂದು ಹೇಳಿ, ತನ್ನ ಸೇನೆಯನ್ನೆಲ್ಲ ಕೂಡಿಕೊಂಡು, ಆ ವಾನರದ ಸಂಗಡ ಹೋಗಿ ಆ ಸರೋವರದ ಹತ್ತಿರ ಪಾಳೆಯ ಬಿಟ್ಟನು. ರಾತ್ರಿಯೆಲ್ಲ ಅಲ್ಲಿಯೇ ಬೀಡು ಬಿಟ್ಟಿದ್ದು ಕೊಂಡು, ಬೆಳಗಾಗುವುದಕ್ಕೆ ಮುಂಚೆ ಸರೋವರ ಪ್ರವೇಶ ಮಾಡಬೇಕೆಂದು, ಆ ರಾಜನು ನಿರ್ಧರಿಸಿಕೊಂಡಿದ್ದನು. ಆ ವಾನರವು ಅಲ್ಲಿಯೇ ರಾತ್ರಿಯೆಲ್ಲ ಇದ್ದುಕೊಂಡು, ಇನ್ನೂ ಸ್ವಲ್ಪ ಕತ್ತಲೆ ಇರುವಾಗಲೇ, ಎದ್ದು ರಾಜನ ಸಮೀಪಕ್ಕೆ ಹೋಗಿ “ ಎಲೇ, ರಾಜನೇ, ರತ್ನಮಾಲೆಯನ್ನು ತರುವ ಸಮಯವು ಸಮೀಪಿಸಿತು. ಇನ್ನು ಆಲಸ್ಯ ಮಾಡಬಾರದು” ಎಂದು ಜ್ಞಾ ಪಿಸಿತು. ರಾಜನು ಅವಸರದಿಂದ ಎದ್ದು ತನ್ನ ಸೇನೆಗೆ ಸರೋನರದೊಳಗೆ ದುಮ್ಮಿಸ್ಯಲು ಆಜ್ಞಾಪಿಸಿ, ತಾನೂ ಸರೋವರದಲ್ಲಿ ಹಾರಿಕೊಳ್ಳಲು ಸಿದ್ಧನಾದನು. ಆಗ ಆ ವಾನರವು “ಮಹಾರಾಜನೇ, ಈ ಸೇನೆಯೆಲ್ಲ ಮೊದಲು ಹೋಗಿ ರತ್ನದ ಮಾಲೆಗಳನ್ನು ತೆಗೆದುಕೊಂಡು ಬರಲಿ, ಆ ಮೇಲೆ ನಾನೂ, ನೀನೂ ಕೂಡಿಯೇ ಹೋಗಿ, ಅನರ್ಫ್ಯವಾದ ರತ್ನಮಾಲೆಗಳನ್ನು ತೆಗೆದುಕೊಂಡು ಬರೋಣಂತೆ” ಎಂದು ಹೇಳಿತು. ಆ ಮಾತಿಗೆ ರಾಜನು ಒಡಂಬಟ್ಟು ತನ್ನ ಸೇನೆಗೆ ಆ ಸರೋವರದಲ್ಲಿ ಪ್ರವೇಶಿಸುವಂತೆ ಆಜ್ಞಾಪಿಸಿದನು. ರಾಜನ ಸೇನೆ ಸರೋವರದೊಳಗೆ ಪ್ರವೇಶಿಸಿದೊಡನೆಯೇ, ಆ ರಾಕ್ಷಸವು ಆ ಸೇನೆಯನ್ನುಲ್ಲ ನೀರಲ್ಲಿ ಮುಳುಗಿಸಿ ಕೊಂದುಬಿಟ್ಟಿತು. ಎಷ್ಟು ಹೊತ್ತಾದರೂ ತನ್ನ ಸೇನೆ ನೀರಿನಿಂದ ಹೊರಗೆ ಬಾರದುದನ್ನು ನೋಡಿ, ರಾಜನು ಆ ವಾನರವನ್ನು ಸೇನೆ ಬರಲು ತಡವಾದುದಕ್ಕೆ ಕಾರಣವೇನೆಂದು ಕೇಳಿದನು. ರಾಜನು ಹೀಗೆ ಪ್ರಶ್ನೆ ಮಾಡಿದೊಡನೆಯೇ ಆ ವಾನರವು ಶೀಘ್ರವಾಗಿ ಓಡಿಹೋಗಿ ಎತ್ತರವಾದ ವೃಕ್ಷದ ಮೇಲೆ ಕುಳಿತುಕೊಂಡು, “ಎಲೈ, ರಾಜನೇ, ನೀನು ನನ್ನ ಕುಲವನ್ನೆ ಲ್ಲ ಕೊಲ್ಲಿಸಿದೆ. ಅದರ ಪ್ರತೀಕಾರಕ್ಕಾಗಿ ನಾನು ಈ ಉಪಾಯವನ್ನು ಮಾಡಿದೆನು. ನೀನು ನನ್ನ ಅನ್ನದಾತನೆಂದು ತಿಳಿದು ನಿನ್ನನ್ನು ಮಾತ್ರ ಉಳಿಸಿದ್ದೇನೆ. ಇನ್ನು ಮೇಲೆ ನಿನ್ನ ಸೇನೆಯ ಆಶೆಯನ್ನು ಬಿಟ್ಟು ನೀನು ನಿನ್ನ ಪಟ್ಟಣಕ್ಕೆ ಹೊರಟು ಹೋಗು’’ ಎಂದು ಹೇಳಿತು. ವಾನರವು ಹೇಳಿದ ಮಾತನ್ನು ಕೇಳಿ ರಾಜನು ಪಶ್ಚಾತ್ತಾ ಸಪಟ್ಟು, “ಹೆಚ್ಚು ಲೋಭ ಮಾಡುವುದರಿಂದ, ಇಂಥ ದುಃಖಕ್ಕೆ ಈಡಾಗಬೇಕಾಗುತ್ತದೆ’’ ಎಂದು ಚಿಂತೆ ಮಾಡುತ್ತ, ತನ್ನ ಪಟ್ಟಣಕ್ಕೆ ಹೊರಟು ಹೋದನು, ಅದ್ದರಿಂದ “ಎಲೈ, ಸ್ನೇಹಿತನೇ, ನೀನು ಆ ಚಂದ್ರಸೇನರಾಜನಂತೆ ಅತಿ ಲೋಭದಿಂದ ಈ ಅವಸ್ಥೆ ಯನ್ನು ಹೊಂದಿರುವೆ. ಇನ್ನು ನಾನು ನನ್ನ ಮನೆಗೆ ಹೋಗುತ್ತೇನೆ’’ ಎಂದು ಹೇಳಿ ಸುವರ್ಣಸಿದ್ಧಿ ಅಲ್ಲಿಂದ ಹೊರಡಲು ಸಿದ್ಧನಾದನು. ತನ್ನ ಮಿತ್ರನು ತನ್ನೊಬ್ಬನನ್ನೇ ಬಿಟ್ಟು ಹೋಗುತ್ತಾನೆಂಬುದನ್ನು ತಿಳಿದು ಆ ಚಕ್ರಧರನು “ಅಯ್ಯಾ, ಸ್ನೇಹಿತನ ಸಂಕಟಕಾಲದಲ್ಲಿ ಮಿತ್ರನು ಉಪಯೋಗಕ್ಕೆ ಬರುವನೆಂದು ಹೇಳುತ್ತಾರೆ. ನೀನು ನನ್ನನ್ನು ಈ ನಿಪತ್ತಿನಲ್ಲಿ ಬಿಟ್ಟು ಹೊರಟು ಹೋಗುವುದು ನಿನಗೆ ಯೋಗ್ಯವೇ?’’ ಎಂದು ಕೇಳಿದನು. ಅದಕ್ಕೆ ಸುವರ್ಣಸಿದ್ಧಿ “ನಾನು ನಿನ್ನ ಮಾತಿನಂತೆ ಇಲ್ಲಿಯೇ ಇದ್ದರೆ, ಒಬ್ಬ ಕಳ್ಳನು ರಾಕ್ಷಸವನ್ನು ಹಿಡುಕೊಂಡು ಹೋಗುವ ಸಮಯದಲ್ಲಿ ವಾನರವು ಸಹಾಯಕ್ಕೆ ಹೋಗಿ ನಾಶವಾದಂತೆ ನಾನೂ ನಾಶನಾದೆನು. ಈ ಚಕ್ರಕ್ಕೆ ಭಯಪಡುತ್ತೇನೆ.” ಎಂದು ಹೇಳಿದನು. ಆ ಮಾತನ್ನು ಕೇಳಿ ಚಕ್ರಧರನು ಅದು ಹೇಗೆ ನಡೆಯಿತೆಂದು ಸುವರ್ಣಸಿದ್ಧಿಯನ್ನು ಪ್ರಶ್ನಿಸಿದನು. ಸುವರ್ಣಸಿದ್ಧಿ, ವಾನರವು ನಾಶಹೊಂದಿದ ಕಥೆಯನ್ನು ಹೀಗೆ ವಿವರಿಸಿದನು.

ಕಧ:- ಮಧುರಾಪುರವೆಂಬ ಪಟ್ಟಣದಲ್ಲಿ ಭದ್ರಸೇನರಾಜನು ಸಕಲ ವೈಭವದೊಂದಿಗೆ ರಾಜ್ಯವನ್ನಾಳುತ್ತಿದ್ದನು. ಆ ರಾಜನಿಗೆ ರತ್ನವತಿಯೆಂಬ ಪರಮಸುಂದರಿಯಾದ ಯುನಕಿ ಪತ್ತೆಯಾಗಿದ್ದಳು. ಅವಳ “ನೀನು ಎಲ್ಲಿಂದ ತಂದಿರುವೆ?’’ ಎಂದು ಕೇಳಿದನು. ಅದಕ್ಕೆ ಆ ವಾನರವು, “ನಾನು ವಾಸಿಸುವ ೬ರಣ್ಯದಲ್ಲಿ ಒಂದು ಅಮೋಘವಾದ ಸರೋನರ ವಿಜಿ. ಆ ಸರೋವರದಲ್ಲಿ ಸೂರ್ಯೋದಯಕ್ಕೆ ಪೂರ್ವವೇ ಹಾರಿಕೊಂಡವರಿಗೆ ಇಂಥ ರತ್ನಮಾಲೆ ದೊರೆಯುತ್ತದೆ’’ ಎಂದು ಹೇಳಿತು. ಆ ವಾನರದ ಮಾತನ್ನು ಕೇಳಿ ರಾಜನು, “” ನಾನು ಆ ಸರೋವರಕ್ಕೆ ಬರುವೆನು?’’ ಎಂದು ಹೇಳಿ, ತನ್ನ ಸೇನೆಯನ್ನೆಲ್ಲ ಕೂಡಿಕೊಂಡು, ಆ ವಾನರದ ಸಂಗಡ ಹೋಗಿ ಆ ಸರೋವರದ ಹತ್ತಿರ ಪಾಳೆಯ ಬಿಟ್ಟನು. ರಾತ್ರಿಯೆಲ್ಲ ಅಲ್ಲಿಯೇ ಬೀಡು ಬಿಟ್ಟಿದ್ದು ಕೊಂಡು, ಬೆಳಗಾಗುವುದಕ್ಕೆ ಮುಂಚೆ ಸರೋವರ ಪ್ರವೇಶ ಮಾಡಬೇಕೆಂದು, ಆ ರಾಜನು ನಿರ್ಧರಿಸಿಕೊಂಡಿದ್ದನು. ಆ ವಾನರವು ಅಲ್ಲಿಯೇ ರಾತ್ರಿಯೆಲ್ಲ ಇದ್ದುಕೊಂಡು, ಇನ್ನೂ ಸ್ವಲ್ಪ ಕತ್ತಲೆ ಇರುವಾಗಲೇ, ಎದ್ದು ರಾಜನ ಸಮೀಪಕ್ಕೆ ಹೋಗಿ “ ಎಲೇ, ರಾಜನೇ, ರತ್ನಮಾಲೆಯನ್ನು ತರುವ ಸಮಯವು ಸಮೀಪಿಸಿತು. ಇನ್ನು ಆಲಸ್ಯ ಮಾಡಬಾರದು” ಎಂದು ಜ್ಞಾ ಪಿಸಿತು. ರಾಜನು ಅವಸರದಿಂದ ಎದ್ದು ತನ್ನ ಸೇನೆಗೆ ಸರೋನರದೊಳಗೆ ದುಮ್ಮಿಸ್ಯಲು ಆಜ್ಞಾಪಿಸಿ, ತಾನೂ ಸರೋವರದಲ್ಲಿ ಹಾರಿಕೊಳ್ಳಲು ಸಿದ್ಧನಾದನು. ಆಗ ಆ ವಾನರವು “ಮಹಾರಾಜನೇ, ಈ ಸೇನೆಯೆಲ್ಲ ಮೊದಲು ಹೋಗಿ ರತ್ನದ ಮಾಲೆಗಳನ್ನು ತೆಗೆದುಕೊಂಡು ಬರಲಿ, ಆ ಮೇಲೆ ನಾನೂ, ನೀನೂ ಕೂಡಿಯೇ ಹೋಗಿ, ಅನರ್ಫ್ಯವಾದ ರತ್ನಮಾಲೆಗಳನ್ನು ತೆಗೆದುಕೊಂಡು ಬರೋಣಂತೆ” ಎಂದು ಹೇಳಿತು. ಆ ಮಾತಿಗೆ ರಾಜನು ಒಡಂಬಟ್ಟು ತನ್ನ ಸೇನೆಗೆ ಆ ಸರೋವರದಲ್ಲಿ ಪ್ರವೇಶಿಸುವಂತೆ ಆಜ್ಞಾಪಿಸಿದನು. ರಾಜನ ಸೇನೆ ಸರೋವರದೊಳಗೆ ಪ್ರವೇಶಿಸಿದೊಡನೆಯೇ, ಆ ರಾಕ್ಷಸವು ಆ ಸೇನೆಯನ್ನುಲ್ಲ ನೀರಲ್ಲಿ ಮುಳುಗಿಸಿ ಕೊಂದುಬಿಟ್ಟಿತು. ಎಷ್ಟು ಹೊತ್ತಾದರೂ ತನ್ನ ಸೇನೆ ನೀರಿನಿಂದ ಹೊರಗೆ ಬಾರದುದನ್ನು ನೋಡಿ, ರಾಜನು ಆ ವಾನರವನ್ನು ಸೇನೆ ಬರಲು ತಡವಾದುದಕ್ಕೆ ಕಾರಣವೇನೆಂದು ಕೇಳಿದನು. ರಾಜನು ಹೀಗೆ ಪ್ರಶ್ನೆ ಮಾಡಿದೊಡನೆಯೇ ಆ ವಾನರವು ಶೀಘ್ರವಾಗಿ ಓಡಿಹೋಗಿ ಎತ್ತರವಾದ ವೃಕ್ಷದ ಮೇಲೆ ಕುಳಿತುಕೊಂಡು, “ಎಲೈ, ರಾಜನೇ, ನೀನು ನನ್ನ ಕುಲವನ್ನೆ ಲ್ಲ ಕೊಲ್ಲಿಸಿದೆ. ಅದರ ಪ್ರತೀಕಾರಕ್ಕಾಗಿ ನಾನು ಈ ಉಪಾಯವನ್ನು ಮಾಡಿದೆನು. ನೀನು ನನ್ನ ಅನ್ನದಾತನೆಂದು ತಿಳಿದು ನಿನ್ನನ್ನು ಮಾತ್ರ ಉಳಿಸಿದ್ದೇನೆ. ಇನ್ನು ಮೇಲೆ ನಿನ್ನ ಸೇನೆಯ ಆಶೆಯನ್ನು ಬಿಟ್ಟು ನೀನು ನಿನ್ನ ಪಟ್ಟಣಕ್ಕೆ ಹೊರಟು ಹೋಗು’’ ಎಂದು ಹೇಳಿತು. ವಾನರವು ಹೇಳಿದ ಮಾತನ್ನು ಕೇಳಿ ರಾಜನು ಪಶ್ಚಾತ್ತಾ ಸಪಟ್ಟು, “ಹೆಚ್ಚು ಲೋಭ ಮಾಡುವುದರಿಂದ, ಇಂಥ ದುಃಖಕ್ಕೆ ಈಡಾಗಬೇಕಾಗುತ್ತದೆ’’ ಎಂದು ಚಿಂತೆ ಮಾಡುತ್ತ, ತನ್ನ ಪಟ್ಟಣಕ್ಕೆ ಹೊರಟು ಹೋದನು, ಅದ್ದರಿಂದ “ಎಲೈ, ಸ್ನೇಹಿತನೇ, ನೀನು ಆ ಚಂದ್ರಸೇನರಾಜನಂತೆ ಅತಿ ಲೋಭದಿಂದ ಈ ಅವಸ್ಥೆ ಯನ್ನು ಹೊಂದಿರುವೆ. ಇನ್ನು ನಾನು ನನ್ನ ಮನೆಗೆ ಹೋಗುತ್ತೇನೆ’’ ಎಂದು ಹೇಳಿ ಸುವರ್ಣಸಿದ್ಧಿ ಅಲ್ಲಿಂದ ಹೊರಡಲು ಸಿದ್ಧನಾದನು. ತನ್ನ ಮಿತ್ರನು ತನ್ನೊಬ್ಬನನ್ನೇ ಬಿಟ್ಟು ಹೋಗುತ್ತಾನೆಂಬುದನ್ನು ತಿಳಿದು ಆ ಚಕ್ರಧರನು “ಅಯ್ಯಾ, ಸ್ನೇಹಿತನ ಸಂಕಟಕಾಲದಲ್ಲಿ ಮಿತ್ರನು ಉಪಯೋಗಕ್ಕೆ ಬರುವನೆಂದು ಹೇಳುತ್ತಾರೆ. ನೀನು ನನ್ನನ್ನು ಈ ನಿಪತ್ತಿನಲ್ಲಿ ಬಿಟ್ಟು ಹೊರಟು ಹೋಗುವುದು ನಿನಗೆ ಯೋಗ್ಯವೇ?’’ ಎಂದು ಕೇಳಿದನು. ಅದಕ್ಕೆ ಸುವರ್ಣಸಿದ್ಧಿ “ನಾನು ನಿನ್ನ ಮಾತಿನಂತೆ ಇಲ್ಲಿಯೇ ಇದ್ದರೆ, ಒಬ್ಬ ಕಳ್ಳನು ರಾಕ್ಷಸವನ್ನು ಹಿಡುಕೊಂಡು ಹೋಗುವ ಸಮಯದಲ್ಲಿ ವಾನರವು ಸಹಾಯಕ್ಕೆ ಹೋಗಿ ನಾಶವಾದಂತೆ ನಾನೂ ನಾಶನಾದೆನು. ಈ ಚಕ್ರಕ್ಕೆ ಭಯಪಡುತ್ತೇನೆ.” ಎಂದು ಹೇಳಿದನು. ಆ ಮಾತನ್ನು ಕೇಳಿ ಚಕ್ರಧರನು ಅದು ಹೇಗೆ ನಡೆಯಿತೆಂದು ಸುವರ್ಣಸಿದ್ಧಿಯನ್ನು ಪ್ರಶ್ನಿಸಿದನು. ಸುವರ್ಣಸಿದ್ಧಿ, ವಾನರವು ನಾಶಹೊಂದಿದ ಕಥೆಯನ್ನು ಹೀಗೆ ವಿವರಿಸಿದನು.

ಮಧುರಾಪುರವೆಂಬ ಪಟ್ಟಣದಲ್ಲಿ ಭದ್ರಸೇನರಾಜನು ಸಕಲ ವೈಭವದೊಂದಿಗೆ ರಾಜ್ಯವನ್ನಾಳುತ್ತಿದ್ದನು. ಆ ರಾಜನಿಗೆ ರತ್ನವತಿಯೆಂಬ ಪರಮಸುಂದರಿಯಾದ ಯುನಕಿ ಪತ್ತೆಯಾಗಿದ್ದಳು. ಅವಳ ರೂಪಸಂಪನ್ನ ತೆಯನ್ನು ನೋಡಿ, ಒಂದು ರಾಕ್ಷಸವು ಮನಸೋತು, ಆ ರಾಜ ಪತ್ನಿಯನ್ನು ಅಪಹರಿಸಬೇಕೆಂದು ಹೊಂಚು ಹಾಕಿತ್ತು. ಆದರೆ ಅದು ಅಪಹರಿಸುವ ಉಪಾಯವನ್ನು ಕಾಣದೆ, ಆ ರಾಜಭವನದಲ್ಲಿಯೇ ಅಡಗಿ ಕೊಂಡು ಇರುತ್ತಿತ್ತು. ಆ ರಾಜಪತ್ನಿಗೆ ಈ ರಾಕ್ಷಸದ ಸುಳಿವು ಹೇಗೋ ಆಗಿ, ಅವಳು ತನ್ನ ಗೆಳತಿಯರನ್ನು ಕುರಿತು “ಎಲೈ, ಸಖಿಯರೇ, ಇಲ್ಲಿ ಯಾವುದೋ ಒಂದು ರಾಕ್ಷಸವು ನನ್ನನ್ನು ಹಗಲಿರಳು ದಿಟ್ಟಿಸಿ ನೋಡುತ್ತ ಕುಳಿತಿರುವಂತೆ ನನಗೆ ಭಾಸವಾಗುತ್ತೆದೆ. ಇದರಿಂದ ಮುಂದೆ ನನಗೆ ಏನು ಉಪದ್ರವವಾಗುತ್ತದೆಯೋ ತಿಳಿಯದಾಗಿದೆ. ಈ ರಾಕ್ಷಸದ ಬಾಧೆಯನ್ನು ತಪ್ಪಿಸಿಕೊಳ್ಳಲು ಏನು ಉಪಾಯಮಾಡಬೇಕು. ನೀವು ಹೇಳಬಲ್ಲಿರಾ? ”ಎಂದು ಪ್ರಶ್ನಿಸಿದಳು, ಆ ರಾಣಿಯ ಮಾತುಗಳನ್ನು ರಾಕ್ಷಸವು ಕೇಳಿತು. ಕೇಳಿ, ಅದಕ್ಕೆ, ಈ ಯುವತಿಯನ್ನು ಹರಣ ಮಾಡುವುದು ಹೇಗೆಂಬ ವಿಷಯದಲ್ಲಿ ಮತ್ತಷ್ಟು ಯೋಚನೆಯಾಗಿ ಅದು , “ನಾನೇನೋ ಇವಳನ್ನು ಎತ್ತಿಕೊಂಡು ಹೋಗಬೇಕೆಂದು ಬಂದೆನು. ನನಗಿಂತಲೂ ಬಲಿಷ್ಠ ನಾದ ಮತ್ತೊಬ್ಬನು ಇಲ್ಲಿಗೆ ಬಂದರೆ ನನ್ನ ಉಪಾಯವಾವುದೂ ನಡೆಯಲಾರದು. ಈಗ ನಾನು ಈ ಸ್ಥಳವನ್ನು ಬಿಟ್ಟು ಸ್ವಲ್ಪದೂರದಲ್ಲಿ ವಾಸಿಸಬೇಕು’’ ಎಂದು ಯೋಚಿಸಿಕೊಂಡು, ಆ ರಾಕ್ಷಸವು ಕದುರೆಯ ಪಾಗದೊಳಗೆ, ಕುದುರೆಯ ವೇಷವನ್ನು ಧರಿಸಿಕೊಂಡು ಅಲ್ಲಿನ ಕುದುರೆಗಳ ಜೊತೆಗೆ ಇದ್ದಿತು. ಹೀಗೆ ಇರುತ್ತಿರುವಾಗ ಒಬ್ಬ ಕಳ್ಳನು ಒಂದು ದಿನ ರಾತ್ರಿ ಅರಮನೆಯ ಲಾಯದ ಕುದುರೆಗಳನ್ನು ಕದ್ದೊಯ್ಯಬೇಕೆಂದು ಆ ಪಾಗದೊಳಗೆ ಹೊಕ್ಕನು.ಅಲ್ಲಿರುವ ಕುದುರೆಗಳೆಲ್ಲವನ್ನೂ ನೋಡಿ ಆ ಕಳ್ಳನು ಕಪಟವೇಷದ ಕುದುರೆ, ಎಲ್ಲ ಕುದುರೆಗಳಲ್ಲಿಯೂ ಬಹಳ ಚೆನ್ನಾ ಗಿರುವುದನ್ನು ನೋಡಿ, ಅದರ ಬಾಯಲ್ಲಿ ವಾಘೆಯನ್ನು ಹಾಕಿ ಅದನ್ನು ಹತ್ತಿಕೊಂಡು ಅಲ್ಲಿಂದ ಹೊರಟನು. ದಾರಿ ಹಿಡಿದು ಹೋಗುತ್ತಿರುವಾಗ, ಮಧ್ಯಮಾರ್ಗದಲ್ಲಿ ಆ ರಾಕ್ಷಸ ಕುದುರೆ ನೇರವಾಗಿ ದಾರಿ ಹಿಡಿದು ಹೋಗದೆ ಅತ್ತಿತ್ತ ಓಡಿಹೋಗುತ್ತ ಆ ಕಳ್ಳನಿಗೆ ತುಂಬ ತೊಂದರೆಕೊಟ್ಟಿತು. ಆಗ ಕಳ್ಳನು ಕುದುರೆಯ ಬೆನ್ನ ಮೇಲೆ ಬೆತ್ತದಿಂದ ಚೆನ್ನಾಗಿ ಹೊಡೆದನು. ಆದರೂ ಆ ಕುದುರೆ ಸರಿಯಾದ ಮಾರ್ಗದಲ್ಲಿ ನಡೆಯದೆ, ಅಡ್ಡ ದಾರಿ ಹಿಡಿದು ಹೋಗ ತೊಡಗಿತು. ಕಳ್ಳನು ಮುಂದೇನು ಮಾಡಬೇಕೆಂಬುದನ್ನು ತಿಳಿಯದೆ, “ನಾನು ಇದುವರೆಗೆ ಎಷ್ಟೋ ಕುದುರೆಗಳನ್ನು ನೋಡಿದ್ದೇನೆ. ಇಂಥ ದುರುದುಂಬಿ ಕುದುರೆಯನ್ನು ನಾನು ಎಲ್ಲೆಲ್ಲಿಯೂ ನೋಡಲಿಲ್ಲ. ಈ ಕುದುರೆಯಲ್ಲಿ ಏನೋ ಕಪಟಿವಿರಬೇಕು” ಎಂದು ಮನಸ್ಸಿನಲ್ಲಿ ಯೋಚಿಸುತ್ತ ಮತ್ತೊಮ್ಮೆ ಆ ಕುದುರೆಯನ್ನು ಬಲವಾಗಿ ಹೊಡೆದನು. ಹೊಡೆತ ಬಿದ್ದೊಡನೆಯೇ ಆ ಕುದುರೆ ವಶಮೀರಿ ಓಡುತ್ತ ಒಂದು ವೃಕ್ಷದ ಕೆಳಗೆ ಹೋಯಿತು. ಕೂಡಲೇ ಕಳ್ಳನು ಇನ್ನು ತಾನು ಈ ಕುದುರೆಯ ಮೇಲಿಂದ ಎಲ್ಲಿ ಬಿದ್ದುಬಿಡುವೆನೋ ಎಂಬ ಭಯದಿಂದ ಆ ವೃಕ್ಷದ ಕೊಂಬೆಯನ್ನು ಹಿಡಿದುಕೊಂಡು, ವೃಕ್ಷದ ಮೇಲೇರಿ ಕುಳಿತುಕೊಂಡನು. ಅದನ್ನು ನೋಡಿ ಆ ಕುದುರೆ ಕಳ್ಳನು ಮತ್ತೆ ತನ್ನನ್ನು ಎಲ್ಲಿ ಹೊಡೆಯುವನೋ ಎಂಬ ಭೀತಿಯಿಂದ ಮತ್ತಷ್ಟು ವೇಗವಾಗಿ ಓಡತೊಡಗಿತು. ಕಳ್ಳನು ಕುಳಿತಿದ್ದ ಮರದಲ್ಲಿಯೇ ಒಂದು ಮಂಗವು ವಾಸವಾಗಿತ್ತು. ಅದು ಈ ಕಪಟ ಕುದುರೆಯ ನಿಜಾಂಶವೇನೆಂ ಬುದನ್ನು ತಿಳಿದು, ಆ ಕುದುರೆ ವೇಗವಾಗಿ ಓಡಿಹೋಗುತ್ತಿರುವುದನ್ನು ನೋಡಿ “ಎಲೇ, ಕುದುರೆಯೆ. ಇನನಾದರೋ ಮನುಷ್ಯನು, ನೀನಾದರೋ ರಾಕ್ಷಸ. ಮನುಷ್ಯನಿಗೆ ಹೆದರಿಕೊಂಡು ನೀನೇಕೆ ಓಡಿಹೋಗುತ್ತಿದ್ದೀಯೆ?’’ ಎಂದು ಗಟ್ಟಿಯಾಗಿ ಕೇಳಿತು ವಾನರವು ಹೀಗೆ ಕೂಗಿದುದನ್ನು ಕೇಳಿ,ಕಳ್ಳನು ಶೀಘ್ರವಾಗಿ ಆ ವಾನರವನ್ನು ಹಿಡಿದು, ನೆಲಕ್ಕೆ ಅಪ್ಪಳಿಸಿ ದನು. ಆ ಧ್ವನಿಯನ್ನು ಕೇಳಿ ರಾಕ್ಷಸವು ಹಿಂದಿರುಗಿ ನೋಡಿ, ಮತ್ತಷ್ಟು ಹೆದರಿಕೊಂಡು ನಾಗಾಲೋಟದಿಂದ ಓಡಿ ಹೋಯಿತು. ಇತ್ತ ಈ ವಾನ ರವು ಆ ಏಟನ್ನು ಸಹಿಸಿಕೊಳ್ಳಲಾರದೆ ಸತ್ತುಹೋಯಿತು. “ಆದ್ದರಿಂದ ಎಲೈ ಚಕ್ರಧರನೇ, ನಿನ್ನ ಸಹಾಯಕ್ಕೆ ಬಂದರೆ, ಈ ಚಕ್ರ ದಿಂದ ನನ್ನ ಗತಿಯೂ ಆ ವಾನರದಂತೆ ಆದೀತು! ನನಗೆ ಈ ಚಕ್ರದ ಭಯವು ಹೆಚ್ಚಾಗಿದೆ. ನಾನು ಇಲ್ಲಿಂದ ನನ್ನ ಸ್ಥಳಕ್ಕೆ ಹೊರಟುಹೋಗು ವುದೇ ಒಳ್ಳೆಯದು” ಎಂದು ಸುವರ್ಣಸಿದ್ದಿ ಚಕ್ರಧರನಿಗೆ ಹೇಳಿದನು. ಸುವರ್ಣಸಿದ್ಧಿ ತನ್ನ ಸಹಾಯಕ್ಕೆ ನಿಲ್ಲಲಾರನೆಂಬುದನ್ನು ಅರಿತು ಆ ಚಕ್ರ ಧರನು ಪುನ: ಸುವರ್ಣಸಿದ್ಧಿಯನ್ನು ಕುರಿತು, “ ಅಯ್ಯಾ, ಮಿತ್ರನೇ, ದೈವವು ಪ್ರತಿಕೂಲವಾದಕೆ ಇಂಥ ದುಃಖವು ಸಂಭವಿಸುವುದು, ಲಂಕಾ ಪುರಕ್ಕೆ ಕ್ರಿಕೂಟಾಚಲದಂಥ ಮಹಾಪರ್ವತವು ಕೋಟಿಯ ಹಾಗೆ ಇದ್ದಿತು. ಅದರ ಸುತ್ತು ಸಮುದ್ರವು ಅಗಳತೆಯಾಗಿತ್ತು. ಅದನ್ನಾಳುತ್ತಿದ್ದ ರಾಕ್ಷಸ ನಾದರೋ ಮಹಾಪ್ರತಾಪಶಾಲಿ, ಅವನ ಗುರುವಾದರೋ ಮಹಾಬುದ್ದಿ ಶಾಲಿಯಾದ ಶುಕ್ರನು, ಇಷ್ಟೆ ಲ್ಲವಿದ್ದರೂ, ರಾವಣನು ವಾನರಗಳಿಂದ ಪರಾಭವವನ್ನು ಹೊಂದಿದನು. ದೈವದ ಮುಂದೆ ಯಾರ ಉಪಾಯವೂ ನಡೆಯುವುದಿಲ್ಲ. ದೈವಾನುಕೂಲವಿದ್ದಕ್ಕೆ ಎಲ್ಲವೂ ಒಳ್ಳೆಯದಾಗಿ ಪರಿ ಣಮಿಸುತ್ತದೆ. ಈಗ ನನಗೆ ದೈವವು ಪ್ರತಿಕೂಲವಾಗಿರುವುದರಿಂದ ಇಂಥ ಕಷ್ಟದಲ್ಲಿ ಸಿಕ್ಕಿಬಿದ್ದಿದ್ದೇನೆ. ನೀನಾದರೋ ನಿನ್ನ ಸ್ಥಳಕ್ಕೆ ಹೋಗಬೇಕೆಂದು ನಿರ್ಧಾರ ಮಾಡಿಕೊಂಡಿರುವೆ. ನಾನು ನಿನಗೆ ಒಂದು ಹಿತವಾಕ್ಯವನ್ನು ಹೇಳುತ್ತೇನೆ. ಅದರಂತೆ ನೀನು ವರ್ತಿಸಿದರೆ ನಿನಗೆ ಕ್ಷೇಮವಾಗುವುದು, ನೀನು ಒಬ್ಬನೇ ಹೋಗಬೇಡ. ನಿನ್ನ ಸಂಗಡ ಯಾರನ್ನಾದರೂ ಜೊತೆ ಮಾಡಿಕೊಂಡು ಹೋಗು. ಒಬ್ಬನೇ ದೇಶಾಂತರಕ್ಕೆ ಹೋಗಬಾರದೆಂದ್ಕೂ ಎಲ್ಲರೂ ಮಲಗಿಕೊಂಡು ನಿದ್ದೆ ಹೋಗುತ್ತಿರುವಾಗ ತಾನೊಬ್ಬನೇ ಕುಳಿತು ಕೊಂಡಿರಬಾರದೆಂದ್ಕೂ ಉತ್ತಮವಾದ ಪದಾರ್ಥವೂ, ಎಲ್ಲ ಸುಖಸಂಪತ್ತೂ ತನಗೊಬ್ಬನಿಗೆಯೇ ಲಭಿಸಬೇಕೆಂಬ ಅಸೇಕ್ಷೆಯನ್ಸಿಟ್ಟು ಕೊಳ್ಳ ಬಾರದೆಂದೂ ನೀತಿಯುಂಟು. ಆದ್ದರಿಂದ ನೀನು ನಿನ್ನ ಸ್ಥಳಕ್ಕೆ ಹೋಗುವಾಗ, ಯಾರ ನ್ನಾದರೂ ಸಂಗಡ ಕರೆದುಕೊಂಡು ಹೋಗುವುದು ಲೇಸು. ಹೀಗೆ ನೀನು ವರ್ತಿಸಿದರೆ ಒಂದು ಸರ್ಪದ ಕಡಿತದಿಂದ ಒಬ್ಬ ಬ್ರಾಹ್ಮಣನು ತನ್ನ ಪ್ರಾಣವನ್ನು ಉಳಿಸಿಕೊಂಡಂತೆ ನಿನಗೆ ಕ್ಷೇಮವುಂಟಾಗುವುದು ” ಎಂದು ಹೇಳಿದನು. ಚಕ್ರಧರನ ಈ ನೀತಿಬೋಧೆಯನ್ನು ಕೇಳಿ, ಸುವರ್ಣಸಿದ್ದಿ, “ಆ ಬ್ರಾಹ್ಮಣನು ಹೇಗೆ ಬದುಕಿಕೊಂಡನು?'' ಎಂದು ವಿಚಾರಿಸಿದನು, ಅದಕ್ಕೆ ಚಕ್ರಧರನು ಆ ಬ್ರಾಹ್ಮಣನ ಕಥೆಯನ್ನು ವಿವರಿಸಿದನು.

ಕಥೆ : ನಾಸಿಕಕ್ಷೇತ್ರದಲ್ಲಿ ದೇವದತ್ತನೆಂಬ ಬ್ರಾ ಹ್ಮಣನೊಬ್ಬನು ಇರು ` ತ್ತಿದ್ದನು. ಅವನು ಒಂದಾನೊಂದು ದಿವಸ ತನ್ನ ತಾಯಿಯನ್ನು ಕುರಿತು ಮಾತೆಯೇ, ನಾನು ನನ್ನ ಗುರುವಿನ ಕಾರ್ಯನಿಮಿತ್ತದಿಂದ ಪರಸ್ಥ ಕಕ್ಕೆ ಹೋಗಬೇಕಾಗಿದೆ. ದಯವಿಟ್ಟು ಆಶೀರ್ವದಿಸು'' ಎಂದು ಹೇಳಿ ಆಕೆಗೆ ನಮಸ್ಕಾರ ಮಾಡಿದನ್ನು ತಾಯಿ ಮಗನನ್ನು ಆಶೀರ್ವದಿಸಿ, “ಅಪ್ಸಾ ಮಗನೇ, ನೀನು ನಿನ್ನ ಗುರುವಿನ ಕಾರ್ಯಕ್ಕಾಗಿ ಪರಸ್ಕಳಕ್ಕೆ ಹೋಗು ತ್ತಿರುವುದರಿಂದ ನಾನು ಬೇಡವೆಂದು ನಿನ್ನನ್ನು ತಡೆಯಬಾರದು. ಆದರೆ ನೀನು ಒಬ್ಬನೇ ಮಾತ್ರ ಹೋಗಬೇಡ. ಯಾರನ್ನಾದರೂ ನಿನ್ನ ಸಂಗಡ ಕರೆದುಕೊಂಡು ಹೋಗು ಎಂದು ಬುದ್ಧಿ ವಾದವನ್ನು ಹೇಳಿದಳು. ಅದಕ್ಕೆ ಆ ಬ್ರಾಹ್ಮಣ ಕುಮಾರನು, “ಅಮ್ಮಾ, ಮಾರ್ಗವು ನಿರುಪದ್ರವವಾಗಿದೆ. ದಾರಿಯಲ್ಲಿ ಕಳ್ಳಕಾಕರ ಭಯವೇನೂ ಇಲ್ಲ. ನೀನು ಚಿಂತಿಸಬೇಡ'' ಎಂದು ಹೇಳಿ, ತಾಯಿಯನ್ನು ಸಮಾಧಾನ ಮಾಡಿದನು. ಆದರೂ ತಾಯಿ ಮಗನ ಮಾತನ್ನು ಒಪ್ಪಿಕೊಳ್ಳದೆ, ಪುತ್ರನೇ, ಮಾರ್ಗವು ಎಷ್ಟು ನಿರ ಪಾಯವಾಗಿದ್ದರೂ, ಒಬ್ಬನೇ ಹೋಗುವುದು ಒಳ್ಳೆಯದಲ್ಲ. ಸಂಗತಿ ಇರು ವುದು ಒಳ್ಳೆ ಯದು ” ಎಂದು ಹೇಳಿ, ಒಂದು ಬಾವಿಗೆ ಹೋಗಿ ಏಡಿಯೊಂ ದನ್ನು ಹಿಡಿದುತಂದು ತಂಬಿಗೆಯೊಳಗೆ ಹಾಕಿ ಅದನ್ನು ತನ್ನ ಮಗನ ಕೈಯಲ್ಲಿ ಕೊಟ್ಟು, " ಮಗನೇ, ಇದನ್ನಾ ದರೂ ನಿನ್ನ ಸಂಗಡ ತೆಗೆದು ಕೊಂಡು ಹೋಗು” ಎಂದು ಹೇಳಿದಳು. ಮಗನು ತಾಯಿಯ ಆಜ್ಞೆಯ ಪ್ರಕಾರ ಆ ತಂಬಿಗೆಯನ್ನು ತೆಗೆದುಕೊಂಡು ಸರಸ್ಥಳಕ್ಕೆ ಹೊರಟನು, ಹೀಗೆ ಹೋಗುತ್ತಿರುವಾಗ, ಮಧ್ಯಾಹ್ನದ ಬಿಸಿಲಿನಿಂದ ಬಳಲಿ ಬೆಂಡಾಗಿ ಬ್ರಾಹ್ಮಣ ಕುಮಾರನು ದಾರಿಯಲ್ಲಿದ್ದ ಒಂದು ಮರದ ಕೆಳಗೆ ನೆರಳಿಗೆ ಮೈಯೊಡ್ಡಿ ಮಲಗಿಕೊಂಡನು. ಅವನಿಗೆ ಫಿದ್ದೆಹತ್ತಿತು. ಆಗ ಒಂದು ಕಾಳೋರಗವು ಈ ಬ್ರಾಹ್ಮಣನನ್ನು ಕಚ್ಚ ಬೇಕೆಂದು ಒಳ್ಳೆಯ ರಭಸದಿಂದ ಹರಿದು ಬರುತ್ತಿರುವಾಗ, ಅದು ಅಲ್ಲಿರುವ ತಂಬಿಗೆಯನ್ನು ಕಂಡು, ಇದ ರಲ್ಲಿ ಏನೋ ಇರಬೇಕೆಂದು ತಿಳಿದು, ತನ್ನ ಹೆಡೆಯನ್ನು ತಂಬಿಗೆಯೊಳಗೆ ಇಟ್ಟತು. ಆ ತಂಬಿಗೆಯೊಳಗಿದ್ದ ಏಡಿ ಇದು ಕಾಳೋರಗವೆಂದು ಬಗೆದು ಅದನ್ನು ತನ್ನ ಕೊಕ್ಕಿನಿಂದ ಚುಚ್ಚಿಕೊಂದುಬಿಟ್ಟಿತು. ಸ್ವಲ್ಪ ಹೊತ್ತಾದ ಮೇಲೆ, ಬ್ರಾಹ್ಮಣನು ಎಚ್ಚತ್ತು ನೋಡುತ್ತಾನೆ, ಅಲ್ಲಿಯೇ ಒಂದು ಸರ್ಪವು ಸತ್ತುಬಿದ್ದಿತು! ಈ ಸರ್ಪವು ಅಲ್ಲಿ ಹೇಗೆ ಸತ್ತು ಬಿದ್ದಿತೆಂಬುದನ್ನುತಿಳಿಯದೆ ಬ್ರಾಹ್ಮಣನು ಬೆರಗಿ, ಅದನ್ನು ಚೆನ್ನಾಗಿ ಪರೀಕ್ಷಿಸಿ ನೋಡಿದನು. ಸರ್ಪದ ಕತ್ತಿನಲ್ಲಿ ಏಡಿ ಛೇದಿಸಿದ ಗುರುತುಗಳು ಕಂಡುಬಂದುವು. ಆಗಅವನು ಇವೆಲ್ಲ ಕಾರ್ಯವು ಏಡಿಯಿಂದಲೇ ನಡೆದಿರಬೇಕೆಂದುನಿರ್ಧರಿಸಿಕೊಂಡು, ತನ್ನ ತಾಯಿ ತನ್ನ ಕ್ಷೇಮಕ್ಕೆ ಮಾಡಿದಉಪಾಯಕ್ಕಾಗಿ ಆಕೆಯನ್ನು ಮನಸ್ಸಿನಲ್ಲಿಯೇ ವಂದಿಸಿದನು. ಅವನುಮುಂದೆ ಅಲ್ಲಿಂದ ಎದ್ದು, ಏಡಿಯನ್ನು ಅದೇ ತಂಬಿಗೆಯಲ್ಲಿರಿಸಿಕೊಂಡುಪರಸ್ಥಳಕ್ಕೆ ಹೋಗಿ, ತನ್ನ ಗುರುವಿನ ಕೆಲಸವನ್ನು ತೀರಿಸಿಕೊಂಡು ಪುನಃಸ್ವಸ್ಥಾನವನ್ನು ತಲುಪಿದನು. ಆ ಬ್ರಾಹ್ಮಣಕುಮಾರನು ತಾಯಿಯ ಬಳಿಗೆಬಂದು ನಡೆದ ವೃತ್ತಾಂತವನ್ನೆಲ್ಲ ತಾಯಿಯ ಮುಂದೆ ನಿವೇದಿಸಿದನು, ತಾಯಿ ಮಗನನ್ನು ಮನಸಾರೇ ಹರಸಿದಳು. ಚಕ್ರಧರನು ಹೇಳಿದ ಈ ಕಥೆಯನ್ನು ಕೇಳಿ, ಸುವರ್ಣಸಿದ್ಧಿ, ನೀನುಹೇಳಿದ ಮಾತು ತುಂಬ ಶ್ಲಾಘನೀಯವಾಗಿದೆ. ಮಂತ್ರ, ತೀರ್ಥ, ಬ್ರಾಹ್ಮಣ, ಜ್ಯೋತಿಷ್ಯ, ವೈದ್ಯ, ಗುರು - ಈ ಆರು ಸ್ಥಾನಗಳಲ್ಲಿಮನುಷ್ಯನು ಹೇಗೆ ವ್ಯವಹರಿಸುವನೋ, ಹಾಗೆಯೇ ಅವನಿಗೆ ಫಲವುಸಿದ್ದಿಸುವುದು. ನಾನು ನಿನ್ನ ಅಭಿಪ್ರಾಯದಂತೆ ನಡೆಯುತ್ತೇನೆ" ಎಂದುಹೇಳಿ ತನ್ನ ಊರಿನತ್ತ ಹೊರಟನು. ಈ ಪ್ರಕಾರವಾಗಿ ಆ ಬ್ರಾಹ್ಮಣ ಪತ್ನಿ ಚಕ್ರಧರನ ಕಥೆಯನ್ನು ತನ್ನ ಪತಿಗೆಹೇಳಿ, "ನೀವೂ ಆ ಚಕ್ರಧರನ ಹಾಗೆ ಅತಿಲೋಭ ಮಾಡಿದ ಪ್ರಯುಕ್ತ, ನನ್ನಿಂದ ಆ ಮುಂಗುಲಿಗೆ ಮೃತ್ಯು ಒದಗಿತು, ಅವಿಚಾರದಿಂದ 'ಇಂಥಅನರ್ಥವು ಸಂಭವಿಸಿತು' ಎಂದು ಅಸಂಪ್ರೇಕ್ಷದಿಂದಾಗುವಅನರ್ಥವನ್ನು ವಿವರಿಸಿದಳು. ಈ ದೃಷ್ಟಾಂತವನ್ನು ನ್ಯಾಯಾಧೀಶನುಮಣಿಭದ್ರನೊಟ್ಟಿಗೆ ನಿರೂಪಿಸಿ, ಅವನನ್ನು ಸನ್ಮಾನಿಸಿ ಕಳಿಸಿಕೊಟ್ಟನು. ಈ ರೀತಿಯಾಗಿ ವಿಷ್ಣುಶರ್ಮನು ಅಸಂಪ್ರೇಕ್ಷಕಾರಿತ್ವವೆಂಬ ಐದನೆಯತಂತ್ರವನ್ನು ಅನೇಕ ಕಥಾನಕಗಳಿಂದ ವಿವರಿಸಿದನು.

ಈ ಪ್ರಕಾರವಾಗಿ ವಿಷ್ಣುಶರ್ಮ ಮಹೋದಯನು ಈ ಐದುತಂತ್ರಗಳನ್ನು ಸುದರ್ಶನರಾಜನ ಕುಮಾರರಿಗೆ ಅನೇಕಅನುಭವಯುಕ್ತವಾದ ಕಥಾನಿದರ್ಶನಗಳಿಂದ ವಿವರವಾಗಿ ಹೇಳಿಮುಗಿಸಿದ ಮೇಲೆ, "ನಾನೇನೋ ಉಪಯುಕ್ತವೂ, ಮನೋರಂಜಕವೂಆದ ಈ ಕಥೆಗಳನ್ನು ರಾಜಕುಮಾರರಿಗೆ ಹೇಳಿದೆನು. ಈ ಕಥೆಗಳನ್ನುಕೇಳಿ ಇವರಲ್ಲಿ ಜ್ಞಾನೋದಯವಾಗಿದೆಯೇ, ಇಲ್ಲವೇ, ಪರೀಕ್ಷಿಸಬೇಕು" ಎಂದು ಆಲೋಚಿಸಿಕೊಂಡು ಮತ್ತೊಂದು ಕಥೆಯನ್ನು ಹೇಳಿದನು. ಕಥೆ: ಒಂದು ಸ್ಥಳದಲ್ಲಿ ಒಂದು ಮಣ್ಣಿನ ಹೆಂಟೆಯೂ ಮುತ್ತುಗದಎಲೆಯೂ ಅನ್ನೋನ್ಯ ಸ್ನೇಹದಿಂದ ಕಾಲ ಕಳೆಯುತ್ತಿದ್ದರು. ಅವುವಿಪತ್ತಿನಲ್ಲಿ ಒಂದಕ್ಕೊಂದು ಸಹಾಯಮಾಡುತ್ತ ಪರಮ ತೃಪ್ತಿಯಿಂದಕಾಲ ಕಳೆಯುತ್ತಿದ್ದರು. ಮಳೆ ಸುರಿಯುತ್ತಿದ್ದಾಗ, ಮುತ್ತುಗದ ಎಲೆ ಆಹೆರಳೆಯನ್ನು ಮುಚ್ಚಿಕೊಂಡು ಅದನ್ನು ಕರಗಿಹೋಗದ ಹಾಗೆರಕ್ಷಿಸುತ್ತಿತ್ತು. ಗಾಳಿ ಬೀಸಿದಾಗ ಹೆರಳೆ, ಎಲೆಯ ಮೇಲೆ ಕುಳಿತುಕೊಂಡುಎಲೆ ಹಾರಿಹೋಗದ ಹಾಗೆ ಅದನ್ನು ಕಾಪಾಡುತ್ತಿತ್ತು. ಈ ಪ್ರಕಾರವಾಗಿ, ಅವೆರಡೂ ಒಂದನ್ನು ಒಂದರ ರಕ್ಷಿಸಿಕೊಂಡಿದ್ದವು. ಹೀಗೆ ವಿಷ್ಣುಶರ್ಮ ಬ್ರಾಹ್ಮಣನು ಕಥೆ ಹೇಳುತ್ತಿದ್ದಾಗ ರಾಜಪುತ್ರರುಏಕಕಂಠದಿಂದ "ಗುರುಗಳೆ, ಒಂದೇ ಕಾಲದಲ್ಲಿ ಗಾಳಿಯೂ ಮಳೆಯೂಬಂದರೆ ಅವುಗಳ ಸ್ನೇಹವು ಹೇಗೆ ಮುಂದುವರೆಯುತ್ತದೆ?" ಎಂದುಪ್ರಶ್ನಿಸಿದರು. ಈ ಪ್ರಶ್ನೆಯನ್ನು ಕೇಳಿ ವಿಷ್ಣುಶರ್ಮನು, "ಓಹೋ! ಈಗರಾಜಕುಮಾರರು ನಿಪುಣರಾದರು. ಇನ್ನು ನಾನು ಇವರನ್ನುರಾಜಸ್ಥಾನಕ್ಕೆ ನಿರ್ಭಯವಾಗಿ ಕರೆದುಕೊಂಡು ಹೋಗಬಹುದು" ಎಂದುಮನದಲ್ಲಿ ಸಂತೋಷಪಟ್ಟನು. ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಅವರನ್ನು ರಾಜನ ಸಭೆಗೆ ಕರೆದುಕೊಂಡು ಹೋಗಿ ರಾಜಪುತ್ರರನ್ನು ಪರೀಕ್ಷಿಸಬೇಕೆಂದು ರಾಜನನ್ನು ವಿಜ್ಞಾಪಿಸಿದನು. ರಾಜಪುತ್ರರು ತಮ್ಮ ತಂದೆಗೆ ಸಾಷ್ಟಾಂಗವೆರಗಿ, ಕೈಮುಗಿದು ಕೊಂಡು, ತುಂಬ ನಿನೀತರಾಗಿ ನಿಂತುಕೊಂಡರು. ರಾಜನು ತನ್ನ ಮಕ್ಕಳ ಮುಖದ ಮೇಲಿನ ವರ್ಚಸ್ಸನ್ನು ನೋಡಿ ಸಂತೋಷಪಟ್ಟು, ಅವರನ್ನು ಪರೀಕ್ಷಿಸಲೆಂದು ಮಂತ್ರಿಗಳಿಗೆ ಆಜ್ಞಾಪಿಸಿದನು. ಮುಖ್ಯ ಪ್ರಧಾನರು ರಾಜಾಜ್ಞೆಯಂತೆ ಆ ಕುಮಾರರನ್ನು ಪರೀಕ್ಷಿಸಿದರು. ರಾಜಪುತ್ರರು ಪ್ರಧಾನಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರಗಳನ್ನು ನೀಡಿದರು. ರಾಜಪುತ್ರರ ಪಾಂಡಿತ್ಯಕ್ಕೂ, ಪ್ರತಿಭೆಗೂ ಆಶ್ಚರ್ಯಪಟ್ಟು ಆ ಮಂತ್ರಿಗಳು ರಾಜನನ್ನು ಉದ್ದೇಶಿಸಿ, "ಮಹಾಪ್ರಭುವೇ! ರಾಜಕುಮಾರರು ಸಕಲ ವಿದ್ಯೆಗಳಲ್ಲಿಯೂ ಪಾರಂಗತರಾಗಿದ್ದಾರೆಂದು ಬಿನ್ನವಿಸಿಕೊಂಡರು. ರಾಜನು ತನ್ನ ಪುತ್ರರು ನಿದ್ಯಾಪರಿಣತರಾದುದನ್ನು ಕಂಡು ಹರ್ಷಿತನಾಗಿ, ವಿಷ್ಣು ಶರ್ಮಗುರುವಿಗೆ ಪಂಚಲೋಹಗಳು, ನವರತ್ನಗಳು, ವಾಹನಗಳು, ಅನರ್ಫೈವಾದ ವಸ್ತ್ರಗಳು, ಕಸ್ತೂರಿ ಕುಂಕುಮ ಮೊದಲಾದ ಸುಗಂಧ ದ್ರವ್ಯಗಳು, ಗೃಹಗಳು, ಕ್ಷೇತ್ರಮಾನ್ಯಗಳು - ಮೊದಲಾದ ಸಪ್ತಾಂಗಗಳನ್ನು ಬಹುಮಾನವಾಗಿ ಕೊಟ್ಟು, ರಾಜಮರ್ಯಾದೆಯಿಂದ ಅವನನ್ನು ಗೌರವಿಸಿ ಕಳುಹಿಸಿದ. ಸಕಲವಿದ್ಯಾಗುಣಸಂಪನ್ನರಾದ ತನ್ನ ಮಕ ಳನ್ನು ಕೂಡಿಕೊಂಡು ರಾಜನು ಎಲ್ಲ ಪ್ರಜೆಗಳಲ್ಲಿ ಸಮಭಾವವನ್ನು ತೋರುತ್ತ ಸುಖಸಂಕಥಾನಿನೋದದಿಂದ ರಾಜ್ಯಭಾರ ಮಾಡುತ್ತಿದ್ದನು.

ಪ್ರೊ. ಡಿ. ಕೆ. ಭೀಮಸೇನ ರಾವ್

ಪ್ರೊ. ಡಿ. ಕೆ. ಭೀಮಸೇನ ರಾವ್ ಕಳೆದ ಶತಮಾನದ ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸರಲ್ಲೊಬ್ಬರು.

ಭೀಮಸೇನ ರಾಯರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ 1904ರ ಏಪ್ರಿಲ್ 8ರಂದು ಜನಿಸಿದರು. ತಂದೆ ಕೇಶವರಾವ್. ತಾಯಿ ಲಕ್ಷ್ಮೀಬಾಯಿ. ಇವರದ್ದು ಬಡತನದ ಬಾಲ್ಯವಾಗಿತ್ತು., ಬಾಲ್ಯದಲ್ಲಿಯೇ ಪಿತೃ ವಿಯೋಗವಾಯಿತು.

ಭೀಮಸೇನ ರಾಯರ ಪ್ರಾರಂಭಿಕ ಶಿಕ್ಷಣ ಅಯ್ಯನವರ ಮಠದಲ್ಲಿ ನೆರವೇರಿತು. ನಿಜಾಮರ ಆಡಳಿತಕ್ಕೊಳಪಟ್ಟಿದ್ದರಿಂದ ಉರ್ದುಭಾಷೆ ಕಲಿಕೆ ಅನಿವಾರ್ಯವಿತ್ತು. 1922ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ಯುಲೇಷನ್ ಓದಿ ಮುಂದೆ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಗಳಿಸಿದರು. ಕನ್ನಡದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ಉತ್ತೇಜಿತರಾಗಿ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರು ವಿಶ್ವವಿದ್ಯಾಲಯಕ್ಕೆ ಬಂದರು. 1927ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿಗಳು ಪ್ರಾರಂಭವಾಯ್ತು. ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಪ್ರೊ.ಎ.ಆರ್.ಕೃಷ್ಣ ಶಾಸ್ತ್ರಿ ಮತ್ತು ಪ್ರೊ. ಟಿ.ಎಸ್.ವೆಂಕಣ್ಣಯ್ಯ ಅವರುಗಳು ಗುರುಗಳಾಗಿದ್ದರು. ಈ ಗುರುವರ್ಯರ ಮಾರ್ಗದರ್ಶನದಲ್ಲಿ 1929ರಲ್ಲಿ ಕುವೆಂಪು, ಡಿ.ಎಲ್.ನರಸಿಂಹಾಚಾರ್, ಕೆ. ವೆಂಕಟರಾಮಪ್ಪ, ಎನ್. ಅನಂತರಂಗಾಚಾರ್ ಮುಂತಾದವರ ಸಹಪಾಠಿಗಳಾಗಿ ಎಂ.ಎ.ಪದವಿ ಗಳಿಸಿದರು. ಈ ತರಗತಿಯಲ್ಲಿದ್ದ ಒಂಬತ್ತು ವಿದ್ಯಾರ್ಥಿಗಳು 'ನವರತ್ನರು' ಎಂದೆನಿಸಿದ್ದರಂತೆ.

ಭೀಮಸೇನರಾಯರು ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಬೋಧಕರಾಗಿ ಮತ್ತು ಸಂಶೋಧಕರಾಗಿ ವೃತ್ತಿ ಆರಂಭಿಸಿದರು. ಮುಂದೆ ಅಲ್ಲೇ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ತಮ್ಮ ಅಧಿಕಾರಾವಧಿಯಲ್ಲಿ ಕನ್ನಡ ವಿಭಾಗವನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ ಹೈದರಾಬಾದಿನ ಆರೇಳು ಕಾಲೇಜುಗಳಲ್ಲಿ ಕನ್ನಡ ಅಧ್ಯಯನಕ್ಕಾಗಿ ವ್ಯವಸ್ಥೆ ಮೂಡಿಸಿದರು. ಗುಲಬರ್ಗಾ, ಯಾದಗಿರಿ, ರಾಯಚೂರು ಪ್ರದೇಶಗಳಲ್ಲಿ ಕನ್ನಡ ವ್ಯಾಸಂಗಕ್ಕಾಗಿ ಏರ್ಪಾಡು ಮಾಡಿ, ಹಳೆಯ ಹೈದ್ರಾಬಾದು ಕರ್ನಾಟಕದಲ್ಲಿ ಕನ್ನಡ ಕೀರ್ತಿಯನ್ನು ಬೆಳಗಿಸಲು ಭಾಷಾ ಸೇವಕರಾಗಿ ದುಡಿಮೆ ಮಾಡಿದರು. ಹೈದರಾಬಾದ್ ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇದಕ್ಕೊಂದು ಸ್ವಂತ ಕಟ್ಟಡ ಕಟ್ಟಿಸುವಲ್ಲಿ ಸಫಲ ಶ್ರಮ ನಿರ್ವಹಿಸಿದರು. ಸಂಘದ ಆಶ್ರಯದಲ್ಲಿ ಹಲವಾರು ಕೃತಿ ಪ್ರಕಟಣೆ ಮಾಡಿದರು. ಪ್ರತಿವರ್ಷ ನಾಡಹಬ್ಬದ ಆಚರಣೆ ಏರ್ಪಾಡಾಯಿತು. ನೃಪತುಂಗ ಶಾಲೆ, ಶಾರದಾ ಕನ್ಯಾಶಾಲೆಗಳನ್ನು ಒಂದೇ ಆಡಳಿತಕ್ಕೊಳಪಡಿಸಿ ಅಧ್ಯಕ್ಷರಾದರು. ನಿಘಂಟು ಸಂಪಾದಕ ಮಂಡಲಿಯಲ್ಲಿ ಕೊನೆವರೆಗೂ ದುಡಿದರು. ಕನ್ನಡ ವಿಶ್ವಕೋಶದ ಪ್ರಥಮ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು. ಆಚಾರ್ಯರು ಬಹು ಭಾಷಾ ಪಂಡಿತರಾಗಿದ್ದರಿಂದ 1965-67 ಅವಧಿಯಲ್ಲಿ 'ಜ್ಞಾನ ಪೀಠ ಪುರಸ್ಕಾರಕ್ಕೆ' ನಾಮಾಂಕಿತ ಆದ ಕೃತಿಗಳ ಮೌಲ್ಯಮಾಪನ ಸಮಿತಿಯ ಸದಸ್ಯರಾಗಿದ್ದರು. ಹೈದರಾಬಾದಿನ ಕರ್ನಾಟಕ ಶಿಕ್ಷಣ ಸಮಿತಿ ಹಾಗೂ ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಭೀಮಸೇನರಾಯರ ಮತ್ತೊಂದು ಆಸಕ್ತಿಯ ಕಾರ‍್ಯಕ್ಷೇತ್ರವೆಂದರೆ ಹಸ್ತಪ್ರತಿ ಸಂಗ್ರಹಣೆ ಮತ್ತು ಶಾಸನ ಸಂಗ್ರಹಣೆ. ಇವರು ಸಂಗ್ರಹಿಸಿದ ಹಸ್ತಪ್ರತಿಗಳನ್ನು ಉಸ್ಮಾನಿಯ ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿ ಇಂದಿಗೂ ನೋಡಬಹುದು.

ಭೀಮಸೇನರಾಯರ ಸೇವೆಗೆ ಮೈಸೂರು ಸರ್ಕಾರದಿಂದ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತು. ರಾಯರು ರಾಯಚೂರಿನಲ್ಲಿ 1945ರಲ್ಲಿ ನಡೆದ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೆಯ ಅಧ್ಯಕ್ಷರಾಗಿದ್ದರು.

ಪ್ರೊ. ಭೀಮಸೇನರಾಯರ ಬರಹಗಳಲ್ಲಿ ಶಬ್ದಮಣಿ ದರ್ಪಣ; ಶಬ್ದಮಣಿದರ್ಪಣದ ಪಾಠಾಂತರಗಳು ಮತ್ತು ಅನುಭವಾಮೃತವು, ಹರಿ ಕಥಾಮೃತ ಸಾರವು; ಹದಿಮೂರನೆಯ ಶತಮಾನದ ಕರ್ನಾಟಕಾಂಧ್ರ ಮಹಾರಾಷ್ಟ್ರ ಸಾಹಿತ್ಯಾವಲೋಕನ; ಕುಮಾರರಾಮ ಕಾಳಗ; ಮಹಾಭಾರತ ಯುದ್ಧ ಪಂಚಕ; ಶಿವರಾತ್ರಿ ಕಥೆ, ರಜತೋತ್ಸವ ಪ್ರಗಾಥ, ಶಾಸನಗಳು, ಮುಂತಾದವು ಸೇರಿವೆ. ಇದಲ್ಲದೆ ರಾಯರು ಮಕ್ಕಳಿಗಾಗಿ ಹೂಮಾಲೆ, ಪಂಚತಂತ್ರ, ಶತಮೂರ್ಖರು ಎಂಬ ಕೃತಿಗಳನ್ನು ರಚಿಸಿದ್ದರು.

ಭೀಮಸೇನರಾಯರು 1969ರ ನವೆಂಬರ್ 29ರಂದು ಈ ಲೋಕವನ್ನಗಲಿದರು.

More Information @ https://www.sallapa.com/2021/04/blog-post_31.html